ರೈಲು ಪ್ರಯಾಣಿಕರಿಗೆ ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ!
ಭಾರತದ ಪ್ರಮುಖ ಎಐ-ಆಧಾರಿತ ರೈಲು ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ಗಳಾದ 'ಇಕ್ಸಿಗೋ' ಮತ್ತು 'ಕನ್ಫರ್ಮ್ ಟಿಕೆಟ್', ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ 'ಸ್ವಿಗ್ಗಿ' ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಇನ್ಮುಂದೆ ಪ್ರಯಾಣಿಕರು ದೇಶದ 160ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 40,000ಕ್ಕೂ ಅಧಿಕ ಪ್ರತಿಷ್ಠಿತ ರೆಸ್ಟೋರೆಂಟ್ಗಳಿಂದ ತಮಗೆ ಇಷ್ಟವಾದ ಆಹಾರವನ್ನು ನೇರವಾಗಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದಾಗಿದೆ.