ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Gold Rate Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ  ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 1st Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 85ರೂ. ಏರಿಕೆ ಕಂಡಿದ್ದು, 9,705 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 93ರೂ. ಏರಿಕೆಯಾಗಿ 10,588 ರೂ.ಗೆ ತಲುಪಿದೆ.

Radhika Kumaraswamy: ಜಮೀರ್‌ ಅಹ್ಮದ್‌ಗೆ ರಾಧಿಕಾ ಕುಮಾರಸ್ವಾಮಿ 2.5 ಕೋಟಿ ರೂ. ಸಾಲ, ಲೋಕಾಯುಕ್ತ ವಿಚಾರಣೆ

ಜಮೀರ್‌ ಅಹ್ಮದ್‌ಗೆ ರಾಧಿಕಾ 2.5 ಕೋಟಿ ರೂ. ಸಾಲ, ಲೋಕಾಯುಕ್ತ ವಿಚಾರಣೆ

ನಾನು ಯಾರ ಬಳಿ ಸಾಲ ಪಡೆದಿದ್ದೇನೆ ಎನ್ನುವುದರ ಬಗ್ಗೆ ಜಮೀರ್‌ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಪಟ್ಟಿ ನೀಡಿದ್ದರು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬಳಿಯಿಂದ 2.5 ಕೋಟಿ ರೂ. ಸಾಲ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದರು. ವಿಚಾರಣೆ ವೇಳೆ ರಾಧಿಕಾ, ದಶಕದ ಹಿಂದೆ ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡು ಹೇಳಿಕೆ ದಾಖಲಿಸಿದ್ದಾರೆ.

Toll hike: ಇಂದಿನಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಇಂದಿನಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಇಂದು ಮಧ್ಯರಾತ್ರಿಯಂದಲೇ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್-75ರಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಿದೆ. ಹೀಗಾಗಿ ಲಘು ವಾಹನಗಳಿಗೆ ರೂ.10 ರಿಂದ 15ರಷ್ಟು, ಭಾರೀ ವಾಹನಗಳಿಗೆ ರೂ.50 ರಿಂದ 100 ರೂಪಾಯಿಯಷ್ಟು ಟೋರ್ ದರ ಏರಿಕೆಯ ಬಿಸಿ ತಟ್ಟಲಿದೆ.

LPG Price: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಸು ಇಳಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಸು ಇಳಿಕೆ

ಈ ಹಿಂದೆ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 33.50 ರೂ.ಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು ಜುಲೈ 1 ರಂದು 58.50 ರೂ.ಗಳಷ್ಟು ಬೆಲೆಯನ್ನು ಕಡಿಮೆ ಮಾಡಿದ್ದವು. ಜೂನ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳಿಗೆ 24 ರೂ.ಗಳಷ್ಟು ಕಡಿತವನ್ನು ಘೋಷಿಸಿ, ದರವನ್ನು 1,723.50 ರೂ.ಗಳಿಗೆ ನಿಗದಿಪಡಿಸಿದ್ದವು.

Harrassment: ಬೆಂಗಳೂರಿನ ಪಿಜಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ದರೋಡೆ

ಬೆಂಗಳೂರಿನ ಪಿಜಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ದರೋಡೆ

Bengaluru: ಕೆಲವು ತಿಂಗಳ ಹಿಂದೆ ಬೆಂಗಳೂರಿನ ಪಿಜಿಯೊಂದರಲ್ಲಿ ಯುವತಿಯೊಬ್ಬಳ ಹತ್ಯೆ ನಡೆದಿತ್ತು. ಇದೀಗ ಈ ಪ್ರಕರಣ ನಡೆದಿದ್ದು, ಪಿಜಿಗಳಲ್ಲಿ ವಾಸಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅತಿಕ್ರಮಣ, ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಕಳ್ಳತನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CM Siddaramaiah: ಧರ್ಮಾಂಧರಿಂದ ಮಾತ್ರ ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ: ಸಿಎಂ ಸಿದ್ದರಾಮಯ್ಯ

ಧರ್ಮಾಂಧರಿಂದ ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ: ಸಿದ್ದರಾಮಯ್ಯ

ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗೂ ಇದಕ್ಕೂ ಏನು ಸಂಬಂಧ? ಬಿಜೆಪಿಯವರು ಕುಂಟು ನೆಪ ಹುಡುಕುತ್ತಿದ್ದಾರೆ ಅಷ್ಟೇ. ಯಾವತ್ತೋ ಏನೋ ಹೇಳಿದ್ದಾರೆ ಅಂತ ಅದನ್ನ ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ? ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ ಎಂದರು.

