ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Priyank Kharge: ಎಸ್‌ಐಆರ್‌ ಅಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಆರೋಪಿಗಳು: ಪ್ರಿಯಾಂಕ್ ಖರ್ಗೆ

ಎಸ್‌ಐಆರ್‌ ಅಕ್ರಮದಲ್ಲಿ ಪ್ರಧಾನಿ, ಶಾ ಮತ್ತು ಚುನಾವಣಾ ಆಯುಕ್ತ ಆರೋಪಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಹಾಗೂ ರಾಹುಲ್ ಗಾಂಧಿ(Rahul Gandhi) ಅವರು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಉತ್ತರ ನೀಡುತ್ತಿದ್ದಾರೆಯೇ ಹೊರತು ಚುನಾವಣಾ ಆಯೋಗ ಮೌನವಾಗಿದೆ. ಕಾಂಗ್ರೆಸ್ ಯಾವುದೇ ವಿಷಯ ಪ್ರಸ್ತಾಪಿಸಿದರೂ ತಕ್ಷಣ ಪ್ರತಿಕ್ರಿಯಿಸುತ್ತಿದ್ದ ಚುನಾವಣಾ ಆಯೋಗ, ಕಳೆದ ಒಂದೂವರೆ ತಿಂಗಳಿನಿಂದ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ಟೀಕಿಸಿದರು.

ವಿಕಾಸ ಅಹರ್ನಿಶಿ ಸ್ವಯಂಚಾಲಿತ ಲಾಕರ್‌ ಲೋಕಾರ್ಪಣೆ

ವಿಕಾಸ ಅಹರ್ನಿಶಿ ಸ್ವಯಂಚಾಲಿತ ಲಾಕರ್‌ ಲೋಕಾರ್ಪಣೆ

ನಗರದ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಕೇಂದ್ರ ಕಛೇರಿ ಕಟ್ಟಡದಲ್ಲಿ ಜಪಾನ್ ತಂತ್ರಜ್ಞಾನ ಬಳಸಿ ಗೋದ್ರೇಜ್ ಕಂಪನಿ ನಿರ್ಮಿಸಿದ ವಿಕಾಸ ಅಹರ್ನಿಶಿ ಲಾಕರ್ ಸ್ವಯಂಚಾಲಿತವನ್ನು ಕೊಪ್ಪಳದ ಗವಿಶ್ರೀಗಳಿಂದ ಲೋಕಾರ್ಪಣೆಗೊಳಿಸಿದರು. ವರ್ಷದ 365 ದಿನವೂ, ನಿರಂತರ 24 ಗಂಟೆಯೂ ಬಳಸಬಹುದಾದ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಸ್ವಯಂಚಾಲಿತ ವಿಕಾಸ ಅಹರ್ನಿಶಿ ಲಾಕರ್ ಉದ್ಘಾಟಿಸಲಾಯಿತು.

ವಿಎ ಪರೀಕ್ಷೆ ಟಾಪರ್ ಕಳ್ಳಾಟ ಬಯಲು: ಗೂಗಲ್ ಲೆನ್ಸ್ ಬಳಸಿ ನಕಲು ಮಾಡಿದ್ದ ಹಾವೇರಿ ಅಭ್ಯರ್ಥಿ ಬಂಧನ

ವಿಎ ಪರೀಕ್ಷೆ ಟಾಪರ್ ಕಳ್ಳಾಟ ಬಯಲು: ಹಾವೇರಿ ಅಭ್ಯರ್ಥಿ ಬಂಧನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಹಾವೇರಿ ಜಿಲ್ಲೆ ಹಾನಗಲ್ ಮೂಲದ ಅಭ್ಯರ್ಥಿ ಶಂಕರ್ ಬನ್ನೂರು ಅವರ ಕಳ್ಳಾಟ ಸಿಸಿಟಿವಿ ತನಿಖೆಯಿಂದ ಬಯಲಾಗಿದೆ.

5 ರಿಂದ ಬಸ್ ಪ್ರಯಾಣ ದರ ಏರಿಕೆ: ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿಕೆ

5 ರಿಂದ ಬಸ್ ಪ್ರಯಾಣ ದರ ಏರಿಕೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ 5 ಬಾರಿ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಇದರಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ವಾರ್ಷಿಕ 2 ಸಾವಿರ ಕೋಟಿ ರೂಪಾಯಿ ನಷ್ಟ ಆಗುತ್ತಿದೆ. ಈಗಾಗಲೇ ಸಂಸ್ಥೆಗಳು 9 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿವೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಆಗಿದೆ ಎಂದರು.

