ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Indi News: ಶಿಕ್ಷಣ ಪ್ರವಾಹವಿದ್ದಂತೆ: ಗುರುಮಾತೆ ಚೆನ್ನಮ್ಮಾ ಝಳಕಿ ಅಭಿಮತ

ಶಿಕ್ಷಣ ಪ್ರವಾಹವಿದ್ದಂತೆ: ಗುರುಮಾತೆ ಚೆನ್ನಮ್ಮಾ ಝಳಕಿ ಅಭಿಮತ

ಭಾರತ ಹಳ್ಳಿಗಳ ದೇಶ ಭಾರತದ ದೇಶದ ಸಂಸ್ಕೃತಿ ,ಪರಂಪರೆ ಗ್ರಾಮೀಣ ಭಾಗಗಳಲ್ಲಿ ಸಿಗುತ್ತದೆ. ಗ್ರಾಮೀಣ ಬದಕಿನಲ್ಲಿ ಹಾಡು, ಕತೆ ,ಕವನ, ಜಾನಪದ , ಬಿಸುಕಲ್ಲಿನ ಹಾಡು, ಹಂತಿ ಹಾಡು, ಸೋಬಾನೆ ಇತ್ಯಾದಿ ಕಲೆಗಳು ಸಾಕಷ್ಟು, ಇಂತಹ ವಿಭಿನ್ನ ಸೊಗಡನ್ನು ಮಕ್ಕಳಿಂದ ಅರಳಿಸಬೇಕು . ಶಿಕ್ಷಣ ಎಂದರೆ ಮಗುವಿನಲ್ಲಿ ಅಡಗಿರುವ ಸುಪ್ತ ಶಕ್ತಿ ಹೊರ ತೆಗೆಯುವುದೇ ಶಿಕ್ಷಣ ಕಲಿಕಾ ಹಬ್ಬದ ಉದ್ದೇಶ ಕೂಡಾ ಮಗುವಿಗೆ ಪ್ರತಿ ಹಂತದಲ್ಲಿ ಒತ್ತಡಗಳನ್ನು ಕಡಿಮೆ ಮಾಡಿ ಬೇರೆ ಮಾರ್ಗದಲ್ಲಿ ತೊಡಗಿಸುವ ಕೌಶಲ್ಯವಾಗಿದೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಹೇಮಾವತಿ ನೀರಾವರಿ ಇಲಾಖೆ ವತಿಯಿಂದ ತಾಲೂ ಕಿನ ಮರಾಠಿ ಪಾಳ್ಯ, ಚೇಳೂರು ಹಟ್ಟಿ, ತಿಮ್ಮಣ್ಣಪಳ್ಯ, ಎಣ್ಣೆ ಕಟ್ಟೆ, ಸೋಮಲಾಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆಎಸ್ಆರ್‌ಟಿಸಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಸ್ ಆರ್ ಶ್ರೀನಿವಾಸ್(MLA S R Srinivas) ಭೂಮಿ ಪೂಜೆ ನೆರವೇರಿಸಿದರು

Gubbi News: ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆ ದಾಳಿ: ಕುರಿಗಾಯಿ ಮಹಿಳೆ ಕೂದಲೆಳೆಯಲ್ಲಿ ಪಾರು

ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆ ದಾಳಿ

ತೋಟದ ಸಾಲಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಹಠಾತ್ ದಾಳಿ ಮಾಡಿದ ಚಿರತೆ ಎರಡು ಮೇಕೆಗಳನ್ನು ಬಲಿ ತೆಗೆದುಕೊಂಡಿದೆ. ಮೇಕೆ ಕಾಯುತ್ತಿದ್ದ ಕುರಿಗಾಯಿ ಮಹಿಳೆ ಮೇಲೆರ ಗುವ ಮುನ್ನ ಸ್ಥಳದಿಂದ ಓಡಿಹೋಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಕಿಟ್ಟದಕುಪ್ಪೆ ಗ್ರಾಮದಲ್ಲಿ ನಡೆದಿದೆ

Minister MC Sudhakar: ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತ, ಸರಿಸಾಟಿ ಇಲ್ಲದ ನಾಯಕ: ಸಚಿವ ಎಂ ಸಿ ಸುಧಾಕರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತ, ಸರಿಸಾಟಿ ಇಲ್ಲದ ನಾಯಕ

