ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೈಕ್‌ಗೆ ಕಾರು ಡಿಕ್ಕಿ;ತಂದೆ-ಮಗನಿಗೆ ಗಾಯ, ಚಾಲಕ ಪರಾರಿ!

ಬೈಕ್‌ಗೆ ಕಾರು ಡಿಕ್ಕಿ;ತಂದೆ-ಮಗನಿಗೆ ಗಾಯ, ಚಾಲಕ ಪರಾರಿ!

ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸಾರ್ವಜನಿಕರು ತಕ್ಷಣವೇ ಆಟೋ ಒಂದರಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಬಳಿಕ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ತೀವ್ರ ಗಾಯ ಗೊಂಡಿದ್ದ ಅಕ್ರಂಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

Ebola outbreak: ಎಬೋಲಾ ವೈರಸ್‌ ಆತಂಕ ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್‌; ಮಾರ್ಗಸೂಚಿ ಪ್ರಕಟ

ಎಬೋಲಾ ವೈರಸ್‌ ಆತಂಕ; ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ

ಆಫ್ರಿಕಾದಲ್ಲಿ ಎಬೋಲಾ ಪ್ರಕರಣಗಳು ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ. ಪ್ರಯಾಣ ಮುಗಿಸಿ ಬಂದ 21 ದಿನಗಳ ಒಳಗೆ ಎಬೋಲಾ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಮತ್ತು ನೀವು ವಿದೇಶದಿಂದ ಬಂದಿರುವ ವಿಷಯವನ್ನು ಅವರಿಗೆ ತಪ್ಪದೇ ತಿಳಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ಮುಂಗಾರು ಎದುರಿಸಲು ಅಧಿಕಾರಿಗಳು ಸನ್ನದ್ದರಾಗಿ, ಮಳೆಹಾನಿ ತಡೆಗೆ ಮುನ್ನೆಚ್ಚರಿಕೆ ಕ್ರಮ ಅಗತ್ಯ : ಜಿಲ್ಲಾಧಿಕಾರಿ ಜಿ.ಪ್ರಭು

ಮುಂಗಾರು ಎದುರಿಸಲು ಅಧಿಕಾರಿಗಳು ಸನ್ನದ್ದರಾಗಿ

ಮೇ 21ರ ರಾತ್ರಿ  ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ಜಿಲ್ಲೆಯ ವಿವಿಧೆಡೆ ತೋಟ ಗಾರಿಕಾ ಬೆಳೆಗಳು ನಾಶವಾಗಿವೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. 20 ಹೆಕ್ಟೇರ್ ಬಾಳೆ, 1.60 ಹೆಕ್ಟೇರ್ ಅಡಿಕೆ, 1.20 ಹೆಕ್ಟೇರ್ ಟಮೋಟೋ ಹಾಗೂ 2 ಹೆಕ್ಟೇರ್ ತರಕಾರಿ ಬೆಳೆಗಳು ಜಿಲ್ಲೆಯಲ್ಲಿ ನಾಶವಾಗಿದ್ದು, ಆ ಎಲ್ಲಾ ರೈತರ ತಾಕುಗಳಿಗೆ ತಾಲ್ಲೂಕು ತಹಸೀಲ್ದಾರರು ಖುದ್ದು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ  ಹೇಳಬೇಕು ಜೊತೆಗೆ ತೋಟಗಾರಿಕೆ ಇಲಾಖೆಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಹಣ ನೀಡಲು ತುರ್ತು ಕ್ರಮ ವಹಿಸಬೇಕು

ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ : ಎಚ್ ಕ್ರಾಸ್–ಟಿನ್ ಫ್ಯಾಕ್ಟರಿ ನಡುವೆ “ವೇಗದೂತ” ಬಸ್ ಸೇವೆ ಆರಂಭ

ಎಚ್ ಕ್ರಾಸ್–ಟಿನ್ ಫ್ಯಾಕ್ಟರಿ ನಡುವೆ “ವೇಗದೂತ” ಬಸ್ ಸೇವೆ ಆರಂಭ

ಸಾರ್ವಜನಿಕರಿಗೆ ವೇಗವಾದ, ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ “ವೇಗದೂತ” ಸೇವೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು. ಕಡಿಮೆ ನಿಲ್ದಾಣಗಳ ಮೂಲಕ ಕಾರ್ಯಾ ಚರಿಸುವ ಈ ಬಸ್ ಸೇವೆಯಿಂದ ಪ್ರಯಾಣ ಸಮಯ ಕಡಿಮೆ ಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ

