ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Gold Rate Today: ಚಿನ್ನದ ದರದಲ್ಲಿ ಭಾರೀ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 18th Sep 2025: 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 50ರೂ ಇಳಿಕೆಯಾಗಿ , 10,190 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 54ರೂ. ಇಳಿಕೆಯಾಗಿ 11,117 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ81,520 ರೂ. ಬಾಳಿದರೆ, 10 ಗ್ರಾಂಗೆ ನೀವು 1,01,900 ರೂ. ಹಾಗೂ 100 ಗ್ರಾಂಗೆ 10,19,000 ರೂ. ನೀಡಬೇಕಾಗುತ್ತದೆ.

Murder Case: ಕೆಲಸ ನೀಡಿದ ಮಹಿಳೆಯನ್ನೇ ಕಲ್ಲಿನಿಂದ ಜಜ್ಜಿ ಸಾಯಿಸಿದ ಅಪ್ರಾಪ್ತ!

ಕೆಲಸ ನೀಡಿದ ಮಹಿಳೆಯನ್ನೇ ಕಲ್ಲಿನಿಂದ ಜಜ್ಜಿ ಸಾಯಿಸಿದ ಅಪ್ರಾಪ್ತ!

Hassan Crime: ಈಕೆಯನ್ನು ಹತ್ಯೆಗೈದ ಬಾಲಕ ಚಿಕ್ಕಂದಿನಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು, ಮೀನಾಕ್ಷಮ್ಮ ಅವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ. ಸೆ.15ರಂದು ಬಾಲಕ ಮೀನಾಕ್ಷಮ್ಮ ಜೊತೆಗೆ ಜಗಳ ತೆಗೆದಿದ್ದಾನೆ. ನಂತರ ಆಕೆಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ನವೆಂಬರ್‌ನಲ್ಲಿ 'ಸಮಾಜಮುಖಿ ಸಾಹಿತ್ಯ ಸಂಭ್ರಮ': ಸಾಹಿತ್ಯಾಸಕ್ತರಿಗೆ ಮುಕ್ತ ಆಹ್ವಾನ

'ಸಮಾಜಮುಖಿ ಸಾಹಿತ್ಯ ಸಂಭ್ರಮ':ಸಾಹಿತ್ಯಾಸಕ್ತರಿಗೆ ಮುಕ್ತ ಆಹ್ವಾನ

ಕಳೆದ ಎಂಟು ವರ್ಷಗಳಿಂದ 'ಸಮಾಜಮುಖಿ ಪ್ರಕಾಶನ' ಮತ್ತು ಅದರ ಸಹ ಸಂಸ್ಥೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಹಿನ್ನೆಲೆ ಯಲ್ಲಿ, ಪ್ರಚಲಿತ ಸಾಹಿತ್ಯ ಸಮ್ಮೇಳನಗಳ ರಾಜಕೀಯ ಹಸ್ತಕ್ಷೇಪ ಮತ್ತು ವಾಣಿಜ್ಯೀಕರಣದಿಂದ ಭಿನ್ನವಾದ, ಕೇವಲ ಸಾಹಿತ್ಯಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಸಮ್ಮೇಳನ ಆಯೋಜಿಸಲಾಗುತ್ತಿದೆ.

Digital Arrest: ಬೆಂಗಳೂರು ಪೊಲೀಸರ ಲೋಗೋ ತೋರಿಸಿ ನಿವೃತ್ತ ವೈದ್ಯೆಗೆ 70 ಗಂಟೆ ಡಿಜಿಟಲ್‌ ಆರೆಸ್ಟ್‌, ಹೃದಯಾಘಾತದಿಂದ ಸಾವು

ನಿವೃತ್ತ ವೈದ್ಯೆಗೆ 70 ಗಂಟೆ ಡಿಜಿಟಲ್‌ ಆರೆಸ್ಟ್‌, ಹೃದಯಾಘಾತದಿಂದ ಸಾವು

Cyber Crime: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಮೂರು ದಿನಗಳ ಕಾಲ ಈ ವೃದ್ಧೆಗೆ ನಿರಂತರ ಕಿರುಕುಳ ನೀಡಿದ್ದರು. ಇದಾದ ನಂತರ 76 ವರ್ಷದ ನಿವೃತ್ತ ವೈದ್ಯೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

