ನೆಲಮಂಗಲ ನಗರಸಭೆಯಲ್ಲಿ ಹೆಚ್ಚಿದ ಬ್ರೋಕರ್‌ಗಳ ಹಾವಳಿ
Nelamangala CMC: ನೆಲಮಂಗಲದಲ್ಲಿ ಬಿ-ಖಾತಾ ಆಂದೋಲನದ ಮೂಲಕ ಕೆಲವು ನಗರಸಭೆ ಸದಸ್ಯರು ಹಾಗೂ ಕೆಲವು ಬ್ರೋಕರ್‌ಗಳು ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ವಾರ್ಡ್‌ಗಳಲ್ಲಿನ ನಿವಾಸಿಗಳಿಗೆ ತಪ್ಪು ಮಾಹಿತಿಯನ್ನು ನೀಡಿ ಖಾತೆ ಮಾಡಿಸಲು 10 ರಿಂದ 15 ಸಾವಿರ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.