ಬಡವರ್ಗದ ಸಮುದಾಯದ ಮಕ್ಕಳಿಗೆ ಶಿಕ್ಷಣ,ಅನ್ನ ನೀಡಬೇಕು ಎನ್ನುವ ಹಂಬಲ,ಕಾಳಜಿ ಮುಖ್ಯ ಮಂತ್ರಿಗಳಿಗೆ ಇದೆ. ಹೀಗಾಗಿ ಮುಖ್ಯಮಂತ್ರಿಯಾಗಿ ಆ ವರ್ಗಗಳ ಶೋಷಿತರಿಗೆ, ಧ್ವನಿ ಇಲ್ಲದವರ ಧ್ವನಿ ಯಾಗಿದ್ದಾರೆ. ಹಣಕಾಸಿನ ಮಂತ್ರಿಯಾಗಿ ಅನೇಕ ಜನಪರ ಯೋಜನೆಗಳ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬಡವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಫೆ.1ಕ್ಕೆ ಚುನಾವಣೆ

ಚಳಿಯಲ್ಲಿಯೂ ರಂಗೇರಿದೆ ಚುನಾವಣೆಯ ಬಿಸಿ

13 ನಿರ್ದೇಶಕ ಸ್ಥಾನಗಳಿಗೆ ಅರ್ಹ ಅರ್ಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಬಿಜೆಪಿಯಿಂದ ಸಂಸದ ಡಾ.ಕೆ.ಸುಧಾಕರ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂಬ ಮಾತುಗಳಿದ್ದು, ಕಾಂಗ್ರೆಸ್‌ ನಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜೆಡಿಎಸ್‌ನಿಂದ ಜೆ.ಕೆ.ಕೃಷ್ಣಾರೆಡ್ಡಿ ಅಖಾಡಕ್ಕೆ ಇಳಿ ದಿದ್ದು ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ ಕಾಂಗ್ರೆಸ್‌ನ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರ ಮನೆಗೆ ಆರೋಗ್ಯ ವಿಚಾರಣೆಯ ನೆಪದಲ್ಲಿ ಭೇಟಿ ನೀಡಿರುವುದನ್ನು ಗಮನಿಸಬಹುದು

35 ವರ್ಷದ ಮಹಿಳಾ ಟೆಕ್ಕಿ ಸಾವಿನ ರಹಸ್ಯ ಬಯಲು​:‌ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೊಲೆಗೈದ 18 ವರ್ಷದ ವಿದ್ಯಾರ್ಥಿ ಅರೆಸ್ಟ್‌

35 ವರ್ಷದ ಟೆಕ್ಕಿಯನ್ನು ಕೊಂದ 18 ವರ್ಷದ ವಿದ್ಯಾರ್ಥಿ

Bengaluru News: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 3ರಂದು ಉಸಿರುಗಟ್ಟಿ ಮೃತಪಟ್ಟ ಮಹಿಳಾ ಟೆಕ್ಕಿಯ ಸಾವಿನ ಪ್ರಕರಣಕ್ಕೆ ತಿರುವು ಲಭಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಕೊಲೆಗಾರನನ್ನು 18 ವರ್ಷದ ವಿದ್ಯಾರ್ಥಿ, ಕೇರಳ ಮೂಲದ ಕರ್ನಲ್ ಕುರೈ ಎಂದು ಗುರುತಿಸಲಾಗಿದೆ.

Dr.M.C.Sudhakar: ಚಿಂತಾಮಣಿ ಕ್ಷೇತ್ರದ ಅಭಿವೃದ್ಧಿಯ ಕಡೆ ನನ್ನ ಹೆಚ್ಚಿನ ಗಮನವಿದೆ : ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ

ಬಾಯಿ ಚಪಲಕ್ಕೆ ಸುಳ್ಳು ಹೇಳುವವರ ಬಗ್ಗೆ ಮತದಾರರು ಎಚ್ಚರ ವಹಿಸಬೇಕು

ಕೆಲವರು ಸುಳ್ಳು ಹೇಳುವುದೇ ಒಂದು ರೂಢಿಯಾಗಿದೆ. ನಮ್ಮ ಬದುಕಿನಲ್ಲಿ ಯಾರು ಬದಲಾವಣೆ ತರ್ತಾರೆ,ನಮ್ಮಗೆ ಬೇಕಾದಂತ ಸೌಲಭ್ಯ ಯಾರು ಒದಗಿಸಿಕೊಡ್ತಾರೆ,ಯಾರು ನಮ್ಮ ಮಕ್ಕಳ ಭವಿಷ್ಯ ತ್ ಬಗ್ಗೆ ಚಿಂತನೆ ಮಾಡಿ ಅದಕ್ಕೆ ಬೇಕಾದಂತ ಏನೇನು ಮುಂಜಾಗೃತ ಅಭಿವೃದ್ಧಿ ಕೆಲಸಗಳನ್ನ ತೆಗೆದು ಕೊಳ್ತಾರೆ. ಅದನ್ನು ಮತದಾರರು ತಾವೆಲ್ಲ ಅರ್ಥ ಮಾಡಿಕೊಳ್ಳುಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕಿವಿಮಾತು ಹೇಳಿದರು

Chikkaballapur News: ನಂದಿ ಸರ್ಕಾರಿ ಪ್ರೌಢಶಾಲೆ 1994-95 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ಸಮರ್ಪಣೆ

ಮೂವತ್ತು ವರ್ಷಗಳ ಬಳಿಕ ಸಮ್ಮಿಲನಗೊಂಡ ಗುರು–ಶಿಷ್ಯರ ಬಾಂಧವ್ಯ

ಸುಮಾರು 30 ವರ್ಷಗಳ ಬಳಿಕ ತಮ್ಮ ಬದುಕಿಗೆ ದಿಕ್ಕು ತೋರಿದ ಗುರುಗಳನ್ನು ಕಂಡ ವಿದ್ಯಾರ್ಥಿ ಗಳು ಶಾಲಾ ದಿನಗಳ ನೆನಪುಗಳಲ್ಲಿ ಮುಳುಗಿದರು. ಪಾಠಕ್ಕಷ್ಟೇ ಸೀಮಿತವಲ್ಲದೆ ಶಿಸ್ತು, ಮೌಲ್ಯ ಮತ್ತು ಬದುಕಿನ ಪಾಠಗಳನ್ನು ತಮಗೆ ಕಲಿಸಿದ ಗುರುಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿ ಅವರನ್ನು ಗೌರವಯುತವಾಗಿ ಸತ್ಕರಿಸಿ ವಿದ್ಯಾರ್ಥಿಗಳೆಂದರೆ ಹೀಗಿರಬೇಕು ಎಂಬ ಭಾವವನ್ನು ಮೂಡಿಸಿದರು

ಪ್ರಯತ್ನ ಸೋತರೂ ಪ್ರಾರ್ಥನೆ ವಿಫಲವಾಗುವುದಿಲ್ಲ: ಡಿ.ಕೆ. ಶಿವಕುಮಾರ್‌ ಮಾತಿನ ಮರ್ಮ ಏನು?

ನಾನು ಉಳಿಪೆಟ್ಟು ತಿಂದೇ ಈ ಮಟ್ಟಕ್ಕೆ ಬಂದಿದ್ದೇನೆ ಎಂದ ಡಿಕೆಶಿ

Udyami Vokkaliga Expo 2026: ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, "ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ನನಗಾಗಿ ಪ್ರಾರ್ಥನೆ ಮಾಡಿದಿರಿ, ಹರಕೆ ಕಟ್ಟಿಕೊಂಡಿದ್ದೀರಿ. ಈಗಲೂ ಅದನ್ನೇ ಮಾಡುತ್ತಿದ್ದೀರಿ ಎಂಬ ಅರಿವು ನನಗಿದೆ. ಪಕ್ಷತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲʼʼ ಎಂದು ಹೇಳಿದ್ದು ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಡೈಲಾಗ್ ವೀರ; ಡಿ.ಕೆ. ಶಿವಕುಮಾರ್‌ ವ್ಯಂಗ್ಯ

ಮನರೇಗಾ ಚರ್ಚೆಯ ಪಂಥಹ್ವಾನ ಸ್ವೀಕರಿಸುವೆ ಎಂದ ಡಿಕೆಶಿ

DK Shivakumar: ಮನರೇಗಾ ವಿಚಾರವಾಗಿ ಬಹಿರಂಗ ಚರ್ಚೆ ಮಾಡುವ ವಿರೋಧ ಪಕ್ಷಗಳ ಪಂಥಾಹ್ವಾನವನ್ನು ಸ್ವೀಕರಿಸುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. ಅರಮನೆ ಮೈದಾನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಗಮನ ಸೆಳೆದ ಸ್ಯಾರಿ ವಾಕಥಾನ್; ಡಯಾಲಿಸಿಸ್‌ ರೋಗಿಗಳಿಗೆ ನೆರವಾಗುವ ಉದ್ದೇಶ

