ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?
ರಾಜ್ಯದ 2ನೇ ಅತಿದೊಡ್ಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಆಡಳಿತ ಕೇಂದ್ರ ಮತ್ತು ವಿಭಾಗೀಯ ಕೇಂದ್ರ ಎಂಬ ಹತ್ತಾರು ಹಣೆಪಟ್ಟಿಗಳಿರುವ ಕಲಬುರಗಿ ಜಿಲ್ಲೆಗೆ ಇಂದು ಒಂದೇ ಒಂದು ಸಮರ್ಪಕ ‘ಚತುಷ್ಪಥ ರಸ್ತೆ’ ಇಲ್ಲದಿರುವುದು ವಿಪರ್ಯಾಸ. ರಾಜ್ಯದ ಇತರೆ ನಗರಗಳು ಎಕ್ಸ್ ಪ್ರೆಸ್ ಹೈವೇಗಳ ಮೂಲಕ ಸಮೃದ್ಧಿಯತ್ತ ಓಡುತ್ತಿದ್ದರೆ, ಕಲಬುರಗಿ ಮಾತ್ರ ದ್ವಿಪಥದ ಇಕ್ಕಟ್ಟಾದ ರಸ್ತೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ.