ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Petrol, diesel price Hike: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಪ್ರಲ್ಹಾದ್‌ ಜೋಶಿ ಸ್ಪಷ್ಟನೆ

ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಪ್ರಲ್ಹಾದ್‌ ಜೋಶಿ ಸ್ಪಷ್ಟನೆ

Pralhad Joshi: ಜಾಗತಿಕವಾಗಿ ನೋಡಿದರೆ ತೈಲ ಬೆಲೆಯನ್ನು ಭಾರತವೇ ಆತ್ಯಂತ ಕಡಿಮೆ‌‌ ಮಟ್ಟದಲ್ಲಿ ಏರಿಕೆ ಮಾಡಿದೆ. ಯುಎಸ್ಎ +44.5%, ಶ್ರೀಲಂಕಾ +38.2%, ಯುಕೆ +19.2%, ಜರ್ಮನಿ +13.7% ರಷ್ಟು ಹೆಚ್ಚಳ ಮಾಡಿದ್ದರೆ, ತಮ್ಮ ಸರ್ಕಾರ ಭಾರತದಲ್ಲಿ‌ ಕೇವಲ +3.2% ಹೆಚ್ಚಳ ಮಾಡಿದೆ ಅಷ್ಟೇ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ನರರೋಗ ತಜ್ಞ ಡಾ. ದರ್ಶನ್ ವಿಶೇಷ ಸೇವೆ; ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ

ನರರೋಗ ತಜ್ಞ ಡಾ. ದರ್ಶನ್‌ರಿಂದ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ

Tumkur News: ತುಮಕೂರು ಜಿಲ್ಲಾಸ್ಪತ್ರೆಯ ನರರೋಗ ವಿಭಾಗದ ನುರಿತ ಶಸ್ತ್ರಚಿಕಿತ್ಸಾ ತಂಡ ಕಳೆದ 8 ತಿಂಗಳಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್ ತಿಳಿಸಿದ್ದಾರೆ.

MLA K.H. Puttaswamy Gowda: ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡರಿಂದ ಮಲ್ಲೇನಹಳ್ಳಿ ಗ್ರಾಮಸ್ಥರಿಗೆ ಅಭಯ

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡರಿಂದ ಮಲ್ಲೇನಹಳ್ಳಿ ಗ್ರಾಮಸ್ಥರಿಗೆ ಅಭಯ

ಗುರುವಾರದ ನಗರಗೆರೆ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ವಿತರಿಸಲು ನಗರಗೆರೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಮಾರ್ಗ ಮದ್ಯದ ಮಲ್ಲೇನ ಹಳ್ಳಿ ಕ್ರಾಸ್ ಬಳಿ ಶಾಸಕರು ಮಲ್ಲೇನಹಳ್ಳಿ ಗ್ರಾಮಸ್ಥ ರನ್ನು ಭೇಟಿ ಮಾಡಿದರು.

Belagavi Shivam Associates Case: 4,500 ಕೋಟಿ ರೂ. ವಂಚನೆ ಪ್ರಕರಣ; ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ್‌ ಅರೆಸ್ಟ್‌

4,500 ಕೋಟಿ ವಂಚನೆ ಪ್ರಕರಣ; ಶಿವಾನಂದ ನೀಲಣ್ಣವರ್‌ ಅರೆಸ್ಟ್‌

Belagavi News: ಶಿವಂ ಅಸೋಸಿಯೇಟ್ಸ್‌ ಮಾಲೀಕನ ಮನೆ, ಕಚೇರಿ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ್ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದರು. ಅಂದಾಜು 4,500 ಕೋಟಿ ಹಣ ವಂಚನೆ ಮಾಡಿದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಸುಮಾರು 8 ಗಂಟೆಳ ದಾಖಲೆ ಪರಿಶೀಲನೆ ನಡೆಸಲಾಗಿತ್ತು.

Monsoon Rain Update: ಮೇ 26ರಂದು ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ; ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ!

