ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ರೈತರಿಗೆ ಗುಡ್‌ನ್ಯೂಸ್‌; ರಾಜ್ಯದಿಂದ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಅಸ್ತು

ರಾಜ್ಯದಿಂದ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಅಸ್ತು

Tur procurement: ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ PSS ಅಡಿಯಲ್ಲಿ ಒಟ್ಟು 9,67,000 ಮೆಟ್ರಿಕ್‌ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಉದ್ಯಾನವನ, ಕಾರಂಜಿ ಉದ್ಘಾಟಿಸಿದ ಸಿಎಂ

ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಉದ್ಯಾನವನ, ಕಾರಂಜಿ ಉದ್ಘಾಟನೆ

Suvarna Vidhana Soudha in Belagavi: ಬೆಳಗಾವಿ ಸುವರ್ಣಸೌಧದ ಆವರಣದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಸುತ್ತಲು ನಿರ್ಮಿಸಿರುವ ಉದ್ಯಾನವನ ಹಾಗೂ ಸೌಂದರ್ಯೀಕರಣವು ಈ ಪ್ರದೇಶಕ್ಕೆ ನೂತನ ಮೆರುಗನ್ನು ನೀಡಿದೆ.

Bengaluru’s love triangle: ಲವರ್‌ ಸಂತುಗೆ ಗುಡ್‌ಬೈ; ಕೊನೆಗೂ ಗಂಡ ಮಂಜನ ಮನೆ ಸೇರಿದ ಲೀಲಾ!

ಲವರ್‌ ಸಂತು ಬಿಟ್ಟು ಕೊನೆಗೂ ಗಂಡ ಮಂಜನ ಮನೆ ಸೇರಿದ ಲೀಲಾ!

ತನ್ನನ್ನು ಹಾಗೂ ಮೂವರು ಮಕ್ಕಳನ್ನು ಬಿಟ್ಟು ಲವರ್ ಜತೆ ಪತ್ನಿ ಲೀಲಾ ಹೋಗಿದ್ದ ಕಾರಣ ಪತಿ ಮಂಜು ವಿಡಿಯೋ ಮಾಡಿ ಇತ್ತೀಚೆಗೆ ಗೋಳಾಡಿದ್ದರು. ಇದೀಗ ಮಂಜು-ಲೀಲಾ-ಸಂತು ತ್ರಿಕೋನ ಪ್ರೇಮಕಥೆ ಸುಖಾಂತ್ಯ ಕಂಡಿದ್ದು, ಪ್ರಿಯಕರ ಸಂತುವನ್ನು ಬಿಟ್ಟು ಗಂಡ ಮಂಜು ಮನೆಗೆ ಲೀಲಾ ವಾಪಸ್‌ ಆಗಿದ್ದಾಳೆ.

ಜನ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು: ಡಾ.ಇ.ಎನ್.ರಾಜೀವ್

ಜನ ಅಂಗಾಂಗ ದಾನಕ್ಕೆ ಮುಂದಾಗಬೇಕು: ಡಾ.ಇ.ಎನ್.ರಾಜೀವ್

Tumkur News: ಪ್ರತಿ ವರ್ಷ ಲಕ್ಷಾಂತರ ಮಂದಿ ಅಂಗಾಂಗ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ. ದಾನಿಗಳ ಕೊರತೆ, ಜಾಗೃತಿ ಮೂಡದೆ ಅತ್ಯಲ್ಪ ಜನರಿಗಷ್ಟೇ ಅಂಗಾಂಗ ಕಸಿ ಸಾಧ್ಯವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದು ಮಣಿಪಾಲ್ ಆಸ್ಪತ್ರೆ ಮೂತ್ರಪಿಂಡ ತಜ್ಞ ಡಾ.ಇ.ಎನ್.ರಾಜೀವ್, ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್ ಅನಯ್ಯರೆಡ್ಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Haveri News: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಉರ್ದು ಶಾಲೆ ಶಿಕ್ಷಕನಿಗೆ ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

ವಿದ್ಯಾರ್ಥಿನಿಗೆ ಕಿರುಕುಳ; ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಘಟನೆ ನಡೆದದಿದೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಾಲೆಯ ಬಳಿ ಜಮಾಯಿಸಿದ ಸ್ಥಳೀಯರು, ಶಿಕ್ಷಕನಿಗೆ ಮನಬಂದಂತೆ ಥಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಶಾಲೆಯಿಂದ ಪೊಲೀಸ್ ಠಾಣೆವರೆಗೂ ಮೆರವಣಿಗೆ ಕರೆದೊಯ್ದಿದ್ದಾರೆ.

