ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ರಾಜ್ಯ ಸರಕಾರದ ಹಿಂದೂ ವಿರೋಧಿ ಧೋರಣೆ ಬದಲಾಗಲಿ ; ಮುಸ್ಲಿಂ ತುಷ್ಟೀಕರಣ ನಿಲ್ಲಲಿ : ಸೀಕಲ್ ಆನಂದ ಗೌಡ ಆಗ್ರಹ

ರಾಜ್ಯ ಸರಕಾರದ ಹಿಂದೂ ವಿರೋಧಿ ಧೋರಣೆ ಬದಲಾಗಲಿ

ಕಾಂಗ್ರೆಸ್ ಅಧಿಕಾರದಲ್ಲೇ ಇದ್ದರೆ, ರಾಜ್ಯದೊಳಗೆ ಇಂತಹ ಕೋಮು ಸಂಘರ್ಷಗಳು ಉದ್ಭವ ವಾಗುತ್ತವೆ. ‘ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಮಸೀದಿ ಒಳಗಿನಿಂದ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಹೊರಗಡೆಯಿಂದ ಬಂದವರು ಹಾಗೂ ಸ್ಥಳೀಯ ಮುಸ್ಲಿಂ ಗೂಂಡಾಗಳಿಂದ ಕೃತ್ಯ ನಡೆದಿದೆ’

Gudibande Crime: ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು

ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು

ಲೈನ್‌ಮನ್ ಒಬ್ಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರವಿ ಎಂಬಾತನ ಸಾವನ್ನು ಮುಚ್ಚಿಟ್ಟು ದಫನ್ ಮಾಡಿದ್ದ ಲೈನ್‌ಮನ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನಂತರ ಮೃತ ರವಿಯ ಹೆಣವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಗುರುವಾರ ಗುಡಿಬಂಡೆ ಯಲ್ಲಿ ನಡೆದಿದೆ.

ಅಧಿಕಾರಿಗಳ ಬೇಜವಾಬ್ದಾರಿಗೆ ಬೇಸತ್ತು ಹೊಂಡ ಮುಚ್ಚಿದ ಕಾನಸೂರು ಗ್ರಾಮಸ್ಥರು

ಬೇಸತ್ತು ಹೊಂಡ ಮುಚ್ಚಿದ ಕಾನಸೂರು ಗ್ರಾಮಸ್ಥರು

ಸಿದ್ದಾಪುರ ತಾಲೂಕು ಕಾನಸೂರು ಬಳಿಯ ಜಾಗನಳ್ಳಿ ಕತ್ರಿಯಿಂದ ಅಜ್ಜೀಬಳದವರೆಗೆ ಬಾವಿ ಗಾತ್ರದ ಹೊಂಡಗಳು ಬಿದ್ದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಕಾನಸೂರಿನ ಕೆಲವು ಯುವಕರು ಮುಂದಾಗುವ ಅನಾಹುತವನ್ನು ತಡೆಯುವುದಕ್ಕೋಸ್ಕರ ಸ್ವಂತ ಕರ್ಚಿನಿಂದ ಜೆ.ಸಿ.ಬಿ. ತರಿಸಿ ಹೊಂಡ‌ಮುಚ್ಚುವ ಕಾರ್ಯವನ್ನು ಮಾಡಿದರು.

ಮೇರ್ಸ್ಕ್ ನ ‘ಕೋಡ್ ಕಾರ್ಗೋ 2025’:  ಲಾಜಿಸ್ಟಿಕ್ಸ್‌ ಭವಿಷ್ಯವನ್ನು ರೂಪಿಸುವ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ

ಮೇರ್ಸ್ಕ್ ನ ‘ಕೋಡ್ ಕಾರ್ಗೋ 2025’