ಮೇ 26ರಂದು ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ

IMD Weather Forecast: ಮುಂಗಾರು ಆಗಮನದೊಂದಿಗೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ತಾಪಮಾನ ಕಡಿಮೆಯಾಗಲಿದ್ದು, ಜನರಿಗೆ ಬಿಸಿಲಿನಿಂದ ಗಮನಾರ್ಹ ಪರಿಹಾರ ದೊರೆಯಲಿದೆ. ಇದು ಖಾರಿಫ್ ಬೆಳೆಗಳನ್ನು ಬಿತ್ತಲು ರೈತರಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಈ ಬಾರಿ 6 ದಿನ ಮೊದಲೇ ಕೇರಳ ಕರಾವಳಿಗೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ.

ಡಿ.ಕೆ. ಶಿವಕುಮಾರ್‌ಗೆ ಸ್ಪೆಷಲ್ ಬರ್ತ್‌ಡೇ ಗಿಫ್ಟ್!; ಡಿಸಿಎಂ ಕಲೆಕ್ಷನ್‌ ಸೇರಿತು ಹೊಚ್ಚಹೊಸ 'ಯೆಜ್ಡಿ ರೋಡ್‌ಸ್ಟರ್' ಬೈಕ್‌

ಬರ್ತ್‌ಡೇ ಗಿಫ್ಟ್; ಡಿಕೆಶಿ ಕಲೆಕ್ಷನ್‌ ಸೇರಿತು 'ಯೆಜ್ಡಿ ರೋಡ್‌ಸ್ಟರ್'

DK Shivakumar Birthday: ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯೊಂದು ಬಂದಿದೆ. ಭಾರತೀಯ ಕ್ಲಾಸಿಕ್ ಬೈಕ್‌ಗಳ, ಅದರಲ್ಲೂ 'ಯೆಜ್ಡಿ' ಬೈಕ್‌ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ಜನ್ಮದಿನದ ಪ್ರಯುಕ್ತ ಹೊಚ್ಚಹೊಸ 'ರೆಡ್‌ ವೂಲ್ಫ್‌' ಬಣ್ಣದ ಯೆಜ್ಡಿ ರೋಡ್‌ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

ಲಿಂಗಸುಗೂರಿನಲ್ಲಿ ಹೀನ ಕೃತ್ಯ; ತಂದೆ, ಆತನ ಸ್ನೇಹಿತನಿಂದಲೇ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ!

ತಂದೆ, ಆತನ ಸ್ನೇಹಿತನಿಂದಲೇ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ!

Raichur News: ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಹೀನ ಕೃತ್ಯ ನಡೆದಿದೆ. ಮಗಳ ಮೇಲೆ ತಂದೆ ಮತ್ತು ಆತನ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ 2,377 ವಿದ್ಯಾರ್ಥಿಗಳಿಗೆ ಉಚಿತ ಜಾಯಿನಿಂಗ್ ಕಿಟ್‌ ವಿತರಣೆ

ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ ಜಾಯಿನಿಂಗ್ ಕಿಟ್‌ ವಿತರಣೆ

Sri Sathya Sai Lokaseva Gurukulam: ರಾಜ್ಯದ 20 ಜಿಲ್ಲೆಗಳಲ್ಲಿ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂಗೆ ಹೊಸದಾಗಿ ಸೇರ್ಪಡೆಯಾದ ಹಾಗೂ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ‌2,377 ವಿದ್ಯಾರ್ಥಿಗಳಿಗೆ ‘ಜಾಯಿನಿಂಗ್ ಕಿಟ್‌ʼ ಗಳನ್ನು ವಿತರಿಸಲಾಯಿತು.

Petrol, diesel prices hike: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಪ್ರಧಾನಿ ಮೋದಿ ರಾಜೀನಾಮೆಗೆ ಸಿಎಂ ಆಗ್ರಹ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಪ್ರಧಾನಿ ಮೋದಿ ರಾಜೀನಾಮೆಗೆ ಸಿಎಂ ಆಗ್ರಹ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಿದ್ದಾಗ ಅದರ ಲಾಭವನ್ನು ಮೋದಿ ಸರ್ಕಾರ ಎಂದಿಗೂ ಜನತೆಗೆ ಬಿಟ್ಟುಕೊಡಲೇ ಇಲ್ಲ. ಇನ್ನು ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಸಂದರ್ಭದಲ್ಲಿ ಅಮೆಜಾನ್ ಬಜಾರ್‌ನಲ್ಲಿ ಟ್ರೆಂಡಿ ವಸ್ತುಗಳನ್ನು ಖರೀದಿಸಿ