ಡಯಾಲಿಸಿಸ್‌ ರೋಗಿಗಳಿಗೆ ನೆರವಾಗಲು ಸ್ಯಾರಿ ವಾಕಥಾನ್

Saree Walkathon: ಬೆಂಗಳೂರು ನಗರದ ಕೊಹಿನೂರ್‌ ಗ್ರೌಂಡ್‌ನಲ್ಲಿ ಮಧುರಾ ಮಹಿಳಾ ಕ್ಲಬ್, ಸುದಯ ಫೌಂಡೇಶನ್ ಮತ್ತು ಗರುಡ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾದ ಸ್ಯಾರಿ ವಾಕಥಾನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಇಲಾಖೆಯ ಅಧ್ಯಕ್ಷ ಎಸ್.ಇ. ಸುಧೀಂದ್ರ, ''ಆರೋಗ್ಯವಾಗಿ ಬದುಕುವವರು ಇಂದಿನ ದಿನಗಳಲ್ಲಿ ಅದೃಷ್ಟವಂತರು ಎಂದು ಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೈಗೊಂಡ ಸ್ಯಾರಿ ನಡಿಗೆ ನಿಜಕ್ಕೂ ಶ್ಲಾಘನೀಯ'' ಎಂದು ಹೇಳಿದರು.

ನಾಮಧಾರಿ ಒಕ್ಕಲಿಗರ ಬೆನ್ನಿಗೆ ನಿಂತ ಎಚ್.ಡಿ. ಕುಮಾರಸ್ವಾಮಿ; 2ಎ ಪ್ರವರ್ಗಕ್ಕೆ ಸೇರಿಸಲು ಪ್ರಯತ್ನಿಸುವುದಾಗಿ ಭರವಸೆ

ನಾಮಧಾರಿ ಒಕ್ಕಲಿಗರ ಬೆನ್ನಿಗೆ ನಿಂತ ಎಚ್.ಡಿ. ಕುಮಾರಸ್ವಾಮಿ

H.D. Kumaraswamy: ಮೈಸೂರಿನ ಕೆ.ಆರ್. ನಗರದಲ್ಲಿ ಭಾನುವಾರ (ಜನವರಿ 11) ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಚ್.ಡಿ. ಕುಮಾರಸ್ವಾಮಿ, ʼʼಈ ಬಗ್ಗೆ ನೀವು ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರಕಾರಕ್ಕೆ ನೀಡಿರುವ ಅರ್ಜಿ, ಇನ್ನಿತರ ಬೇಡಿಕೆಗಳ ಮಾಹಿತಿ ಜತೆ ನನ್ನ ಬಳಿಗೆ ಬನ್ನಿ. ನಾನು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆʼʼ ಎಂದರು.

ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಡ ಹಾಕುವ ಸೈಕೋ ಪತಿಯ ಪ್ರಕರಣಕ್ಕೆ ಟ್ವಿಸ್ಟ್‌; ಪತ್ನಿಯಿಂದಲೇ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಪತ್ನಿಯಿಂದಲೇ ಹಣಕ್ಕಾಗಿ ಪತಿಯ ಬ್ಲ್ಯಾಕ್‌ಮೇಲ್‌

Bengaluru News: ಮನೆಯಲ್ಲಿ ಬೆತ್ತಲೆಯಾಗಿ ಓಡಾಡುವುದು, ಪೋನ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿರುವುದಾಗಿ ಪತಿಯ ವಿರುದ್ಧ ದೂರಿದ ಪತ್ನಿಯ ಮೇಲೆ ಇದೀಗ ಆರೋಪ ಕೇಳಿ ಬಂದಿದೆ. ಪತ್ನಿ ಮೇಘಾಶ್ರೀ ವಿರುದ್ಧವೇ ಇದೀಗ ಪತಿ ಮಂಜುನಾಥ್‌ ದೂರು ನೀಡಲು ಮುಂದಾಗಿದ್ದಾನೆ.