Dharmasthala case: ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ, ಎನ್‌ಐಎ ತನಿಖೆಗೆ ಒತ್ತಾಯ

ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ, ಎನ್‌ಐಎ ತನಿಖೆಗೆ ಒತ್ತಾಯ

ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ ಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಜತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವುದು ಈ ಅಭಿಯಾನದ ಉದ್ದೇಶ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಧರ್ಮಸ್ಥಳ ಚಲೋದಲ್ಲಿ ಭಾಗವಹಿಸಲಿದ್ದಾರೆ.

Basangouda Patil Yatnal: ಬಿಜೆಪಿ ಸೇರ್ಪಡೆಗೆ ಡಿಕೆಶಿ ಯತ್ನ: ಯತ್ನಾಳ ಆರೋಪ

ಬಿಜೆಪಿ ಸೇರ್ಪಡೆಗೆ ಡಿಕೆಶಿ ಯತ್ನ: ಯತ್ನಾಳ ಆರೋಪ

ಡಿ.ಕೆ ಶಿವಕುಮಾರ್, ವಿಜಯೇಂದ್ರ ಮಾತುಕತೆಯ ಸಂದರ್ಭದಲ್ಲಿ ಡಿಕೆಶಿ ಮುಖ್ಯಮಂತ್ರಿ, ವಿಜಯೇಂದ್ರ ಉಪಮುಖ್ಯಮಂತ್ರಿ ಆಗುವಂತೆ ಚರ್ಚೆ ನಡೆದಿತ್ತು. ಆದರೇ ಡಿಕೆ ಶಿವಕುಮಾರ್ ಅವರ ಹಿಂದೆ ಹೆಚ್ಚಿನ ಸಂಖ್ಯೆಯ ಶಾಸಕರು ಇರಲಿಲ್ಲ. ಹೀಗಾಗಿ ಸುಮ್ಮನಾಗಿದ್ದಾರೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

Spoorthivani Column: ಒಂದೇ ದಿನಕ್ಕೆ ನಡಿಗೆ ಕಲಿತಿರಾ? ದೇವರ ದರ್ಶನದ ಪ್ರಯತ್ನವೂ ಹಾಗೆಯೇ

ದೇವರ ದರ್ಶನದ ಪ್ರಯತ್ನ ಹೀಗಿರಲಿ

ನಾವು ನಮ್ಮ ಕೆಲಸಗಳನ್ನು ದೇವರಿಗೆ ಅರ್ಪಣೆ ಎಂದು ತಿಳಿದು ಮಾಡಿದಾಗ, ಅವನು ನಮ್ಮ ಮೇಲೆ ಅನುಗ್ರಹದ ಮಳೆಯನ್ನೇ ಸುರಿಸುತ್ತಾನೆ. ದೇವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕೆಲಸ ಮಾಡಿದರೆ, ನಮ್ಮ ಮನಸ್ಸು ಶುದ್ಧವಾಗುತ್ತದೆ. ಪ್ರತಿಯೊಬ್ಬನೂ ದೇವರನ್ನು ಪಡೆಯಲು ಶಕ್ತನಾಗಿದ್ದರೂ, ಅದು ಕೇವಲ ಒಂದು ದಿನದಲ್ಲಿ ಆಗುವಂಥದ್ದಲ್ಲ.

Bagepally News: ಶಾಸಕರ ಕರೆ ಸ್ವೀಕರಿಸದ ಅಧಿಕಾರಿ ಅಮಾನತು

ಶಾಸಕರ ಕರೆ ಸ್ವೀಕರಿಸದ ಅಧಿಕಾರಿ ಅಮಾನತು

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯ ಕ್ರಮಗಳ ಬಗ್ಗೆ ಮಾತನಾಡಲು ಬಿಂದುಮಣಿ ಅವರಿಗೆ ಶಾಸಕರು ಮೂರು ದಿನ ಕರೆ ಮಾಡಿದ್ದಾರೆ. ಆದರೆ ಅಧಿಕಾರಿ ಕರೆ ಸ್ವೀಕರಿಸಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕರು ಬಿಂದುಮಣಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಇಲಾಖೆಯನ್ನು ಕೋರಿದ್ದರು.

