ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ ವನ್
2017ರಲ್ಲಿ ದೇಶದ ಕಾಡುಗಳಲ್ಲಿ 27,312 ಆನೆಗಳಿದ್ದವು. 2025ರಲ್ಲಿ ಈ ಸಂಖ್ಯೆ 22,446ಕ್ಕೆ ಇಳಿದಿದೆ. ಆನೆಗಳ (Elephant) ಸಂಖ್ಯೆಯಲ್ಲಿ ಶೇ.18ರಷ್ಟು ಅಂದರೆ 5000ದಷ್ಟು ಇಳಿಕೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 6,013 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆನೆ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆ ಪಡೆದಿದೆ.