ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಕರ್ನಾಟಕದಲ್ಲಿ ಮುರುಸು ಎಫೆಕ್ಟ್‌; ಹಲವು ಜಿಲ್ಲೆಗಳಲ್ಲಿ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

ಕರ್ನಾಟಕದಲ್ಲಿ ಮುರುಸು ಎಫೆಕ್ಟ್‌; ಹಲವು ಜಿಲ್ಲೆಗಳಲ್ಲಿ ಮಳೆ

ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿರುವ ‘ಮುರುಸು’ ಚಂಡಮಾರುತವು ಆಂಧ್ರಪ್ರದೇಶ ಕರಾವಳಿಯತ್ತ ಮುನ್ನಡೆಯುತ್ತಿದ್ದು, ಇದರ ಪ್ರಭಾವದಿಂದಾಗಿ ಇಂದು (ನವೆಂಬರ್ 3) ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್‌ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿ

ಇಂಡೋ-ಇಟಾಲಿಯನ್ ಎಲಿವೇಟರ್ ತಂತ್ರಜ್ಞಾನ ಸಹಭಾಗಿತ್ವ ಮತ್ತಷ್ಟು ಬಲಿಷ್ಠ

ಸುಮಾರು 10-12 ವರ್ಷಗಳ ಹಿಂದೆಯೇ ಇಟಲಿಯ ಹೈಡ್ರೋನಿಕ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ್ದ 'ಕ್ರಿಯೇಟಿವ್ ಡಿವೈಸಸ್' ಹಾಗೂ 'ಎಲಿವೇಟರ್ ಟ್ರೇಡ್ ಸೆಂಟರ್', ಈಗ ಅಲ್ಲಿನ ನೂತನ ಉತ್ಪಾದನಾ ಘಟಕ ಹಾಗೂ ಟೆಸ್ಟಿಂಗ್ ಟವರ್, ಆರ್ ಅಂಡ್ ಡಿ ವಿಭಾಗಕ್ಕೆ ಭೇಟಿ ನೀಡಿ ಹೊಸ ಆವಿಷ್ಕಾರಗಳನ್ನು ಭಾರತಕ್ಕೆ ತರುವ ಕುರಿತು ಚರ್ಚಿಸಿವೆ.

Kannada Sahithya Sammelana: ಚಿಂತಾಮಣಿಯಲ್ಲಿ ನ.19, 20 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಶಾಸಕ ಡಾ.ಎಂ.ಸಿ.ಸುಧಾಕರ್ ಘೋಷಣೆ

ನ.19, 20 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ವಿವಿಧ ಭಾಷಾವಾರು ಪ್ರಾಂತ್ಯಗಳು,ವಿವಿಧ ಸಂಸ್ಕೃತಿಯ ವೈವಿಧ್ಯಮಯ ಆಚರಣೆಯನ್ನು ದೇಶದಲ್ಲಿ ಕಾಣಬಹುದು. ಆಯಾ ಪ್ರಾಂತ್ಯದ ಭಾಷೆಯ ಬಗ್ಗೆ ಅಭಿಮಾನ ಮತ್ತು ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನದ ಜತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಭಾಷೆಯ ಮೂಲಕ ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ

ಕಾರು-ದ್ವಿಚಕ್ರ ವಾಹನ ನಡುವೆ ಡಿಕ್ಕಿ:ಬೈಕ್ ಸವಾರನಿಗೆ ಗಾಯ

ಕಾರು-ದ್ವಿಚಕ್ರ ವಾಹನ ನಡುವೆ ಡಿಕ್ಕಿ:ಬೈಕ್ ಸವಾರನಿಗೆ ಗಾಯ

ಆಂಧ್ರ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಚಿನ್ನಸಂದ್ರ ಕಡೆಯಿಂದ ಹಾದಿಗೆರೆ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಚಿಂತಾಮಣಿ ತಾಲೂಕಿನ ಹಾದಿಗೆರೆ ಗ್ರಾಮದ ಶಿವಪ್ಪ(49)ಎಂಬುವರಿಗೆ ಗಾಯಗಳಾಗಿದ್ದು ಕಾರಿನಲ್ಲಿದ್ದ ಕೆಲ ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಏಕತೆ, ಸಮಗ್ರತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆ: ಜಿಲ್ಲಾಧಿಕಾರಿ ಜಿ. ಪ್ರಭು

ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಸ್ವೀಕಾರ

ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಎಲ್ಲರೂ ಪರಸ್ಪರ ಸಹಬಾಳ್ವೆ, ಸಹಕಾರ ಮತ್ತು ಸೌಹಾರ್ದತೆಯಿಂದ ಬದುಕುವುದು ಅಗತ್ಯವಾಗಿದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಕಾಪಾಡುವ ಮೂಲಕ ಬಲಿಷ್ಠ ಹಾಗೂ ಸುರಕ್ಷಿತ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ರಾಷ್ಟ್ರೀಯ ಏಕತಾ ದಿನ ಸಾರುತ್ತದೆ

Chikkaballapur News: ವಿದ್ಯಾರ್ಥಿಗಳಲ್ಲಿ ಸಂಸದೀಯ ಮೌಲ್ಯ, ನಾಯಕತ್ವ ಗುಣ ಬೆಳೆಸಲು ಅಣಕು ಯುವ ಸಂಸತ್ ಸಹಕಾರಿ: ನ್ಯಾ. ರಾಮಲಿಂಗೇಗೌಡ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಅಣಕು ಯುವ ಸಂಸತ್ ಸಹಕಾರಿ

ಇಂದಿನ ಯುವಜನತೆಯೇ ನಾಳಿನ ದೇಶದ ಶಿಲ್ಪಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ ಗಳ ಜವಾಬ್ದಾರಿ, ಸಂಸತ್ತಿನ ಕಲಾಪಗಳು, ಕಾನೂನುಗಳ ರಚನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯುವ ವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಇಂತಹ ಅಣಕು ಸಂಸತ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ರೂಪು ಗೊಳ್ಳಲು ಸಾಧ್ಯವಾಗುತ್ತದೆ

Chikkaballapur News: ಎಸ್‌ಎನ್‌ಎಫ್ ಗುಣಮಟ್ಟದ ಆಧಾರದಲ್ಲಿ ದರ ನಿಗದಿಪಡಿಸುವುದನ್ನು ಕೈಬಿಡಿ; ಚಿಮುಲ್ ತಕ್ಷಣ ದರಪಟ್ಟಿ ಪ್ರಕಟಿಸಲಿ

ಹೆಚ್ಚುವರಿ ಹಾಲಿನ ಬೆಂಬಲ ಬೆಲೆ ರೈತರ ಖಾತೆಗೆ ನೇರ ಪಾವತಿಸಿ: ರೈತಸಂಘ ಆಗ್ರಹ

ಸರ್ಕಾರ ಘೋಷಿಸಿರುವ ಹೆಚ್ಚುವರಿ ಬೆಂಬಲ ಬೆಲೆಯ ಪ್ರಯೋಜನವನ್ನು ರೈತರಿಗೆ ಸಂಪೂರ್ಣ ವಾಗಿ ತಲುಪಿಸಬೇಕು. ಎಸ್‌ಎನ್‌ಎಫ್ ಗುಣಮಟ್ಟದ ಆಧಾರದಲ್ಲಿ ದರ ನಿಗದಿಪಡಿಸುವ ಪ್ರಸ್ತಾವನೆ ಯನ್ನು ಕೈಬಿಟ್ಟು, ಹೆಚ್ಚುವರಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು. ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಹೈನುಗಾರರಿಗೆ ತಕ್ಷಣ ಆರ್ಥಿಕ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು

ಜವಳಿ ರಫ್ತಿಗೆ ಜಾಗತಿಕ ಮಾರುಕಟ್ಟೆ ಬಳಸಿಕೊಳ್ಳಿ: ಜಿಲ್ಲಾಧಿಕಾರಿ ಜಿ. ಪ್ರಭು

ಜವಳಿ ರಫ್ತಿಗೆ ಜಾಗತಿಕ ಮಾರುಕಟ್ಟೆ ಬಳಸಿಕೊಳ್ಳಿ

ಜವಳಿ ಕ್ಷೇತ್ರದಲ್ಲಿ ದೇಶದ ರಫ್ತು ವಹಿವಾಟು ಪ್ರಸ್ತುತ 3.6 ಬಿಲಿಯನ್ ಅಮೆರಿಕನ್ ಡಾಲರ್‌ ನಷ್ಟಿದ್ದು, 2030ರ ವೇಳೆಗೆ 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಸ್ಥಳೀಯ ಉದ್ಯಮಿಗಳು, ನೇಕಾರರು ಹಾಗೂ ಜವಳಿ ಉತ್ಪಾದಕರು ರಫ್ತು ಪ್ರಕ್ರಿಯೆ, ವಿದೇಶಿ ಮಾರುಕಟ್ಟೆ ಮತ್ತು ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಸಮಗ್ರ ಅರಿವು ಪಡೆದುಕೊಳ್ಳಬೇಕು.

Byrati Suresh: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಸಾರಿಗೆ ಸಚಿವ ಬೈರತಿ ಸುರೇಶ್

ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ

ನಿರಂತರ ವೆಚ್ಚದ ಹೆಚ್ಚಳದಿಂದ ಸಂಸ್ಥೆಗಳಿಗೆ ನಷ್ಟವಾಗುತ್ತಿದ್ದು, ಅನಿವಾರ್ಯವಾಗಿ ಟಿಕೆಟ್ ದರ ಪರಿಷ್ಕರಣೆಗೆ ಮುಂದಾಗಬೇಕಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರ ಟಿಕೆಟ್ ಮೊತ್ತದ ಶೇ 100ರಷ್ಟು ಹಣವನ್ನು ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಕಾಲಕಾಲಕ್ಕೆ ಮರುಪಾವತಿಸುತ್ತಿದೆ.

Sting operation case: ಸ್ಟಿಂಗ್ ಪ್ರಕರಣದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಗಿಸೋದಾಗಿ ಪಿಎಂ ಮೋದಿಗೆ ಕುಮಾರಸ್ವಾಮಿ ಆಶ್ವಾಸನೆ: ಎಂ. ಲಕ್ಷ್ಮಣ್

ಸ್ಟಿಂಗ್ ಕೇಸ್‌ ಮೂಲಕ ಕಾಂಗ್ರೆಸ್ ಸರ್ಕಾರ ಮುಗಿಸಲು ಕುಮಾರಸ್ವಾಮಿ ಪ್ಲ್ಯಾನ್‌

ಎಚ್‌.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸ್ಟಿಂಗ್ ವಿಚಾರವನ್ನು ಪ್ರಧಾನಿ ಮೋದಿ ಅವರಿಗೆ ಹೇಳಿದ್ದಾರೆ. ಇದೊಂದು ಸ್ಟಿಂಗ್ ಪ್ರಕರಣದಿಂದ 2028ರಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚಿಸುತ್ತೇವೆ ಎಂಬ ಆಶ್ವಾಸನೆ ನೀಡಿರುವುದಾಗಿ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಸ್ಟಿಂಗ್ ವಿಡಿಯೊದಲ್ಲಿರುವ ಕೇರಳ ಮಹಿಳೆ ಸಿದ್ದರಾಮಯ್ಯ ವಿರುದ್ಧದ ಪಿತೂರಿಯ ಭಾಗ: ಎಚ್.ಡಿ. ಕುಮಾರಸ್ವಾಮಿ

ಸ್ಟಿಂಗ್ ವಿಡಿಯೊದಲ್ಲಿರುವ ಮಹಿಳೆ ಸಿದ್ದು ವಿರುದ್ಧದ ಪಿತೂರಿಯ ಭಾಗ

HD Kumaraswamy: ಸ್ಟಿಂಗ್ ಆಪರೇಷನ್ ವಿಡಿಯೊ ಅಸಲಿಯೇ ಅಥವಾ ಕೃತಕವಾಗಿ ಸೃಷ್ಟಿಸಿದ್ದೇ ಎಂಬುದನ್ನು ಹಾಗೂ ಅದನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಲಾಗಿದೆಯೇ ಅಥವಾ ವ್ಯವಸ್ಥಿತವಾಗಿ ರೂಪಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ತಮ್ಮ ಹೊಣೆಗಾರಿಕೆಯನ್ನು ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆಯೇ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಡವರ ಮೇಲೆ ಹಾಲಿನ ದರ ಏರಿಕೆ ಹೊರೆ ಹೇರುವುದು ಸರಿಯಲ್ಲ: ಸಂಸದ ಡಾ.ಕೆ.ಸುಧಾಕರ್

ರೈತರಿಗೆ 10 ಹೆಚ್ಚುವರಿ ಸಹಾಯಧನ ನೀಡಿ, ಸರ್ಕಾರವೇ ಹೊಣೆ ಹೊರಲಿ

ರೈತರಿಗೆ ಹೆಚ್ಚಿನ ಬೆಲೆ ನೀಡುವ ನಿಜವಾದ ಕಾಳಜಿ ಸರ್ಕಾರಕ್ಕಿದ್ದರೆ ರಾಜ್ಯದ ಬೊಕ್ಕಸದಿಂದಲೇ ಪ್ರತಿ ಲೀಟರ್ ಹಾಲಿಗೆ 10 ಸಹಾಯಧನ ನೀಡಲಿ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವುದರ ಜತೆಗೆ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ಸಿಗಲಿದೆ. ರೈತರು ಮತ್ತು ಗ್ರಾಹಕರಿಬ್ಬರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯ

ಕರ್ನಾಟಕ ಸೇರಿ 3 ರಾಜ್ಯಗಳ 13 ಲಕ್ಷ ಮಹಿಳೆಯರಿಗೆ ಅಯೋಡಿನ್ ಪಾಠ: ಶೇ.37ರಷ್ಟು ಅರಿವು ಹೆಚ್ಚಳ

ಕರ್ನಾಟಕ ಸೇರಿ 3 ರಾಜ್ಯಗಳ 13 ಲಕ್ಷ ಮಹಿಳೆಯರಿಗೆ ಅಯೋಡಿನ್ ಪಾಠ

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 32 ಜಿಲ್ಲೆಗಳಲ್ಲಿ ಸತತ ಎರಡು ವರ್ಷಗಳ ಕಾಲ ನಡೆದ ಈ ಬೃಹತ್ ಜಾಗೃತಿ ಅಭಿಯಾನದ ವರದಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ. ವರದಿಯ ಪ್ರಕಾರ, ಈ ಕಾರ್ಯಕ್ರಮದಿಂದಾಗಿ ಜನರ ಒಟ್ಟಾರೆ ಅಯೋಡಿನ್ ಜ್ಞಾನದಲ್ಲಿ ಶೇ. 37ರಷ್ಟು ಹಾಗೂ ಮೂಲ ಅರಿವಿನಲ್ಲಿ ಶೇ. 26ರಷ್ಟು ಗಣನೀಯ ಏರಿಕೆಯಾಗಿದೆ.

Nandini curd price hike: ಜನಾಕ್ರೋಶದ ಬೆನ್ನಲ್ಲೇ ನಂದಿನಿ ಮೊಸರಿನ ಬೆಲೆ ಇಳಿಕೆಗೆ ಸಿಎಂ ಸೂಚನೆ

ಜನಾಕ್ರೋಶದ ಬೆನ್ನಲ್ಲೇ ನಂದಿನಿ ಮೊಸರಿನ ಬೆಲೆ ಇಳಿಸಲು ಸಿಎಂ ಸೂಚನೆ

ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ 7 ರೂಪಾಯಿ, ಹಾಲು ಒಕ್ಕೂಟಗಳಿಗೆ 1 ರೂಪಾಯಿ ಸಿಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಹೊಸ ದರ ನ.1ರಿಂದ ಜಾರಿಗೆ ಬಂದಿದೆ. ಆದರೆ, ಕೆಎಂಎಫ್​ ನಂದಿನಿ ಹಾಲಿನ ವಿವಿಧ ಪ್ಯಾಕೆಟ್‌ಗಳಿಗೆ ಬೇರೆ ಬೇರೆ ದರ ಫಿಕ್ಸ್‌ ಮಾಡಿರುವುದು ಕಂಡುಬಂದಿದೆ. ಅಲ್ಲದೆ ಮೊಸರಿನ ಬೆಲೆಯಲ್ಲೂ ಭಾರಿ ಏರಿಕೆ ಮಾಡಿರುವ ಹಿನ್ನೆಲೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಜ್ವಲ್‌ ರೇವಣ್ಣ ಕಾರು ಚಾಲಕ ಡಿಕೆಶಿ ಮನೆಗೆ ಹೋಗಿದ್ದೇಕೆ?, ಅವರ ವಿರುದ್ಧ ತನಿಖೆ ಯಾಕೆ ನಡೆದಿಲ್ಲ: ಎಚ್‌ಡಿಕೆ ಪ್ರಶ್ನೆ