Byrati Suresh: ಕನ್ನಡ ಭಾಷೆ ನಮ್ಮ ಅಸ್ಮಿತೆ: ಬೈರತಿ ಸುರೇಶ್

ಕನ್ನಡ ಭಾಷೆ ನಮ್ಮ ಅಸ್ಮಿತೆ: ಬೈರತಿ ಸುರೇಶ್

ಕನ್ನಡ ಅತ್ಯಂತ ವಿಶ್ವ ಶ್ರೇಷ್ಠ ಭಾಷೆಯಾಗಿದ್ದು, ನಮ್ಮ ಸಂಸ್ಕೃತಿ - ಸಂಭ್ರಮ, ಅಭಿಮಾನ ಮತ್ತು ನಮ್ಮ ಅಸ್ಮಿತೆಯಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್(Byrati Suresh) ಬಣ್ಣಿಸಿದ್ದಾರೆ. ಚಿಕ್ಕಬಳ್ಳಾಪುರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅನ್ಯಕೋಮಿನ ಯುವಕನಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಇಸ್ಮಾಯಿಲ್ ಪಟೇಲ್ ವಿರುದ್ಧ ಪೋಕ್ಸೋ ಪ್ರಕರಣ

ಅನ್ಯಕೋಮಿನ ಯುವಕನಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಯುಗಾದಿ ಸಂದರ್ಭದಲ್ಲಿ ಬಾಲಕಿ ಸಂಬಂಧಿಕರ ಊರಿಗೆ ಬಂದಿದ್ದಾಗ ಆರೋಪಿ ಆಕೆಯನ್ನು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಬಳಿಕ ಪ್ರೀತಿಸುವಂತೆ ಒತ್ತಾಯಿಸಿ, ಮದುವೆ ಯಾಗುವುದಾಗಿ ಪುಸಲಾಯಿಸುತ್ತಿದ್ದ. ಬಾಲಕಿ ಅಪ್ರಾಪ್ತೆಯಾಗಿರುವುದರಿಂದ ಮದುವೆಗೆ ನಿರಾಕರಿಸಿದ್ದರೂ ಆರೋಪಿ ಒತ್ತಡ ಮುಂದುವರಿಸಿದ್ದ ಎನ್ನಲಾಗಿದೆ.

ಚಿಂತಾಮಣಿ ರಾಯಲ್ ಶಾಲೆಯಲ್ಲಿ ‘ಸುರಕ್ಷಿತ ಬಾಲ್ಯ’ ಅಭಿಯಾನ; ಮಕ್ಕಳ ಹಕ್ಕುಗಳು, ಕಾನೂನು ರಕ್ಷಣೆ ಕುರಿತು ಜಾಗೃತಿ

ಮಕ್ಕಳ ಸುರಕ್ಷತೆಗೆ ಪೋಕ್ಸೊ ಕಾಯ್ದೆ ಅರಿವು ಅಗತ್ಯ

ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿದ ವಕೀಲರು, 2012ರ ನವೆಂಬರ್ 14ರಂದು ಈ ಕಾಯ್ದೆ ಜಾರಿಗೆ ಬಂದಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಸ್ತು ಗಳಿಂದ ಮಕ್ಕಳನ್ನು ರಕ್ಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಮಕ್ಕಳ ಮೇಲಿನ ಅಪರಾಧಗಳ ವರದಿ ಸಲ್ಲಿಕೆ, ಸಾಕ್ಷ್ಯಗಳ ದಾಖಲಾತಿ, ತನಿಖೆ ಹಾಗೂ ವಿಶೇಷ ನ್ಯಾಯಾಲಯಗಳ ಮೂಲಕ ಮಕ್ಕಳ ಸ್ನೇಹಿ ವಾತಾವರಣದಲ್ಲಿ ತ್ವರಿತ ನ್ಯಾಯಾಂಗ ವಿಚಾರಣೆ ನಡೆಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಪ್ರತಿ ರಗ್ ಮಾರಾಟದಿಂದ ಬರುವ ಆದಾಯದ ಒಂದು ಭಾಗ ಗ್ರಾಮೀಣ ಭಾರತದ ಬಾಲಕಿಯರ ‘ಸೈಕಲ್ ನಿಧಿ’ಗೆ

