ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
“ಮಿಷನ್ 2035” ಮೂಲಕ ಥಲಸ್ಸೇಮಿಯಾ ಮುಕ್ತ ರಾಷ್ಟ್ರಗೊಳಿಸುವ ಗುರಿ: ನಟ ಜಾಕಿ ಶ್ರಾಫ್ ಥಲಸ್ಸೆಮಿಯಾ ಜಾಗೃತಿ ರಾಯಭಾರಿಯಾಗಿ ನಿಯುಕ್ತಿ

ನಟ ಜಾಕಿ ಶ್ರಾಫ್ ಥಲಸ್ಸೆಮಿಯಾ ಜಾಗೃತಿ ರಾಯಭಾರಿಯಾಗಿ ನಿಯುಕ್ತಿ

ಥಲಸ್ಸೇಮಿಯಾ ತಡೆಗಟ್ಟಬಹುದಾದ ಅನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಭಾರತದಲ್ಲಿ ಪ್ರತಿ ವರ್ಷ 10 ರಿಂದ 15 ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿ ಸುವ ಮೂಲಕ, ಆರಂಭಿಕ ಸ್ಕ್ರೀನಿಂಗ್ ಮತ್ತು ಆನುವಂಶಿಕ ಸಮಾಲೋಚನೆಯನ್ನು ಉತ್ತೇಜಿಸ ಲಾಗು ತ್ತದೆ. ಚಿಕಿತ್ಸೆಯ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ಪ್ರವೇಶವನ್ನು ಸುಧಾರಿಸುವ ಜೊತೆಗೆ, ಹೊಸ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ

MB Patil: ತುಮಕೂರಿನಲ್ಲಿ ಕ್ರಿಕೆಟ್ ಮೈದಾನ: 41ಎಕರೆ ಸ್ವಾಧೀನ ಪತ್ರ ಹಸ್ತಾಂತರಿಸಿದ ಎಂ.ಬಿ.ಪಾಟೀಲ್‌

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಎಂ.ಬಿ.ಪಾಟೀಲ್‌

ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಐಎಡಿಬಿ ಮೂಲಕ ಒದಗಿಸುವ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆ.ಎಸ್.ಸಿ.ಎ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು.

Sonu Nigam: ಸಾರಿ ಕರ್ನಾಟಕ; ಕನ್ನಡಿಗರ ಕ್ಷಮೆ ಕೋರಿದ ಗಾಯಕ ಸೋನು ನಿಗಮ್‌

ಕನ್ನಡಿಗರ ಕ್ಷಮೆ ಕೋರಿದ ಗಾಯಕ ಸೋನು ನಿಗಮ್‌

‘ʼಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼʼ ಎಂದು ಗಾಯಕ ಸೋನು ನಿಗಮ್‌ ಕ್ಷಮೆ ಕೋರಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್‌ ʼʼಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದುʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

CM Siddaramaiah: ಶುದ್ಧ ಕುಡಿಯುವ ನೀರಿಗೆ ಒಂದೇ ಒಂದು ಗ್ರಾಮದಲ್ಲಿ ಸಮಸ್ಯೆ ಆಗಬಾರದು: ಸಿಎಂ ಸೂಚನೆ

ಶುದ್ಧ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು: ಸಿಎಂ

ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

PES University: ಪಿಇಎಸ್‌ ವಿವಿ-ಎಚ್‌ಸಿಎಲ್‌ ಟೆಕ್‌ ನಡುವೆ ಶೈಕ್ಷಣಿಕ, ಸಂಶೋಧನೆ, ಉದ್ಯಮ ಆಧಾರಿತ ಕೌಶಲ್ಯ ಬಲಪಡಿಸಲು ಒಪ್ಪಂದ

ಪಿಇಎಸ್‌ ವಿವಿ, ಎಚ್‌ಸಿಎಲ್‌ ಟೆಕ್‌ ನಡುವೆ ಒಪ್ಪಂದ

ಪಿಇಎಸ್‌ ವಿಶ್ವವಿದ್ಯಾಲಯ ಮತ್ತು ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿ ಎಚ್‌ಸಿಎಲ್‌ ಟೆಕ್‌ ಜತೆ ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮ ಆಧಾರಿತ ಕೌಶಲ್ಯಗಳನ್ನು ಬಲಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ಪಿಇಎಸ್‌ ವಿದ್ಯಾರ್ಥಿಗಳು ಮತ್ತು ಎಚ್‌ಸಿಎಲ್‌ ಟೆಕ್‌ ಉದ್ಯೋಗಿಗಳಿಗೆ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳು, ಅತಿಥಿ ಉಪನ್ಯಾಸಗಳು ಮತ್ತು ಉದ್ಯಮ ತಜ್ಞರ ನೇತೃತ್ವದ ಕಾರ್ಯಾಗಾರವನ್ನು ಒಳಗೊಂಡಿದೆ.