POCSO case: ಬಾಲಕಿಯ ಮೇಲೆ ಅತ್ಯಾಚಾರ, ಯೋಗ ಗುರುವಿನ ಬಂಧನ

ಬಾಲಕಿಯ ಮೇಲೆ ಅತ್ಯಾಚಾರ, ಯೋಗ ಗುರುವಿನ ಬಂಧನ

Bengaluru Crime: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಯೋಗ ಸೆಂಟರ್‌ ನಡೆಸುತ್ತಿರುವ ಆರೋಪಿ ನಿರಂಜನ ಮೂರ್ತಿ ಇನ್ನೂ ಏಳೆಂಟು ಮಹಿಳೆಯರ ಮೇಲೂ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬಾಲಕಿಯರಿಗೂ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.

Bengaluru Roads: ʼಹದಗೆಟ್ಟ ರಸ್ತೆಗಳು, ಧೂಳುʼ ಹಿನ್ನೆಲೆಯಲ್ಲಿ ಬೆಂಗಳೂರು ತೊರೆಯಲು ಮುಂದಾದ ಸ್ಟಾರ್ಟಪ್‌

ʼಹದಗೆಟ್ಟ ರಸ್ತೆಗಳು, ಧೂಳುʼ ಬೆಂಗಳೂರು ತೊರೆಯಲು ಮುಂದಾದ ಸ್ಟಾರ್ಟಪ್‌

Bengaluru Stratup: ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಈ ಕುರಿತು ʼಎಕ್ಸ್‌ʼನಲ್ಲಿ ಪೋಸ್ಟ್‌ ಹರಿಬಿಟ್ಟಿದ್ದಾರೆ. ORR ನಲ್ಲಿರುವ ಕಂಪನಿಯ ನೆಲೆಯು ಸುಮಾರು ಒಂದು ದಶಕದಿಂದ 'ಕಚೇರಿ ಮತ್ತು ಮನೆ' ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದಿದ್ದಾರೆ. '

DK Shivakumar: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು

ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು

Pot holes: ನವೆಂಬರ್ ಒಳಗೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಮತ್ತು ಸುಗಮ ಸಂಚಾರ ನಮ್ಮ ಗುರಿಯಾಗಿರುವುದರಿಂದ, ಜಿಬಿಎ ಸಾಧ್ಯವಾದಷ್ಟು ಬೇಗ ಗುಂಡಿಗಳ ಸಮಸ್ಯೆ ಪರಿಹರಿಸುತ್ತದೆ" ಎಂದು ಡಿಸಿಎಂ 'ಎಕ್ಸ್' ನಲ್ಲಿ ಪೋಸ್ಟ್‌ ಮಾಡಿದ್ದಾರೆ.

CM Siddaramaiah: ಆರ್‌ಎಸ್‌ಎಸ್‌ ಕುರಿತ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರು ವಜಾ

ಆರ್‌ಎಸ್‌ಎಸ್‌ ಕುರಿತ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧದ ದೂರು ವಜಾ

ಸಿಎಂ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಎನ್ ಕಿರಣ್ ಎಂಬವರು ಖಾಸಗಿ ದೂರು ದಾಖಲಿಸಿದ್ದರು. ಇದೀಗ ಬೆಂಗಳೂರಿನ 42ನೇ ACMM ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಖಾಸಗಿ ದೂರು ವಜಾಗೊಳಿಸಿ ಆದೇಶ ಹೊರಡಿಸಿದೆ.

Dharmasthala Case: ಮಹೇಶ್‌ ಶೆಟ್ಟಿ ತಿಮರೋಡಿ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿ ಎಫ್‌ಐಆರ್‌

ಮಹೇಶ್‌ ಶೆಟ್ಟಿ ತಿಮರೋಡಿ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿ ಎಫ್‌ಐಆರ್‌

Thimarodi: ಎಸ್ಐಟಿ ಎಸ್ಪಿ ಸೈಮನ್ ಅವರ ದೂರು ಆಧರಿಸಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಇದೀಗ ಶಸ್ತ್ರಾಸ್ತ್ರ ಕಾಯ್ದೆ 25(1), 25(1-A), 24(1-B), (A) ರಡಿ ಕೇಸ್ ದಾಖಲಾಗಿದೆ. ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಬಂದೂಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿದ್ದವು.

