ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Ranjith Kumar Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್ ಖ್ಯಾತಿಯ ರಂಜಿತ್;‌ ಹುಡುಗಿ ಯಾರು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್ ಖ್ಯಾತಿಯ ರಂಜಿತ್

Ranjith Kumar Wedding: ದೊಡ್ಡಬಳ್ಳಾಪುರದ ಮುಖ್ಯರಸ್ತೆಯ ಹೊನ್ನೇನಹಳ್ಳಿಯಲ್ಲಿ ರಂಜಿತ್‌ ಮತ್ತು ಮಾನಸ ಗೌಡ ಅವರ ಮದುವೆ ಅದ್ಧೂರಿಯಾಗಿ ಶನಿವಾರ ನಡೆದಿದೆ. ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ತುಕಾಲಿ ಸಂತೋಷ್​ ಹಾಗೂ ಮಾನಸಾ ಸಂತೋಷ್ ದಂಪತಿ, ಲಾಯರ್ ಜಗದೀಶ್​, ಗೋಲ್ಡ್​ ಸುರೇಶ್, ಅನುಷಾ ರೈ, ಯಮುನಾ ಶ್ರೀನಿಧಿ ಮತ್ತಿತರರು ನವ ಜೋಡಿ ರಂಜಿತ್‌ ಮತ್ತು ಮಾನಸ ಗೌಡ ದಂಪತಿಗೆ ಶುಭ ಹಾರೈಸಿದ್ದಾರೆ.

Karnataka Weather: ನಾಳೆ ಬೆಂಗಳೂರು, ಮೈಸೂರು ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಗುಡುಗು ಸಹಿತ ಮಳೆ!

ನಾಳೆ ಬೆಂಗಳೂರು, ಮೈಸೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ!

Karnataka Weather: ಮುಂದಿನ 5 ದಿನಗಳವರೆಗೆ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಇಳಿಕೆಯ ಪ್ರವೃತ್ತಿಯೊಂದಿಗೆ ದೊಡ್ಡ ಬದಲಾವಣೆಗಳಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Operation sindoor: ರಜೆಗೆ ಬಂದಿದ್ದ ಹಾವೇರಿಯ ಇಬ್ಬರು ಯೋಧರು ಮರಳಿ ಕರ್ತವ್ಯಕ್ಕೆ

ರಜೆಗೆ ಬಂದಿದ್ದ ಹಾವೇರಿಯ ಇಬ್ಬರು ಯೋಧರು ಮರಳಿ ಕರ್ತವ್ಯಕ್ಕೆ

Operation sindoor: ಪಹಲ್ಗಾಮ್‌ ದಾಳಿ ಪ್ರತೀಕಾರವಾಗಿ ಉಗ್ರರ ನಿಗ್ರಹಕ್ಕೆ ಭಾರತೀಯ ಸೇನೆ, ಅಪರೇಷನ್ ಸಿಂದೂರ ಕಾರ್ಯಚರಣೆ ಕೈಗೊಂಡಿದೆ. ಹೀಗಾಗಿ ಭಾರತೀಯ ಸೇನೆಯಿಂದ ಕರೆಬಂದ ಹಿನ್ನಲೆಯಲ್ಲಿ ಹಾವೇರಿ ನಗರದ ಬಿಎಸ್‌ಎಫ್ ಯೋಧ ಶಶಾಂಕ್ ಹಾಗೂ ಸಿಆರ್‌ಪಿಎಫ್ ಯೋಧ ಸಂಜೀವ ಸಂಗೂರ ಕರ್ತವ್ಯಕ್ಕೆ ಮರಳಿದ್ದಾರೆ.

Fraud Case: ಬೆಂಗಳೂರು ವಿವಿ ರಿಜಿಸ್ಟ್ರಾರ್‌ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್‌ಗೆ 35 ಲಕ್ಷ ವಂಚನೆ; ಕೇಸ್‌ ದಾಖಲು

ಬೆಂಗಳೂರು ವಿವಿ ರಿಜಿಸ್ಟ್ರಾರ್‌ ಹುದ್ದೆ ಕೊಡಿಸುವುದಾಗಿ 35 ಲಕ್ಷ ವಂಚನೆ

Fraud Case: ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ನಿವೃತ್ತ ಪ್ರೊಫೆಸರ್ ಒಬ್ಬರಿಂದ 35 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ನಿವೃತ್ತ ಪ್ರೊಫೆಸರ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Car Accident: ಚನ್ನಪಟ್ಟಣದಲ್ಲಿ ಮರಕ್ಕೆ ಕಾರು ಡಿಕ್ಕಿ; ಒಬ್ಬ ಸಾವು, ನಾಲ್ವರು ಯುವಕರ ಸ್ಥಿತಿ ಗಂಭೀರ