Bagepally Ganeshotsava: ಗೂಳೂರು ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ

4ನೇ ವರ್ಷದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ

ಗೂಳೂರು ಗ್ರಾಮದ ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ ಗಣೇಶೋತ್ಸ ವದ ವಿಸರ್ಜನೋತ್ಸವವು ಶುಕ್ರವಾರ ಸಂಜೆ ಹರಿ ಸ್ವಾಮಿ ಯವರಿಂದ ವಿವಿಧ ಪೂಜಾ ಕೈಂಕರ್ಯದ ನಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆಯಲ್ಲಿ ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Gauribidanur News: ಕ್ರೀಡಾಕೂಟದಿಂದ ಶಿಕ್ಷಕರಿಗೆ ಚೈತನ್ಯ ದೊರೆಯುತ್ತದೆ

ಶಿಕ್ಷಕರ ಕ್ರೀಡಾಕೂಟ: ಚಿಣ್ಣರಂತೆ ನಲಿದ ಶಿಕ್ಷಕರು

ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸುವುದಲ್ಲಿ ಹೆಚ್ಚಿನ ಗಮನ ವಿರಿಸುವುದರಿಂದ ಬಹುತೇಕ ಸಂದರ್ಭಗಳಲ್ಲಿ ತಮ್ಮ ಆಸಕ್ತಿಯ ಕ್ರೀಡೆ, ಹವ್ಯಾಸಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿ ಇಂತಹ ಕ್ರೀಡಾಕೂಟಗಳು ವೃತ್ತಿ ಜೀವನದಲ್ಲಿ ಚಿರಸ್ಮರಣಿಯವಾಗಿ ಉಳಿಯುತ್ತವೆ. ಕ್ರೀಡಾಕೂಟದಲ್ಲಿ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿರುವುದು ಒಳ್ಳೆಯ ಬೆಳವಣಿಗೆ

Ganeshotsava: ಸಡಗರ, ಸಂಭ್ರಮದಿಂದ ಗಣೇಶೋತ್ಸವ ಆಚರಣೆ

ಸಡಗರ, ಸಂಭ್ರಮದಿಂದ ಗಣೇಶೋತ್ಸವ ಆಚರಣೆ

ಶ್ರೀವಿನಾಯಕ ಗೆಳೆಯರ ಬಳಗವು ತನ್ನ 2 ನೇ ವರ್ಷದ ಗಣೇಶ ಹಬ್ಬದ ಆಚರಣೆ ಅಂಗವಾಗಿ ಬಡಾವಣೆಯ ಕ್ಲಬ್ ಹೌಸ್ ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಐದು ದಿನಗಳ ಕಾಲ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಲ್ಲದೆ ಪ್ರತಿ ದಿನ ಪೂಜೆ ಕೈಂಕರ್ಯಗಳನ್ನು ಕೈಗೊಂಡು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿತು.

Ramon Magsaysay Award 2025: ಮ್ಯಾಗ್ಸೆಸೆ ಪ್ರಶಸ್ತಿ; 'Educate Girls' ಸಂಸ್ಥೆ ಸ್ಥಾಪಕಿ ಸಫೀನಾ ಹುಸೇನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಮ್ಯಾಗ್ಸೆಸೆ ಪ್ರಶಸ್ತಿ; ಸಫೀನಾ ಹುಸೇನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

Safeena Husain: ಭಾರತದ 'Educate Girls' ಸಂಸ್ಥೆಯು 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನವಾದ ಸುದ್ದಿ ಕೇಳಿ ಖುಷಿಯಾಯಿತು. ಸಂಸ್ಥೆಯ ಸ್ಥಾಪಕಿ ಸಫೀನಾ ಹುಸೇನ್‌ರಿಗೆ ಅಭಿನಂದನೆಗಳು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

MUDA sites: ಮುಡಾದ 63 ನಿವೇಶನಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಸಿಎಂ ಆದೇಶ

ಮುಡಾದ 63 ನಿವೇಶನಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ಹಂಚಿಕೆ

CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ನಿವೇಶನಗಳ ಹಂಚಿಕೆಯ ಆದೇಶ ಪ್ರತಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಕಳೆದ 20 ವರ್ಷಗಳಿಂದ ಹಂಚಿಕೆಯಾಗದೆ ಬಾಕಿ ಉಳಿದಿದ್ದ ಮುಡಾದ 63 ಮೂಲೆ ನಿವೇಶನಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿಂದ ಕೃಷ್ಣೆಗೆ ಬಾಗಿನ ಅರ್ಪಣೆ ?

ಮುಖ್ಯಮಂತ್ರಿಗಳಿಂದ ಕೃಷ್ಣೆಗೆ ಬಾಗಿನ ಅರ್ಪಣೆ ?

ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿ ಯಲ್ಲಿ ಬರುವ ಕೃಷ್ಣರಾಜ ಸಾಗರ, ಕಬನಿ, ಹಾರಂಗಿ ಮುಂತಾದ ಜಲಾಶಯಗಳಿಗೆ ನೀರಿನ ಪ್ರಮುಖ ಮೂಲ ಕಾವೇರಿ ಕಣಿವೆ, ರಾಜ್ಯದ ಮಲೆನಾಡು ಪ್ರದೇಶದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಜೂನ್ ತಿಂಗಳಲ್ಲಿಯೆ ವ್ಯಾಪಕ ಮಳೆಯಾಗುವುದರಿಂದ ಕಾವೇರಿ ಕಣಿವೆಯ ಜಲಾಶಯಗಳು ಬೇಗನೆ ಭರ್ತಿಯಾಗುತ್ತವೆ, ಹೀಗಾಗಿ ಕಾವೇರಿ ಕಣಿವೆಯ ಜಲಾಶಯಗಳಿಗೆ ಬೇಗನೆ ಬಾಗಿನ ಅರ್ಪಿಸಲಾಗುತ್ತದೆ.

Bengaluru woman missing: ಉಡುಪಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

ಬೆಂಗಳೂರಿನ ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

Vasudha Chakravarthy: ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ತಾಯಿ ಕೊಲ್ಲೂರಿಗೆ ತೆರಳಿ ದೇವಸ್ಥಾನದ ಸಿಬ್ಬಂದಿಗೆ ವಿಚಾರ ತಿಳಿಸಿದ್ದರು. ಹೀಗಾಗಿ ಕೊಲ್ಲೂರು ಠಾಣೆಯಲ್ಲಿ ಮಹಿಳೆ ನಾಪತ್ತೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೌಪರ್ಣಿಕಾ ನದಿ ಪರಿಸರದಲ್ಲಿ ಹುಡುಕಾಟ ನಡೆಸಲಾಗಿತ್ತು. ಇಂದು ಸೌಪರ್ಣಿಕಾ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಮತ್ತು ಚೆನ್ನಮ್ಮ ಮಂಚೇಗೌಡ ಜನ ಸೇವಾ ಸಂಸ್ಥೆ ಎರಡು ಸಂಸ್ಥೆಗಳ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗಣೇಶ್ ಗೌಡ್ರು ಅವರ ನೇತೃತ್ವ ದಲ್ಲಿ ನಡೆದ ಸಮಾರಂಭಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಂಸೆ ಪತ್ರ ನೀಡಿ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಸೀರೆ ವಿತರಣೆ ಮಾಡಲಾಯಿತು.

Sirsi News: ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಎಲ್ಲ ವ್ಯಕ್ತಿಗಳಂತೆ ರಾಜಕಾರಣಿಗಳಾದ ನಮ್ಮಿಂದಲೂ ಲೋಪ ದೋಷಗಳು ಸಂಭವಿಸುತ್ತವೆ. ಆಗ ಬೇಕಾದ ಕೆಲಸವನ್ನು ಪತ್ರಕರ್ತರು ತಮ್ಮ ಲೇಖನಿ ಮೂಲಕ ನಮ್ಮ ಗಮನಕ್ಕೆ ತಂದು ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಆದರೆ, ಉತ್ತರ ಕನ್ನಡದ ಪತ್ರಕರ್ತರ ಕಾರ್ಯ ವಿಧಾನ ಪ್ರಶಂಸನಾರ್ಹವಾಗಿದೆ. ಆಯಾ ಸಂದರ್ಭಕ್ಕೆ ಸರಿಯಾಗಿ ಹೇಳಿ, ಅಲ್ಲಿಗೇ ಬಿಡುವ ವ್ಯವಸ್ಥೆಯನ್ನು ನಮ್ಮ ಪತ್ರಕರ್ತರು ಅಳವಡಿಸಿಕೊಂಡಿದ್ದಾರೆ

Samskarotsava: ಸಂಸ್ಕಾರವು ಸನಾತನ ಸಂಸ್ಕೃತಿಯಲ್ಲಿ ರಕ್ತಗತವಾಗಿ ಬಂದಿದೆ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಸಂಸ್ಕಾರವು ಸನಾತನ ಸಂಸ್ಕೃತಿಯಲ್ಲಿ ರಕ್ತಗತವಾಗಿ ಬಂದಿದೆ: ಕಾಗೇರಿ

Samskarotsava: ಬೆಂಗಳೂರಿನ ಮಲ್ಲೇಶ್ವರಂನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 'ಸಂಸ್ಕಾರೋತ್ಸವ'ದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು. ಹವ್ಯಕ ಸಮಾಜ ಜ್ಞಾನದ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಈ ಸಮಾಜವು ಇನ್ನಷ್ಟು ಸಂಘಟನೆಯಾಗಬೇಕಿದೆ ಎಂದು ಸಲಹೆ ನೀಡಿದರು.

