ಸೆ.26ಕ್ಕೆ 'ಪರಮ್ ವಿಹಾರ'ದ ವೀಣಾ ನಾದ, ಒಡಿಸ್ಸಿ ನೃತ್ಯ ವೈಭವ
ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಕಲೆ-ಸಂಸ್ಕೃತಿಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ 'ಪರಮ್ ಕಲ್ಚರ್' ಸಂಸ್ಥೆಯು ಆಯೋಜಿಸುತ್ತಿರುವ ಮಾಸಿಕ ಸಾಂಸ್ಕೃತಿಕ ಸರಣಿ 'ಪರಮ್ ವಿಹಾರ'ದ 16ನೇ ಆವೃತ್ತಿಯು ಸೆ.26ರಂದು ಸಂಜೆ 6ರಿಂದ 8ರವರೆಗೆ ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.