ಚನ್ನಪಟ್ಟಣದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಒಬ್ಬ ಯುವಕ ಸಾವು

Car Accident: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪಾಂಡುಪುರ ಗ್ರಾಮದ ಸಮೀಪ ಅಪಘಾತ ನಡೆದಿದೆ. ಬೆಂಗಳೂರಿನಿಂದ ಕಬ್ಬಾಳು ದೇವಸ್ಥಾನಕ್ಕೆ ಐವರು ಸ್ನೇಹಿತರು ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

Operation sindoor: ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ: ಪ್ರಲ್ಹಾದ್‌ ಜೋಶಿ

ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ: ಜೋಶಿ

Operation sindoor: ಪಹಲ್ಗಾಮ್‌ ಉಗ್ರರ ದಾಳಿಯ ನಂತರ ಗುಳ್ಳೇನರಿ ಬುದ್ಧಿಯ ಪಾಕಿಸ್ತಾನಕ್ಕೆ ಪಾಠ ಕಲಿಸಲು ನಮ್ಮ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಅವಕಾಶ ನೀಡಿದೆ. ಅದರಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತಿಕಾರದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Gas Cylinder Blast: ಗ್ಯಾಸ್ ಸಿಲಿಂಡರ್ ಸ್ಫೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ

ಗ್ಯಾಸ್ ಸಿಲಿಂಡರ್ ಸ್ಫೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ

Gas Cylinder Blast: ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪಲ್ಲಿಯಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಗೃಹಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Operation Sindoor: 7 ದಿನದ ಮಗು, ಬಾಣಂತಿ ಹೆಂಡತಿಯನ್ನು ಬಿಟ್ಟು ದೇಶ ಸೇವೆಗೆ ತೆರಳಿದ ಕಲಬುರಗಿ ಯೋಧ!

7 ದಿನದ ಮಗು, ಬಾಣಂತಿ ಪತ್ನಿ ಬಿಟ್ಟು ದೇಶ ಸೇವೆಗೆ ತೆರಳಿದ ಕಲಬುರಗಿ ಯೋಧ!

Operation Sindoor: ವಾರದ ಹಿಂದಷ್ಟೇ ಕಲಬುರಗಿ ಮೂಲದ ಯೋಧರೊಬ್ಬರ ಪತ್ನಿಗೆ ಗಂಡು ಮಗು ಜನನವಾಗಿತ್ತು. ರಜೆ ಅವಧಿಯಲ್ಲಿ ಕೇವಲ 15 ದಿನ ಕಳೆದಿತ್ತು. ಆದರೆ, ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ತುರ್ತು ಸೇವೆಗೆ ಆಗಮಿಸುವಂತೆ ಭಾರತೀಯ ಸೇನೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದೇಶ ಸೇವೆಗೆ ಯೋಧ ಮರಳುತ್ತಿದ್ದಾರೆ.

Bomb Threat: ದಿಲ್ಲಿ- ಬೆಂಗಳೂರು ರೈಲಿಗೆ ಬಾಂಬ್‌ ಬೆದರಿಕೆ, ಆರೋಪಿ ಸೆರೆ

ದಿಲ್ಲಿ- ಬೆಂಗಳೂರು ರೈಲಿಗೆ ಬಾಂಬ್‌ ಬೆದರಿಕೆ, ಆರೋಪಿ ಸೆರೆ

ತಡರಾತ್ರಿ 1 ಗಂಟೆ ಸುಮಾರಿಗೆ ಬಾಂಬ್ ಬೆದರಿಕೆ (bomb threat) ಹಿನ್ನೆಲೆಯಲ್ಲಿ ವಾಡಿ ಪೊಲೀಸರು ರೈಲಿನಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ರಾತ್ರಿ 1:30ರವರೆಗೆ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಬಾಂಬ್ ಬೆದರಿಕೆ ಕರೆ ಹುಸಿ ಎಂಬುದು ದೃಢವಾಗಿದೆ.

