ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Miss Universe India Interview: ಮಿಸ್‌ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಫ್ಯಾಷನ್‌ ಟಾಕ್‌

ಮಿಸ್‌ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಫ್ಯಾಷನ್‌ ಟಾಕ್‌

Miss Universe India Manika Vishwakarma: ಮಿಸ್‌ ಯೂನಿವರ್ಸ್ ಇಂಡಿಯಾ 2025ರ ಮಣಿಕಾ ವಿಶ್ವಕರ್ಮ, ಕರ್ನಾಟಕದ ರಿಜಿನಲ್‌ ಬ್ಯೂಟಿ ಪೇಜೆಂಟ್‌ನ ಜ್ಯೂರಿ ಪ್ಯಾನೆಲ್‌ನಲ್ಲಿ ಪಾಲ್ಗೊಳ್ಳಲು ಉದ್ಯಾನನಗರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಶ್ವವಾಣಿ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದರು.

Kerala techie Sharanya found: ಕೇರಳ ಮೂಲದ ಶರಣ್ಯ ಪತ್ತೆ: ಕೊಡಗಿನ ಮಲೆಕುಡಿಯ ಬುಡಕಟ್ಟು ಜನರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದನೆ

ಶರಣ್ಯ ಪತ್ತೆ: ಮಲೆಕುಡಿಯ ಬುಡಕಟ್ಟು ಜನರಿಗೆ ಡಿಕೆಶಿ ಅಭಿನಂದನೆ

ಕೊಡಗಿನ ತಡಿಯಂಡಮೊಳ್ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಅವರ ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಯುವತಿ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶರಣ್ಯ ಅವರನ್ನು ಭಾನುವಾರ ಸಂಜೆ ಪತ್ತೆ ಮಾಡಲಾಗಿದೆ.

Bengaluru assault case: ಬೆಂಗಳೂರಲ್ಲಿ ಕನ್ನಡಿಗರ ಮೇಲೆ ತಮಿಳು ಗೂಂಡಾಗಳಿಂದ ಹಲ್ಲೆ; ಟಿಟಿ ವಾಹನ ಅಡ್ಡಗಟ್ಟಿ ಕಿರಿಕ್‌!

ಬೆಂಗಳೂರಲ್ಲಿ ಕನ್ನಡಿಗರ ಮೇಲೆ ತಮಿಳು ಗೂಂಡಾಗಳಿಂದ ಹಲ್ಲೆ!

ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಚಾಲಕ ಬಾಡಿಗೆಗೆ ಹೋಗಿದ್ದ. ಈ ವೇಳೆ ವಾಹನದಲ್ಲಿ ಇದ್ದ ಕನ್ನಡಿಗರು ಮತ್ತು ಕೃಷ್ಣಗಿರಿಯ ಸ್ಥಳೀಯರ ನಡುವೆ ಕಿರಿಕ್ ಆಗಿದೆ. ಈ ವೇಳೆ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಟಿಟಿ ವಾಹನದಲ್ಲಿ ಕನ್ನಡಿಗರು ಅತ್ತಿಬೆಲೆ ಕಡೆಗೆ ಬಂದಿದ್ದಾರೆ. ಆದರೆ, ತಮಿಳು ಗೂಂಡಾಗಳು ಟಿಟಿ ವಾಹನ ಬೆನ್ನಟ್ಟಿ ಬಂದು, ಅತ್ತಿಬೆಲೆ ಟೋಲ್‌ ಬಳಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ.

Kalaburagi Murder Case: ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಹತ್ಯೆ; ಶವವನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು!

ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಹತ್ಯೆ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಇತ್ತೀಚೆಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಕೊಲೆಯಾದ ಮಹಿಳೆ ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾದ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ ಎಂದು ತಿಳಿದುಬಂದಿದೆ.

Belagavi news: ಪತ್ನಿಯ ಆತ್ಮಹತ್ಯೆ ಸುದ್ದಿ ತಿಳಿದು ಧಾವಿಸಿ ಬರುವಾಗ ಆಕ್ಸಿಡೆಂಟ್‌, ಪತಿಯೂ ಸಾವು!