Unseasoned Rain spoils: ಅಕಾಲ ಮಳೆಗೆ ನೆಲ ಕಚ್ಚಿದ ಎಕರೆಗಳ ಗಟ್ಟಲೆ ಬಾಳೆತೋಟಗಳು

ಅಕಾಲ ಮಳೆಗೆ ನೆಲ ಕಚ್ಚಿದ ಎಕರೆಗಳ ಗಟ್ಟಲೆ ಬಾಳೆತೋಟಗಳು

ಮೂರೂವರೆ ಎಕರೆ ಯಲ್ಲಿ ಸುಮಾರು 5 ಲಕ್ಷ ರೂಗಳು ಬಂಡವಳ ಹಾಕಿ ಬಾಳೆ ಬೆಳೆ ಹಾಕಿದ್ದಾರೆ.ಬೆಳೆ ಚನ್ನಾಗಿ ಬರುವ ಆಶಾಬಾವನೆ ಇತ್ತು. ಇದರಿಂದ ಸುಮಾರು 15 ಲಕ್ಷ ರೂಗಳು ಹುಟ್ಟುವಳಿ ಆಗಬಹು ದೆಂಬ ನಿರೀಕ್ಷಯಲ್ಲಿ ಇವರಿದ್ದರು. ಆದರೆ ನಿನ್ನೆ ಅಕಾಲ ಮಳೆಗೆ ಬಾಳೆ ತೋಟ ಪೂರಾ ನಷ್ಟವಾಗಿದೆ. ಸರ್ಕಾರ ನಷ್ಟ ಪರಿಹಾರ ನೀಡಿ ರೈತರ ಕಷ್ಟಕ್ಕೆ ಸ್ಫಂದಿಸಬೇಕೆಂದರು.

Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್‌ ಟಚ್‌; ಆಸನ ಸಾಮರ್ಥ್ಯ 55,000ಕ್ಕೆ ಹೆಚ್ಚಳ

ಚಿನ್ನಸ್ವಾಮಿ ಸ್ಟೇಡಿಯಂ ಆಸನ ಸಾಮರ್ಥ್ಯ 55 ಸಾವಿರಕ್ಕೆ ಹೆಚ್ಚಳ

ಚಿನ್ನಸ್ವಾಮಿ ಕ್ರೀಡಾಂಗಣದ ನವೀಕರಣ ಕುರಿತು ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು, ಪ್ರಸ್ತುತ ಕ್ರೀಡಾಂಗಣದಲ್ಲಿ 33 ಸಾವಿರ ಆಸನಗಳಿದ್ದರೂ, ಸುಮಾರು 26 ಸಾವಿರ ಪ್ರೇಕ್ಷಕರು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ. ಇದನ್ನು 55 ಸಾವಿರದಿಂದ 60 ಸಾವಿರ ಆಸನಗಳ ಸಾಮರ್ಥ್ಯಕ್ಕೆ ಹೆಚ್ಚಿಸಲು ಯೋಜನೆ ಸಿದ್ಧವಾಗುತ್ತಿದೆ ಎಂದು ಹೇಳಿದ್ದಾರೆ.

ಚಿಂತಾಮಣಿಯಲ್ಲಿ ಅದ್ದೂರಿ ಭೀಮೋತ್ಸವ ಆಚರಣೆ: ಅಂಬೇಡ್ಕರ್ ತತ್ವ-ಸಿದ್ಧಾಂತಗಳ ಪಾಲನೆಗೆ ವಿ.ಗೋಪಾಲಗೌಡ ಕರೆ

ಚಿಂತಾಮಣಿಯಲ್ಲಿ ಅದ್ದೂರಿ ಭೀಮೋತ್ಸವ ಆಚರಣೆ

ಚಿಂತಾಮಣಿ ನಗರದಲ್ಲಿ ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭೀಮೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯ ಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳ ಮುಖಂಡರು,ಸಾರ್ವಜನಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

MLA S.N. Subbareddy: ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಶಾಸಕ ಸುಬ್ಬಾರೆಡ್ಡಿ ಕರೆ

ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ

ದೇಶದ ಆರ್ಥಿಕತೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂದು ರೈತ ಇಲ್ಲವಾದರೇ ವಿಶ್ವಕ್ಕೆ ಆಹಾರವೇ ಇಲ್ಲದಂತಾಗುತ್ತದೆ. ಈ ಉದ್ದೇಶದಿಂದ ರೈತರಿಗೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಕೃಷಿ ಯಾಂತ್ರೀಕರಣ ಸೇರಿದಂತೆ ಹನಿ ನೀರಾವರಿ, ತುಂತುರು ನೀರಾವರಿ ಘಟಕಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.