Street dog attack: ಬೀದಿನಾಯಿಗಳ ದಾಳಿಗೆ ಗಜೇಂದ್ರಗಡದಲ್ಲಿ ಮಹಿಳೆ ಬಲಿ

ಬೀದಿನಾಯಿಗಳ ದಾಳಿಗೆ ಗಜೇಂದ್ರಗಡದಲ್ಲಿ ಮಹಿಳೆ ಬಲಿ

Street dog attack: ಹೂವು ತರಲು ಹೋಗಿದ್ದಾಗ ಪ್ರೇಮವ್ವ ಮೇಲೆ ಬೀದಿನಾಯಿಗಳು ಗುಂಪಾಗಿ ದಾಳಿ ಮಾಡಿದ್ದು, ತೀವ್ರವಾಗಿ ಘಾಸಿಗೊಳಿಸಿದ್ದವು. ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಪ್ರೇಮವ್ವ ಸಾವನ್ನಪ್ಪಿದ್ದಾರೆ. ಗಜೇಂದ್ರಗಡ (Gadag news) ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Karnataka Monsoon: ಗುಡ್‌ ನ್ಯೂಸ್‌, ತುಸು ಮೊದಲೇ ಬರಲಿದೆ ಮಾನ್ಸೂನ್‌

ಗುಡ್‌ ನ್ಯೂಸ್‌, ತುಸು ಮೊದಲೇ ಬರಲಿದೆ ಮಾನ್ಸೂನ್‌

Monsoon news: ಉಪಗ್ರಹ ಚಿತ್ರಗಳು ಈಗಾಗಲೇ ಅಂಡಮಾನ್ ಸಮುದ್ರ ಮತ್ತು ಕೇರಳ ಪ್ರದೇಶದ ಸುತ್ತಲೂ ದಟ್ಟವಾದ ಮೋಡ ಕವಿದಿರುವುದನ್ನು ಸೂಚಿಸಿವೆ. ಮೇ 13ರ ಸುಮಾರಿಗೆ ಅಂಡಮಾನ್ ಸಮುದ್ರ, ಬಂಗಾಳಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಆರಂಭ ಸಂಭವಿಸಬಹುದು.

Dr Ayyappan: ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ

ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ

‌ಕೃಷಿ ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್‌ ಅವರು ನದಿಯಲ್ಲಿ ಕಾಲು ಜಾರಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಸಂಬಂಧಿ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Karnataka Rains: ಇಂದಿನ ಹವಾಮಾನ; ಬೆಂಗಳೂರು, ಚಿಕ್ಕಮಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ

ಇಂದು ಬೆಂಗಳೂರು, ಚಿಕ್ಕಮಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಗಾಳಿಯೂ ಬೀಸುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33°C ಮತ್ತು 22°C ಇರುವ ಸಾಧ್ಯತೆ ಇದೆ.

Operation Sindoor: ಆಪರೇಷನ್ ಸಿಂದೂರ: ರಾಷ್ಟ್ರಕ್ಕೆ ರಣವೀಳ್ಯೆಯ ಮುಹೂರ್ತ

ಆಪರೇಷನ್ ಸಿಂದೂರ: ರಾಷ್ಟ್ರಕ್ಕೆ ರಣವೀಳ್ಯೆಯ ಮುಹೂರ್ತ

ಪಾಕಿಸ್ತಾನ ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ ಮೇಳೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಯನ್ನು ಧ್ವಂಸ ಮಾಡಿದೆ. ಈ ಕಾರ್ಯಾಚರಣೆಗೆ ಆಪರೇಷನ್‌ ಸಿಂದೂರ ಎಂದು ಹೆಸರಿಡಲಾಗಿದೆ. ಈ ಕಾರ್ಯಾಚರಣೆಯ ಮಹತ್ವವನ್ನು ತುಮಕೂರು ಜಿಲ್ಲೆಯ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಅವರು ವಿವರಿಸಿದ್ದಾರೆ.

DCET-2025: ಡಿಸಿಇಟಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ 13ರವರೆಗೆ ವಿಸ್ತರಣೆ

ಡಿಸಿಇಟಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ 13ರವರೆಗೆ ವಿಸ್ತರಣೆ

DCET-2025: ಡಿಸಿಇಟಿ-25ಗೆ ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ಕೊನೆಯ ದಿನಾಂಕವನ್ನು ಮೇ 13ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಮಂಗಳವಾರ ಬೆಳಗ್ಗೆ 11ರವರೆಗೆ ಅರ್ಜಿ ಸಲ್ಲಿಸಿ, ಅಂದೇ ಸಂಜೆ 6 ಗಂಟೆ ಒಳಗೆ ಶುಲ್ಕ ಪಾವತಿಸಬೇಕು.