ಪತ್ನಿಯ ಆತ್ಮಹತ್ಯೆ ತಿಳಿದು ಧಾವಿಸಿ ಬರುವಾಗ ಆಕ್ಸಿಡೆಂಟ್‌, ಪತಿಯೂ ಸಾವು!

ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಕರೆಪ್ಪ (36) ಹಾಗೂ ಅವರ ಪತ್ನಿ ಮಧುರಾ (30) ಮೃತ ದಂಪತಿ. ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಧುರಾ, ನೋವು ತಾಳಲಾರದೆ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನ ಸುದ್ದಿ ತಿಳಿದು ಆಘಾತಗೊಂಡ ಕರೆಪ್ಪ, ಬೈಕ್‌ನಲ್ಲಿ ಆಸ್ಪತ್ರೆಗೆ ಧಾವಿಸುತ್ತಿದ್ದ ವೇಳೆ ಅಪಘಾತವಾಗಿದೆ.

CM Siddaramaiah: ಇನ್ನೆರಡು ವರ್ಷ ಸಿದ್ದರಾಮಯ್ಯನವರೇ ಸಿಎಂ, ಹೈಕಮಾಂಡ್ ಸ್ಪಷ್ಟನೆ ಬೇಕಿಲ್ಲ: ಜಿ ಪರಮೇಶ್ವರ್

ಇನ್ನೆರಡು ವರ್ಷ ಸಿದ್ದರಾಮಯ್ಯನವರೇ ಸಿಎಂ, ಹೈಕಮಾಂಡ್ ಹೇಳಬೇಕಿಲ್ಲ: ಪರಮೇಶ್ವರ

ಮೈಸೂರಲ್ಲಿ ಮಾತನಾಡಿದ ಜಿ ಪರಮೇಶ್ವರ, ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಪಕ್ಷದ ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028ರ ವರೆಗೆ ಇದೆ. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇಂಡಿಯಲ್ಲಿ ಮೆಗಾ ಮಾರುಕಟ್ಟೆಗೆ ಹಿಡಿದ ಗ್ರಹಣ

ಇಂಡಿಯಲ್ಲಿ ಮೆಗಾ ಮಾರುಕಟ್ಟೆಗೆ ಹಿಡಿದ ಗ್ರಹಣ

ಕಳೆದ 3 ವರ್ಷಗಳಿಂದ 4 ರಿಂದ 3 ಲಕ್ಷ ಡಿಫಾಜಿಟ್, 5 ನೂರು ರೂ ಚಲನ್, 50 ಸಾವಿರ ಡಿ.ಡಿ ತುಂಬಿದ ಬಡ ವ್ಯಾಪಾರಸ್ಥರು ಮಾರುಕಟ್ಟೆ ಪ್ರಾರಂಭವಾಗದೆ ಸುಖಾ ಸುಮ್ಮನೆ ಕಾಲ ಕಳೆಯು ತ್ತಿರುವುದರಿಂದ್ದ ವ್ಯಾಪಾರ ವೈವಾಟು ಮಾಡಲು ಮಳಿಗೆ ಕೊಡುತ್ತಿಲ್ಲ ಈ ಕಡೆ ನಾವು ಕೊಟ್ಟ ಡಿಫಾಜಿಟ್,ಡಿ.ಡಿ, ಚಲನ್ ಹಣ ಕೂಡಾ ಮರಳಿ ನೀಡುತ್ತಿಲ್ಲ ಎಂದು ವ್ಯಾಪಾರಸ್ಥರು ನಗರಸಭೆ ನಡೆಗೆ ಬೇಸತ್ತು ಹೋಗಿದ್ದಾರೆ.