ಜೈಪುರ ರಗ್ಸ್ ವಾರ್ಷಿಕ ಮೇಳದಲ್ಲಿ ಶೇ. 60ರ ವರೆಗೆ ರಿಯಾಯಿತಿ

ಪ್ರತಿ ರಗ್ ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಗ್ರಾಮೀಣ ಭಾರತದ ಬಾಲಕಿಯ ರಿಗಾಗಿ ಇರುವ ‘ಸೈಕಲ್ ನಿಧಿ’ಗೆ ನೀಡಲಾಗುತ್ತದೆ. ಪ್ರತಿದಿನ ಶಾಲೆಗೆ ಹೋಗಲು ಹಲವು ಕಿಲೋಮೀಟರ್ ದೂರ ನಡೆದು ಹೋಗುವ ಬಾಲಕಿಯರಿಗೆ ಸೈಕಲ್ ಒದಗಿಸುವ ಮೂಲಕ ಅವರ ಶಿಕ್ಷಣ ಮುಂದುವರಿಸಲು ಸಹಾಯ ಮಾಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.

Chinthamani News: ಶಿಕ್ಷಣ, ಆರ್ಥಿಕತೆ, ರಾಜಕೀಯ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ನ್ಯಾಯಯುತ ಸ್ಥಾನಮಾನ ಕಲ್ಪಿಸುವ ಗುರಿ: ವಕೀಲ ಮುನೇಗೌಡ

ಯಾದವ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಘಟಿತ ಹೋರಾಟ

ಸಮುದಾಯದ ಮುಖಂಡರು ಹಾಗೂ ಪದಾಧಿಕಾರಿ ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖಂಡರನ್ನು ಭೇಟಿ ಮಾಡಿ ಸಂಘಟನೆಯ ಬಲವರ್ಧನೆ ಮತ್ತು ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಎಂಟು ತಾಲ್ಲೂಕುಗಳ ಮುಖಂಡರನ್ನು ಭೇಟಿ ಮಾಡಿದ್ದು, ಚಿಂತಾಮಣಿ ತಾಲ್ಲೂಕಿನ ಭೇಟಿ ಕೊನೆಯದಾಗಿದೆ

MP Dr K Sudhakar: ಒಂದೇ ದಿನ, ಒಂದೇ ಕ್ಷೇತ್ರದಲ್ಲಿ ಎರಡು ಬೃಹತ್ ಕಾರ್ಯಕ್ರಮ: ಜನರ ಒಲವು ಯಾರತ್ತ?

ಒಂದೇ ದಿನ, ಒಂದೇ ಕ್ಷೇತ್ರದಲ್ಲಿ ಎರಡು ಬೃಹತ್ ಕಾರ್ಯಕ್ರಮ

ಸಂಸದ ಡಾ.ಕೆ.ಸುಧಾಕರ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಬೃಹತ್ ವೇದಿಕೆಯಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಕೇಂದ್ರದಿಂದ ದೀಪಾವಳಿ ಗಿಫ್ಟ್;  ಕರ್ನಾಟಕಕ್ಕೆ 4,504 ಕೋಟಿ ರೂ. ತೆರಿಗೆ ಪಾಲು ಬಿಡುಗಡೆ

ಕೇಂದ್ರದಿಂದ ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು ಬಿಡುಗಡೆ

ಕೇಂದ್ರ ಸರ್ಕಾರ ಶನಿವಾರ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು 1,09,019 ಕೋಟಿ ರೂ. ಮೊತ್ತದ ಹೆಚ್ಚುವರಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂ. ಹಂಚಿಕೆಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಲ ಸಿಕ್ಕಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ.

ಇಂದಿನಿಂದಲೇ ನಂದಿನಿ ಹಾಲು- ಮೊಸರಿನ ಬೆಲೆ ಏರಿಕೆ; ಹೊಸ ದರಪಟ್ಟಿ ಇಲ್ಲಿದೆ ನೋಡಿ

ಇಂದಿನಿಂದಲೇ ನಂದಿನಿ ಹಾಲು- ಮೊಸರಿನ ಬೆಲೆ ಏರಿಕೆ

ರಾಜ್ಯದ ಜನತೆಗೆ ಇಂದಿನಿಂದಲೇ ದರ ಏರಿಕೆ ಬಿಸಿ ಮುಟ್ಟಲಿದ್ದು, ನವೆಂಬರ್ 1, 2026 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಟೋಲ್ಡ್‌ ಹಾಲು ಒಂದು ಲೀಟರ್‌ಗೆ ಸದ್ಯ 46 ರೂಪಾಯಿ ದರ ಇದೆ. ಆದ್ರೆ ಇಂದಿನಿಂದ 54 ರೂಪಾಯಿ ಆಗಲಿದೆ.

ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ; ಮಧ್ಯರಾತ್ರಿಯಿಂದಲೇ ಬೆಳಗಾವಿಯಲ್ಲಿ ಆಚರಣೆ ಶುರು

ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ

ರಾಜ್ಯದಾದ್ಯಂತ ಕನ್ನಡ ರಾಜ್ಯೋತ್ಸವವದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಆಚರಿಸಲಾಗುತ್ತಿದೆ. ಇಂದು ಸರ್ಕಾರಿ, ಖಾಸಗಿ ಕಚೇರಿ, ಸಂಘ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆದಿದ್ದು, ಅಲಂಕಾರ ನಡೆಸಲಾಗಿದೆ.

ಕಲಬುರಗಿಯಲ್ಲಿ ಹೊತ್ತಿ ಉರಿದ ಕಾರು: ನಾಲ್ವರು ಪಾರು

ಕಲಬುರಗಿಯಲ್ಲಿ ಹೊತ್ತಿ ಉರಿದ ಕಾರು: ನಾಲ್ವರು ಪಾರು

ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋದ ಘಟನೆ ಶನಿವಾರ ಸಂಜೆ ಚಿತ್ತಾಪುರ ತಾಲೂಕಿನ ನಾಲವಾರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಮಯಪ್ರಜ್ಞೆಯಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಲಿ, ಆದರೆ ಹೋರಾಟದ ಹೆಸರಿನಲ್ಲಿ ಜನರಿಗೆ ತೊಂದರೆಯಾಗದಿರಲಿ: ಸಣ್ಣಪುಟ್ಟ ವ್ಯಾಪಾರಿಗಳ ಅಳಲು

ಬಂದ್ ಹೆಸರಿನಲ್ಲಿ ನೊಂದ ಜನಸಾಮಾನ್ಯರು; ವ್ಯಾಪಾರಿಗಳ ಕಣ್ಣಲ್ಲಿ ಕಣ್ಣೀರು

ಕಬ್ಬಿನ ಬೆಂಬಲ ಬೆಲೆ ವಿಚಾರವಾಗಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಂದ್‌ನ ಪರಿಣಾಮ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ಬೀರಿದೆ. ದುಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾ ರಸ್ಥರು, ಹೋಟೆಲ್ ಮಾಲೀಕರು, ಆಟೋ ಚಾಲಕರು ಹಾಗೂ ದಿನಗೂಲಿ ಕಾರ್ಮಿಕರು ವ್ಯಾಪಾರ ವಿಲ್ಲದೆ ಪರದಾಡುವಂತಾಗಿದೆ.

ಡಾ. ಜಿ ಪರಮೇಶ್ವರ್ ಬೇಗ ಗುಣಮುಖರಾಗಿ , ಬಡವರ ಸೇವೆ ಮಾಡುವ ಶಕ್ತಿಯನ್ನು ಭಗವಾನ್ ಬುದ್ಧರು ನೀಡಲಿ

" ಭಗವಾನ್ ಬುದ್ಧ ವಂದನ " ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೇಮಲತಾ ಕೃಷ್ಣ ಸ್ವಾಮಿರವರು ಮುಖಂಡರಾದ ನಾಗರಾಜು, ಪ್ರಕಾಶ್, ಬೆಹಂಚಿ, ನಗರ ಸಭೆ ಮಾಜಿ ಸದಸ್ಯರು ಗಳಾದ ಶಿವಾನಂದ , ರವಿ ಮುಡುಗುಂಡ, ಸಮಾಜಕರಾದ ರಾಜೇಶ್ ಪ್ರಭಾರ ಪ್ರಾಂಶುಪಾಲರಾದ ಭಾಸ್ಕರ್ ದೈಹಿಕ ಶಿಕ್ಷಕರಾದ ನಟರಾಜು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.

Karnataka Rajyotsava 2026: ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ

Karnataka Rajyotsava 2026: ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ

ಈ ಬಾರಿ 71ನೇ ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಈ ಆಚರಣೆಯ ಮುಖ್ಯ ಉದ್ದೇಶ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಗೌರವಿಸುವುದು ಮತ್ತು ಎಲ್ಲಾ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವುದು. ಕರುನಾಡಿನ ಎಲ್ಲಾ 8 ಕೋಟಿ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು.

