ತುಳು ಬಳಿಕ ಉರ್ದು ಭಾಷೆಗೆ ಮಾನ್ಯತೆ ನೀಡಲು ಎಸ್‌ಡಿಪಿಐ ಒತ್ತಾಯ
Official language status for Urdu: ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ವಾಗತಿಸುತ್ತದೆ. ಅದೇ ರೀತಿ ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿರುವ ಉರ್ದು ಭಾಷೆಯ ಬಗ್ಗೆ ರಾಜ್ಯ ಸರ್ಕಾರವು ಸಮಾನ ದೃಷ್ಟಿಕೋನವನ್ನು ಅನುಸರಿಸಬೇಕು SDPI ಆಗ್ರಹಿಸಿದೆ.