ಬೇಸಿಗೆ ಹೊತ್ತಿಗೆ ಮತ್ತೆ ನೆನಪಾಗುವ ಮಣ್ಣಿನ ಹೂಜಿ

ಬೇಸಿಗೆ ಹೊತ್ತಿಗೆ ಮತ್ತೆ ನೆನಪಾಗುವ ಮಣ್ಣಿನ ಹೂಜಿ

ಕುಂಬಾರರು ತಮ್ಮ ಜೀವನಕ್ಕೆ ಅಗತ್ಯವಿರುವ ರೂಪ ಕೊಟ್ಟುಕೊಳ್ಳಲು ಇನ್ನೂ ಸಾಧ್ಯ ವಾಗಿಲ್ಲ ಎಂಬುದಕ್ಕೆ ತಾಲ್ಲೂಕಿನ ಕೋನಸಾಗರ ಗ್ರಾಮದ ತಿಮ್ಮಣ್ಣ ಕುಂಬಾರನ ಬದುಕು ಸೂಕ್ತ ಉದಾಹರಣೆ. ಮುತ್ತಾತ, ತಾತ ತಂದೆಯವರ ಕಾಲದಿಂದಲೂ ಈ ಕುಟುಂಬಗಳು ತನ್ನ ಕುಲ ಕಸುಬಾಗಿ ಕುಂಬಾರಿಕೆ ನಂಬಿಕೊಂಡು ಜೀವನ ಸಾಗಿಸುತ್ತಿವೆ.

Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ 60 ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾ ನಿಸುವ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.

Love Jihad: ಹುಬ್ಬಳ್ಳಿ ಜಿಮ್‌ ಲವ್‌ ಜಿಹಾದ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡನ ಕೈವಾಡ: ಯುವತಿ ಆರೋಪ

ಹುಬ್ಬಳ್ಳಿ ಲವ್‌ ಜಿಹಾದ್‌ನಲ್ಲಿ ಕಾಂಗ್ರೆಸ್‌ ಮುಖಂಡನ ಕೈವಾಡ: ಯುವತಿ ಆರೋಪ

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ದಾಖಲಾಗಿರುವ ಎರಡನೇ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಇದರಲ್ಲಿ ಕಾಂಗ್ರೆಸ್​​​​ ಮುಖಂಡನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಆರೋಪಿ ನನ್ನ ಖಾಸಗಿ ಕ್ಷಣಗಳ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.

ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ: ರೈಲುಗಳ ತಾತ್ಕಾಲಿಕ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಸೂಚನೆ

ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ: ರೈಲುಗಳ ನಿಲುಗಡೆಗೆ ಸೂಚನೆ

ತಾಲೂಕಿನ ಲಚ್ಯಾಣದಲ್ಲಿ ಜರುಗಲಿರುವ ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ಗೋಲಗುಂಬಜ್ ಮತ್ತು ಬಸವ ಎಕ್ಸ್‌ʼಪ್ರೆಸ್ ರೈಲುಗಳು ಏ.6 ರಿಂದ 12ರ ವರೆಗೆ ತಾತ್ಕಾಲಿಕವಾಗಿ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ(V.Somanna) ಸಂಬಂಧಿಸಿದ ರೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Road Accident: ಬೈಕ್‌ಗೆ ಬೊಲೆರೋ ಡಿಕ್ಕಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಬೈಕ್‌ಗೆ ಬೊಲೆರೋ ಡಿಕ್ಕಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಸಾವು

ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೊಲೆರೋ ಡಿಕ್ಕಿಯಾಗಿದೆ. ಸದ್ಯ ಗೂಡ್ಸ್ ವಾಹನ ಹಿಡಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Auto Gas: ಬೆಂಗಳೂರಿನಲ್ಲಿ 80% ಆಟೋ ಗ್ಯಾಸ್‌ ಬಂಕ್‌ ಬಂದ್‌, ಆಟೋ ಚಾಲಕರ ಪರದಾಟ

ಬೆಂಗಳೂರಿನಲ್ಲಿ 80% ಆಟೋ ಗ್ಯಾಸ್‌ ಬಂಕ್‌ ಬಂದ್‌, ಆಟೋ ಚಾಲಕರ ಪರದಾಟ

ಸೀಮಿತ ಸಂಖ್ಯೆಯ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು, ಸೀಮಿತ ವಿತರಣಾ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಸವಾಲುಗಳು, ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳ ಮುಚ್ಚಿರುವುದರಿಂದ ಆಟೋಗಳಿಗೆ ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಖಾಸಗಿ ಸಂಸ್ಥೆಗಳು ನಡೆಸುತ್ತಿರುವ 300ಕ್ಕೂ ಹೆಚ್ಚು ಬಂಕ್‌ಗಳ ಪೈಕಿ ಶೇ.80ರಷ್ಟು ಬಾಗಿಲು ಹಾಕಿವೆ.

