ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Festive Season Shopping 2025: ಗೌರಿ ಹಬ್ಬದ ಸೀರೆ ಶಾಪಿಂಗ್‌ಗೂ ಮುನ್ನ ಗಮನದಲ್ಲಿಡಬೇಕಾದ ಅಂಶಗಳಿವು!

‌ಗೌರಿ ಹಬ್ಬದ ಸೀರೆ ಶಾಪಿಂಗ್‌ಗೂ ಮುನ್ನ ಗಮನದಲ್ಲಿಡಬೇಕಾದ ಅಂಶಗಳಿವು!

Festive Season Shopping 2025: ಹಬ್ಬದ ಈ ಸೀಸನ್‌ನಲ್ಲಿ ಸೀರೆ ಖರೀದಿಗೆ ತೆರಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದಿಷ್ಟು ಅಂಶಗಳನ್ನು ಶಾಪಿಂಗ್ ಎಕ್ಸ್‌ಪರ್ಟ್ಸ್ ತಿಳಿಸಿದ್ದಾರೆ. ಅವು ಯಾವುವು? ಕೊಳ್ಳುವಾಗ ನೀವು ಮಾಡಬೇಕಾದ್ದೇನು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Karnataka weather: ಇಂದು ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಗುಡುಗು ಸಹಿತ ಮಳೆ ನಿರೀಕ್ಷೆ

ಇಂದು ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಸ್ಥಳಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 19°C ಇರುವ ಸಾಧ್ಯತೆ ಇದೆ.

CM Siddaramaiah: ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ನಾಟಕ ನೋಡಿ ಆನಂದಿಸಿದ ಸಿಎಂ ಸಿದ್ಧರಾಮಯ್ಯ

ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ನಾಟಕ ನೋಡಿ ಆನಂದಿಸಿದ ಸಿಎಂ ಸಿದ್ಧರಾಮಯ್ಯ

Umashree: ನಟಿ, ರಾಜಕಾರಣಿ ಉಮಾಶ್ರೀ ಅವರು ನಟಿಸಿರುವ ʼಶರ್ಮಿಷ್ಠೆʼ ಏಕ ವ್ಯಕ್ತಿ ಪ್ರದರ್ಶನವನ್ನು ಬೇಲೂರು ರಘುನಂದನ್ ರಚಿಸಿದ್ದು, ಈ ನಾಟಕಕ್ಕೆ ಚಿದಂಬರರಾವ್ ಜಂಬೆ ವಿನ್ಯಾಸ, ನಿರ್ದೇಶನವಿದೆ. ಇತ್ತೀಚೆಗೆ ಉಮಾಶ್ರೀ ಅವರು ಯಕ್ಷಗಾನದಲ್ಲಿ ಮಂಥರೆ ಪಾತ್ರವನ್ನೂ ನಿರ್ವಹಿಸಿದ್ದರು.

Dharmasthala Case: ಧರ್ಮಸ್ಥಳ ಪ್ರಕರಣದ ಬಗ್ಗೆ ಸುಳ್ಳು ಮಾಹಿತಿ ನೀಡಿದ ವಕೀಲರ ಮೇಲೆ ಎಫ್‌ಐಆರ್

ಧರ್ಮಸ್ಥಳ ಪ್ರಕರಣದ ಬಗ್ಗೆ ಸುಳ್ಳು ಮಾಹಿತಿ ನೀಡಿದ ವಕೀಲರ ಮೇಲೆ ಎಫ್‌ಐಆರ್

FIR: ಉತ್ಖನನದ ವೇಳೆ ಯಥೇಚ್ಛವಾಗಿ ಹೆಣ ದೊರೆತಿದ್ದಾಗಿ ಈ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹೀಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ರಘುರಾಮ ಶೆಟ್ಟಿ ಎಂಬವರು ದೂರು ನೀಡಿದ್ದಾರೆ.