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ತಂತ್ರಜ್ಞಾನ ಕೇಂದ್ರ, ಪರಿಕಲ್ಪನೆಗಳ ಪ್ರಮುಖ ಎಂಜಿನ್ ಆಗಿದ್ದು ಸಾಫ್ಟ್‌ ವೇರ್ ಅಭಿವೃದ್ಧಿ, ವಾಸ್ತುಶಿಲ್ಪ, ಸೈಬರ್ ಭದ್ರತೆ, ಡೇಟ ಸೈನ್ಸ್ ಮತ್ತು ಎಐ ಗಳಿಗೆ ಡಿಜಿಟಲ್ ಸಾಮರ್ಥ್ಯಗಳನ್ನು ಒದಗಿಸುತ್ತದೆ. 10+ ಕೃತಕ ಬುದ್ಧಿಮತ್ತೆ ಪೇಟೆಂಟ್‌ಗಳನ್ನು ಪಡೆದು ಕೊಂಡಿದೆ ಮತ್ತು ಜಾಗತಿಕ ಗ್ರಾಹಕರು ನೈಜ-ಸಮಯದಲ್ಲಿ ಸರಕನ್ನು ಕಂಡು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ವೇದಿಕೆಗಳನ್ನು ಸೃಷ್ಟಿಸಿದೆ.

ಕ್ರೈಸಾಲಿಸ್ ಎಐ: ಪೆಡಗೋಜಿ ಆಧಾರಿತ ಎಐ ಸಹಚಿಂತಕದಿಂದ ಶಾಲೆಗಳಿಗೆ ಶಕ್ತಿ

ಕ್ರೈಸಾಲಿಸ್ ಎಐ: ಪೆಡಗೋಜಿ ಆಧಾರಿತ ಎಐ ಸಹಚಿಂತಕದಿಂದ ಶಾಲೆಗಳಿಗೆ ಶಕ್ತಿ

ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಶಕ್ತಿಯುತಗೊಳಿಸುವುದು: ಭಾರತದಲ್ಲಿ ವಿಸ್ತರಿಸುತ್ತಿರುವ 225 ಬಿಲಿಯನ್ ಅಮೇರಿಕನ್ ಡಾಲರ್ ಶಿಕ್ಷಣ ಪರಿಸರ ವ್ಯವಸ್ಥೆಯ ನಡುವೆ, ಕ್ರೈಸಾಲಿಸ್ ಎಐ ವೈಯಕ್ತಿಕ ಕಲಿಕೆ, ಶಿಕ್ಷಕರಿಗೆ ಸಹಾಯ ಮತ್ತು ಎಐ ಸಾಕ್ಷರತೆಯನ್ನು 2,000ಕ್ಕೂ ಹೆಚ್ಚು ಶಾಲೆಗಳಿಗೆ ತಲುಪಿಸುತ್ತಿದೆ.

Basangouda Patil Yatnal: ಮದ್ದೂರಿನಲ್ಲಿ ಹಿಂದೂ ಫೈರ್‌ ಬ್ರ್ಯಾಂಡ್‌ ಯತ್ನಾಳ್‌ ಗರ್ಜನೆ; ಹೊಸ ಪಕ್ಷ ಘೋಷಣೆ

ಮದ್ದೂರಿನಲ್ಲಿ ಹೊಸ ಪಕ್ಷ ಘೋಷಿಸಿದ ಯತ್ನಾಳ್‌

ಮಂಡ್ಯ ಜಿಲ್ಲೆಯ ಮದ್ದೂರಿಗೆ ಭೇಟಿ ನೀಡಿದ ಹಿಂದೂ ಫೈರ್ ಬ್ರ್ಯಾಂಡ್, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಘೋಷಿಸಿದ್ದಾರೆ. ʼʼನಾನು ಪ್ರತಾಪ್‌ ಸಿಂಹ ಸೇರಿ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇವೆ. ಜೆಸಿಬಿ ನಮ್ಮ ಪಕ್ಷದ ಗುರುತುʼʼ ಎಂದು ಅವರು ಹೇಳಿದ್ದಾರೆ.