Free travel: ಸಿಹಿ ಸುದ್ದಿ, ಪಿಯುಸಿವರೆಗೆ ಗಂಡು ಮಕ್ಕಳಿಗೂ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ

ಪಿಯುಸಿವರೆಗೆ ಗಂಡು ಮಕ್ಕಳಿಗೂ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ

ಸರ್ಕಾರದ ಉನ್ನತ ಮಟ್ಟದ ಸಮಿತಿಯು ಮಕ್ಕಳ ಸುರಕ್ಷತೆ ಮತ್ತು ಸುಲಭ ಸಂಚಾರಕ್ಕಾಗಿ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದ್ದು, ಅದರಲ್ಲಿ 12ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಅಥವಾ ಸಂಪೂರ್ಣ ಉಚಿತ ಪ್ರಯಾಣ ಒದಗಿಸುವುದು ಪ್ರಮುಖವಾಗಿದೆ.

Rowdy Sheeter murder: ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

ಸಿಗರೇಟ್‌ಗಾಗಿ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

ಸಿಗರೇಟ್‌ ವಿಚಾರವಾಗಿ ಎದ್ದ ತಗಾದೆ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿದ್ದು, ಇದರಲ್ಲಿ ರೌಡಿ ಶೀಟರ್, ಮರಳಿಗ ಗ್ರಾಮದ ಯಶ್ವಂತ್ @ ಕಜ್ಜಿ ಅಭಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಹೊಡೆದಾಟದಲ್ಲಿ ಮತ್ತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Road Accident: ಓವರ್‌ಟೇಕ್‌ ವೇಳೆ ಕೆಎಸ್‌ಆರ್‌ಟಿಸಿ- ಖಾಸಗಿ ಬಸ್‌ ಡಿಕ್ಕಿ, ಇಬ್ಬರು ಸಾವು

ಓವರ್‌ಟೇಕ್‌ ವೇಳೆ ಕೆಎಸ್‌ಆರ್‌ಟಿಸಿ- ಖಾಸಗಿ ಬಸ್‌ ಡಿಕ್ಕಿ, ಇಬ್ಬರು ಸಾವು

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಖಾಸಗಿ ಬಸ್ ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಓವರ್‌ಟೇಕ್ ಮಾಡಲು ಹೋಗಿ ಹಿಂಬದಿಯಿಂದ ಖಾಸಗಿ ಬಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ತಡಿಯಂಡಮೋಳ್‌ನಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ, ಡ್ರೋನ್‌ಗೂ ಸಿಗದಾಕೆ ಮಲೆಕುಡಿಯರಿಗೆ ಸಿಕ್ಕಿದಳು!

ತಡಿಯಂಡಮೋಳ್‌ನಲ್ಲಿ ಡ್ರೋನ್‌ಗೂ ಸಿಗದಾಕೆ ಮಲೆಕುಡಿಯರಿಗೆ ಸಿಕ್ಕಿದಳು!

ದಟ್ಟ ಮಂಜು ಮತ್ತು ಮಳೆಯ ನಡುವೆಯೂ ಕಾರ್ಯಾಚರಣೆ ತಂಡಗಳು ಹಗಲಿರುಳು ಶ್ರಮಿಸಿದ್ದವು. ಕೊನೆಗೂ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಮತ್ತು ಅರಣ್ಯದ ಹಾದಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಡಿಯ ಜನಾಂಗದ ಯುವಕರು ಅರಣ್ಯದ ಆಳ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ.