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್: ಟ್ರೆಂಡಿ ವಸ್ತುಗಳನ್ನು ಖರೀದಿಸಿ

ಈ ಸೀಸನ್‌ನಲ್ಲಿ ನಿಮ್ಮ ಕಾರ್ಟ್‌ಗೆ ಸೇರಿಸಲು ಕೆಲವು ಟ್ರೆಂಡಿ ವಸ್ತುಗಳು ಮತ್ತು ಉತ್ತೇಜಕ ಡೀಲ್‌ಗಳು ಇಲ್ಲಿವೆ: ಮಹಿಳೆಯರ ಪ್ಯೂರ್ ಕಾಟನ್ ರೆಗ್ಯುಲರ್ ಫ್ಲೋರಲ್ ಪ್ರಿಂಟೆಡ್ ಟಾಪ್: INR 299 ಹಗುರವಾದ, ಗಾಳಿಯಾಡುವ ಮತ್ತು ಆಕರ್ಷಕವಾಗಿರುವ ಈ ಟಾಪ್ ಅನ್ನು ಇಂದೇ ನಿಮ್ಮ ದಾಗಿಸಿಕೊಳ್ಳಿ; ಇದು ನಿಜಕ್ಕೂ ಬೇಸಿಗೆಗೆ ಸೂಕ್ತವಾದ ಉಡುಗೆಯಾಗಿದೆ.

ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಪಾಲುದಾರಿಕೆ ವಿಸ್ತರಣೆ

ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಪಾಲುದಾರಿಕೆ ವಿಸ್ತರಣೆ

ಡ್ಯುಯಲ್‌ ಅವಾರ್ಡ್‌ ಡಾಕ್ಟೋರಲ್‌ ಕಾರ್ಯಕ್ರಮದ ಅಡಿಯಲ್ಲಿ ಗ್ರಿಫಿತ್‌ ವಿಶ್ವವಿದ್ಯಾ ಲಯ ಮತ್ತು ಮಾಹೆ ಎರಡೂ ಅಕಾಡೆಮಿಗಳು ಜಂಟಿಯಾಗಿ ಪಿಎಚ್‌ಡಿ ವಿದ್ವಾಂಸರನ್ನು ಮೇಲ್ವಿಚಾರಣೆ ಮಾಡುತ್ತವೆ. ಮತ್ತು ಏಕ ಮತ್ತು ಜಂಟಿ ಸಂಶೋಧನಾ ಕಾರ್ಯಕ್ರಮದ ಪೂರ್ಣಗೊಳಿಸುವಿಕೆಯ ನಂತರ ಎರಡೂ ವಿಶ್ವವಿದ್ಯಾಲಯಗಳಿಂದ ಡಾಕ್ಟೋರಲ್‌ ಪದವಿಯನ್ನು ಪ್ರದಾನ ಮಾಡಲಾಗುತ್ತದೆ.

ಯಶಸ್ವಿಯಾಗಿ ಜರುಗಿದ ಡಾವಿಂಚಿ ಗೌರ್ಮೆಟ್ ಬರಿಸ್ಟಾ ಕ್ರಾಫ್ಟ್ ಚಾಂಪಿಯನ್‌ ಶಿಪ್ 2025–26ರ ಪ್ರಾದೇಶಿಕ ಸುತ್ತು

ಡಾವಿಂಚಿ ಗೌರ್ಮೆಟ್ ಬರಿಸ್ಟಾ ಕ್ರಾಫ್ಟ್ ಚಾಂಪಿಯನ್‌ ಶಿಪ್ ಯಶಸ್ವಿ

ಭಾರತೀಯ ಪ್ರತಿನಿಧಿಯಾಗಿದ್ದ ಬೆಂಗಳೂರಿನ ಮೋಹನ್ ಎನ್.ಎಸ್. ಅವರು ತಮ್ಮ ಕೃಷಿ ಹಿನ್ನೆಲೆಯನ್ನು ಕಾಫಿ ತಯಾರಿಕೆಯಲ್ಲಿ ಅದ್ಭುತವಾಗಿ ಬಳಸಿಕೊಂಡರು. ಫಾರ್ಮ್ ಟು ಕಪ್ (ತೋಟದಿಂದ ಕಪ್‌ ವರೆಗೆ) ಎಂಬ ಪರಿಕಲ್ಪನೆಯಡಿ ಅವರು ಸಿದ್ಧಪಡಿಸಿದ ಪಾನೀಯ ಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು.