ಯಾತ್ರಾ ಸ್ಥಳಗಳಿಗೆ ಮೇಕ್‌ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್‌ ಪ್ರಮಾಣ ಹೆಚ್ಚಳ

ಯಾತ್ರಾ ಸ್ಥಳಗಳಿಗೆ ಮೇಕ್‌ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್‌ ಪ್ರಮಾಣ ಹೆಚ್ಚಳ

ಯಾತ್ರಾ ಬೇಡಿಕೆಯಲ್ಲಿನ ಪ್ರಬಲ ಬೆಳವಣಿಗೆಗೆ, ಪ್ರಮುಖ ಗಮ್ಯಗಳಾದ್ಯಂತ ವಸತಿಯ ಚುರುಕಾದ ವಿಸ್ತರಣೆಯೂ ಕಾರಣವಾಗಿದೆ. ಪ್ರಯಾಣಿಕರು ಬಹುತೇಕವಾಗಿ, ಚಿಕ್ಕದಾದ, ಉದ್ದಿಶ್ಯಿತ ವಸತಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರುಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಒಂದು-ರಾತ್ರಿ ಪ್ರವಾಸ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಫಂಡ್ಸ್‌ಇಂಡಿಯಾದಿ ₹20,000 ಕೋಟಿ ಎಯುಎಂ ಸಾಧನೆ, ಭಾರತದ ಮೆಚ್ಚಿನ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂ ಆಗುವ ಗುರಿ

ಫಂಡ್ಸ್‌ಇಂಡಿಯಾದಿ ₹20,000 ಕೋಟಿ ಎಯುಎಂ ಸಾಧನೆ

ತಂತ್ರಜ್ಞಾನ ಆಧರಿತ ಅನುಕೂಲ ಹಾಗೂ ವೈಯಕ್ತಿಕ ಮಾರ್ಗದರ್ಶನದ ಜೊತೆಗೆ ಆಳವಾದ ಸಂಶೋ ಧನೆ ಸಾಮರ್ಥ್ಯ ಮತ್ತು ಹೂಡಿಕೆದಾರರ ವಿಶ್ವಾಸವೂ ಜೊತೆಗೆ ಸೇರಿದ್ದು, ಸಂಪೂರ್ಣ ಪ್ರಮಾಣದ ವೆಲ್ತ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರಂ ಆಗಿ ಮತ್ತು ಸಮಗ್ರ ವೆಲ್ತ್ ಮ್ಯಾನೇಜ್‌ಮೆಂಟ್ ಸೌಲಭ್ಯವನ್ನು ಬಯಸುವ ಎಲ್ಲ ಹೂಡಿಕೆದಾರರಿಗೂ ಪೂರಕ ತಾಣವಾಗಿ ರೂಪುಗೊಳ್ಳುವುದಕ್ಕೆ ಫಂಡ್ಸ್ ಇಂಡಿಯಾ ಬದ್ಧವಾಗಿದೆ.

Vishnuvardhan: ಸಾಲು ಸಾಲು ಸವಾಲುಗಳನ್ನು ಎದುರಿಸಿದ ವಿಷ್ಣುದಾದನ ಸಿನಿ ಪಯಣ ಹೇಗಿತ್ತು ಗೊತ್ತಾ?

ಚಂದನವನದ ಸಾಹಸ ಸಿಂಹನಿಗೆ ಒಲಿದ ರಾಜ್ಯ ರತ್ನ ಪ್ರಶಸ್ತಿ

1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ಡಾ. ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. 1972ರಲ್ಲಿ ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಿತ್ರದಿಂದ ಖ್ಯಾತರಾದರು. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಯಜಮಾನ’, ‘ಆಪ್ತಮಿತ್ರ’ ಸೇರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅರೋಮಾಥೆರಪಿ ಮಾರುಕಟ್ಟೆಗೆ ಪ್ರವೇಶಿಸಿದ ಐರಿಸ್ ಹೋಮ್ ಫ್ರಾಗ್ರೆನ್ಸಸ್ ದೈನಂದಿನ ಬಳಕೆಗೆ ಸೂಕ್ತವಾದ ನೈಸರ್ಗಿಕ ಅರೋಮಾಥೆರಪಿ ಉತ್ಪನ್ನಗಳ ಬಿಡುಗಡೆ

