ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ ಜಾರಿ; ನಟಿ ರಮ್ಯಾ ರಾಯಭಾರಿ
ಮಹಿಳೆಯರಿಗಾಗಿ ವಿಶೇಷ ಆರೋಗ್ಯ ನೀತಿ ರೂಪಿಸಲಾಗುತ್ತಿದ್ದು, ʻಋತುತಾರೆʼ ಅಥವಾ ʻಋತುಬಂಧʼ ಎಂಬ ಹೆಸರಿನ ಯೋಜನೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.