ಅಥಣಿಯ ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಸಿಎಂ ಸೂಚನೆ

ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಿ: ಸಿಎಂ

CM Siddaramaiah: ಅಥಣಿಯ ಬಸವೇಶ್ವರ ಏತ ನೀರಾವರಿ ಯೋಜನೆಗೆ 2017ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಚಾಲನೆ ನೀಡಲಾಗಿತ್ತು. ಈ ಯೋಜನೆಗೆ ಇದುವರೆಗೆ ರೂ. 1158 ಕೋಟಿ ವೆಚ್ಚ ಮಾಡಲಾಗಿದ್ದು, ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Sandalwood Actress Sudharani: ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗುವುದು, ತ್ವರಿತ ಚೇತರಿಕೆ, ಮೊಣಕಾಲು ಕೀಲು ಕಾರ್ಯನಿರ್ವಹಣೆಯಲ್ಲಿ ಕ್ಷಿಪ್ರ ಸುಧಾರಣೆ ಮತ್ತು ದೀರ್ಘಕಾಲ ದವರೆಗೆ ಮೊಣಕಾಲು ಕೀಲು ಸ್ಥಿರ ವಾಗಿರುವುದಕ್ಕೆ ಇದು ನೆರವಾಗಲಿದೆ. ಇದು ರೋಗಿಯ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸುಧಾರಾಣಿ ಅವರು ಈ ಹೊಸ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು

Mysuru Unity Mall: ಯದುವೀರ್‌ ಚಾಲನೆ ಕೊಟ್ಟ ಯೂನಿಟಿ ಮಾಲ್ ಕಾಮಗಾರಿಗೆ ತಾಯಿಯಿಂದಲೇ ತಡೆಯಾಜ್ಞೆ!

ಯದುವೀರ್‌ ಚಾಲನೆ ಕೊಟ್ಟ ಕಾಮಗಾರಿಗೆ ತಾಯಿಯಿಂದಲೇ ತಡೆಯಾಜ್ಞೆ!

ಮೈಸೂರಿನ ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ 6.5 ಎಕರೆ ಪ್ರದೇಶದಲ್ಲಿ ‘ಯೂನಿಟಿ ಮಾಲ್‘ ನಿರ್ಮಾಣಕ್ಕೆ ಜು. 27ರಂದು ಸಂಸದ ಯದುವೀರ್ ಭೂಮಿ ಪೂಜೆ ನೇರವೇರಿಸಿದ್ದರು. ಆದರೆ, ಈ ಕಾಮಗಾರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಇದೀಗ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

Karnataka Winter Session: ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿ: ಎಂ.ಬಿ.ಪಾಟೀಲ್

ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿ: ಎಂಬಿಪಿ

MB Patil: ಹೊಸ ಕೈಗಾರಿಕಾ ನೀತಿ 2025–2030ರ ಜಾರಿಗೆ ತಂದ ನಂತರ 93 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 5,50,805 ಕೋಟಿ ಬಂಡವಾಳ ಹೂಡಿಕೆ ಮತ್ತು 8,76,233 ಉದ್ಯೋಗಾವಕಾಶಗಳ ನಿರೀಕ್ಷೆ ಇದೆ ಎಂದು ವಿಧಾನಪರಿಷತ್‌ನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