ಪದ್ಮಭೂಷಣ ಪುರಸ್ಕೃತ ನಟ ಅನಂತನಾಗ್‌ ಅವರನ್ನು ಸನ್ಮಾನಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಪದ್ಮಭೂಷಣ ಪುರಸ್ಕೃತ ನಟ ಅನಂತನಾಗ್‌ರನ್ನು ಸನ್ಮಾನಿಸಿದ ಪ್ರಲ್ಹಾದ್‌ ಜೋಶಿ

ಬೆಂಗಳೂರಿನಲ್ಲಿ ಶುಕ್ರವಾರ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ಪದ್ಮಭೂಷಣ ಪುರಸ್ಕೃತ ಡಾ. ಅನಂತನಾಗ್ ಅವರೊಂದಿಗೆ 'ಒಂದು ಕಲಾತ್ಮಕ ಸಂಜೆ' ಕಾರ್ಯಕ್ರಮದಲ್ಲಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಗೌರವಿಸಿ, ಸನ್ಮಾನಿಸಿದರು. ಈ ವೇಳೆ ಅನಂತನಾಗ್ ಅವರ ಧರ್ಮಪತ್ನಿ ಹಾಗೂ ಹಿರಿಯ ಕಲಾವಿದೆ ಗಾಯತ್ರಿ ಅನಂತನಾಗ್ ಉಪಸ್ಥಿತರಿದ್ದರು.

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌

ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌

Girish Mattennavar: ನನಗೆ ಮಗಳು ಇಲ್ಲ. ಆದರೆ ಆಸ್ತಿ ವಿಷಯದಲ್ಲಿ ನನಗೆ ಅನ್ಯಾಯವಾಗಿದೆ. ಆಸ್ತಿ ವಿಷಯದಲ್ಲಿ ನನಗೆ ನ್ಯಾಯ ಸಿಗಬೇಕು ಎಂದು ಬಯಸುತ್ತಿದ್ದಾಗ ಗಿರೀಶ್‌ ಮಟ್ಟೆಣ್ಣವರ್‌ ನನ್ನನ್ನು ಭೇಟಿಯಾಗಿ ಮಗಳು ಕಾಣೆಯಾಗಿದ್ದಾಳೆ ಎಂದು ಕಥೆ ಕಟ್ಟಿ ದೂರು ನೀಡುವಂತೆ ಪ್ರಚೋದಿಸಿದರು. ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲೂ ನಾನು ಕೆಲವು ದಿನ ಇದ್ದೆ ಎಂದು ಸುಜಾತ ಭಟ್ ತಿಳಿಸಿದ್ದಾರೆ.

DK Shivakumar: ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿ.ಕೆ. ಶಿವಕುಮಾರ್

ಕರಾವಳಿ ಭಾಗಕ್ಕೆ ಹೊಸ ರೂಪ ನೀಡಲಾಗುತ್ತದೆ: ಡಿಕೆಶಿ

DK Shivakumar: ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳ ಜತೆ ಮೊಟ್ಟ ಮೊದಲ ಸಭೆ ನಡೆಸಲಾಯಿತು. ಅಧಿಕಾರಿಗಳೂ ಸಹ ಸಭೆಯಲ್ಲಿ ಹಾಜರಿದ್ದರು. ಪರಿಹಾರೋಪಾಯಗಳ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರ್ಸ್‌ ʼ45ʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಬಹು ನಿರೀಕ್ಷಿತ ಮಲ್ಟಿಸ್ಟಾರರ್ ʼ45ʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

45 Movie: ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼ45ʼ ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Dinesh Gundu Rao: ಮಾಜಿ ಸಿಎಂ ದಿ. ಆರ್.ಗುಂಡೂರಾವ್ ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Dinesh Gundu Rao: ಬೆಂಗಳೂರಿನ ಕಾಟನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಚಾಲನೆ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Karnataka Assembly Session: ಬಡವರಿಗೆ ಸೂರು, ಅನ್ನ, ಉದ್ಯೋಗ, ರೈತರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್: ಡಿಕೆಶಿ

ಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು: ಡಿಕೆಶಿ

DK Shivakumar: ನಿಯಮ 69ರ ಅಡಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು 38 ಶಾಸಕರು 6 ಗಂಟೆ 17 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದು, ಜನ ನಮ್ಮನ್ನು ಆಡಳಿತದಲ್ಲಿ ಕೂರಿಸಿದ್ದಾರೆ. ಪ್ರತಿಪಕ್ಷದಲ್ಲಿರುವವರೂ ಈ ಹಿಂದೆ ಆಡಳಿತ ಮಾಡಿದ್ದಾರೆ. ಈ ಸರ್ಕಾರದಲ್ಲಿ ಆಡಳಿತ ಪಕ್ಷದ 139 ಶಾಸಕರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಮುಖ್ಯಮಂತ್ರಿಗಳು ಆಗ ವಿರೋಧ ಪಕ್ಷದ ನಾಯಕರಾಗಿ ಇಡೀ ರಾಜ್ಯದ ಪ್ರವಾಸ ಮಾಡಿ ಜನರ ಆಸೆ, ಆಕ್ರೋಶ ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Bestie Movie: ‘ಬೆಸ್ಟಿ’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್