ಅರೋಮಾಥೆರಪಿ ಮಾರುಕಟ್ಟೆಗೆ ಪ್ರವೇಶಿಸಿದ ಐರಿಸ್ ಹೋಮ್ ಫ್ರಾಗ್ರೆನ್ಸಸ್

ಅರೋಮಾಥೆರಪಿ ಶ್ರೇಣಿಯು ಏಳು ವಿಶಿಷ್ಟ ಪರಿಮಳಗಳಲ್ಲಿ ಲಭ್ಯವಿದ್ದು, ಇವುಗಳನ್ನು ಅವುಗಳ ಚಿಕಿತ್ಸಕ ಗುಣಗಳಿಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಲ್ಯಾವೆಂಡರ್ ಉತ್ಪನ್ನವು ವಿಶ್ರಾಂತಿಗೆ ಮತ್ತು ಶಾಂತವಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಯಲಂಗ್-ಯಲಂಗ್ ಪರಿಮಳವು ಮನಸ್ಥಿತಿ ಉತ್ತಮಗೊಳಿಸಿ ಹುಮ್ಮಸ್ಸು ತುಂಬಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

Cabinet Meeting: ಶಿಗ್ಗಾಂವಿ, ಬಂಕಾಪುರ, ಸವಣೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು

Cabinet Meeting: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಬಂಕಾಪುರ ಹಾಗೂ ಸವಣೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

Cabinet Meeting: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು

ಸಿಎಂ ನೇತೃತ್ವದ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ (ಸೆಪ್ಟೆಂಬರ್‌ 11) ಸಚಿವ ಸಂಪುಟ ಸಭೆ ನಡೆಯಿತು. ʼಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025ʼಕ್ಕೆ ಅನುಮೋದನೆ ಸೇರಿದಂತೆ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆ ಕುರಿತಾದ ವಿವರ ಇಲ್ಲಿದೆ.

Uttara Kannada News: ಭಟ್ಕಳದಲ್ಲಿ ಜಾನುವಾರು ಮೂಳೆಗಳ ರಾಶಿ ಪತ್ತೆ; ಗೋವುಗಳ ಮಾರಣ ಹೋಮದ ಶಂಕೆ: ಭುಗಿಲೆದ್ದ ಆಕ್ರೋಶ

ಭಟ್ಕಳದಲ್ಲಿ ಜಾನುವಾರು ಮೂಳೆಗಳ ರಾಶಿ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಮುಗ್ದಂ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಸ್ಥಳದಲ್ಲಿ ಮೂಳೆಗಳು ಕಂಡು ಬಂದಿದ್ದು, 2-3 ದಿನಗಳ ಹಿಂದೆಯೇ ಗೋಹತ್ಯೆ ನಡೆದ ಕುರುಹು ಎಂಬಂತೆ ರಕ್ತದ ಕಲೆಯೂ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

Karnataka Ratna: ರಾಜ್ಯ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಕರ್ನಾಟಕ ರತ್ನʼ ಪಡೆದ ಸಾಧಕರ ಪಟ್ಟಿ

ʼಕರ್ನಾಟಕ ರತ್ನʼ ಪ್ರಶಸ್ತಿ ಪಡೆದ ಸಾಧಕರ ಪಟ್ಟಿ ಇಲ್ಲಿದೆ

ಸ್ಯಾಂಡಲ್‌ವುಡ್‌ನ ಮೇರು ಕಲಾವಿದರಾದ ಡಾ. ವಿಷ್ಣುವರ್ಧನ್‌ ಮತ್ತು ಬಿ. ಸರೋಜಾ ದೇವಿ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಈ ಧೀಮಂತ ಕಲಾವಿದರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದ್ದು, ಅಭಿಮಾನಿಗಳ ಬಹು ದಿನಗಳ ಕನಸು ಈಡೇರಿದಂತಾಗಿದೆ.