Karnataka Winter Session: ಉತ್ತರ ಕರ್ನಾಟಕದ ನೀರಾವರಿಗೆ ಆದ್ಯತೆ: ಡಿ.ಕೆ. ಶಿವಕುಮಾರ್‌

ಉತ್ತರ ಕರ್ನಾಟಕದ ನೀರಾವರಿಗೆ ಆದ್ಯತೆ: ಡಿ.ಕೆ. ಶಿವಕುಮಾರ್‌

DK Shivakumar: ನೀರಾವರಿ ಇಲಾಖೆಯ ವಾರ್ಷಿಕ ಬಜೆಟ್‌ 22 ಸಾವಿರ ಕೋಟಿ. ಇದರಲ್ಲಿ ಸುಮಾರು 5 ಸಾವಿರ ಕೋಟಿಯಷ್ಟು ಹೊಸ ಕೆಲಸಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಈ ಹಿಂದೆ 25 ಸಾವಿರ ಕೋಟಿ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಯಾರ ಕಾಲದಲ್ಲಿ ಬಜೆಟ್‌ಗೂ ಮೀರಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಯಿತು ಎಂದು ಪ್ರಸ್ತಾಪಿಸಿದರೆ ರಾಜಕೀಯ ಎಂದು ಎಲ್ಲರೂ ಮುಗಿಬೀಳುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದಾರೆ.

Karnataka Weather: ಯೆಲ್ಲೋ ಅಲರ್ಟ್; ಮುಂದಿನ ಮೂರು ದಿನ ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಶೀತ ಗಾಳಿ ಎಚ್ಚರಿಕೆ !

ರಾಜ್ಯದಲ್ಲಿ ಮುಂದಿನ 3 ದಿನ ಶೀತ ಗಾಳಿ ಎಚ್ಚರಿಕೆ; ಮಾರ್ಗಸೂಚಿ ಬಿಡುಗಡೆ

ಕರ್ನಾಟಕ ಹವಾಮಾನ ವರದಿ: ರಾಜ್ಯದ ಸಮತಟ್ಟಾದ ಪ್ರದೇಶಗಲ್ಲಿ ಬೀದರ್‌ನಲ್ಲಿ ಬುಧವಾರ ಮುಂಜಾನೆ ಅತಿ ಕನಿಷ್ಠ ತಾಪಮಾನ 9.2 ಡಿಗ್ರಿ ಸೆ. ದಾಖಲಾಗಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ತೀವ್ರ ಶೀತ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮಹಿಳೆಯಲ್ಲಿ ಅಪರೂಪದ ಕಾಯಿಲೆಯಾದ "ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್‌" ಪತ್ತೆ: ಸ್ಪರ್ಶ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

ಮಹಿಳೆಯಲ್ಲಿ ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್‌" ಪತ್ತೆ

ಉಸಿರಾಟದ ಸಮಸ್ಯೆಗಳು ಗಂಭೀರವಾದಾಗ ಮೊದಲು ನಿಮೋನಿಯಾ ಇರಬಹುದು ಎಂದೇ ಭಾವಿಸಲಾಗುತ್ತದೆ. ಇದೇ ರೀತಿಯ ರೋಗಲಕ್ಷಣ ಗಳಾದ ದೀರ್ಘಾವಧಿ ಕಫ, ಉಸಿರಾಟ ಸಮಸ್ಯೆ, ನಿರಂತರ ಆಯಾಸದಿಂದ ಬಳಲುತ್ತಿದ್ದ 39 ವರ್ಷದ ಮಹಿಳೆಗೆ ಮೊದಲು ವೈರಲ್‌ ನಿಮೋನಿಯಾ ಸೋಂಕಿನ ರೋಗ ಪತ್ತೆ ಮಾಡಲಾಗಿತ್ತು, ಹಲವು ಸುತ್ತಿನ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗಿತ್ತು

ಕ್ವಾಂಟಮ್ ಮೆಟೀರಿಯಲ್ಸ್ ಇನ್ನೋವೇಶನ್ ನೆಟ್‌ವರ್ಕ್ ಸ್ಥಾಪನೆಗೆ ನೆರವು ಕೋರಿ ಪ್ರಧಾನಿ ಮೋದಿಗೆ ಸಿಎಂ ಪತ್ರ

Q-MINt ಸ್ಥಾಪನೆಗೆ ನೆರವು ಕೋರಿ ಪ್ರಧಾನಿ ಮೋದಿಗೆ ಸಿಎಂ ಪತ್ರ

ಪ್ರಸ್ತಾವಿತ Q-MINt ಕೇವಲ ಕರ್ನಾಟಕ ರಾಜ್ಯಕ್ಕಷ್ಟೇ ಅಲ್ಲದೆ, ಇಡೀ ದೇಶದ ಕ್ವಾಂಟಮ್ ಸಂಶೋಧನೆ ಮತ್ತು ಉದ್ಯಮದ ಅಗತ್ಯಗಳನ್ನು ಪೂರೈಸುವ ರಾಷ್ಟ್ರೀಯ ಸಂಪನ್ಮೂಲವಾಗಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