‘ಬೆಸ್ಟಿ’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್

Bestie Movie: ಆರ್ಯ ಯೋಗೀಶ್ ನಿರ್ದೇಶನದ ʼಬೆಸ್ಟಿʼ ಚಿತ್ರದ ಶೀರ್ಷಿಕೆಯನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದ್ದಾರೆ. ಈ ಚಿತ್ರದ ನಾಯಕರಾಗಿ ಚೇತನ್ ಗೌಡ ನರೆಹಳ್ಳಿ ಹಾಗೂ ಸಾತ್ವಿಕ್ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಕರಿ ಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಈ ಕುರಿತ ವಿವರ ಇಲ್ಲಿದೆ.

Bengaluru Power Cut: ಆ.23, 24ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಆ.23, 24ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆ.ವಿ. ಹೂಡಿ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಆ.23ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Karnataka Assembly Session: ಕಾವೇರಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಮೆಟ್ರೋ ವಿಸ್ತರಣೆ, ಹೊಸ ರಸ್ತೆ ಜಾಲಗಳ ವಿವರ ಕೊಟ್ಟ ಡಿಕೆಶಿ

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಯೋಜನೆ ವಿವರಿಸಿದ ಡಿಕೆಶಿ

DK Shivakumar: ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ವಿಧಾನಸಭೆಯಲ್ಲಿ ನಿಯಮಾವಳಿ 69ರ ಅಡಿಯಲ್ಲಿ ಶುಕ್ರವಾರ ನಡೆದ ವಿಶೇಷ ಚರ್ಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಉತ್ತರಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ಟೈಟಲ್‌ ಸಾಂಗ್‌ ಔಟ್‌: ಸೆ.12ಕ್ಕೆ ಚಿತ್ರ ರಿಲೀಸ್‌

‘ನಿದ್ರಾದೇವಿ Next Door’ ಚಿತ್ರದ ಟೈಟಲ್‌ ಸಾಂಗ್‌ ಔಟ್‌

Nidradevi Next Door Movie: ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ - ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿರುವ ʼನಿದ್ರಾದೇವಿ Next Doorʼ ಚಿತ್ರಕ್ಕಾಗಿ ಪವನ್ ಭಟ್ ಅವರು ಬರೆದಿರುವ ʼನಿದ್ರಾದೇವಿ ಬಾʼ ಎಂಬ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ನಕುಲ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ಶ್ರೀಲಕ್ಷ್ಮೀ ಬೆಳ್ಮಣು ಹಾಡಿದ್ದಾರೆ.

Lawyer Jagadish: ಜಾತಿ ನಿಂದನೆ ಪ್ರಕರಣದಲ್ಲಿ ಲಾಯರ್‌ ಜಗದೀಶ್‌ ಪೊಲೀಸರ ವಶಕ್ಕೆ

ಜಾತಿ ನಿಂದನೆ ಪ್ರಕರಣದಲ್ಲಿ ಲಾಯರ್‌ ಜಗದೀಶ್‌ ಪೊಲೀಸರ ವಶಕ್ಕೆ

Caste abuse: ಜಗದೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಜಾತಿ ವಿರೋಧಿ ಹೇಳಿಕೆಗಳನ್ನು ಒಳಗೊಂಡ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಅಶಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಬರೋಬ್ಬರಿ 19 ವರ್ಷ: ಅಭಿವೃದ್ದಿಯಲ್ಲಿ ತಂದಿಲ್ಲ ಸಂಪೂರ್ಣ ಹರ್ಷ