Ganesh laddu auction: ಬೆಂಗಳೂರಿನಲ್ಲಿ ಗಣೇಶನ ಲಡ್ಡು ಬರೋಬ್ಬರಿ 8 ಲಕ್ಷಕ್ಕೆ ಹರಾಜು!

ಬೆಂಗಳೂರಿನಲ್ಲಿ ಗಣೇಶನ ಲಡ್ಡು ಬರೋಬ್ಬರಿ 8 ಲಕ್ಷಕ್ಕೆ ಹರಾಜು!

Ganesh Chaturthi 2025: ಬೆಂಗಳೂರಿನ ನಾಗವಾರದಲ್ಲಿರುವ ಜನಪ್ರಿಯ ನವೋದಯ ಗೆಳೆಯರ ಬಳಗ (ರಿ) ವತಿಯಿಂದ ಆಯೋಜಿಸಲಾದ ಗಣೇಶೋತ್ಸವದಲ್ಲಿ ಲಡ್ಡು ಪ್ರಸಾದ ಈ ಬಾರಿ ಬರೋಬ್ಬರಿ 8 ಲಕ್ಷ ರೂ.ಗೆ ಹರಾಜಾಗಿದೆ. ಈ ಲಡ್ಡು ಪ್ರಸಾದವನ್ನು ಮಾಯಣ್ಣ ಅವರ ಮೊಮ್ಮಗ ಎನ್.ಸಿ. ಪದ್ಮನಾಭ ಎನ್ನುವವರು ಖರೀದಿಸಿದ್ದಾರೆ.

Actor Ram Charan: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

Peddi Movie: ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಶೂಟಿಂಗ್‌ ಮೈಸೂರಿನಲ್ಲಿ ನಡೆಯುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಮೈಸೂರಿನಲ್ಲಿ ಪೆದ್ದಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್ ವೊಂದನ್ನು ಶೂಟಿಂಗ್ ನಡೆಸಲಾಗಿದೆ.

Dharmasthala Sathya Yatre: ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಭೇಟಿಯಾದ ನಿಖಿಲ್‌ ಕುಮಾರಸ್ವಾಮಿ

ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಭೇಟಿಯಾದ ನಿಖಿಲ್‌ ಕುಮಾರಸ್ವಾಮಿ

Nikhil Kumaraswamy: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ವಿರೋಧಿಸಿ ಹಾಸನದಿಂದ ಧರ್ಮಸ್ಥಳವರೆಗೆ ಶನಿವಾರ ʼಜೆಡಿಎಸ್ ಸತ್ಯಯಾತ್ರೆʼ ಹಮ್ಮಿಕೊಳ್ಳಲಾಗಿತ್ತು. ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಸತ್ಯಯಾತ್ರೆಯಲ್ಲಿ ದಳ ಶಾಸಕರು, ವಿವಿಧ ನಾಯಕರು ಸೇರಿ ನೂರಾರು ಕಾರ್ಯಕರ್ತರು, ಭಕ್ತರು ಭಾಗಿಯಾಗಿದ್ದರು.

Sirsi News: ಪ್ರಸರಣದಿಂದ ಪತ್ರಿಕೆಯ ತಾಕತ್ತು, ಪ್ರಭಾವ ಗುರುತಿಸಲು ಸಾಧ್ಯವಿಲ್ಲ: ವಿಶ್ವೇಶ್ವರ ಭಟ್

ಪ್ರಸರಣದಿಂದ ಪತ್ರಿಕೆಯ ತಾಕತ್ತು, ಪ್ರಭಾವ ಗುರುತಿಸಲು ಸಾಧ್ಯವಿಲ್ಲ

Tatva Nishta and Tech Vaidya News Paper: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೂತನವಾಗಿ ಆರಂಭವಾದ ತತ್ವ ನಿಷ್ಠ ಹಾಗೂ ಟೆಕ್ ವೈದ್ಯ ಪತ್ರಿಕೆಯನ್ನು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಬಿಡುಗಡೆ ಮಾಡಿದರು.

Loading...