ಮಗೇಶ್ವರಿ: ತನ್ನ ಜೀವನ ಮತ್ತು ಅಮೆಜಾನ್ ನಲ್ಲಿ ವೃತ್ತಿಯನ್ನು ಮರು ನಿರ್ಮಿಸಿಕೊಂಡ ತಾಯಿಯ ಯಶೋಗಾಥೆ

ವೃತ್ತಿಯನ್ನು ಮರು ನಿರ್ಮಿಸಿಕೊಂಡ ತಾಯಿಯ ಯಶೋಗಾಥೆ

ಏಪ್ರಿಲ್ 2020ರಲ್ಲಿ ಅವರು ಚೆನ್ನೈನ ಅಮೆಜಾನ್ ನಲ್ಲಿ ಅಸೋಸಿಯೇಟ್ ಆಗಿ ಸೇರಿಕೊಂಡರು. ಆರ್ಥಿಕ ಭದ್ರತೆಯ ಹೆಜ್ಜೆಯಾಗಿ ಪ್ರಾರಂಭವಾದ ಈ ಕೆಲಸ ಉದ್ದೇಶ, ವೃತ್ತಿಯ ಪ್ರಗತಿ ಮತ್ತು ಸಬಲೀಕರಣದ ಮೂಲವಾಗಿ ಹೊರಹೊಮ್ಮಿತು. ಅವರು ವೈಯಕ್ತಿಕ ಮತ್ತು ವೃತ್ತಿಪರ ಪರಿವರ್ತ ನೆಯ ಪ್ರಯಾಣವನ್ನು ಕೈಗೊಂಡು ಅಸೋಸಿಯೇಟ್ ನಿಂದ ಸಮಸ್ಯೆ ನಿವಾರಿಸುವವರಾಗಿ ಮತ್ತು 2024ರಲ್ಲಿ ಪ್ರೊಸೆಸ್ ಅಸಿ ಸ್ಟೆಂಟ್ ಪೂರ್ಣಕಾಲಿಕ ಜವಾಬ್ದಾರಿ ತೆಗೆದುಕೊಂಡರು

Bengaluru News: ಕೌಶಲ್ಯಯುತ ನೈತಿಕ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ: ನ್ಯಾಯಮೂರ್ತಿ ಇಂದ್ರೇಶ್

ಕೌಶಲ್ಯಯುತ ನೈತಿಕ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ

ಎಪಿಎಸ್ಸಿಇ ಹಳೆಯ ವಿದ್ಯಾರ್ಥಿ ಹಾಗೂ ಒರಾಕಲ್ ಸಂಸ್ಥೆಯ ಪ್ರಧಾನ ಕ್ಯೂಎ ಎಂಜೆನಿಯರ್ ಶ್ರೀಧರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂತಸದ ಕಲಿಕೆ ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನತ್ತ ಆಸಕ್ತಿ ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು

ಎರಡನೇ ಆವೃತ್ತಿಯ "ಹ್ಯಾಪಿಯೆಸ್ಟ್ ಹರ್ 2025" ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ ಹ್ಯಾಪಿಯೆಸ್ಟ್ ಹೆಲ್ತ್

ಎರಡನೇ ಆವೃತ್ತಿಯ "ಹ್ಯಾಪಿಯೆಸ್ಟ್ ಹರ್ 2025" ಸಮಾವೇಶ

ಮಾವೇಶವನ್ನು ಹ್ಯಾಪಿಯೆಸ್ಟ್ ಹೆಲ್ತ್‌ ನ ಕೋ- ಚೇರ್ ಮನ್ ಡೇವಿಸ್ ಕರೆಡನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಮ್ಹಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹ್ಯಾಪಿ ಯೆಸ್ಟ್ ಹೆಲ್ತ್ - ನಾಲೆಡ್ಜ್‌ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘು ಕೃಷ್ಣನ್, ಮತ್ತು ಹ್ಯಾಪಿಯೆಸ್ಟ್ ಹೆಲ್ತ್ - ನಾಲೆಡ್ಜ್‌ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ ಜೋಶಿ ಮತ್ತು 250ಕ್ಕೂ ಮಂದಿ ಉಪಸ್ಥಿತರಿದ್ದರು