Chikkaballapur News: ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

ಸಮಾಜದಲ್ಲಿ ಅನೇಕ ಸಂಘಟನೆಗಳಿದ್ದು ಎಲ್ಲಾ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾನೂ ನಾತ್ಮಕ ಚೌಕಟ್ಟಿನಲ್ಲಿ ನೊಂದವರ ಪರ ಕೆಲಸ ಮಾಡುತ್ತಿದ್ದು ಅದೇ ರೀತಿ ಈ ಸಂಘಟನೆಯು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೊಮ್ಮಗ ಸ್ಥಾಪನೆ ಮಾಡಿದ್ದು ಬಹುಜನರ ಉದ್ಧಾರಕ್ಕಾಗಿ ಈ ಸಂಘಟನೆ ದಿನನಿತ್ಯ ಫಲಿತಾಪಿಸುತ್ತಿದ್ದು ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ.

Chinthamani Crime: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!

ಕೆಂಚಾರ್ಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ಅಕ್ರಮ ಮದ್ಯ ಮಾರಾಟಗಾರರು ಲಾಕ್!

ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಅಕ್ರಮ ದಂಧೆಕೋರರಿಗೆ ಪೆನಾಲ್ಟಿ ಹಾಕಿದ್ದಾರೆ. ಮರೀನಾಯಕನಹಳ್ಳಿ ಗೇಟ್ ಬಳಿಯ ಕಿರಾಣಿ ಅಂಗಡಿ ಯೊಂದರಲ್ಲಿ ಹಾಗೂ ಎರಡು ಮನೆಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಸಂಗ್ರಹಿಸಿ, ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಕೆಂಚಾರ್ಲಹಳ್ಳಿ ಪೊಲೀಸರು ನಿಗದಿತ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

Shidlaghatta News: ಮೇಲೂರು ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ದೇವಾಲಯದ ವಾರ್ಷಿಕೋತ್ಸವ

ಮೇಲೂರು ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ದೇವಾಲಯದ ವಾರ್ಷಿಕೋತ್ಸವ

1919ರಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವಾಲಯವು 2025ರಲ್ಲಿ ಪುನರ್ಜೀವಗೊಂಡ ಹಿನ್ನೆಲೆ ಈ ವರ್ಷದ ವಾರ್ಷಿಕೋತ್ಸವ ವಿಶೇಷ ಮಹತ್ವ ಪಡೆದಿತ್ತು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಹಾಕಿ, ಕಳಶ ಹೊತ್ತು ದೇವಾಲಯಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು.

ಕನ್ನಡಪರ ಹೋರಾಟಗಾರರ ನೆಪದಲ್ಲಿ ಕೋಮು ಗಲಭೆಕೋರರ ಹಿತಾಸಕ್ತಿಗೆ ಒತ್ತು: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ

ರಾಜ್ಯ ಸರ್ಕಾರದ ತುಷ್ಟೀಕರಣ, ಓಲೈಕೆ ರಾಜಕಾರಣ ಎಲ್ಲೆ ಮೀರಿದೆ: ಜೋಶಿ

Pralhad Joshi: ರಾಜ್ಯದಲ್ಲಿ ಪ್ರತಿಭಟನೆ-ಗಲಭೆ ಮೇಲಿನ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದ್ದು, ಇದು 'ಕನ್ನಡ ಪರ ಹೋರಾಟಗಾರರ ಮೇಲಿನ ಕಾಳಜಿಗಿಂತ ಮುಸ್ಲಿಂ ಗಲಭೆಕೋರರ ಮೇಲಿನ ಹಿತಾಸಕ್ತಿಗಾಗಿ' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Chikkaballapur News: ಮೇ.31ರ ಪ್ರತಿಭಾ ಪೂರ್ವಭಾವಿ ಸಭೆ : ಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ

ಮೇ.31ರ ಪ್ರತಿಭಾ ಪೂರ್ವಭಾವಿ ಸಭೆ : ಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ

ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಿಲ್ಲಾ ಕೇಂದ್ರದ ಪತ್ರಕರ್ತರೊಂದಿಗೆ ಸಭೆ ನಡೆಸಿ ಇದೆ ತಿಂಗಳ 31ರಂದು ಭಾನುವಾರ ನಗರದ ಕನ್ನಡ ಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಂಘದ ಸದಸ್ಯರಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

Guest Teachers Recruitment: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಆದೇಶ

ಶಾಲೆಗಳಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ

ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 40,000 ಮತ್ತು ಪ್ರೌಢಶಾಲೆಗಳಿಗೆ 11,000 ಸೇರಿ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮಂಜೂರಾತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರೌಢ) ಎಸ್.ಪ್ರಕಾಶ ಅವರು ಆದೇಶ ಹೊರಡಿಸಿದ್ದಾರೆ.