Karantara Suliyalli Book: ʼಕಾರಂತರ ಸುಳಿಯಲ್ಲಿʼ ಪುಸ್ತಕ; ವಿಶ್ವೇಶ್ವರ ಭಟ್ಟರ ಅನುವಾದ ಮೂಲ ಕೃತಿಗಿಂತ ಸೊಗಸಾಗಿದೆ: ಉಲ್ಲಾಸ್‌ ಕಾರಂತ್‌

ವಿಶ್ವೇಶ್ವರ ಭಟ್ಟರ ಅನುವಾದ ಮೂಲ ಕೃತಿಗಿಂತ ಸೊಗಸಾಗಿದೆ: ಉಲ್ಲಾಸ್‌ ಕಾರಂತ್‌

ಕನ್ನಡದ ಮೇರು ಸಾಹಿತಿ ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ Growing Up Karanth ಕೃತಿಯ ಕನ್ನಡ ಅನುವಾದಿತ ಕೃತಿ, ವಿಶ್ವೇಶ್ವರ ಭಟ್‌ ಅವರ ʼಕಾರಂತರ ಸುಳಿಯಲ್ಲಿʼ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ನೆರವೇರಿತು.

Indi News: ಹಸಿರು ಕ್ರಾಂತಿ ಮೂಲಕ ಆಹಾರ ಭದ್ರತೆಗೆ ಬುನಾದಿ ಹಾಕಿದ ಜಗಜೀವನರಾಮ

ಹಸಿರು ಕ್ರಾಂತಿ ಮೂಲಕ ಆಹಾರ ಭದ್ರತೆಗೆ ಬುನಾದಿ

ಜನಮಾನಸದಲ್ಲಿ ಬಾಬೂಜಿ ಎಂದೇ ಜನಪ್ರಿಯರಾಗಿರುವ ಬಾಬು ಜಗಜೀವನರಾಮ ಅವರು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ. ದೇಶದ ಅತ್ಯುನತ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದರು. ದಲಿತ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.

Gudibande News: ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಬಾಬು ಜಗಜೀವನ್ ರಾಂ ಜಯಂತಿ

ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಬಾಬು ಜಗಜೀವನ್ ರಾಂ ಜಯಂತಿ

ಹಸಿರು ಕ್ರಾಂತಿಯ ಹರಿಕಾರ ಧೀಮಂತ ನಾಯಕ ದಿ. ಡಾ. ಬಾಬು  ಜಗಜೀವನ್ ರಾಮ್ ಅವರ ಆದರ್ಶಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಒಳ್ಳೆಯ ಪ್ರಜೆಗಳಾಗಿ ಅವರಂತೆ ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಅವರಂತೆ ಸಾಧನೆ ಮಾಡಿ ದೇಶದ ಅಭಿವೃದ್ದಿಯಲ್ಲಿ ಭಾಗಿಯಾಗಬೇಕು

Shidlaghatta News: ತಾಲ್ಲೂಕು ಕಚೇರಿಯಲ್ಲಿ ಜಗಜೀವನ ರಾಮ್ ಜಯಂತಿ ಆಚರಣೆ

ತಾಲ್ಲೂಕು ಕಚೇರಿಯಲ್ಲಿ ಜಗಜೀವನ ರಾಮ್ ಜಯಂತಿ ಆಚರಣೆ

ಡಾ. ಬಾಬು ಜಗಜೀವನ ರಾಮ್ ಅವರು ದೇಶದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರು ಎಂದು ಹೇಳಿದರು. ಎಲ್ಲಾ ಸಮುದಾಯಗಳ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಸದಾ ಸ್ಮರಣೀಯವಾಗಿದ್ದು, ಅವರ ಆದರ್ಶ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

Karantara Suliyalli Book Release: ಕಾರಂತರ ವ್ಯಕ್ತಿತ್ವ ನೋಡುವ ದೊಡ್ಡ ಪ್ರಯತ್ನ ʼಕಾರಂತರ ಸುಳಿಯಲ್ಲಿʼ ಪುಸ್ತಕದಲ್ಲಿದೆ: ವಿಶ್ವೇಶ್ವರ ಭಟ್‌

