ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಜಾತಿ ನಿಂದನೆ ಆರೋಪ; ಬಿಜೆಪಿ ಶಾಸಕ ಬಿ.ಪಿ ಹರೀಶ್ ಬಂಧನಕ್ಕೆ ಅರೆಸ್ಟ್ ವಾರೆಂಟ್

ಬಿಜೆಪಿ ಶಾಸಕ ಬಿ.ಪಿ ಹರೀಶ್ ಬಂಧನಕ್ಕೆ ಅರೆಸ್ಟ್ ವಾರೆಂಟ್

ಪೌರಕಾರ್ಮಿಕರ ವಿರುದ್ಧ ಜಾತಿನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿದೆ. ಶಾಸಕ ಬಿ.ಪಿ.ಹರೀಶ್ ವಿರುದ್ಧ ಹರಿಹರ ಟೌನ್ ಠಾಣೆ ಪ್ರಕರಣ ದಾಖಲಾಗಿತ್ತು. ಜಾತಿ ನಿಂದನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ್ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಮುನ್ಸೂಚನೆ

ರಾಜ್ಯದ ಕೆಲವು ಭಾಗಗಳಲ್ಲಿ ಇಂದಿನಿಂದ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಸಂಜೆಯ ನಂತರ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಂಭವವಿದೆ. ಈಗಾಗಲೇ ನಗರದ ಹಲವೆಡೆ ಮೋಡ ಕವಿದ ವಾತಾವರಣವಿದೆ.

Shimoga Airport: ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ಏರ್‌ಲೈನ್ಸ್ ಸೇವೆ ಬಲು ಬೇಗ ಸ್ಥಗಿತಗೊಂಡಿದ್ದು ಯಾಕೆ? ಎಂಬುದಕ್ಕೆ ಇದುವರೆಗೂ ಸರಕಾರದಿಂದಲೂ ನಿಖರವಾದ ಉತ್ತರ ಬಂದಿಲ್ಲ. ಆದರೆ, ವಿಮಾನ ಕಂಪನಿ ಹೇಳುತ್ತಿರುವ ಕಾರಣಗಳನ್ನು ನಂಬುವಂತೆಯೇ ಇಲ್ಲ. ತಿಂಗಳಿಗೆ ನೂರಾರು ಜನರಿಗೆ ಸೇವೆ ಒದಗಿಸುತ್ತಿದ್ದ ವಿಮಾನ ನಿಂತು ಹೋಗಿರುವುದು ಶಿವಮೊಗ್ಗದ ಜನರಿಗೆ ಬೇಸರ ತಂದಿದೆ.

Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು

Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು

ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ, ಎರಡೂ ಉಪ ಚುನಾವಣೆಗಳ ಪೈಕಿ ಬಾಗಲಕೋಟೆ ಉಪಚುನಾವಣೆಯಲ್ಲಿ ಲಭಿಸಿರುವ ಗೆಲುವಿಗೆ ಕೈ ಪಕ್ಷಕ್ಕೆ ಕೊಂಚ ಸಮಾಧಾನವಾದರೂ ಇದೆ. ಆದರೆ ದಾವಣಗೆರೆ ವಿಚಾರದಲ್ಲಿ ತೀರಾ ಬೇಸರ ಇರುವುದು ವ್ಯಕ್ತವಾಗಿದೆ. ಅಂದರೆ ಉಪಚುನಾವಣೆ ಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಭಾಗಶಃ ಜಯ ಸಾಧಿಸಿದ್ದು, ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಪಕ್ಷವನ್ನು ಸೋಲಿನ ದವಡೆಯಿಂದ ತಪ್ಪಿಸಿದ ರಕ್ಷಕರು ಎನಿಸಿಕೊಂಡಿದ್ದಾರೆ.

Shidlaghatta News: ಗ್ರಾಮಗಳಲ್ಲಿ ನೀರು ಪೂರೈಕೆಗೆ ಆದ್ಯತೆ: ತಹಶೀಲ್ದಾರ್ ಸೂಚನೆ

ಗ್ರಾಮಗಳಲ್ಲಿ ನೀರು ಪೂರೈಕೆಗೆ ಆದ್ಯತೆ: ತಹಶೀಲ್ದಾರ್ ಸೂಚನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿ ಕೊಳ್ಳಬೇಕು ಎಂದು ಹೇಳಿದರು. ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಸಮಸ್ಯೆ ಇರುವ ಪ್ರದೇಶಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡುವುದಕ್ಕೂ ಆದ್ಯತೆ ನೀಡಬೇಕು

Gudibande News: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ, ಗುಡಿಬಂಡೆಯಲ್ಲಿ ಸಂಭ್ರಮಾಚರಣೆ

ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ, ಗುಡಿಬಂಡೆಯಲ್ಲಿ ಸಂಭ್ರಮಾಚರಣೆ

ಬಿಜೆಪಿ ಪಕ್ಷದ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿದ ಜನತೆ ಇಂದು ಬಿಜೆಪಿ ಪಕ್ಷದತ್ತ ವಾಲುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಇಡೀ ದೇಶದ ಜನತೆ ಮೋದಿಯವರ ಪರ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯ ಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ.