ಪ್ರಜ್ವಲ್‌ ರೇವಣ್ಣ ಕಾರು ಚಾಲಕ ಡಿಕೆಶಿ ಮನೆಗೆ ಹೋಗಿದ್ದೇಕೆ?: ಎಚ್‌ಡಿಕೆ

ಪ್ರಜ್ವಲ್ ಪೆನ್‌ಡ್ರೈವ್‌ ಅನ್ನು ನಾನೇ ಹಂಚಿದ್ದು ಅಂತ ಆರೋಪಿಸಿದ್ದಾರೆ. ಆದರೆ ಪೆನ್‌ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್‌ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಡಿ.ಕೆ. ಶಿವಕುಮಾರ್​​ ಷಡ್ಯಂತ್ರ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಚಂಡಮಾರುತ ಪೀಡಿತ ಆಂಧ್ರ ಪ್ರದೇಶಕ್ಕೆ ಕರ್ನಾಟಕ ಸರ್ಕಾರ ನೆರವಿನ ಹಸ್ತ; ವಿದ್ಯುತ್ ಮೂಲಸೌಕರ್ಯ ಮರುಸ್ಥಾಪನೆಗೆ ಸಹಾಯ

ಚಂಡಮಾರುತ ಪೀಡಿತ ಆಂಧ್ರ ಪ್ರದೇಶಕ್ಕೆ ಕರ್ನಾಟಕ ಸರ್ಕಾರ ನೆರವಿನ ಹಸ್ತ

CM DK Shivakumar: ವಿದ್ಯುತ್ ಅತ್ಯಗತ್ಯ ಸೇವೆಯಾಗಿದ್ದು, ವಿಕೋಪಕ್ಕೆ ಸಿಲುಕಿದ ಜನರ ಕ್ಷೇಮಕ್ಕಾಗಿ ಅದನ್ನು ತಕ್ಷಣ ಮರುಸ್ಥಾಪಿಸುವುದು ತುರ್ತು ಅಗತ್ಯವಾಗಿದೆ. ಕಷ್ಟದ ಸಮಯದಲ್ಲಿ ಕರ್ನಾಟಕವು ಆಂಧ್ರಪ್ರದೇಶದ ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ; ಮಹತ್ವದ ಚರ್ಚೆ

ದೆಹಲಿಯಲ್ಲಿ ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ

ಎಸ್‌ಐಆರ್‌ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ನವೆಂಬರ್ 1ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತೆರಳಿದ್ದರು. ಇದಾದ ಬಳಿಕ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಹುಲ್‌ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Haveri News: ನಿವೇಶನ, ಕೃಷಿ ಭೂಮಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹ; ಹಾವೇರಿಯ ಡಿಸಿ ಕಚೇರಿ ಎದುರು ವಿವಿಧ ಗ್ರಾಮಸ್ಥರ ಪ್ರತಿಭಟನೆ

ಹಾವೇರಿಯಲ್ಲಿ ನಿವೇಶನ, ಕೃಷಿ ಭೂಮಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹ

Haveri News: ನಿವೇಶನ ಹಾಗೂ ಕೃಷಿ ಭೂಮಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ, ರಾಣೆಬೆನ್ನೂರು ತಾಲೂಕಿನ ನೂರಾರು ಬಡ ಕುಟುಂಬಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸಮೇತ ಧರಣಿ ನಡೆಸಿದರು. ಈ ವೇಳೆ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Sting Operation: ಸ್ಟಿಂಗ್‌ ಆಪರೇಷನ್‌ ಪ್ರಕರಣ; ಕಾಂಗ್ರೆಸ್‌ ನಾಯಕಿ ಕೃಪಾ ಆಳ್ವಾ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು

ಸ್ಟಿಂಗ್‌ ಆಪರೇಷನ್‌; ಕೃಪಾ ಆಳ್ವಾ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು

Kripa Alva: ಸ್ಟಿಂಗ್ ಆಪರೇಷನ್ ಸಂಚಿನಲ್ಲಿ ಭಾಗಿಯಾಗಿರುವ ಗಂಭೀರ ಆರೋಪ ಕೇಳಿಬರುತ್ತಿದ್ದಂತೆಯೇ ಕೃಪಾ ಆಳ್ವಾ ಅವರಿಗೆ ಕೆಪಿಸಿಸಿ ನೋಟಿಸ್ ಜಾರಿ ಮಾಡಿತ್ತು. ಆದರೆ ಸಮರ್ಪಕ ಉತ್ತರ ನೀಡದ ಕಾರಣ ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಇತ್ತೀಚೆಗಷ್ಟೇ ಉಚ್ಛಾಟಿಸಲಾಗಿತ್ತು.

RRB Recruitment 2026: 1,215  ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಪದವೀಧರರು ಅಪ್ಲೈ ಮಾಡಿ

1,215 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ

Latest Railway Jobs: ಖಾಲಿ ಇರುವ ಬರೋಬ್ಬರಿ 1,215 ಹುದ್ದೆಗಳ ಭರ್ತಿಗೆ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಸ್ಟೇಷನ್‌ ಮಾಸ್ಟರ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ನವೆಂಬರ್‌ 25.