ಗರಿ ಬಿಚ್ಚಿ ನಲಿಯಬೇಕಿದೆ ಮತ್ತಷ್ಟು ಸಾವಿರ ಕಣ್ಣುಗಳು

ನಗರ ಹೊರವಲಯ ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಲ್ಲಿ ಬೆಂಗಳೂರಿನ ವಿಧಾನಸೌಧದಂತೆ ಕಂಗೊಳಿ ಸುತ್ತಾ ಕರ್ನಾಟಕಕ್ಕೆ ಮಾದರಿಯಾದ ಜಿಲ್ಲಾಡಳಿತ ಸೌಧವನ್ನು ಹೊಂದಿರುವ ಜಿಲ್ಲೆಯು ಅಭಿವೃದ್ಧಿ ಯಲ್ಲಿ ಮೂಡಿಸಿರುವ ಗರಿಗಳು ನೂರಾರಿದ್ದರೂ, ಪರಿಪೂರ್ಣವಾಗಿ ಗರಿ ಬಿಚ್ಚಿ ನರ್ತಿಸಲು ಸಾಧ್ಯವಾಗಿಲ್ಲ ಎಂಬ ಕೊರಗಿದೆ. ಅಭಿವೃದ್ಧಿಯಲ್ಲಿ ರಾಮನಗರಕ್ಕೆ ಹೋಲಿಸಿದರೆ ಚಿಕ್ಕಬಳ್ಳಾಪುರ ತುಂಬಾ ಹಿಂದಿದೆ ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯವಾಗಿದೆ.

ಲಾಯಲ್ಟಿ ಯೋಜನೆಯ ಒಂದು ಹೊಸ ಅಧ್ಯಾಯ ಆರಂಭ

ಲಾಯಲ್ಟಿ ಯೋಜನೆಯ ಒಂದು ಹೊಸ ಅಧ್ಯಾಯ ಆರಂಭ

ಮೊದಲ ಟ್ರಾವೆಲ್- ರಿಟೇಲ್ ಲಾಯಲ್ಟಿ ಸಂಯೋಜನೆಯ ಮೂಲಕ ದೇಶದ ಅತಿದೊಡ್ಡ ಇ- ಕಾಮರ್ಸ್ ಸಂಸ್ಥೆ ಮತ್ತು ಜಾಗತಿಕ ಆತಿಥ್ಯ ಸಂಸ್ಥೆ ಪರಸ್ಪರ ಜೊತೆಗೂಡಿವೆ. ಸದಸ್ಯರು ಈ ಮೂಲಕ ಈಗ ಆಕರ್ಷಕ ರಿವಾರ್ಡ್ ಗಳನ್ನು ಗಳಿಸಬಹುದು ಮತ್ತು ಅದನ್ನು ಫ್ಲಿಪ್‌ ಕಾರ್ಟ್‌ನ ಶಾಪಿಂಗ್ ವ್ಯವಸ್ಥೆ ಮತ್ತು ಮ್ಯಾರಿಯಟ್ ಬೊನ್‌ವಾಯ್‌ ನ ಜಾಗತಿಕ ಟ್ರಾವೆಲ್ ಪ್ರೋಗ್ರಾಂನಲ್ಲಿ ಬಳಕೆ ಮಾಡಿಕೊಳ್ಳ ಬಹುದು.

KSRTC Bus: ಗೌರಿ- ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್

ಗೌರಿ- ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ 1500 ಹೆಚ್ಚುವರಿ ಬಸ್

Ganesha Chaturthi: ಬೆಂಗಳೂರು, ಮಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ನೆಲೆಸಿರುವ ಹಲವರು ಹಬ್ಬದ ಆಚರಣೆಗಾಗಿ ಸ್ವಂತ ಊರುಗಳಿಗೆ ತೆರಳುತ್ತಾರೆ. ಬೆಂಗಳೂರಿಗೆ ವಾಪಸ್ಸು ಬರಲು 27 ಬುಧವಾರದಿಂದ 31 ಭಾನುವಾರದವರೆಗೆ ವಿಶೇಷ ವಾಹನಗಳನ್ನು ಓಡಿಸಲಾಗುತ್ತದೆ.

Bagepally News: ಶ್ರೀ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಮೆಡಿಕಲ್ ಹಾಸ್ಪಿಟಲ್ ಮುದ್ದೇನಹಳ್ಳಿ ಬಡವರ ಪಾಲಿನ ಕಾಮಧೇನು: ಕೆ.ಟಿ.ವೀರಾಂಜನೇಯಲು