Karnataka Winter Session: ದ್ವೇಷ ಭಾಷಣ ಮಾಡಿದ್ರೆ ಗರಿಷ್ಠ 10 ವರ್ಷ ಜೈಲು, 1 ಲಕ್ಷ ದಂಡ; ವಿಧಾನಸಭೆಯಲ್ಲಿ ಮಸೂದೆ ಮಂಡನೆ

ದ್ವೇಷ ಭಾಷಣಕ್ಕೆ ಗರಿಷ್ಠ 10 ವರ್ಷ ಜೈಲು, 1 ಲಕ್ಷ ದಂಡ; ಮಸೂದೆ ಮಂಡನೆ

Hate Speech and Hate Crimes (Prevention) Bill: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 ಅನ್ನು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಮಂಡಿಸಿದ್ದಾರೆ. ಈ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಒಪ್ಪಿಗೆ ನೀಡಲಾಗಿತ್ತು.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಪಂದ್ಯಗಳಿಗೆ ಅನುಮತಿ ನೀಡಲು ಕ್ರಮ: ಡಿ ಕೆ ಶಿವಕುಮಾರ್‌!

ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಡಿಕೆಶಿ

ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ ನಡೆದಿದ್ದ ಚುನಾವಣೆಯನ್ನು ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ವೆಂಕಟೇಶ್‌ ಪ್ರಸಾದ್‌ ಅವರು ಬುಧವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡಸುವ ಸಂಬಂಧ ಸಚಿವ ಸಂಪುಟ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

New Year Celebration rules: ಹೊಸ ವರ್ಷಾಚರಣೆಗೆ ದಿನಗಣನೆ ಶುರು: ಬಿಗಿ ಗೈಡ್‌ಲೈನ್ಸ್‌ ಜಾರಿ ಮಾಡಿದ ಪೊಲೀಸ್‌ ಇಲಾಖೆ!

ಹೊಸ ವರ್ಷಾಚರಣೆಗೆ ಪೊಲೀಸ್‌ ಇಲಾಖೆಯಿಂದ ಬಿಗಿ ಗೈಡ್‌ಲೈನ್ಸ್‌ ಜಾರಿ

New year celebration 2026: ಈ ವರ್ಷಕ್ಕೆ ಗುಡ್‌ ಬೈ ಹೇಳಿ ನೂತನ ವರ್ಷವನ್ನು ಸ್ವಾಗತಿಸಲು ರಾಜ್ಯ ರಾಜಧಾನಿ ಸೇರಿದಂತೆ ಅನೇಕ ಕಡೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅಹಿತಕರ ಘಟನೆಗಳನ್ನು ತಡೆಗಟ್ಟಲು ಹೊಸ ವರ್ಷಾಚರಣೆಗೆ ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಗೈಡ್‌ಲೈನ್ಸ್‌ ಜಾರಿ ಮಾಡಿದೆ. ಸೂಕ್ಷ್ಮ ತಾಣಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ.

ನಾಳೆ ಕೋಟೇಶ್ವರದಲ್ಲಿ ಸರಕಾರಿ ಶಾಲೆಗಳ ಶೌಚಾಲಯದ ಸ್ವಚ್ಛತಾ ಸೇವೆ ಅಭಿಯಾನ ಉದ್ಘಾಟನೆ

ನಾಳೆ ಕೋಟೇಶ್ವರದಲ್ಲಿ ಶಾಲೆಗಳ ಶೌಚಾಲಯ ಸ್ವಚ್ಛತೆ ಅಭಿಯಾನ ಉದ್ಘಾಟನೆ

ಹೆಸರಾಂತ ಹೋಟೆಲ್‌ ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್‌ ಅವರ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 11ರಂದು ಸಂಜೆ 3.30ಕ್ಕೆ ʼಸರಕಾರಿ ಶಾಲೆಗಳ ಶೌಚಾಲಯದ ಸ್ವಚ್ಛತಾ ಸೇವೆ ಅಭಿಯಾನ ಉದ್ಘಾಟನೆʼ ಕಾರ್ಯಕ್ರಮವನ್ನು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಹಮ್ಮಿಕೊಳ್ಳಲಾಗಿದೆ.