ಸ್ಯಾಂಡಲ್‌ವುಡ್‌ ನಟಿಗೆ ಉದ್ಯುಮಿ ಕಿರುಕುಳ ನೀಡಿದ ಪ್ರಕರಣಕ್ಕೆ ಟ್ವಿಸ್ಟ್‌; ಇಬ್ಬರ ಖಾಸಗಿ ಫೋಟೊ ವೈರಲ್‌

ಉದ್ಯಮಿಯ ಜತೆಗಿನ ಸ್ಯಾಂಡಲ್‌ವುಡ್‌ ನಟಿಯ ಖಾಸಗಿ ಫೋಟೊ ಲೀಕ್‌

ಸ್ಯಾಂಡಲ್​​ವುಡ್​ ಖ್ಯಾತ ನಟಿಗೆ ಉದ್ಯಮಿ ಅರವಿಂದ್‌ ರೆಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಇದೀಗ ಅರವಿಂದ್‌ ರೆಡ್ಡಿ ಜತೆ ನಟಿ ಬೆಡ್‌ರೂಂನಲ್ಲಿರುವ ಫೋಟೊ ಸೇರಿದಂತೆ ಹಲವು ಖಾಸಗಿ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಾವು ಇಲ್ಲದಿದ್ದರೆ ಬೆಂಗಳೂರು ಬಿಗ್‌ ಝೀರೋ; ʼಗ್ರೇಟ್ ಕೇರಳʼ ಎಕ್ಸ್‌ ಪೋಸ್ಟ್‌ಗೆ ರೊಚ್ಚಿಗೆದ್ದ ಕನ್ನಡಿಗರು

ಬೆಂಗಳೂರು ಕೆಣಕಿದ ಮಲಯಾಳಿಗಳ ಬೆವರಿಳಿಸಿದ ಕನ್ನಡಿಗರು

ಗ್ರೇಟ್‌ ಕೇರಳ ಎನ್ನುವ ಎಕ್ಸ್‌ ಪೇಜ್‌ನಲ್ಲಿ ಬೆಂಗಳೂರಿನ ಬಗ್ಗೆ ಆಕ್ಷೇಪಾರ್ಹ ಬರಹ ಕಂಡು ಬಂದಿದ್ದು ಕನ್ನಡಿಗರು ರಿಚ್ಚಗೆದ್ದಿದ್ದಾರೆ. ʼʼಬೆಂಗಳೂರಿನಲ್ಲಿರುವ ಇತರ ರಾಜ್ಯದವರನ್ನು ಕಳಿಸಿಕೊಟ್ಟರೆ ಬೆಂಗಳೂರು ದೊಡ್ಡ ಝೀರೋ ಆಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಾತ್ರ ಕನ್ನಡಿಗರಿದ್ದಾರೆʼʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ಕನ್ನಡಿಗರು ಬೆಂಡೆತ್ತಿದ್ದಾರೆ.

Lakkundi gold treasure: ಲಕ್ಕುಂಡಿಯಲ್ಲಿ ನಿಧಿ ಪತ್ತೆ, ನಿಧಿ ಸಿಕ್ಕ ಮನೆಯವರಿಗೆ ಬೀದಿಪಾಲಾಗುವ ಭೀತಿ! ಪ್ರಾಮಾಣಿಕತೆಯೇ ಮುಳುವಾಯ್ತಾ?

ಲಕ್ಕುಂಡಿಯಲ್ಲಿ ನಿಧಿ ಪತ್ತೆ, ನಿಧಿ ಸಿಕ್ಕ ಮನೆಯವರಿಗೆ ಬೀದಿಪಾಲಾಗುವ ಭೀತಿ!

ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾಗಿತ್ತು. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದೆ.

Kodi Mutt Swamiji: ಸಿಎಂ ಕುರ್ಚಿ, ಇಬ್ಬರು ಮಹಾ ವ್ಯಕ್ತಿಗಳ ಸಾವು ಬಗ್ಗೆ ಕೋಡಿ ಮಠ ಸ್ವಾಮೀಜಿ ಕುತೂಹಲಕಾರಿ ಭವಿಷ್ಯವಾಣಿ

ಸಿಎಂ ಕುರ್ಚಿ, ಇಬ್ಬರು ಮಹನೀಯರ ಸಾವು: ಕೋಡಿ ಶ್ರೀ ಭವಿಷ್ಯವಾಣಿ ಹೀಗಿದೆ!