ಈ ಹಾಸ್ಪಿಟಲ್ ಮುದ್ದೇನಹಳ್ಳಿ ಬಡವರ ಪಾಲಿನ ಕಾಮಧೇನು

ನಿಜಕ್ಕೂ ಶ್ರೀ ಸತ್ಯಸಾಯಿ ಹಾಸ್ಪಿಟಲ್ ವತಿಯಿಂದ ಈ ರೀತಿ ಶಾಲೆಗಳಿಗೆ ಬಂದು ಮಕ್ಕಳ ಆರೋಗ್ಯದ ಬಗ್ಗೆ ಉಚಿತ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ. ಅವರು ಯಾವುದೇ ಶುಲ್ಕವಿಲ್ಲದೆ ಎಂತಹ ಕಾಯಿಲೆಯಾದರೂ ಸರಿ ಚಿಕಿತ್ಸೆ ನೀಡಿ ಉಚಿತ ಹಾರ್ಟ್ ಆಪರೇಷನ್ ಸೇರಿದಂತೆ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಶ್ವದಲ್ಲಿ ಮೊದಲ ಸ್ಥಾನ ಎಂದು ಹೇಳಬಹುದು.

Anchor Anushree: ಆ್ಯಂಕರ್ ಅನುಶ್ರೀ-‌ ರೋಷನ್ ಮದುವೆ ಇನ್ವಿಟೇಶನ್‌ ರಿವೀಲ್‌, ʼಏಕಾಂಗಿ ನಂತರ ಈಗ ಅರ್ಧಾಂಗಿʼ ಎಂದ ಅನುಶ್ರೀ

ಆ್ಯಂಕರ್ ಅನುಶ್ರೀ-‌ ರೋಷನ್ ಮದುವೆ ಆಮಂತ್ರಣ: ʼಏಕಾಂಗಿ ನಂತರ ಈಗ ಅರ್ಧಾಂಗಿʼ

Anchor Anushree: ಆ.28ಕ್ಕೆ ರೋಷನ್ ಜೊತೆ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರಿನ ಹೊರವಲಯದ ರೆಸಾರ್ಟ್​​ನಲ್ಲಿ ಮದುವೆ ನಡೆಯಲಿದ್ದು, ಅಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ. ಈಗಾಗಲೇ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲಾಗಿದ್ದು, ಮೀಡಿಯಾದಲ್ಲಿ ವೈರಲ್‌ ಆಗಿದೆ.

Chikkaballapur News: ಈ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಿಕ್ಷಣ ಕೊಡಿಸಿ ಬಾಳು ಬೆಳಗಿ: ನ್ಯಾ.ಬಿ.ಶಿಲ್ಪ

ಈ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಿಕ್ಷಣ ಕೊಡಿಸಿ ಬಾಳು ಬೆಳಗಿ

ಬಾಲ ಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ದುಡಿಮೆಯಲ್ಲಿ ತೂಡಗಿಸಿಕೊಂಡರೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸ ಲಾಗುತ್ತದೆ. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಸಂಭಂದಪಟ್ಟ ಇಲಾಖೆ ಗಮನಕ್ಕೆ ಅಥವಾ 1098 ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಬಹುದು.

Ganesh Chaturthi 2025: ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಅನುವು ಮಾಡಿಕೊಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಅನುವು ಮಾಡಿಕೊಡಿ

Chalavadi Narayanaswamy: ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

G Venkatasubbaiah: ಪ್ರೊ.ಎಸ್.ಎನ್ ಶ್ರೀಧರ್‌, ಡಾ. ತಮಿಳ್‌ ಸೆಲ್ವಿಗೆ ಕಥೆಕೂಟದ 2024-25ರ 'ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್' ಪುರಸ್ಕಾರ

ಕಥೆಕೂಟದ 2024-25ರ 'ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್' ಪುರಸ್ಕಾರ ಪ್ರಕಟ

Kathekoota: ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ಮತ್ತು ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಪ್ರತಿಭಾನ್ವಿತರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ಪುರಸ್ಕಾರವು ₹10,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ 2025ರ ನವೆಂಬರ್ 1ರಂದು ನಡೆಯಲಿದೆ ಎಂದು ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಬೆಂಗಳೂರಿನಿಂದ ʼನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆʼ ಜಾಥಾ

ನಾಳೆ ಬೆಂಗಳೂರಿನಿಂದ ʼನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆʼ ಜಾಥಾ

ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ.ಜಿ ಅವರ ನೇತೃತ್ವದಲ್ಲಿ ಸುಮಾರು 800 ವಕೀಲರು ಸುಮಾರು 220 ಕಾರುಗಳಲ್ಲಿ ಬೆಂಗಳೂರಿನಿಂದ ಶನಿವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಜಾಥಾ ಹೊರಡಲಿದ್ದಾರೆ.

Loading...