Kiccha Sudeep: ಪ್ರಧಾನಿ ಮೋದಿಗೆ ನಟ ಸುದೀಪ್‌ ಪತ್ರ; ʼಆಪರೇಷನ್‌ ಸಿಂದೂರʼ ಕುರಿತು ಮೆಚ್ಚುಗೆ

ಪ್ರಧಾನಿ ಮೋದಿಗೆ ಸುದೀಪ್‌ ಪತ್ರ; ʼಆಪರೇಷನ್‌ ಸಿಂದೂರʼ ಬಗ್ಗೆ ಮೆಚ್ಚುಗೆ

Kiccha Sudeep: ಇಡೀ ಕನ್ನಡ ಚಲನಚಿತ್ರೋದ್ಯಮ ಸೇರಿ ಕನ್ನಡಿಗರು ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲಾ ಒಂದು, ಒಂದು ಧ್ವನಿ, ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಂತಿದ್ದೇವೆ ಎಂದು ಪ್ರಧಾನಿ ಮೋದಿ ಅವರಿಗೆ ಸುದೀಪ್‌ ತಿಳಿಸಿದ್ದಾರೆ.

Shivaraj Tangadagi: ಭಾರತೀಯ ಸೈನಿಕರ ಶಕ್ತಿ ಎದುರು ಪಾಕ್ ಲೆಕ್ಕಕ್ಕಿಲ್ಲ: ಶಿವರಾಜ್ ತಂಗಡಗಿ

ಭಾರತೀಯ ಸೈನಿಕರ ಶಕ್ತಿ ಎದುರು ಪಾಕ್ ಲೆಕ್ಕಕ್ಕಿಲ್ಲ: ಶಿವರಾಜ್ ತಂಗಡಗಿ

Shivaraj Tangadagi: ಭಾರತೀಯ ಸೈನಿಕರ ಶಕ್ತಿಯ ಎದುರಿಗೆ ಪಾಕಿಸ್ತಾನ ಲೆಕ್ಕಕ್ಕಿಲ್ಲ. ಭಾರತ ಗಟ್ಟಿಯಾಗಿ ನಾಲ್ಕು ದಿನ ಯುದ್ಧ ಮಾಡಿದರೆ ಪಾಕಿಸ್ತಾನ ವಿಶ್ವದ ಭೂಪಟದಲ್ಲೇ ಇರಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Laxmi Hebbalkar: ಅವಿಭಜಿತ ದ.ಕ.ಜಿಲ್ಲೆಯ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ಮಾದರಿ- ಲಕ್ಷ್ಮೀ ಹೆಬ್ಬಾಳ್ಕರ್

ಎಸ್‌ಡಿಎಂ ಆಯುರ್ವೇದ ಕಾಲೇಜಿನ ವಿವಿಧ ಸೌಲಭ್ಯಗಳ ಉದ್ಘಾಟಿಸಿದ ಹೆಬ್ಬಾಳ್ಕರ್‌

Laxmi Hebbalkar: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆಯುರ್ವೇದಕ್ಕೆ 5 ಸಾವಿರ ವರ್ಷಗಳಷ್ಟು ಇತಿಹಾಸವಿದ್ದು, ಆಯುರ್ವೇದ ಚಿಕಿತ್ಸೆಯನ್ನು ಇಡೀ ದೇಶವೇ ಒಪ್ಪಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Vijayapura News: ಆಟವಾಡುತ್ತಿದ್ದ ವೇಳೆ ತೆರೆದ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಆಟವಾಡುತ್ತಿದ್ದ ವೇಳೆ ತೆರೆದ ಬಾವಿಗೆ ಬಿದ್ದು ಮಗು ಸಾವು

Vijayapura News: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಸ್ಥಳೀಯರು ಬಾವಿಯಲ್ಲಿ ಇಳಿದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karnataka Weather: ನಾಳೆ ಬೆಂಗಳೂರು, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ನಾಳೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಗಾಳಿಯೂ ಬೀಸುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33°C ಮತ್ತು 22°C ಇರುವ ಸಾಧ್ಯತೆ ಇದೆ.

Suhas Shetty Murder Case: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ; ರಾಜ್ಯ ಬಿಜೆಪಿಯಿಂದ NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ

ಸುಹಾಸ್‌ ಶೆಟ್ಟಿ ಕೊಲೆ; ಬಿಜೆಪಿಯಿಂದ NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ

ಇತ್ತೀಚಿಗೆ ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ (Suhas Shetty) ಕೊಲೆ ನಡೆದಿತ್ತು ಪ್ರಕರಣದ ಬಗೆಗಿನ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ((NIA) ವಹಿಸಬೇಕಾಗಿ ರಾಜ್ಯ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ ಬಿಜೆಪಿಯ ಹಲವು ನಾಯಕರು ಈ ಕೃತ್ಯದ ಹಿಂದೆ ಪಿಎಫ್ಐ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.