ಹೊಸ ವರ್ಷದ ಆರಂಭದಲ್ಲೇ ರಾಜ್ಯ ರಾಜಕೀಯದ ಬಗ್ಗೆ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬೀದರ್​ನಲ್ಲಿ ಮಾತಾಡಿದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿತಿ ನೋಡಿದರೆ ಬದಲಾವಣೆ ಕಷ್ಟ. ಈ ಬಾರಿ ಕೂಡ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸ್ತಾರೆ ಎಂದಿದ್ದಾರೆ.

ಭಾರತದಲ್ಲಿ 84% ವೃತ್ತಿಪರರು 2026ರಲ್ಲಿ ಉದ್ಯೋಗ ಹುಡುಕಾಟಕ್ಕೆ ಸಿದ್ಧರಾಗಿಲ್ಲ ಎಂದು ಭಾವಿಸುತ್ತಾರೆ: ಲಿಂಕ್ಡ್‌ ಇನ್

84% ವೃತ್ತಿಪರರು 2026ರಲ್ಲಿ ಉದ್ಯೋಗ ಹುಡುಕಾಟಕ್ಕೆ ಸಿದ್ಧರಾಗಿಲ್ಲ

ಭಾರತದಲ್ಲಿ 84%¹ ವೃತ್ತಿಪರರು ತಾವು ಹೊಸ ಉದ್ಯೋಗ ಹುಡುಕಲು ಸಿದ್ಧರಿಲ್ಲ ಎಂದು ಭಾವಿಸು ತ್ತಾರೆ. ಆದರೂ 72%² ಮಂದಿ 2026ರಲ್ಲಿ ಹೊಸ ಹುದ್ದೆಗಾಗಿ ಹುಡುಕಾಟ ನಡೆಸಿರುವುದಾಗಿ ಹೇಳು ತ್ತಾರೆ ಎಂದು ಲಿಂಕ್ಡ್ ಇನ್ ತನ್ನ ನೂತನ ವರದಿಯಲ್ಲಿ ತಿಳಿಸಿದೆ. ಈ ಬದಲಾವಣೆಯು ನೇಮಕಾತಿ ಪ್ರಕ್ರಿಯೆ ಯಲ್ಲಿ ಎಐ ಬಳಕೆ ಹೆಚ್ಚಳ, ಇಂದಿನ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳಲ್ಲಿ ಆಗಿರುವ ಬದಲಾವಣೆ ಮತ್ತು ಹೆಚ್ಚು ಸ್ಪರ್ಧಾತ್ಮಕವಾದ, ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳುವ ಉದ್ಯೋಗ ಮಾರುಕಟ್ಟೆಯ ಕಾರಣಗಳಿಂದ ಆಗಿದೆ.

Samsung: ತಮಿಳುನಾಡಿನಲ್ಲಿ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಆರಂಭಕ್ಕೆ ಮದ್ರಾಸ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ಸ್ಯಾಮ್‌ಸಂಗ್

ಮದ್ರಾಸ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ಸ್ಯಾಮ್‌ಸಂಗ್

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ಸ್ಯಾಮ್‌ಸಂಗ್, ತಮಿಳುನಾಡಿನ ಯುವ ಜನತೆಗೆ ಭವಿಷ್ಯದ ತಂತ್ರಜ್ಞಾನ ಕೌಶಲ್ಯಗಳನ್ನು ತರಬೇತಿ ನೀಡುವ ಉದ್ದೇಶದಿಂದ ಮದ್ರಾಸ್ ವಿಶ್ವ ವಿದ್ಯಾಲಯದೊಂದಿಗೆ ಕೈಜೋಡಿಸಿದ್ದು, ಈ ಮೂಲಕ ತಮಿಳು ನಾಡಿನಲ್ಲಿ ತನ್ನ ಪ್ರಮುಖ ತಾಂತ್ರಿಕ ಶಿಕ್ಷಣ ಯೋಜನೆಯಾದ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಅನ್ನು ಜಾರಿಗೆ ತರುವುದಾಗಿ ಕಂಪನಿ ಘೋಷಿಸಿದೆ.