ಕಾರಂತರ ವ್ಯಕ್ತಿತ್ವ ನೋಡುವ ಪ್ರಯತ್ನ ʼಕಾರಂತರ ಸುಳಿಯಲ್ಲಿʼ ಪುಸ್ತಕದಲ್ಲಿದೆ

ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ ಪುಸ್ತಕವು ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಭಾನುವಾರ ಲೋಕಾರ್ಪಣೆಗೊಂಡಿತು. ಈ ಪುಸ್ತಕವು ಕನ್ನಡದ ಮೇರು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೋಟ ಶಿವರಾಮ ಕಾರಂತ ಅವರ ಮಕ್ಕಳಾದ ಉಲ್ಲಾಸ್ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಅವರು ಬರೆದ ‘ Growing Up Karanth' ’ಪುಸ್ತಕದ ಕನ್ನಡ ಅವತರಣಿಕೆಯಾಗಿದೆ.

Chikkaballapur News: ರಾಷ್ಟ್ರೀಯ ನಾಯಕರಾದ ಅಂಬೇಡ್ಕರ್, ಜಗಜೀವನ್‌ರಾಂ ನಡುವೆ ತಾರತಮ್ಯ ಮಾಡಬೇಡಿ: ಆರ್.ಲೋಕೇಶ್

ರಾಷ್ಟ್ರೀಯ ನಾಯಕರಾದ ಅಂಬೇಡ್ಕರ್, ಜಗಜೀವನ್‌ರಾಂ ನಡುವೆ ತಾರತಮ್ಯ ಮಾಡಬೇಡಿ

ಅದ್ದೂರಿಯಾಗಿ ಕಾರ್ಯಕ್ರಮ ಮಾಡಿದರೆ ಸಾಲದು ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ ರಾಮ್ ಅವರಂತಹ ರಾಷ್ಟ್ರೀಯ ನಾಯಕರ ದೂರದೃಷ್ಟಿಯ ಚಿಂತನೆ ನಮ್ಮದಾಗಬೇಕಿದೆ. ಎಂದರು.ಜಿಲ್ಲಾಡಳಿತ ರಾಷ್ಟ್ರೀಯ ಗೌರವ ಸಲ್ಲಿಸಿದ್ದಾರೆ. ಕರ್ನಾಟಕದ ಕಾಯಕ ಸಂಸ್ಕೃತಿಗೆ ಹೆಸರಾದ ಭಕ್ತಿ ಭಂಡಾರಿ ಬಸವಣ್ಣ ಅವರ ಶರಣ ಸಂಸ್ಕೃತಿಯ ಜತೆ ಗುರುತಿಸಿಕೊಂಡ ಮಾದಾರಿ ಚನ್ನಯ್ಯ, ಡೋಹರ ಕಕ್ಕಯ್ಯರಂತೆ ಬಿಹಾರದಲ್ಲಿ 15ನೇ ಶತಮಾನದಲ್ಲಿ ಸಂತ ರವಿದಾಸ್ ಚಳವಳಿಯಿಂದ ಪ್ರಭಾವಿತರಾದವರು ಬಾಬು ಜಗಜೀವನ್‌ರಾಮ್

Gubbi News: ಕೋಟೆ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ

Gubbi News: ಕೋಟೆ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ

ತಾಲೂಕಿನ ನಿಟ್ಟೂರು ಹೋಬಳಿ ಎಂ. ಎನ್. ಕೋಟೆ ಗ್ರಾಮದ ಆದಿಶಕ್ತಿ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಏ.7ನೇ ಮಂಗಳವಾರ ಬೆಳಿಗ್ಗೆ ಸಹಸ್ರ ನಾಮ ಸ್ಮರಣೆ ಕುಂಕುಮಾರ್ಚನೆ ಮಹಾಮಂಗಳಾರತಿಯೊಂದಿಗೆ ಮನೆ ಮನೆಗೆ ಮಡ್ಲಕ್ಕಿ ಸೇವೆ ನೆರವೇರಲಿದೆ.  ಏ.8ನೇ ಬುಧವಾರ ಆರತಿ ಸೇವೆ ನಂತರ ಅಮ್ಮನವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ವಾದ್ಯ ಗೋಷ್ಠಿಯೊಂದಿಗೆ ಊರಿನ ರಾಜಭೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.

Loading...