Navaratri Fashion 2025: ನವರಾತ್ರಿ ಡಿಸೈನರ್‌ವೇರ್ಸ್‌ ಸೆಲೆಕ್ಷನ್‌ಗೆ ಇಲ್ಲಿದೆ 5 ಐಡಿಯಾ

ನವರಾತ್ರಿ ಡಿಸೈನರ್‌ವೇರ್ಸ್‌ ಸೆಲೆಕ್ಷನ್‌ಗೆ ಇಲ್ಲಿದೆ 5 ಐಡಿಯಾ

Navaratri Fashion 2025: ನವರಾತ್ರಿ ಸಂಭ್ರಮಿಸಲು ಮಹಿಳೆ ಹಾಗೂ ಪುರುಷರಿಗೆ ನಾನಾ ಶೈಲಿಯ ಟ್ರೆಡಿಷನಲ್ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ. ಅವುಗಳನ್ನು ಸೆಲೆಕ್ಷನ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಡಿಸೈನರ್‌ಗಳು ಒಂದಿಷ್ಟು ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.

Bagepally News: ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಗೆ ಮೂಲಸೌಲಭ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ

ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಗೆ ಮೂಲಸೌಲಭ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ

ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲಂದ ರಲ್ಲೆ ನಿಲ್ಲುತ್ತಿದೆ. ಅಷ್ಟೇ ಅಲ್ಲದೆ ಒಂದು ಬೀದಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅವೈಜ್ಞಾನಿಕವಾಗಿ ಇಬ್ಬದಿಗಳಲ್ಲೂ ಚರಂಡಿ ಇಲ್ಲದೆಯೇ ರಸ್ತೆ ಕಾಮಗಾರಿ ಮುಗಿಸ ಲಾಗಿದೆ. ಇನ್ನೊಂದು ಬೀದಿಯಲ್ಲಿ ಅರ್ಧಬರ್ಧ ಸಿಸಿ ರಸ್ತೆ ಮಾಡಲಾಗಿದೆ.

Bagepally News: ಗರ್ಭಿಣಿ, ಕಾಯಿಲೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಿ: ಬಿಇಓ ವೆಂಕಟೇಶಪ್ಪಗೆ ಮನವಿ

ಗರ್ಭಿಣಿ, ಕಾಯಿಲೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಿ

೨೦೨೫ನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿಯಲ್ಲಿ ದಸರಾ ಹಾಗೂ ನವರಾತ್ರಿ ಹಬ್ಬಗಳಿವೆ. ಶಿಕ್ಷಕರು ಹಬ್ಬಗಳಲ್ಲಿ ಪಾಲ್ಗೊಳ್ಳಲು ಸಮೀಕ್ಷೆಯನ್ನು ಒಂದು ವಾರ ಮುಂದೂಡಬೇಕು. ವರ್ಷಪೂರ್ತಿ ದುಡಿಯುವ ಶಿಕ್ಷಕರು ಕುಟುಂಬದ ಜತೆ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ ವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.

Dr M C Sudhakar: ಶಿಕ್ಷಣ ಎಂಬುದು ಶಕ್ತಿ ಆಗಬೇಕೆ ಹೊರತು ಶಿಕ್ಷೆಯಾಗಬಾರದು: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್

ಚಿಂತಾಮಣಿಯಲ್ಲಿ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆ ಆಚರಣೆ

ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ. ಡಿಜಿಟಲ್ ಕ್ರಾಂತಿ ಯಿಂದಾಗಿ ಶಾಲಾ ಶಿಕ್ಷಣ ಹಂತದಲ್ಲಿಯೇ ಆಧುನಿಕ ತಂತ್ರಜ್ಞಾನದ ನೆರವಿನ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಮೂಲಕ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸಬಹುದಾಗಿದೆ. ಶಾಲೆಗಳಲ್ಲಿ ಸ್ಮಾಟ್  ಕ್ಲಾಸುಗಳ  ಮೂಲಕ ತರಗತಿಗಳಲ್ಲಿ ಪಾಠ ಬೋಧನೆ ಮಾಡಬೇಕು.