ಜೂನ್ 1ರಿಂದ ಬೀದರ್‌ಗೆ, 10ರಿಂದ ಕಲಬುರಗಿಗೆ ಬೆಂಗಳೂರಿನಿಂದ ವಿಮಾನ ಸೇವೆ ಪುನಾರಂಭ

ಜೂ.1ರಿಂದ ಬೀದರ್‌ಗೆ, 10ರಿಂದ ಕಲಬುರಗಿಗೆ ವಿಮಾನ ಸೇವೆ ಪುನಾರಂಭ

MB Patil: ಕಲ್ಯಾಣ ಕರ್ನಾಟಕ ಭಾಗದ ಬೀದರ್ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10 ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆಯನ್ನು ಪುನಾರಂಭ ಮಾಡಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಪತ್ರಕರ್ತರಿಗೆ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೊಳಿಸಲು ಕ್ರಮ: ಕೆ.ವಿ.ಪ್ರಭಾಕರ್ ಭರವಸೆ

ಪತ್ರಕರ್ತರಿಗೆ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೆ ಕ್ರಮ: ಕೆ.ವಿ.ಪ್ರಭಾಕರ್

KUWJ Media Dialogue: ಪತ್ರಕರ್ತ ಸಮುದಾಯಕ್ಕೆ, ಪತ್ರಿಕಾ ವಿತರಕ ಸಮುದಾಯಕ್ಕೆ ನೆರವಾಗುವ ಜತೆಗೆ ನೂರಾರು ರೀತಿಯ ನೆರವು ಸರ್ಕಾರದಿಂದ ಒದಗಿಸಲಾಗಿದೆ. ಪತ್ರಕರ್ತರ ಸಂಘ ಮತ್ತು ಪತ್ರಕರ್ತ ಸಮುದಾಯ ಅವರ ಒತ್ತಡದಿಂದಲೇ ರಾಜ್ಯದಲ್ಲಿ 'ಜಾಹೀರಾತು ನೀತಿ' ತರಲಾಗಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು: 10 ಉಚಿತ ಇವಿ ಆಟೋ ವಿತರಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

10 ಉಚಿತ ಇವಿ ಆಟೋ ವಿತರಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಿ.ಜಿ.ಐ, ಬಿ.ಪ್ಯಾಕ್‌ ಪೀಸ್ ಆಟೋ ಯೂನಿಯನ್ ವತಿಯಿಂದ ವಿಶೇಷ ತರಬೇತಿ ನೀಡಲಾಗಿದೆ. ಆಯ್ಕೆಯಾದ ಎಲ್ಲಾ ಮಹಿಳೆಯರು ಚಾಲನಾ ಪರವಾನಗಿ ಹೊಂದಿದ್ದು, ಎಲೆಕ್ಟ್ರಿಕ್ ಆಟೋಗಳನ್ನು ಸುರಕ್ಷಿತವಾಗಿ ಹಾಗೂ ವೃತ್ತಿಪರ ರೀತಿಯಲ್ಲಿ ಚಾಲನೆ ಮಾಡಲು ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡಿದ್ದಾರೆ.

Sirsi News: ಮುಂಗಾರು ಮಳೆ ಆರಂಭವಾಗುವ ಮುನ್ನ ನಾಗರಿಕ ಸಮಸ್ಯೆಗಳನ್ನು ಬಗೆಹರಿಸಿ: ನಗರಸಭೆ ಪೌರಾಯುಕ್ತರಿಗೆ ಮನವಿ

ರಸ್ತೆಯನ್ನು ಶೀಘ್ರವಾಗಿ ಸಂಚಾರ ಯೋಗ್ಯವನ್ನಾಗಿ ಮಾಡಲು ಆಗ್ರಹ

​ನಗರದಲ್ಲಿ ಸದ್ಯ ತಲೆದೋರಿರುವ ಹಲವು ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಿದ ಆನಂದ ಸಾಲೇರ ನೇತೃತ್ವದ ನಿಯೋಗ, ಮಳೆಗಾಲದಲ್ಲಿ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಅಳವಡಿಸಲಾಗಿರುವ ರಸ್ತೆ ಮತ್ತು ಮಾರ್ಗಗಳ ನಾಮಫಲಕಗಳು ಅತ್ಯಂತ ಹದಗೆಟ್ಟ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇವುಗಳನ್ನು ಆದಷ್ಟು ಬೇಗ ದುರಸ್ತಿ ಗೊಳಿಸಬೇಕು ಅಥವಾ ಹೊಸದಾಗಿ ಅಳವಡಿಸಬೇಕು.