Chaser Movie: ಸುಮಂತ್ ಶೈಲೇಂದ್ರ ಅಭಿನಯದ ‘ಚೇಸರ್’ ಚಿತ್ರದ ಹಾಡುಗಳು ಮೇ 9ಕ್ಕೆ ಬಿಡುಗಡೆ

ಸುಮಂತ್ ಶೈಲೇಂದ್ರ ಅಭಿನಯದ ‘ಚೇಸರ್’ ಚಿತ್ರದ ಹಾಡುಗಳು ಮೇ 9ಕ್ಕೆ ಬಿಡುಗಡೆ

ಸ್ಯಾಂಡಲ್‌ವುಡ್‌ ನಟ ಸುಮಂತ್ ಶೈಲೇಂದ್ರ - ರಕ್ಷಾ ಮೆನನ್‌ ನಟನೆಯ, ಅರ್ಜುನ್ ಜನ್ಯ ಸಂಗೀತ ನೀಡಿರುವ ʼಚೇಸರ್ʼ ಚಿತ್ರದ ಹಾಡುಗಳ ಅನಾವರಣ ಸಮಾರಂಭ ಮೇ 9ರ ಸಂಜೆ 7.30ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

CM Siddaramaiah: 176 ತರಬೇತುದಾರರ ನೇಮಕಾತಿಗೆ ಸೂಚಿಸಿ 1 ವರ್ಷವಾದರೂ ನೇಮಕಾತಿ ಆಗಿಲ್ಲ; ತರಾಟೆಗೆ ತೆಗೆದುಕೊಂಡ ಸಿಎಂ

ಕಂಬಳಕ್ಕೆ ಗ್ರಾಮೀಣ ಕ್ರೀಡೆಯ ಮಾನ್ಯತೆ ನೀಡಲು ಚಿಂತನೆ

ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರವಾದರೂ ಪ್ರಗತಿ ಕಂಡು ಬರುತ್ತಿಲ್ಲ. ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಇದನ್ನು ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಗದಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

Road Accident: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಮೂವರ ಸಾವು: ಮಾಜಿ ಶಾಸಕನ ಪುತ್ರನಿಗೆ ಗಂಭೀರ ಗಾಯ

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಮೂವರ ಸಾವು:

Belagavi News: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದ ಬೈಲಹೊಂಗಲ-ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

MB Patil: ನಂದಿ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಚಿವ ಎಂ.ಬಿ.ಪಾಟೀಲ್‌

ನಂದಿ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಎಂ.ಬಿ.ಪಾಟೀಲ್‌

MB Patil: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ವಿಜಯಪುರ ಜಿಲ್ಲೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹೇಗೆ ಒದಗಿಸಬೇಕು ಎನ್ನುವ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

CM Siddaramaiah: ಕನ್ನಡದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಅನುವಾದಗೊಳಿಸಲು ಸಹಕಾರ: ಸಿದ್ದರಾಮಯ್ಯ

ಅಸ್ಪೃಶ್ಯತೆ ಅಳಿಯಬೇಕು: ಸಿದ್ದರಾಮಯ್ಯ

ಹಂಪನಾ ರಚಿಸಿರುವ ʼಚಾರು ವಸಂತʼ ವಿಶೇಷ ಕೃತಿ. ಇಲ್ಲಿಯವರೆಗೆ 16 ಭಾಷೆಗಳಿಗೆ ತರ್ಜುಮೆ ಆಗಿ, ಈಗ 17ನೇ ಭಾಷೆಯಾಗಿ ಪರ್ಷಿಯನ್‌ಗೆ ಅನುವಾದಗೊಂಡಿರುವುದು ಕನ್ನಡದ ಹೆಮ್ಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡ ವಿಶ್ವದ ಎಲ್ಲ ಭಾಷೆಗಳಿಗೆ ಅನುವಾದಗೊಂಡರೆ ಕನ್ನಡದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

DA Hike: ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ ಶೇ.1.50 ಏರಿಕೆ; ಸಿಎಸ್‌ ಷಡಾಕ್ಷರಿ ಸ್ವಾಗತ