Dr M C Sudhkar: ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಆನ್‌ಲೈನ್ ಕಾರ್ಯಗಳು ಮಾಡಲು ಸಮಸ್ಯೆಯಾಗುತ್ತಿದ್ದು ಕ್ಲಸ್ಟರ್ ಹಂತದಲ್ಲಿ ದ್ವಿತೀಯ ದರ್ಜೆ ಸಹಾಯಕರನ್ನು ನೇಮಿಸಿ ಆನ್‌ಲೈನ್ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಬೇಕು ಅಕ್ಷರದಾಸೋಹ ಕಾರ್ಯಕ್ರಮದಲ್ಲಿ ಕೆಲವು ಜಿಲ್ಲೆಗಳಲ್ಲಿ ಮೊಟ್ಟೆ ಖರೀದಿ ಮತ್ತು ಸರಬರಾಜು ಮಾಡುವುದಕ್ಕೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ.

KMC Mangaluru: ವಿಶ್ವ ಹೃದಯ ದಿನ: ಸೆ. 21ರಂದು ಕೆಎಂಸಿ ಆಸ್ಪತ್ರೆಯಿಂದ ವಾಕಥಾನ್

ವಿಶ್ವ ಹೃದಯ ದಿನಾಚರಣೆ

ವಿಶ್ವ ಹೃದಯ ದಿನದ ಅಂಗವಾಗಿ ಸೆ. 21ರಂದು ಮಂಗಳೂರು ಕೆಎಂಸಿ ವತಿಯಿಂದ ವಾಕಥಾನ್ ಆಯೋಜಿಸಲಾಗಿದೆ. ಹೃದಯದ ಆರೋಗ್ಯ ಕಾಳಜಿಯನ್ನು ಉತ್ತೇಜಿಸುವ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ ಸಮುದಾಯ ಕೇಂದ್ರಿತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

Bengaluru Rains: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆ; ನಾಳೆಯೂ ಮುಂದುವರಿಯಲಿದೆ ವರುಣಾರ್ಭಟ

ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ ಆರ್ಭಟ!

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 21°C ಇರುವ ಸಾಧ್ಯತೆ ಇದೆ.

Mahesh Shetty Thimarodi: ಮಹೇಶ್ ತಿಮರೋಡಿ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ; ಎಫ್‌ಐಆರ್‌ ದಾಖಲು

ಮಹೇಶ್ ತಿಮರೋಡಿ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ; ಎಫ್‌ಐಆರ್‌ ದಾಖಲು

Dharmasthala Case: ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾದ ಬಗ್ಗೆ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್ ಅವರು ಸೆ.16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ತಿಮರೋಡಿ ಅವರ ವಿರುದ್ಧ ಆರ್ಮ್ಸ್ ಆಕ್ಟ್ 1959ರಡಿ ಬೆಳ್ತಂಗಡಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಮುದಾಯ ಸೇವೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ ಮಾಹೆ ಕುಲಾಧಿಪತಿ ಡಾ.ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬ ಆಚರಣೆ

ಮಾಹೆ ಕುಲಾಧಿಪತಿ ಡಾ.ರಾಮದಾಸ್ ಎಂ. ಪೈ 90ನೇ ಹುಟ್ಟುಹಬ್ಬ ಆಚರಣೆ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ವಿಶ್ವವಿದ್ಯಾಲಯ ಎಂದು ಪರಿಗಣಿತ ವಾದ ಉತ್ಕೃಷ್ಟ ಸಂಸ್ಥೆಯು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಮತ್ತು ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ವಿಯಾಗಿ ಆಚರಿಸಿದೆ.

PM Modi Birthday: ರಾಜಾಜಿನಗರದಲ್ಲಿ 75 ಕೆಜಿ ಕೇಕ್ ಕತ್ತರಿಸಿ ಮೋದಿ ಜನ್ಮದಿನಾಚರಣೆ

ರಾಜಾಜಿನಗರದಲ್ಲಿ 75 ಕೆಜಿ ಕೇಕ್ ಕತ್ತರಿಸಿ ಮೋದಿ ಜನ್ಮದಿನಾಚರಣೆ

PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ, ರಕ್ತದಾನ, ನೇತ್ರದಾನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Madhugiri News: ಅರ್ಹರಿಗೆ ನಿವೇಶನದ ಹಕ್ಕುಪತ್ರದ ಜತೆಗೆ ಮನೆ ಮಂಜೂರು: ಶಾಸಕ ಕೆ.ಎನ್. ರಾಜಣ್ಣ ಭರವಸೆ