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

ಈ ಯೋಜನೆಯಡಿ ಎಫ್‌ಎಸ್‌ಐಡಿ ಸಂಸ್ಥೆಯ ಗಣಕ ಮೂಲಸೌಕರ್ಯವನ್ನು ವಿಸ್ತರಿಸ ಲಾಗು ತ್ತಿದೆ. ವಿಶೇಷ ಪ್ರಯೋಗಾಲಯ ಸ್ಥಳ, ಅತ್ಯಾಧುನಿಕ ಇನ್-ರ್ಯಾಕ್ ಕೂಲಿಂಗ್ ವ್ಯವಸ್ಥೆ, ವಿದ್ಯುತ್ ಬ್ಯಾಕಪ್ ಹಾಗೂ ಹೈಬ್ರಿಡ್ ಕಂಪ್ಯೂಟಿಂಗ್ ವರ್ಕ್‌ಸ್ಟೇಷನ್ ಮತ್ತು ಕ್ಲಸ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಗಣಕ ಕಾರ್ಯಕ್ಷಮತೆ ಹೆಚ್ಚಾಗಿ, ಅತ್ಯಾಧುನಿಕ ಸಂಶೋಧನೆ ಗಳಿಗೆ ಉತ್ತೇಜನ ಸಿಗಲಿದೆ.

Koppal Tractor accident: ಕೊಪ್ಪಳದಲ್ಲಿ ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿಯಾಗಿ 7 ಮಂದಿ ದುರ್ಮರಣ!

ಕೊಪ್ಪಳದಲ್ಲಿ ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿಯಾಗಿ 7 ಮಂದಿ ದುರ್ಮರಣ!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಲಯನಹಳ್ಳಿ ನಿವಾಸಿಗಳು, ಕೊಪ್ಪಳದ ಹುಲಿಗಮ್ಮ ದೇವಸ್ಥಾನಕ್ಕೆ ಟ್ರ್ಯಾಕ್ಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಮುನಿರಾಬಾದ್ ಬಳಿ ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ತುಂಗಭದ್ರಾ ಸೇತುವೆಯಿಂದ ಟ್ರ್ಯಾಕ್ಟರ್‌ ಕೆಳಗೆ ಬಿದ್ದು, ದುರಂತ ಸಂಭವಿಸಿದೆ.

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಮತ್ತು ಐಎಚ್‌ಜಿ ಹೋಟೆಲ್ಸ್ ನಡುವೆ ಐದು ಹೋಟೆಲ್ ಒಪ್ಪಂದ; ಭಾರತಕ್ಕೆ ಕಾಲಿಡುತ್ತಿರುವ ಕಿಂಪ್ಟನ್

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್-ಐಎಚ್‌ಜಿ ಹೋಟೆಲ್ಸ್ ನಡುವೆ ಒಪ್ಪಂದ

ಈ ಒಪ್ಪಂದದಡಿ ವಿವಿಧ ಬ್ರ್ಯಾಂಡ್‌ಗಳು ಮತ್ತು ಸ್ಥಳಗಳಲ್ಲಿ ಸುಮಾರು 1,500 ಕೊಠಡಿಗಳ ಸಾಮರ್ಥ್ಯದ ಹೋಟೆಲ್‌ಗಳು ನಿರ್ಮಾಣವಾಗಲಿದ್ದು, ಇದು ಭಾರತದಲ್ಲಿ ಐಎಚ್‌ಜಿ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಹೊಸ ಬಲ ನೀಡಲಿದೆ. ಭಾರತದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರದ ಬೆಳವಣಿಗೆ ಹಾಗೂ ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅಭಿನಂದನೆ

624 ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಹೆಬ್ಬಾಳ್ಕರ್‌ ಅಭಿನಂದನೆ

Gruhalakshmi Scheme Success Story: 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಮಾಧುರಿ ಆರ್. 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದು, ವಿದ್ಯಾರ್ಥಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿನಂದಿಸಿದ್ದಾರೆ.