Kannada Pustaka Habba: ರಾಷ್ಟ್ರೋತ್ಥಾನ ಸಾಹಿತ್ಯದ 6ನೇ ಕನ್ನಡ ಪುಸ್ತಕ ಹಬ್ಬ ಉದ್ಘಾಟನೆ; 37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವ, ಪುಸ್ತಕಗಳ ಮೇಲೆ ಆಕರ್ಷಕ ರಿಯಾಯಿತಿ

ರಾಷ್ಟ್ರೋತ್ಥಾನ ಸಾಹಿತ್ಯದ 6ನೇ ಕನ್ನಡ ಪುಸ್ತಕ ಹಬ್ಬ ಉದ್ಘಾಟನೆ

ರಾಷ್ಟ್ರೋತ್ಥಾನ ಸಾಹಿತ್ಯವು ಬೆಂಗಳೂರಿನ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್‌ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಅಕ್ಟೋಬರ್ 31ರಿಂದ ಡಿಸೆಂಬರ್ 6ರ ವರೆಗೆ 37 ದಿನಗಳ ಕಾಲ ‘6ನೇ ಕನ್ನಡ ಪುಸ್ತಕ ಹಬ್ಬ–2026’ ಆಯೋಜಿಸಿದೆ. ಈ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಸೇರಿದಂತೆ ನಾಡಿನ ಪ್ರಮುಖ ಪ್ರಕಾಶನದ ಪುಸ್ತಕಗಳ ಮೇಲೆ ಶೇ 10 ರಿಂದ ಶೇ 60ರವರೆಗೆ ರಿಯಾಯಿತಿ ಇರುತ್ತದೆ.

ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ

ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ರಾಜ್ಯ ಸರ್ಕಾರ: ಬಿವೈವಿ

BY Vijayendra: ಹಾಲಿನ ಬೆಲೆಯನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ನೈಜ ಹೊರೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚಾಗಲಿದೆ. ಮೊಸರಿನ ದರವನ್ನೂ ಏರಿಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದೆ. ಬರಗಾಲದ ಸಂಕಷ್ಟದಲ್ಲಿರುವ ಜನರ ಮೇಲೆ ಇಂತಹ ಹೊರೆ ಹಾಕುವ ಅಗತ್ಯವೇನಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಪ್ರಕರಣದ ತನಿಖಾಧಿಕಾರಿ ಶೋಭಾ ಸೇರಿ ರಾಜ್ಯದ 7 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಮಂತ್ರಿಗಳ ದಕ್ಷತಾ ಪದಕ ಘೋಷಣೆ

ರಾಜ್ಯದ 7 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಮಂತ್ರಿಗಳ ದಕ್ಷತಾ ಪದಕ

Kendriya Grihmantri Dakshata Padak 2026: ಬೆಂಗಳೂರಿನ ಹಲಸೂರು ಗೇಟ್ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಶೋಭಾ ಎನ್, ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಾವುದ್ದೀನ್‌ ರುಕ್ಮುದ್ದೀನ್‌ ಗಡೇಕರ್‌ ಸೇರಿ ಏಳು ಪೊಲೀಸ್‌ ಅಧಿಕಾರಿಗಳು ಸಿಬ್ಬಂದಿಗೆ ಕೇಂದ್ರ ಗೃಹಮಂತ್ರಿಗಳ ದಕ್ಷತಾ ಪದಕ ಘೋಷಿಸಲಾಗಿದೆ.

ನ.1ರಂದು 'hmt ಕನ್ನಡಿಗ' ಕೈಗಡಿಯಾರಗಳ ಲೋಕಾರ್ಪಣೆ; ಕನ್ನಡ ಹೋರಾಟಗಾರರಿಗೆ ಆಹ್ವಾನ ಕೊಟ್ಟ ಎಚ್‌ಡಿಕೆ