ಅರ್ಹರಿಗೆ ನಿವೇಶನದ ಹಕ್ಕುಪತ್ರದ ಜತೆಗೆ ಮನೆ ಮಂಜೂರು: ಶಾಸಕ ರಾಜಣ್ಣ ಭರವಸೆ

Madhugiri News: ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಜನಸ್ಪಂದನಾ, ಖಾತಾ ಆಂದೋಲನ ಕಾರ್ಯಕ್ರಮ, ವಸತಿ ಅದೇಶ ಪತ್ರ ಹಾಗೂ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎನ್‌ ಜರುಗಿತು.

Hospete News: ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಪ್ರಗತಿ ಪರಿಶೀಲನ ಸಭೆ

ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಪ್ರಗತಿ ಪರಿಶೀಲನ ಸಭೆ

ದೇವದಾಸಿ ಮಹಿಳೆಯರ ಸಮಸ್ಯೆಗಳನ್ನು ರಾಜ್ಯ ಸರಕಾರದ ಗಮನ ಸೆಳೆಯುವದಾಗಿ ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಪರಿಶಿಷ್ಟ ಸಮುದಾಯಗಳ ನಾಯಕರು ವಿಜಯನಗರ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟರು ಅನುಭವಿಸುತ್ತಿರುವ ಭೂಮಿ ಸಮಸ್ಯೆಗಳು ಮತ್ತು ವಿಶೇಷವಾಗಿ ಸ್ಮಶಾನದ ಸಮಸ್ಯೆಯನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದರು.

MLA Munirathna: ಶಾಸಕ ಮುನಿರತ್ನಗೆ ಬಿಗ್ ರಿಲೀಫ್; ಸಾಮೂಹಿಕ ಅತ್ಯಾಚಾರ ಕೇಸ್‌ ರದ್ದು ಮಾಡಿದ ಹೈಕೋರ್ಟ್

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಕೇಸ್‌ ರದ್ದು ಮಾಡಿದ ಹೈಕೋರ್ಟ್

MLA Munirathna: ತಮ್ಮ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಮುನಿರತ್ನ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಪ್ರಕರಣವನ್ನು ವಜಾಗೊಳಿಸಿದೆ.

BY Vijayendra: ಹಿಂದೂ ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಸಿಎಂ ಸಿದ್ದರಾಮಯ್ಯ: ವಿಜಯೇಂದ್ರ

ಹಿಂದೂ ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಸಿದ್ದರಾಮಯ್ಯ

BY Vijayendra: ರಾಜ್ಯದ ಮುಖ್ಯಮಂತ್ರಿಗಳಾಗಿ ಇವತ್ತು ಎಲ್ಲ ಸ್ಥಾನಕ್ಕೆ ನ್ಯಾಯ ಕೊಡಬೇಕಾದ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

Actor Vishnuvardhan: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಬ್ರೇಕ್

ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಅನುಮತಿ ಇಲ್ಲ! ಯಾಕೆ?

ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆ ಮಾಡುವಂತಿಲ್ಲ‌ ಎಂದು ನ್ಯಾಯಾಲಯ ಆದೇಶಿಸಿದೆ. ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ನೆರವೇರಿದ್ದರಿಂದ ಅಲ್ಲಿಯ ಬಗ್ಗೆ ಒಂದು ಭಾವನಾತ್ಮಕ ಎಮೋಷನ್ಸ್ ಎಲ್ಲರಲ್ಲೂ ಇದೆ. ಹಾಗಾಗಿ ಅದೇ ಜಾಗವನ್ನು ಅಭಿಮಾನಿಗಳು ವಿಷ್ಣುದಾದಾ ಸಮಾಧಿ ಎಂದು ಪೂಜಿಸುತ್ತ ಬಂದಿದ್ದರು.‌ ಪ್ರತಿ ವರ್ಷವೂ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅಭಿಮಾನ್ ಸ್ಟುಡಿಯೋಕ್ಕೆ ತೆರಳಿ ಅವರನ್ನು ಸ್ಮರಿಸುತ್ತಿದ್ದರು.

Loading...