Bengaluru Metro Pink Line: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ನ.13ಕ್ಕೆ ಗುಲಾಬಿ ಮಾರ್ಗ ಉದ್ಘಾಟನೆ

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ನ.13ಕ್ಕೆ ಗುಲಾಬಿ ಮಾರ್ಗ ಉದ್ಘಾಟನೆ

Namma Metro: ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕ ಕಲ್ಪಿಸುವ ಈ ಮಾರ್ಗವು 21.26 ಕಿ.ಮೀ. ಉದ್ದ ಹೊಂದಿದ್ದು, ಅದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ. ಗುಲಾಬಿ ಮಾರ್ಗದಲ್ಲಿ ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎಲಿವೇಟೆಡ್ ವಿಭಾಗದ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ರೈಲು ಸಂಚಾರ ಆರಂಭವಾಗಲಿದೆ.

Tiptur News: ಬಾಗಿಲು ತೆಗೆಯಲು ಬಿಡದೆ ಬೆನ್ನು ಮಾಡಿ ಕುಳಿತ ದೇವರ ಮೂರ್ತಿ; ದೇಗುಲದಲ್ಲಿ ಪವಾಡ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!

ತಿಪಟೂರಿನ ದೇಗುಲದಲ್ಲಿ ದೇವರ ಪವಾಡ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಪಾತಪನಹುಲಿ ಹಳ್ಳಿಯ ಕಾಲೋನಿಯ ಪಿರಿಯಾಪಟ್ಟಣದಮ್ಮ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ತಾಲೂಕಿನ ಜನ ಅಚ್ಚರಿಗೊಂಡಿದ್ದಾರೆ. ಇಲ್ಲಿನ ಅಣ್ಣಪ್ಪ ಸ್ವಾಮಿಯ ಪವಾಡವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ಊರುಗಳಿಂದ ಸಾವಿರಾರು ಜನ ಆಗಮಿಸುತ್ತಿದ್ದಾರೆ.

ಚಾಟ್ ಜಿಪಿಟಿ ಬಳಸಿ ಫಸ್ಟ್ ರ್ಯಾಂಕ್: ಶಂಕರ ಬನ್ನೂರ ಪೊಲೀಸರ ಅತಿಥಿ

ಚಾಟ್ ಜಿಪಿಟಿ ಬಳಸಿ ಫಸ್ಟ್ ರ್ಯಾಂಕ್: ಶಂಕರ ಬನ್ನೂರ ಪೊಲೀಸರ ಅತಿಥಿ

ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ದಿದ್ದ ಶಂಕರ್, ಕೊನೆಯ ಬೆಂಚ್‌ನಲ್ಲಿ ಕುಳಿತು ಗೂಗಲ್ ಲೆನ್ಸ್ ಆಪ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಉತ್ತರಗಳನ್ನು ಹುಡುಕಿದ್ದಾನೆ. ಬಳಿಕ ಅವುಗಳನ್ನು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡಿದ್ದಾನೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಿದ್ದು, ಮೊಬೈಲ್ ತಪಾಸಣೆ ನಡೆಸಿರಲಿಲ್ಲ ಎಂದು ವಿಚಾರಣೆ ವೇಳೆ ಶಂಕರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Kannada Flag: ಕನ್ನಡ ಬಾವುಟಕ್ಕೆ ರಾಷ್ಟ್ರಧ್ವಜ ಸ್ಥಾನಮಾನ?

ಕನ್ನಡ ಬಾವುಟಕ್ಕೆ ರಾಷ್ಟ್ರಧ್ವಜ ಸ್ಥಾನಮಾನ?

ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸಲು ತೀರ್ಮಾನ ಮಾಡಲು ನಮ್ಮ ಸರಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಒಳಗಡೆ ಮಾತ್ರವಲ್ಲ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ಸಾರ್ವಜನಿಕ ಚರ್ಚೆಗೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಹೊಸ ರೂಪ ಕೊಡಲು ಮತ್ತು ಕೇಂದ್ರ ಸರಕಾರಕ್ಕೆ ನಿರ್ಣಯ ಮಾಡಿ ಕಳುಹಿಸಲು ನಮ್ಮ ಸರಕಾರ ಬದ್ಧವಾಗಿದೆ

Loading...