Gruhalakshmi Scheme: ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಬಿಗ್‌ ಅಪ್‌ಡೇಟ್‌

ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಬಿಗ್‌ ಅಪ್‌ಡೇಟ್‌

ನಾವು ಆರ್ಥಿಕವಾಗಿ ಗಟ್ಟಿಯಾಗಿ ಇದ್ದೇವೆ. ಜಿಎಸ್‌ಟಿ ಕಲೆಕ್ಷನ್ ಆದರೆ ಕೇಂದ್ರದವರು ಅರ್ಧ ಹಣ ಕೊಡಬೇಕು. ಅವರು ಕೊಡುವುದು 1 ತಿಂಗಳು, ಎರಡು ತಿಂಗಳು ತಡವಾಗುತ್ತೆ. ಹೀಗಾಗಿ ಹಣ ಹೊಂದಿಸುವುದು ತಡವಾಗುತ್ತದೆ. ಹೀಗಾಗಿ ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮೀ ಹಣ ಕೊಡುತ್ತೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraja rayareddy) ತಿಳಿಸಿದ್ದಾರೆ.

Dharmasthala Case: ಹಣದ ಆಮಿಷದಿಂದ ಬುರುಡೆ ಚಿನ್ನಯ್ಯ ಸುಳ್ಳು ದೂರು, 6 ಜನರ ಪಿತೂರಿ: ಧರ್ಮಸ್ಥಳ ಕೇಸ್‌ನ ಪ್ರಾಥಮಿಕ ವರದಿ ಸಲ್ಲಿಕೆ

ಹಣದ ಆಮಿಷದಿಂದ ಬುರುಡೆ ಚಿನ್ನಯ್ಯ ಸುಳ್ಳು ದೂರು, 6 ಜನರ ಪಿತೂರಿ

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ (Chinnayya), ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಹಾಗೂ ಸುಜಾತಾ ಭಟ್ ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣದ (Dharmasthala Case) ಮೊದಲ ಆರೋಪಿಯಾಗಿರುವ ದೂರುದಾರ ಚಿನ್ನಯ್ಯ ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳಿದ್ದಾನೆ. ಹಣವನ್ನು ಪಡೆದು ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಅಪರಿಚಿತ ಶವ ಹೂತಿದ್ದೇನೆಂದು ಸುಳ್ಳು ಹೇಳಿಸಿ ಆರೋಪಿಗಳು ವಿಡಿಯೋ ರೆಕಾರ್ಡ್‌ ಮಾಡಿದ್ದರು.

Janardhan Reddy: 100 ಕೋಟಿ ರೂ. ಮೌಲ್ಯದ ಭೂಹಗರಣ, ಜನಾರ್ದನ ರೆಡ್ಡಿ ಪುತ್ರನ ಹೆಸರು; ಹೈಕೋರ್ಟ್‌ ನೋಟಿಸ್

100 ಕೋಟಿಯ ಭೂಹಗರಣ, ಜನಾರ್ದನ ರೆಡ್ಡಿ ಪುತ್ರನ ಹೆಸರು; ಹೈಕೋರ್ಟ್‌ ನೋಟಿಸ್

ಕಿರೀಟಿ ರೆಡ್ಡಿ ಹಾಗೂ ಸಹವರ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸಿದ (Land grabbing) ಆರೋಪ ಕೇಳಿ ಬಂದಿದೆ. ಈ ಬಗ್ಗೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಹ ಸಲ್ಲಿಕೆಯಾಗಿದೆ. ಬಳ್ಳಾರಿಯ ಗೋವರ್ಧನ ಎಂಬವರು ಧಾರವಾಡ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿ ತನಿಖೆಗೆ ವಹಿಸುವಂತೆ ಗೋವರ್ಧನ್ ಮನವಿ ಮಾಡಿದ್ದಾರೆ.