ನಮ್ಮನ್ನು ಟೀಕೆ ಮಾಡದಿದ್ರೆ ಕುಮಾರಸ್ವಾಮಿ ರಾಜಕೀಯವಾಗಿ ಬದುಕಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಎಚ್‌ಡಿಕೆ ವಿರೋಧಿಸುತ್ತಾರೆ ಎಂದ ಡಿಕೆಶಿ

DK Shivakumar: ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಕುಮಾರಸ್ವಾಮಿ ವಿರೋಧ ಮಾಡುತ್ತಾರೆ. ಅವರು ನಮ್ಮ ಬಗ್ಗೆ ಟೀಕೆ ಮಾಡಲಿಲ್ಲ ಎಂದರೆ ರಾಜಕೀಯವಾಗಿ ಬದುಕಿರಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Private Bus fare hike: ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್;‌ ಖಾಸಗಿ ಬಸ್‌ಗಳ ಟಿಕೆಟ್‌ ದರ ಭಾರಿ ಹೆಚ್ಚಳ!

ಡೀಸೆಲ್‌ ದರ ಏರಿಕೆ; ರಾಜ್ಯದ ಖಾಸಗಿ ಬಸ್‌ಗಳ ಟಿಕೆಟ್‌ ದರ ಭಾರಿ ಹೆಚ್ಚಳ!

Private bus ticket price Hike in Karnataka: ಪೆಟ್ರೋಲ್​-ಡೀಸೆಲ್​, ಅಗತ್ಯ ವಸ್ತುಗಳು ಸೇರಿ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೀಗ ಬಸ್​ ಟಿಕೆಟ್​ ದರ ಕೂಡ ಹೆಚ್ಚಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿದೆ. ಖಾಸಗಿ ಬಸ್‌ ಮಾಲೀಕರು ಎಷ್ಟು ದರ ಹೆಚ್ಚಿಸಲು ನಿರ್ಧರಿಸಿದ್ದಾರೆ?, ಟಿಕೆಟ್‌ ದರ ಎಷ್ಟು ಏರಿಕೆಯಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಸ್ವಂತ ಸುಖ ಬಯಸದೆ ಹಲವರಿಗೆ ಮೈ. ಚ. ಜಯದೇವ ಮಾರ್ಗದರ್ಶನ: ದತ್ತಾತ್ರೇಯ ಹೊಸಬಾಳೆ

ಸ್ವಂತ ಸುಖ ಬಯಸದೆ ಹಲವರಿಗೆ ಮೈ. ಚ. ಜಯದೇವ ಮಾರ್ಗದರ್ಶನ

MC Jayadev's Book release: ಬೆಂಗಳೂರಿನ ಪುರಭವನದಲ್ಲಿ ಅವಿಶ‍್ರಾಂತ ಧ‍್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪು ಪುಸ್ತಕ ಲೋಕಾರ್ಪಣೆ ಗುರುವಾರ ನೆರವೇರಿತು. ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಪುಸ್ತಕ ಬಿಡುಗಡೆ ಮಾಡಿದರು.

Chinthamani News: ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ: ಡ್ಯಾನ್ಸ್ ಮಾಸ್ಟರ್ ಕೇಶವ ಅವರ ಸಾಮಾಜಿಕ ಕಳಕಳಿ

ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ

ತರಬೇತಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಸ್ಥಳೀಯ ಮುಖಂಡರಾದ ಡಾ!ವಿ.ಅಮರ್ ಅವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕೇಶವ ಅವರ ಈ ಕಾರ್ಯವನ್ನು ಶ್ಲಾಘಿಸಿದ ಅವರು ಕೇವಲ 5 ದಿನಗಳಲ್ಲಿ 3 ವರ್ಷದ ಮೇಲ್ಪಟ್ಟ ಮಕ್ಕಳು ಅತ್ಯುತ್ತಮ ವಾಗಿ ಈಜು ಕಲಿಯು ತ್ತಿರುವುದು ಆಶ್ಚರ್ಯಕರ ಮತ್ತು ಮೆಚ್ಚುವಂತದ್ದು.

ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ವಿಶ್ವದ ಮೊದಲ ಸಬ್ ಕ್ಯುಟೇನಿಯಸ್ ಇಮ್ಯುನೊಥೆರಪಿ-ಟೆಸೆಂಟ್ರಿಕ್ ಎಸ್ ಸಿ ಬಿಡುಗಡೆ

ಮೊದಲ ಸಬ್ ಕ್ಯುಟೇನಿಯಸ್ ಇಮ್ಯುನೊಥೆರಪಿ-ಟೆಸೆಂಟ್ರಿಕ್ ಎಸ್ ಸಿ ಬಿಡುಗಡೆ

ಪರಂಪರಾಗತ IV  ಇನ್ಫೂಶನ್ ಚಿಕಿತ್ಸೆಗೆ ಹಲವು ಗಂಟೆಗಳು ಬೇಕಾಗುತ್ತವೆ. ಚಿಕಿತ್ಸೆ ನೀಡುವ ಅವಧಿಯನ್ನು ಸುಮಾರು 7 ನಿಮಿಷಗಳಿಗೆ ಇಳಿಸುವ ಮೂಲಕ Tecentriq SC ಒಂದು ಮಹತ್ವದ ಕ್ರಾಂತಿಕಾರಿ ಹೊಸ ಆವಿಷ್ಕಾರವಾಗಿ ಹೊರಹೊಮ್ಮಿದೆ. ಇದು ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಅನುಭವವನ್ನು ಗಮನಾರ್ಹ ಮಟ್ಟದಲ್ಲಿ ಸುಧಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

Gauribidanur News: ಮೇ.17ಕ್ಕೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಮೇ.17ಕ್ಕೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಈಗಾಗಲೇ 721ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇನ್ನೂ 200 ಹೆಸರನ್ನು ನಾವು ಯಾವುದೇ ಆರ್ಥಿಕ ಸಹಾಯದ ಆಮಿತಿ ನೀಡಿ ಪ್ರಚಾರ ಮಾಡಿಲ್ಲ, ಕೇವಲ ಪ್ರತಿಭೆಯನ್ನು ಗುರುತಿಸಿ ಗೌರವಿಸು ವುದು ನಮ್ಮ ಮೂಲ ಉದ್ದೇಶವಾಗಿದೆ. ತಡವಾಗಿ ನೋಂದಣಿ ಮಾಡಿಕೊಳ್ಳುವ ಪೋಷಕರಲ್ಲಿ ಮನವಿ ಮಾಡಿದ ಅವರು, ಕೆಲವು ವಸ್ತುಗಳ ಕೊರತೆಯಾಗಬಹುದು.

Chikkaballapur News: ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ: ಡಿ.ಹೆಚ್. ಮುನಿಕೃಷ್ಣ ಕರೆ

ನಿಯಮ ಪಾಲನೆ ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ

ವಾಹನ ಚಾಲನೆ ಎಂಬುದು ಕೇವಲ ಉದ್ಯೋಗವಲ್ಲ, ಅದು ಜನರ ಜೀವದ ಭದ್ರತೆಯ ಜವಾ ಬ್ದಾರಿಯೂ ಹೌದು. ಆದ್ದರಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತ ಚಾಲನೆಗೆ ಆದ್ಯತೆ ನೀಡಿ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ದೂರವಿಟ್ಟು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಘದ ಗೌರವ ಹೆಚ್ಚಿಸಬೇಕು

MLA KH. Puttaswamy Gowda: ನಿವೇಶನರಹಿತ ಅರ್ಹ ಫಲಾನುಭವಿಗಳಿಗೆ ಮಾತ್ರ ದೊರೆಯಬೇಕು: ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ ಭರವಸೆ

ನಿವೇಶನರಹಿತ ಅರ್ಹ ಫಲಾನುಭವಿಗಳಿಗೆ ಮಾತ್ರ ದೊರೆಯಬೇಕು

ನಿವೇಶನ ಹಂಚಿಕೆ ವಿಷಯದಲ್ಲಿ ಅಧಿಕಾರಿಗಳು ಯಾವುದೇ ಜಾತಿ,ಧರ್ಮ ,ರಾಜಕೀಯ ಪಕ್ಷಗಳಿಗೆ,ಮುಖಂಡರ ಒತ್ತಡಗಳಿಗೆ ಮಣೆ ಹಾಕದೆ ಪ್ರತಿಯೊಬ್ಬ ನಿವೇಶನ ರಹಿತರ ದಾಖಲೆ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ಅರ್ಹರಿಗೆ ಮಾತ್ರ ನಿವೇಶನಗಳ ನೀಡು ವಂತೆ ಸೂಚಿಸಿದರು.

Loading...