Karnataka Ratna: ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

Vishnuvardhan: ನಟ ದಿ. ವಿಷ್ಣುವರ್ಧನ್​ ಮತ್ತು ನಟಿ ದಿ. ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಕಲಾವಿದರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಯಾವಾಗ, ಎಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಕನ್ನಡ & ಸಂಸ್ಕೃತಿ ಇಲಾಖೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ.

Bengaluru News: ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ಖಾಸಗಿ ಬಸ್‌ ಚಾಲಕ ಆರೀಫ್‌ಗೆ ಬಿತ್ತು ಗೂಸಾ; ಬಟ್ಟೆ ಬಿಚ್ಚಿಸಿ ಹಲ್ಲೆ

ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ಆರೀಫ್‌ಗೆ ಬಿತ್ತು ಗೂಸಾ

ಹೈದರಬಾದ್‌ನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದ ಅಪ್ರಾಪ್ತೆ ಜತೆ ಚಾಲಕ ಆರೀಫ್‌ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಮನೆಯವರು ಆರೀಫ್‌ನ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಥಳಿಸಿ ತಕ್ಕ ಪಾಠ ಕಲಿಸಿದ್ದಾರೆ. ಸದ್ಯ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Earthquake: ಕಲಬುರಗಿಯಲ್ಲಿ 2.3 ರಿಕ್ಟರ್‌ ಅಳತೆಯ ಭೂಕಂಪ

ಕಲಬುರಗಿಯಲ್ಲಿ 2.3 ರಿಕ್ಟರ್‌ ಅಳತೆಯ ಭೂಕಂಪ

Kalaburagi: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದಲ್ಲಿ ಇಂದು ಭೂಕಂಪನದ ಅನುಭವ ಉಂಟಾಗಿದೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ ಗ್ರಾಮದ ಜನರು ಬೆಚ್ಚಿ ಬಿದ್ದು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

G Parameshwara: ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದರಾ ಗೃಹ ಸಚಿವ? ಪರಮೇಶ್ವರ್‌ ಹೇಳಿದ್ದೇನು?

ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿ? ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು?

Tumkur news: ನಾನು ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಇದರ ಮೇಲೆ ಯಾರಾದರೂ ವಿವಾದ ಮಾಡಿದರೆ ಮಾಡಿಕೊಳ್ಳಲಿ, ನನಗೇನು ತೊಂದರೆ ಇಲ್ಲ. ನಾನು ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ನಾನು ಸಾಯುತ್ತೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟೀಕರಣ ನೀಡಿದ್ದಾರೆ.

Murder Case: ನೀರಿನ ತಗಾದೆ ಕೊಲೆಯಲ್ಲಿ ಅಂತ್ಯ, ಗೂಡ್ಸ್‌ ಹರಿಸಿ ವ್ಯಕ್ತಿಯ ಹತ್ಯೆ!

ನೀರಿನ ತಗಾದೆ ಕೊಲೆಯಲ್ಲಿ ಅಂತ್ಯ, ಗೂಡ್ಸ್‌ ಹರಿಸಿ ವ್ಯಕ್ತಿಯ ಹತ್ಯೆ!

Tumkur news: ಗೂಡ್ಸ್ ವಾಹನ ಹರಿಸಿ ಆನಂದ್ ಎನ್ನುವ ವ್ಯಕ್ತಿಯನ್ನು ನಾಗೇಶ್ ಎಂಬಾತ ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Jewel Trend 2025: ಊಹೆಗೂ ಮೀರಿದ ವಿನ್ಯಾಸಗಳಲ್ಲಿ ಬಂತು ಕಾಕ್ಟೈಲ್ ಫಿಂಗರ್‌ ರಿಂಗ್ಸ್

ಊಹೆಗೂ ಮೀರಿದ ವಿನ್ಯಾಸಗಳಲ್ಲಿ ಬಂತು ಕಾಕ್ಟೈಲ್ ಫಿಂಗರ್‌ ರಿಂಗ್ಸ್

Jewel Trend 2025: ಊಹೆಗೂ ಮೀರಿದ ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಕಾಕ್ಟೈಲ್ ಫಿಂಗರ್‌ ರಿಂಗ್‌ಗಳು ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಪಾಪುಲರ್ ಆಗಿವೆ? ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಎಲ್ಲದರ ಬಗ್ಗೆ ಜ್ಯುವೆಲ್ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

Dowry Harassment: ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್.‌ ನಾರಾಯಣ್‌ ಹೇಳುವುದೇನು?

ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್.‌ ನಾರಾಯಣ್‌ ಹೇಳುವುದೇನು?

S Narayan: ‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ ಎಸ್​ ನಾರಾಯಣ್.

ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ-ಬೆಂಗಳೂರಿನ ಅಪೋಲೋ ಆಸ್ಪತ್ರೆಗಳಿಂದ ಜಾಗೃತಿ ಅಭಿಯಾನ

ಬೆಂಗಳೂರಿನ ಅಪೋಲೋ ಆಸ್ಪತ್ರೆಗಳಿಂದ ಜಾಗೃತಿ ಅಭಿಯಾನ

ಗೃಹ ವ್ಯವಹಾರಗಳ ಸಚಿವಾಲಯದ ಇತ್ತೀಚಿನ ವರದಿಯು ಭಾರತದಲ್ಲಿ 15 ರಿಂದ 29 ವರ್ಷ ವಯಸ್ಸಿ ನ ವ್ಯಕ್ತಿಗಳಲ್ಲಿ ಆತ್ಮಹತ್ಯೆಯೇ ಸಾವಿಗೆ ಪ್ರಮುಖ ಕಾರಣ ಎಂದು ಬಹಿರಂಗಪಡಿಸುತ್ತದೆ. ಈ ಪ್ರವೃತ್ತಿ ಯನ್ನು ಪ್ರತಿಬಿಂಬಿಸುತ್ತಾ, ಬೆಂಗಳೂರಿನಲ್ಲಿ 2025ರ ಮೊದಲ ಐದು ತಿಂಗಳಲ್ಲಿ 1,067 ಆತ್ಮಹತ್ಯೆಗಳು ವರದಿಯಾಗಿವೆ.

Bagepally News: ಕೋಚಿಮುಲ್ ವತಿಯಿಂದ ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್, ಕಂಪ್ಯೂಟರ್ ಗಳ ವಿತರಣೆ

ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್, ಕಂಪ್ಯೂಟರ್ ಗಳ ವಿತರಣೆ

ಸರಕಾರಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಸೇರಿದಂತೆ ಶಾಲಾ ಬ್ಯಾಗ್ ಮತ್ತು ಇತರ ಸಾಮಗ್ರಿ ಕೊಡುವುದಕ್ಕಿಂತಲೂ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಬೆರಳತುದಿಗಳಲ್ಲೇ ಪ್ರಪಂಚದ ಹಾಗೂ ಹೋಗುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳನ್ನ ನೀಡಲಾಗುತ್ತಿದೆ ಇದರಿಂದ ಬಹಳ ಸಂತಸ ತಂದಿದೆ‌.

ಚಿಂತಾಮಣಿ ನಗರದಲ್ಲಿ ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯ

ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯ

ನಗರದ ನಾರಸಿಂಹಪೇಟೆಯ ನಿವಾಸಿ ಅರ್ಬಾಜ್(23) ವರ್ಷ ಮೃತಪಟ್ಟಿರುವ ಯುವಕ. ವೆಂಕಟಗಿರಿ ಕೋಟೆಯ ನಿವಾಸಿ ಫಹಾದ್ ಕೊಲೆ ಮಾಡಿರುವ ಆರೋಪಿ. ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ವಾಸೀಮ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಅರ್ಬಾಜ್ ಕೆಲಸ ಮಾಡುತ್ತಿದ್ದ. ಅದರ ಪಕ್ಕದಲ್ಲೇ ಇರುವ ಸಾಧಿಕ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಫಹಾದ್ ಕೆಲಸ ಮಾಡುತ್ತಿದ್ದನು.

Loading...