ಸರಕಾರಿ ನೌಕರರ ತುಟ್ಟಿ ಭತ್ಯೆ ಶೇ.1.50 ಏರಿಕೆ; ಸಿಎಸ್‌ ಷಡಾಕ್ಷರಿ ಸ್ವಾಗತ

ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸಹ ಡಿಎ ಹೆಚ್ಚಳ (DA Hike) ವಿಚಾರದಲ್ಲಿ ಈಗಿರುವ ನಿಯಮ ಪಾಲನೆ ಮಾಡುವುದು ಉತ್ತಮ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರವು ಡಿಎ ಏರಿಕೆ ಮಾಡುವ ಸಂಪ್ರದಾಯವನ್ನು ಸದ್ಯ ಪಾಲನೆ ಮಾಡುತ್ತಿದೆ.

DA Hike: ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ ಶೇ.1.50 ಏರಿಕೆ; ಸಿಎಸ್‌ ಷಡಾಕ್ಷರಿ ಸ್ವಾಗತ

ಸರಕಾರಿ ನೌಕರರ ತುಟ್ಟಿ ಭತ್ಯೆ ಶೇ.1.50 ಏರಿಕೆ; ಸಿಎಸ್‌ ಷಡಾಕ್ಷರಿ ಸ್ವಾಗತ

ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸಹ ಡಿಎ ಹೆಚ್ಚಳ (DA Hike) ವಿಚಾರದಲ್ಲಿ ಈಗಿರುವ ನಿಯಮ ಪಾಲನೆ ಮಾಡುವುದು ಉತ್ತಮ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರವು ಡಿಎ ಏರಿಕೆ ಮಾಡುವ ಸಂಪ್ರದಾಯವನ್ನು ಸದ್ಯ ಪಾಲನೆ ಮಾಡುತ್ತಿದೆ.

Murder Case: ಮೊಬೈಲ್‌ ಸ್ಪೀಕರ್‌ ಹಾಕಲು ಒತ್ತಾಯಿಸಿದ ಪತ್ನಿಯ ಕತ್ತು ಹಿಸುಕಿ ಕೊಲೆ

ಮೊಬೈಲ್‌ ಸ್ಪೀಕರ್‌ ಹಾಕಲು ಒತ್ತಾಯಿಸಿದ ಪತ್ನಿಯ ಕತ್ತು ಹಿಸುಕಿ ಕೊಲೆ

ಏಪ್ರಿಲ್ 24ರಂದು ಮಹಾಗಣಪತಿ ನಗರದ ಮನೆಯಲ್ಲಿ ನಮಿತಾ ಸಾಹು ಅವರನ್ನು ಹತ್ಯೆ (Murder case) ಮಾಡಲಾಗಿತ್ತು. ಮನೆ ಮಾಲೀಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಲೋಕೇಶ್ ಕುಮಾರ್‌ನನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Singer Sonu Nigam: ಕನ್ನಡಿಗರನ್ನು ಕೆಣಕಲು ಹೋಗಿ ಸರಿಯಾದ ಹೊಡೆತ ತಿಂದ ಸೋನು ನಿಗಮ್‌; ಸ್ಯಾಂಡಲ್‌ವುಡ್‌ನಿಂದ ಬ್ಯಾನ್

ಸೋನು ನಿಗಮ್‌ ಸ್ಯಾಂಡಲ್‌ವುಡ್‌ನಿಂದ ಬ್ಯಾನ್

ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಸಭೆಯ ಬಳಿಕ ಮಾತನಾಡಿದ ಕೆಎಫ್‌ಸಿಸಿ ಅಧ್ಯಕ್ಷ ನರಸಿಂಹಲು, ʼʼಪಹಲ್ಗಾಮ್ ಗಲಭೆ ಕುರಿತು ಸೋನು ನಿಗಮ್ ಖಾಸಗಿ ಶಾಲೆಯಲ್ಲಿ‌ ಮಾತನಾಡಿದ್ದಾರೆ. ಪಹಲ್ಗಾಮ್ ವಿಚಾರವನ್ನು ಕನ್ನಡಿಗರಿಗೆ ಹೋಲಿಕೆ ಮಾಡಿದ್ದಾರೆ. ಇದು ಸರಿಯಲ್ಲ. ಮತ್ತೆ ಲೈವ್ ಬಂದು ಅವರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ನಿಷೇಧಿಸಲು ತೀರ್ಮಾನಿಸಲಾಗಿದೆʼʼ ಎಂದು ತಿಳಿಸಿದ್ದಾರೆ.