ಪಂಚರಾಜ್ಯಗಳ ಫಲಿತಾಂಶ ಬಿಜೆಪಿಯಿಂದ ಚಿಕ್ಕಬಳ್ಳಾಪುರದಲ್ಲಿ ಪಟಾಕಿ ಸಿಡಿಸಿ : ಸಿಹಿ ಹಂಚಿ ಸಂಭ್ರಮಾಚರಣೆ

ಬಿಜೆಪಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಸಂಭ್ರಮಾಚರಣೆಗೂ ಮೊದಲು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ ಭಾರತೀಯ ಜನತಾ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಪಡೆದಿರುವ ಗೆಲುವು ಕೇವಲ ಒಂದು ರಾಜ್ಯದ ಗೆಲುವಲ್ಲ ಬದಲಿಗೆ ದೇಶದ ಗೆಲುವಾಗಿದೆ ಎಂದು ಸೀಕಲ್ ರಾಮ ಚಂದ್ರಗೌಡ ಈ ವೇಳೆ ಅಭಿಪ್ರಾಯಪಟ್ಟರು.

Gubbi News: ಮಡೇನಹಳ್ಳಿ ದೇವಾಲಯಕ್ಕೆ 2.50 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಸ್ಥೆ

ಮಡೇನಹಳ್ಳಿ ದೇವಾಲಯಕ್ಕೆ 2.50 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಸ್ಥೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಂತಿ ಮಾತನಾಡಿ ಆರ್ಥಿಕ ಚಟು ವಟಿಕೆಯ ಮೂಲಕ ಆರಂಭವಾದ ಶ್ರೀ ಕ್ಷೇತ್ರ ಸಂಸ್ಥೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿದೆ. ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನ, ಬಡವರಿಗೆ ಮಾಸಾಶನ, ವಸತಿ ಯೋಜನೆ ಜೊತೆಗೆ ಮಹಿಳಾ ಸಬಲೀಕರಣ ನಡೆಸುವ ಮೂಲಕ ಮನೆಮಾತಾದ ಸಂಸ್ಥೆ ಪುರಾತನ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಗುರುತಿಸಿಕೊಂಡಿದೆ

Savadatti News: ಐತಿಹಾಸಿಕ ಗ್ರಾಮದೇವಿ ಜಾತ್ರೆ ಆರಂಭ: ದೇವಿಯರನ್ನು ಕಣ್ತುಂಬಿಕೊಂಡು ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ

ಐತಿಹಾಸಿಕ ಗ್ರಾಮದೇವಿ ಜಾತ್ರೆ ಆರಂಭ

ಭಕ್ತರ ದಂಡು "ಉಧೋ ಉಧೋ" ಎಂದು ಜಯಘೋಷ ಎಲ್ಲೆಡೆ ಮೊಳಗಿತ್ತು. ಜೋಗತಿಯರು "ಗ್ರಾಮ ದೇವತೆ ನಿನ್ ಹಾಲಕ್ ಉಧೋ" ಎಂದು ಜೋಗ ಹಾಕಿದರು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಜಾತ್ರೆಯಲ್ಲಿ ಭಾಗಿಯಾದರು. ನಗರದ ಮನೆಮನೆಗಳಿಗೂ ಬಣ್ಣ ಹಚ್ಚಿ, ತಳಿರು ತೋರಣ ಕಟ್ಟಿ ರಸ್ತೆಯಲ್ಲಿ ರಂಗೋಲಿ ಬಿಡಿಸಿ ದೀಪಾಲಂಕಾರ ಅಳವಡಿಸಿ ಶೃಂಗರಿಸ ಲಾಗಿತ್ತು

Celebration of Yediyurappa: ಪಕ್ಷ ಕಟ್ಟಿದ ಧೀಮಂತ ನಾಯಕ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಸಾವಿರ ಮಂದಿ : ಸಿ.ಮುನಿರಾಜು

ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಸಾವಿರ ಮಂದಿ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜ್ಯವನ್ನು ಸುತ್ತಿ ದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ದವರು. ಅವರ ಜೀವನ ಮತ್ತು ಸಾಧನೆ ಸಮಾಜಸೇವೆಯನ್ನು ಜನತೆಯ ಮುಂದಿಡುವ ಸಲುವಾಗಿ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ

ಬೌದ್ಧ ಸನ್ಯಾಸಿ ಕೊಲೆ ಪ್ರಕರಣ ಭೇದಿಸಿದ ಧಾರವಾಡ ಪೊಲೀಸರು; ಮೂವರು ಆರೋಪಿಗಳ ಬಂಧನ

ಬೌದ್ಧ ಸನ್ಯಾಸಿ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಏಪ್ರಿಲ್ 29 ರಂದು ಧಾರವಾಡದ ಹಳಿಯಾಳ ರಸ್ತೆಯಲ್ಲಿ ಬೌದ್ಧ ಸನ್ಯಾಸಿಯ ಶವ ಪತ್ತೆಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ನಿವಾಸಿ ತಾಶಿ ದೊಂದೂಪ (49) ಕೊಲೆಯಾಗಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮೂವರು ಹಂತಕರನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅರೆಸ್ಟ್ ಮಾಡಲಾಗಿದೆ.

Chinthamani News: 3 ರಾಜ್ಯಗಳಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು: ಚಿಂತಾಮಣಿಯಲ್ಲಿ ಬಿ ಜೆ ಪಿ ಕಾರ್ಯಕರ್ತರ ಸಂಭ್ರಮಾಚರಣೆ

ದೇಶಾದ್ಯಂತ ಹಬ್ಬಿದ ಕೇಸರಿ ಅಲೆ:ಚಿಂತಾಮಣಿಯಲ್ಲಿ ವಿಜಯೋತ್ಸವದ ಮೆರುಗು

ಬಿಜೆಪಿ ಯುವ ಮುಖಂಡರಾದ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಮಹೇಶ್ ಬೈ ಮಾತನಾಡಿ ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿರುವುದು ಹೆಮ್ಮೆಯ ವಿಷಯ.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಗೆ ಈ ಫಲಿ ತಾಂಶವೇ ಸಾಕ್ಷಿಯಾಗಿದೆ.ಇದು ಬರೀ ಚುನಾವಣಾ ಗೆಲುವಲ್ಲ,ಭಾರತದ ಅಖಂಡತೆಯ ವಿಜಯ ಎಂದು ಹರ್ಷ ವ್ಯಕ್ತಪಡಿಸಿದರು

Karnataka By-Election Results: 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ: ಬಿ.ವೈ. ವಿಜಯೇಂದ್ರ

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ: ಬಿವೈವಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣದ ನಮ್ಮ ಅಭ್ಯರ್ಥಿ ಉತ್ತಮವಾದ ಮತಗಳನ್ನು ಪಡೆದಿದ್ದಾರೆ. ನಮಗೆ ಈ ಬಾರಿ ಅದೃಷ್ಟ ಕೈ ಹಿಡಿಯಲಿಲ್ಲ. ಆದರೆ ಕಾಂಗ್ರೆಸ್ ಹಣದ ಹೊಳೆ ಹರಿಸಿದ ಬಗ್ಗೆ ನಾನೇನು ಮಾತಾಡೋದಿಲ್ಲ. ಅಭ್ಯರ್ಥಿ ಜತೆ ಅಕಾಂಕ್ಷಿಗಳು ಕೂಡ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

Samsung: ಭಾರತದಲ್ಲಿನ ಸ್ಯಾಮ್‌ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್‌ಅಪ್‌ಗಳ ಆಹ್ವಾನ

ಮೊಬೈಲ್ ನಾವೀನ್ಯತೆಯ ಭವಿಷ್ಯದ ಸಹ-ಸೃಷ್ಟಿಗೆ ಸ್ಟಾರ್ಟ್‌ಅಪ್‌ಗಳ ಆಹ್ವಾನ

ಸ್ಯಾಮ್‌ಸಂಗ್‌ನ ಮುಕ್ತ ಇನ್ನೋವೇಶನ್ ದೃಷ್ಟಿಕೋನದಲ್ಲಿ ಬೇರೂರಿರುವ SMA ಕಾರ್ಯಕ್ರಮವು, ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳು ಮತ್ತು ಸ್ಯಾಮ್‌ಸಂಗ್‌ನ ಜಾಗತಿಕ ಮೊಬೈಲ್ ಪರಿಸರ ವ್ಯವಸ್ಥೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಇದು ವಿಶ್ವಾದ್ಯಂತ ಲಕ್ಷಾಂತರ ಸಾಧನಗಳಲ್ಲಿ ಅದ್ಭುತ ನಾವೀನ್ಯತೆಗಳನ್ನು ಸಕ್ರಿಯಗೊಳಿಸುತ್ತದೆ.