Tiger death: ಸೆರೆ ಸಿಕ್ಕಿದ ನಾಲ್ಕು ಹುಲಿ ಮರಿಗಳ ನಿಗೂಢ ಸಾವು, ತನಿಖೆ

ಸೆರೆ ಸಿಕ್ಕಿದ ನಾಲ್ಕು ಹುಲಿ ಮರಿಗಳ ನಿಗೂಢ ಸಾವು, ತನಿಖೆ

Tiger cubs death: ನವೆಂಬರ್ 28ರಂದು ಈ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿಯೂ ಕಾಣಿಸಿಕೊಂಡಿದ್ದು, ನವೆಂಬರ್ 29 ಮತ್ತು 30ರಂದು ಗೌಡನಕಟ್ಟೆಯ ಪ್ರಕಾಶ್‌ ಅವರ ಜೋಳದ ಹೊಲದ ಬಳಿ ಕಾಣಿಸಿಕೊಂಡಿದ್ದ ಹುಲಿ ಮರಿಗಳನ್ನು ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದರು. ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು.

ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಸಾಯಿಪುಷ್ಕರ್ ಮಡಿಲಿಗೆ

ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಸಾಯಿಪುಷ್ಕರ್ ಮಡಿಲಿಗೆ

ಕಳೆದ ಐದಾರು ವರ್ಷಗಳಿಂದ ಮಗ ಸಾಯಿ ಪುಷ್ಕರ್ ತನ್ನ ಶೈಕ್ಷಣಿಕ ಬದುಕಿನ ಜೊತೆಗೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ‌ ನಿರಂತರವಾಗಿ ಅಭ್ಯಾಸ ಮಾಡಿದ್ದಾನೆ. ಇದರ ಫಲವಾಗಿ ಈ ಹಿಂದೆ ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದನು.

Gauribidanur News: ಪ್ರತಿಭಾ ಕಾರಂಜಿ, ಪಂಚಮಿಗೆ ಪ್ರಥಮ ಬಹುಮಾನ

Gauribidanur News: ಪ್ರತಿಭಾ ಕಾರಂಜಿ, ಪಂಚಮಿಗೆ ಪ್ರಥಮ ಬಹುಮಾನ

ಬಾಲಕಿ ಪಂಚಮಿ ಶಿಕ್ಷಕಿ ಲಲಿತ ಅವರ ತರಬೇತಿಯಲ್ಲಿ, ತೊಟ್ಟಿಲಲ್ಲಿನ ಮಗುವನ್ನು ರಕ್ಷಿಸಲು ಮುಂಗಸೀ, ಹಾವನ್ನು ಸಾಯಿಸಿ ತದನಂತರ ನೀರಿಗೆ ಹೋದ ಮಗುವಿನ ತಾಯಿ ಮನೆಗೆ ಬಂದಾಗ ಮುಂಗೀಸ ಬಾಯಿಯಲ್ಲಿ ರಕ್ತದ ಕಲೆಗಳನ್ನು ಕಂಡು ದುಡಿಕಿನಿಂದ ಮುಂಗಿಸಿಯನ್ನು ಕೊಂದ ಕಥೆಗೆ ತಕ್ಕಂತೆ, ಆತುರಗರರಿಗೆ ಬುದ್ದಿ ಮಟ್ಟು, ಎಂಬ ನೀತಿಯನ್ನು ಸಾರುವ ಹಾಡಿಗೆ ತಕ್ಕಂತಹ ಸೊಗಸಾಗಿ ಅಭಿನಯಿಸಿದ ವಿದ್ಯಾರ್ಥಿನಿ ಪಂಚಮಿ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ.

e-khata: ಬೆಂಗಳೂರಿನಲ್ಲಿ ಹಳೇ ಪದ್ಧತಿಯಲ್ಲೇ ಇ-ಖಾತಾ ನೀಡುತ್ತೇವೆ: ಡಿ.ಕೆ.ಶಿವಕುಮಾರ್‌

ಬೆಂಗಳೂರಿನಲ್ಲಿ ಹಳೇ ಪದ್ಧತಿಯಲ್ಲೇ ಇ-ಖಾತಾ ನೀಡುತ್ತೇವೆ: ಡಿ.ಕೆ.ಶಿವಕುಮಾರ್‌

Karnataka Winter Session: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಇ-ಖಾತಾ ಬಗ್ಗೆ ಶಾಸಕ ಗೋಪಾಲಯ್ಯ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸಂಗ್ರಹವಾಗುವ ಕಸವನ್ನು ಸಂಸ್ಕರಿಸಲು ನಗರದ 2 ದಿಕ್ಕುಗಳಲ್ಲಿ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Loading...