Jagdeep Dhankhar: "ಶಿರಸಿಯ ಪರಿಸರ ಕಂಡು ಇಲ್ಲೇ ನೆಲೆಸಬೇಕು ಅನ್ನಿಸುತ್ತಿದೆ " ; ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಶಿರಸಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಉಪರಾಷ್ಟ್ರಪತಿ ಜಗದೀಪ ಧನಕರ್‌ ಅವರು ಸೋಮವಾರ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನಕ್ಕೆ ಬಂದಿಳಿದ್ದಾರೆ. ನಂತರ ಅವರು ಪತ್ನಿಯೊಂದಿಗೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ದರ್ಶನ ಪಡೆದಿದ್ದಾರೆ.

Sonu Nigam Controversy: ಸೋನು ನಿಗಮ್‌ಗೆ ಪೊಲೀಸ್‌ ನೋಟೀಸ್‌, ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ

ಸೋನು ನಿಗಮ್‌ಗೆ ಪೊಲೀಸ್‌ ನೋಟೀಸ್‌, ವಾರದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ

ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರ ಕುರಿತು ಸೋನು ನಿಗಮ್‌ಗೆ (Sonu Nigam) ಪೊಲೀಸರು ಇಮೇಲ್, ರಿಜಿಸ್ಟರ್ಡ್‌ ಪೋಸ್ಟ್ ಮೂಲಕ ನೋಟಿಸ್ ನೀಡಿದ್ದು, ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

DK Shivakumar: ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್‌ಗಳಿಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿ.ಕೆ.ಶಿವಕುಮಾರ್

ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್‌ಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿಕೆಶಿ

DK Shivakumar: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್‌ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇದಕ್ಕೆ ಅಗತ್ಯ ಹಣ ಮೀಸಲಿಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Chikkaballapur News: ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ನೀಟ್ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ

ಯಶಸ್ವಿಯಾಗಿ ನಡೆದ ನೀಟ್ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ

ಎನ್‌ಟಿಎ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ನಡೆದ ಈ ಬಾರಿಯ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದ್ದರಿಂದ ಈ ಹಿಂದಿನ ಪರೀಕ್ಷೆಗಳಿಗಿಂತ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬಯೋ ಮೆಟ್ರಿಕ್ ಹಾಜರಾತಿ ಜತೆಗೆ ವಿದ್ಯಾರ್ಥಿಗಳನ್ನು ಪರಿಶೋಧನೆಗೆ ಒಳಪಡಿಸಲಾಗಿತ್ತು.ಸಿಸಿ ಟಿವಿ ಕಣ್ಗಾವಲಿ ನಲ್ಲಿ ಪರೀಕ್ಷೆ ಬರೆದರೂ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಸಹ ಅಳವಡಿಸ ಲಾಗಿತ್ತು

MLA PuttaswamyGowda: ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನ್ನನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಿದೆ : ಶಾಸಕ ಪುಟ್ಟಸ್ವಾಮಿಗೌಡ

ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನ್ನನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಿದೆ

ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ದೇವಗಾನ ಹಳ್ಳಿ ಗ್ರಾಮದ ಬಿಜೆಪಿ ಹಾಗೂ ಇನ್ನಿತರೆ ಪಕ್ಷಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಯಾವುದೇ ರೀತಿಯ ಪೂರ್ವ ಷರತ್ತುಗಳಿಲ್ಲದೆ ನಮ್ಮ ಬಣಕ್ಕೆ ಸೇರ್ಪಡೆಯಾಗುತ್ತಿರುವುದು ನನಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು

MLA K H PuttaswamyGowda: ಪ್ರಾಚೀನ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಶಕ್ತಿ ಮುಂದಾಗಬೇಕು : ಕೆ.ಹೆಚ್.ಪುಟ್ಟಸ್ವಾಮಿಗೌಡ

ಪ್ರಾಚೀನ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಶಕ್ತಿ ಮುಂದಾಗಬೇಕು

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಕಸರತ್ತಿನೊಂದಿಗೆ ಧಾರ್ಮಿಕ ಶ್ರದ್ಧೆಯನ್ನು ಬೇಡುತ್ತವೆ. ಜಾರುಟ್ಲು ತರದ ಕ್ರೀಡೆಗಳಿಗೆ ಹಿಂದಿನ ಕಾಲದಲ್ಲಿ ಬಹಳ ಮಾನ್ಯತೆಯಿತ್ತು. ದೈವಸನ್ನಿಧಿಯಲ್ಲಿ ನಡೆಯುವ ಇಂತಹ ಮನರಂಜನೆಯ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ. ಆದರೂ ಹೊಸೂರು ಹೋಬಳಿಯ ಯುವ ಕರು ಉತ್ಸಾಹದಿಂದ ಈ ಕ್ರೀಡೆಯನ್ನು ಆಯೋಜಿಸಿ ಜನತೆಗೆ ಮನರಂಜನೆ ನೀಡುವುದು ಸಂತೋಷದ ಸಂಗತಿಯೆಂದು ಬಣ್ಣಿಸಿದರು