SIR in Karnataka: ಎಸ್‌ಐಆರ್ ಮೂಲಕ ಬಡವರ ಮತಗಳನ್ನು ತೆಗೆಯಲು ಸಂಚು: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

ಎಸ್‌ಐಆರ್ ಮೂಲಕ ಬಡವರ ಮತಗಳನ್ನು ತೆಗೆಯಲು ಸಂಚು: ಡಿಕೆಶಿ

ರಾಜ್ಯದಲ್ಲಿ ಎಸ್‌ಐಆರ್‌ ಮಾಡಲು ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಮತದಾನದ ಹಕ್ಕು ಹೋದರೆ ಪಿಂಚಣಿ, ಗೃಹಲಕ್ಷ್ಮಿ ಯೋಜನೆ ಸೇರಿ ಅನೇಕ ಅನುಕೂಲಗಳಿಂದ ನಾಗರಿಕರು ವಂಚಿತರಾಗುತ್ತಾರೆ. ಅದಕ್ಕೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಮಾಲೀಕರಿಗೆ ಗುಡ್ ನ್ಯೂಸ್: 9 ದಿನಗಳ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಮೇ 23ರಿಂದ ಆರಂಭ

ಮೇ 23ರಿಂದ 9 ದಿನಗಳ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಆರಂಭ

Legends Care Camp: ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ದೇಶಾದ್ಯಂತ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಎಂಬ ವಿಶೇಷ ಸೇವಾ ಶಿಬಿರವನ್ನು ಆರಂಭಿಸಿದೆ. ಮೇ 23 ರಿಂದ ಮೇ 31, 2026ರವರೆಗೆ ಒಟ್ಟು 9 ದಿನಗಳ ಕಾಲ ಈ ಸರ್ವಿಸ್ ಕ್ಯಾಂಪ್ ನಡೆಯಲಿದೆ. ದೇಶದ ಎಲ್ಲಾ ಅಧಿಕೃತ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಶೋರೂಮ್‌ಗಳಲ್ಲಿ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

Bengaluru’s New Cricket Stadium: ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ಆನೇಕಲ್‌ನಲ್ಲಿ ನಾಳೆ ಶಂಕುಸ್ಥಾಪನೆ; ಏನಿದರ ವಿಶೇಷತೆಗಳು?

ನಾಳೆ ಬೆಂಗಳೂರಿನ ನೂತನ ಕ್ರಿಕೆಟ್‌ ಸ್ಟೇಡಿಯಂಗೆ ಶಂಕುಸ್ಥಾಪನೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸೂರ್ಯನಗರ 4ನೇ ಹಂತದ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 943 ಕೋಟಿ ವೆಚ್ಚದಲ್ಲಿ ನೂತನ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ.

ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ಸೇರಿ  52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸರ್ಕಾರ ಅಸ್ತು

52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸರ್ಕಾರ ಅಸ್ತು

ಲಾಡ್ಲೆ ಮಶಾಕ್ ದರ್ಗಾ ಕೇಸ್‌ ಹಾಗೂ ಕನ್ನಡ ಪರ ಹೋರಾಟಗಾರರ ವಿರುದ್ಧದವು ಸೇರಿದಂತೆ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು, ಕಾವೇರಿ ಹೋರಾಟಗಾರರ ವಿರುದ್ಧದ ಪ್ರಕರಣಗಳು ಸೇರಿವೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ಜರುಗಿದೆ. ಮೊಹನ್ ಕುಮಾರ್(21) ಹಾಗೂ ಮೈಸೂರಿನ ಜಯಪುರ ಬಳಿಯ ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಸಾವನಪ್ಪಿದ ಯುವಕರು.

ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿಯ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ 2026-27ನೇ ಸಾಲಿಗೆ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಹಾಗೂ ಕಾಲೇಜು ವಿದ್ಯಾರ್ಥಿಗಳು ದಾಖಲಾತಿ ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜೂನ್ 30ರೊಳಗೆ ಸಲ್ಲಿಸಬಹುದು.

Loading...