ನವೆಂಬರ್‌ 1ರಂದು ʼhmt ಕನ್ನಡಿಗʼ ಕೈಗಡಿಯಾರಗಳ ಲೋಕಾರ್ಪಣೆ

HD Kumaraswamy: ಬೆಂಗಳೂರಿನಲ್ಲಿ ನ.1ರಂದು ಭಾನುವಾರ ಹಮ್ಮಿಕೊಳ್ಳಲಾಗಿರುವ 'hmt ಕನ್ನಡಿಗ' ಕೈಗಡಿಯಾರಗಳ ಲೋಕಾರ್ಪಣೆಗೆ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸುವ ಉದ್ದೇಶದಿಂದ ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಿಂದಲೇ ಕನ್ನಡಪರ ಹೋರಾಟಗಾರ ಸಭೆಯನ್ನು ಉದ್ದೇಶಿಸಿ ಆನ್‌ಲೈನ್ ವೇದಿಕೆಯ ಮೂಲಕ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನೀವೆಲ್ಲರೂ ಒಂದಾಗಬೇಕು ಎಂಬುದು ನನ್ನ ಕಳಕಳಿಯ ಮನವಿ ಎಂದು ತಿಳಿಸಿದ್ದಾರೆ.

ಮಂಡ್ಯ ARAI ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಈವರೆಗೂ ಜಮೀನು ಕೊಟ್ಟಿಲ್ಲ; ಕೇಂದ್ರ ಸಚಿವ ಎಚ್‌ಡಿಕೆ ಕಚೇರಿ ಸ್ಪಷ್ಟನೆ, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ

ಮಂಡ್ಯ ARAI ಘಟಕ ಸ್ಥಾಪನೆಗೆ ಈವರೆಗೂ ರಾಜ್ಯ ಸರ್ಕಾರ ಜಮೀನು ಕೊಟ್ಟಿಲ್ಲ

ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 100 ಎಕರೆ ಜಾಗವನ್ನು ARAI ಸಂಸ್ಥೆಗೆ ಈಗಾಗಲೇ ಭೂಮಿ ನೀಡಿರುವುದಾಗಿ ಸಚಿವ ಚಲುವರಾಯಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದಲ್ಲದೆ, ಸಾರ್ವಜನಿಕ ಸಭೆಯಲ್ಲಿಯೂ ಅದೇ ವಿಚಾರವನ್ನು ಪುನರುಚ್ಚರಿಸಿ ಈಗಾಗಲೇ 100 ಎಕರೆ ನೀಡಿದ್ದೇವೆ. ಇನ್ನೂ 500 ಎಕರೆ ಜಮೀನು ಬೇಕಾದರೂ ನೀಡುವುದಾಗಿ ಘೋಷಣೆ ಮಾಡಿರುತ್ತಾರೆ. ಸಚಿವರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಕಚೇರಿ ತಿಳಿಸಿದೆ.

ಮಧುಗಿರಿಯ ಎನ್‌ಎಚ್‌-69ರ ಅಪಘಾತ ವಲಯಕ್ಕೆ ಮುಕ್ತಿ; 29.94 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಕೇಂದ್ರದ ಅನುಮೋದನೆ

ಮಧುಗಿರಿಯ ಎನ್‌ಎಚ್‌-69ರ ಅಪಘಾತ ವಲಯಕ್ಕೆ ಮುಕ್ತಿ

KN Rajanna: ಮಧುಗಿರಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ನೃಪತುಂಗ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ-69ರಲ್ಲಿ 390 ಮೀಟರ್ ಉದ್ದದ ಅಪಘಾತ ವಲಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ₹29.94 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.

Actress Ranya Rao: ಹಾಸನಾಂಬೆ ದರ್ಶನ ಪಡೆದ ನಟಿ ರನ್ಯಾ ರಾವ್; ಚಿನ್ನ ಕಳ್ಳ ಸಾಗಣೆ ಆರೋಪಿಗೆ ವಿಐಪಿ ಪ್ರೋಟೋಕಾಲ್‌ ನೀಡಿದ್ದಕ್ಕೆ ಭಾರಿ ಟೀಕೆ

ಹಾಸನಾಂಬೆ ದೇಗುಲಕ್ಕೆ ನಟಿ ರನ್ಯಾ ರಾವ್ ಭೇಟಿ; ದರ್ಶನಕ್ಕೆ ವಿಐಪಿ ವ್ಯವಸ್ಥೆ!

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನವಾಗಿ, ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿ, ಅಧಿಕೃತ ಶಿಷ್ಟಾಚಾರದ ಸೌಲಭ್ಯ ಬಳಸಿಕೊಂಡು ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಮಾಡಿದ್ದಾರೆ. ಆರೋಪಿಗೆ ಪ್ರೊಟೋಕಾಲ್ ದರ್ಶನ ನೀಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Loading...