Chikkaballapur News: ತೋಟದ ಕೂಲಿಗಳನ್ನು ಸನ್ಮಾನಿಸಿ ಕಾರ್ಮಿಕ ದಿನಾಚರಣೆ ಆಚರಿಸಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ.ಎನ್.ರಮೇಶ್

ಕಾರ್ಮಿಕ ದಿನಾಚರಣೆ ಆಚರಿಸಿದ ಯಲುವಹಳ್ಳಿ.ಎನ್.ರಮೇಶ್

ಕಾರ್ಮಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅಲ್ಲಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮಗಳಲ್ಲಿ ಸನ್ಮಾನ ಗೌರವ ನಡೆಯುತ್ತದೆ. ಇಂತಹ ಕಾರ್ಯಕ್ರಮ ಗಳಲ್ಲಿ ನಾನೂ ಕೂಡ ಅತಿಥಿಯಾಗಿ ಹೋಗಿ ಭಾಷಣ ಮಾಡಿದ್ದಿದೆ. ಆದರೆ ನಾನು ಗಮನಿಸಿದಂತೆ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ಎಲ್ಲೂ ಸನ್ಮಾನ ನಡೆದಿಲ್ಲ

CM Siddaramaiah: ಇವತ್ತಿನಿಂದ ಒಳಮೀಸಲಾತಿ ಸಮೀಕ್ಷೆ, ಪೂರ್ಣವಾಗಿ ತೊಡಗಿಸಿಕೊಂಡು ಮಾಹಿತಿ ನೀಡಿ: ಸಿಎಂ ಸಿದ್ದರಾಮಯ್ಯ

ಇವತ್ತಿನಿಂದ ಒಳಮೀಸಲಾತಿ ಸಮೀಕ್ಷೆ, ಪೂರ್ಣ ಮಾಹಿತಿ ನೀಡಿ: ಸಿಎಂ ಸಿದ್ದರಾಮಯ್ಯ

ಇವತ್ತಿನಿಂದ 17ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವ ಕೆಲಸ ಆಗ್ತದೆ. ಸುಮಾರು 65 ಸಾವಿರ ಶಿಕ್ಷಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರ್ತಾರೆ. ಮನೆ ಮನೆ ಭೇಟಿ ಕೊಡುವ ಜೊತೆಗೆ, ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಮಾಹಿತಿ ನೀಡಿದರು.

Suhas Shetty Murder Case: ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳಿಗೆ 5 ದಿನ ನ್ಯಾಯಾಂಗ ಬಂಧನ

ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳಿಗೆ 5 ದಿನ ನ್ಯಾಯಾಂಗ ಬಂಧನ

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ (Suhas Shetty Murder case) ಮಾಡಿದ ಬಳಿಕ ಪರಾರಿಯಾಗಿದ್ದ ಹಂತಕರು ಮಂಗಳೂರಿನಲ್ಲಿಯೇ ಅವಿತುಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದರು. ಇವರಲ್ಲಿ ಇಬ್ಬರು ಹಿಂದೂಗಳಾಗಿದ್ದು, ಸಫ್ವಾನ್‌ ಗ್ಯಾಂಗ್‌ಗೆ ನೆರವಾಗುತ್ತಿದ್ದವರು.

kmc manipal: ಆಯೋರ್ಟಾ  ರಕ್ತ ಸೋರಿಕೆ; ಕೆಎಂಸಿ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಆಯೋರ್ಟಾ ರಕ್ತ ಸೋರಿಕೆ : ಕೆಎಂಸಿ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ದೇಹದ ವಿವಿಧ ಭಾಗಗಳಿಗೆ ಹೃದಯದಿಂದ ರಕ್ತ ಪೂರೈಸುವ ಮಹಾಪಧಮನಿ (ಆಯೋರ್ಟಾದಲ್ಲಿ) ರಕ್ತಸೋರಿಕೆ ಉಂಟಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೆಎಂಸಿ ವೈದ್ಯರ ತಂಡ ವ್ಯಕ್ತಿಯ ಜೀವ ರಕ್ಷಿಸಿದ್ದಾರೆ.