ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್ ಖಾಲಿ!
ವಾಣಿಜ್ಯ ಸಿಲಿಂಡರ್ ಸರಬರಾಜು ಏಕಾಏಕಿ ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೊಟೆಲ್ ಮಾಲೀಕರ ಸಂಘ ನಿನ್ನೆಯೇ ಎಚ್ಚರಿಸಿತ್ತು. ಇಂದು ಬೆಳಗ್ಗಿನಿಂದ ಹೋಟೆಲ್‌ಗಳು ತೆರೆದಿವೆ. ಆದರೆ ಯಾವುದೇ ಕ್ಷಣದಲ್ಲೂ ಗ್ಯಾಸ್ ಖಾಲಿಯಾಗುವ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುತೇಕ ಹೋಟೆಲ್‌ಗಳು ಮಧ್ಯಾಹ್ನದ ಬಳಿಕ ಮುಚ್ಚಲಿವೆ.