CM Siddaramaiah: ದ್ವೇಷ ಭಾಷಣ ವಿಧೇಯಕ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ವಿಧೇಯಕ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ, ಮರಳಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು 19 ವಿಧೇಯಕಗಳಿಗೆ ಅಂಕಿತ ಹಾಕಿದ್ದರು. ಆದರೆ ದ್ವೇಷ ಭಾಷಣ ವಿಧೇಯಕಕ್ಕೆ ಯಾವುದೇ ವಿವರಣೆ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

Body Found: ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಕಾರಿನೊಳಗೆ ಸುಟ್ಟು ಕರಕಲಾಗಿ ಪತ್ತೆ, ಶಂಕೆಗಳ ಸುಳಿ

ಮಾಜಿ ಕಾರ್ಪೊರೇಟರ್ ಶವ ಕಾರಿನೊಳಗೆ ಸುಟ್ಟು ಕರಕಲಾಗಿ ಪತ್ತೆ, ಶಂಕೆಗಳ ಸುಳಿ

ದಾವಣಗೆರೆ ಹೊರವಲಯ ಹದಡಿ ರಸ್ತೆಯ ಬಳಿಯ ತೋಟದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮೃತ ದೇಹ ಸಿಕ್ಕಿದೆ. ಕಾರಿನಲ್ಲಿ ಕುಳಿತು ಮಾಜಿ ಕಾರ್ಪೊರೇಟರ್​ ಸಂಕೋಳ್ ಚಂದ್ರಶೇಖರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಅವರ ಮಗನಾದ ಮಗ ಹಾಗೂ ಮಗಳು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಜಾವೀಧ್, ಊಟ ತಯಾರಿದೆ ಎಂದು ಖಾನಾವಳಿ ಮುಂಭಾಗದಲ್ಲಿ ನಿಲ್ಲಿಸುವ ಬೋರ್ಡ ಮಾದರಿಯಲ್ಲಿ ಪುರಸಭೆ ಯಿಂದ ಸಾವಿನ ಗುಂಡಿಗೆ ಸ್ವಾಗತ, ನಿಧಾನವಾಗಿ ಚಲಿಸಿ ಎಂಬ ಬರಹದೊಂದಿಗೆ ಬೋರ್ಡ್ ನಿಲ್ಲಿಸಿ ಆಕ್ರೋಶ ಹೊರ ಹಾಕಿದ್ದಾನೆ. ನಂತರ ಮಧ್ಯಾಹ್ನದ ಹೊತ್ತಿಗೆ ಪುರಸಭೆ ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ.

ನದಿ ಉಳಿವಿಗಾಗಿ ಸಮಾವೇಶ ಇಂದು

ನದಿ ಉಳಿವಿಗಾಗಿ ಸಮಾವೇಶ ಇಂದು

ಪಶ್ಚಿಮ ಘಟ್ಟಗಳು ಜಗತ್ತಿನ ಎಂಟು ಅತೀ ಸೂಕ್ಷ್ಮ ಪರಿಸರ ತಾಣಗಳಲ್ಲಿ ಒಂದು. ಇಲ್ಲಿನ ನದಿಗಳನ್ನು ತಡೆಯುವುದು ಎಂದರೆ ನಮ-- ಕೈಯಾರೆ ನಾವು ವಿನಾಶವನ್ನು ಆಮಂತ್ರಿಸಿದಂತೆ. ಅಭಿವೃದ್ಧಿಯು ಪರಿಸರ ಪೂರಕವಾಗಿರಬೇಕೇ ಹೊರತು ಪರಿಸರ ಮಾರಕವಾಗಬಾರದು.‘ ಎಂದು ಪರಿ ಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Namma Metro Pink Line: ನಮ್ಮ ಮೆಟ್ರೋ ಪಿಂಕ್‌ ಲೈನ್‌ನಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ

ನಮ್ಮ ಮೆಟ್ರೋ ಪಿಂಕ್‌ ಲೈನ್‌ನಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಈ ಮಾರ್ಗದಲ್ಲಿ ಇದೀಗ ಪರೀಕ್ಷಾರ್ಥ ಸಂಚಾರ ಶುರುವಾಗಿದೆ. ಈ ಮಾರ್ಗದಲ್ಲಿ ಒಟ್ಟು 5 ನಿಲ್ದಾಣಗಳು ಇವೆ. ಪರೀಕ್ಷಾರ್ಥ ಸಂಚಾರ ಮುಗಿದ ಬಳಿಕ ಸುರಕ್ಷತಾ ಪ್ರಮಾಣಪತ್ರ ಲಭಿಸಿದ ಕೂಡಲೇ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ

Loading...