Gauribidanur News: ವಿಜೃಂಭಣೆಯಿಂದ ನಡೆದ ರಂಭಾಪುರಿ ಶ್ರೀಗಳ ಅದ್ಧೂರಿ ಅಡ್ಡ ಪಲ್ಲಕ್ಕಿ ಉತ್ಸವ

ವಿಜೃಂಭಣೆಯಿಂದ ನಡೆದ ರಂಭಾಪುರಿ ಶ್ರೀಗಳ ಅದ್ಧೂರಿ ಅಡ್ಡ ಪಲ್ಲಕ್ಕಿ ಉತ್ಸವ

ಉತ್ಸವದ ಅಂಗವಾಗಿ ಜಗದ್ಗುರುಗಳನ್ನು ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳು ಪಾಲ್ಗೊಂಡು ಭಕ್ತರಲ್ಲಿ ಧಾರ್ಮಿಕ ಉತ್ಸಾಹ ಮೂಡಿಸಿದರು.

Gauribidanur News: ಕುದುರೇ ಬ್ಯಾಲ್ಯ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಕುದುರೇ ಬ್ಯಾಲ್ಯ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಸ ಲಾಯಿತು. ಮೆರವಣಿಗೆ ಯುದ್ದಕ್ಕೂ ನೀಲಿ ಬಾವುಟಗಳು ರಾರಾಜಿಸಿದವು. ಗ್ರಾಮದ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಯ ಮೇಲೆ ಕಳಶ ಹೊತ್ತು ಮೆರವಣಿಗೆ ಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

Sirsi-Haveri Road: ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಸಾವಿರಾರು ಸಾರ್ವಜನಿಕರು; ಶಿರಸಿ-ಹಾವೇರಿ ಹೈವೆ ಬಂದ್‌: ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್‌ ಜಾಮ್‌

ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಜನ; ಶಿರಸಿ-ಹಾವೇರಿ ಹೈವೇ ಬಂದ್‌

Sirsi News: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅವ್ಯಸ್ಥೆಯಿಂದ ರೋಸಿ ಹೋದ ಸಾವಿರಾರು ಮಂದಿ ಮಂಗಳವಾರ (ಮೇ 5) ಶಿರಸಿಯ ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕಿಲೋ ಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡು ಬಂದಿದ್ದು ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು.

ಹಾವು, ಏಣಿ ಆಟಕ್ಕೆ ಸಿಕ್ಕ ಸಮರ್ಥ್‌ ಗೆಲುವು

ಹಾವು, ಏಣಿ ಆಟಕ್ಕೆ ಸಿಕ್ಕ ಸಮರ್ಥ್‌ ಗೆಲುವು

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 63,870 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತಾಗಿದೆ. ಆದರೆ, ಕಳೆದ ಬಾರಿ 1700 ಮಾತ್ರ ಮತ ಪಡೆದಿದ್ದ ಎಸ್‌ಡಿಪಿಐ ಅಭ್ಯರ್ಥಿ ಈ ಬಾರಿ ಬರೋಬ್ಬರಿ 18,975 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಗೊಳ್ಳಲು ಕಾರಣರಾಗಿದ್ದಾರೆ.

ಹೊಸ ‘ಕ್ಯಾಶಿಫೈ Select’ ಮೂಲಕ ಪ್ರೀಮಿಯಂ ರಿಫರ್ಬಿಶ್ಡ್ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಉತ್ತೇಜನ

ಕ್ಯಾಶಿಫೈ ಬ್ರಾಂಡೆಡ್ ಸ್ಟೋರ್‌ಗಳು 95 ನಗರಗಳಿಗೆ ವಿಸ್ತರಣೆ

ಭಾರತದಲ್ಲಿ ರಿಫರ್ಬಿಶ್ಡ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆ ಈಗ ಬೆಲೆ ಆಧಾರಿತದಿಂದ ಮೌಲ್ಯ ಮತ್ತು ನಂಬಿಕೆ ಆಧಾರಿತವಾಗುತ್ತಿದೆ. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ವಿಶ್ವಾಸ ಇದ್ದರೆ ಗ್ರಾಹಕರು ಪ್ರೀಮಿ ಯಂ ಸಾಧನಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಕ್ಯಾಶಿಫೈ Select ಈ ಬದಲಾವಣೆಗೆ ನಮ್ಮ ಉತ್ತರವಾಗಿದೆ

ಕಲ್ಪತರು ನಾಡಿನ ಅಭಿವೃದ್ಧಿಯ ರೂವಾರಿ: ಬಿಎಸ್‌ವೈ ಸಾರ್ಥಕ ಜನಸೇವೆಯ ಸುವರ್ಣ ಪರ್ವ

ಕಲ್ಪತರು ನಾಡಿನ ಅಭಿವೃದ್ಧಿಯ ರೂವಾರಿ ಬಿಎಸ್‌ವೈ

BSY Abhimanotsava: ಸಾಮಾನ್ಯ ಕಾರ್ಯಕರ್ತನ ಹಂತದಿಂದ ರಾಜ್ಯದ ಅತ್ಯುನ್ನತ ಸ್ಥಾನಕ್ಕೇರಿದ ಬಿ.ಎಸ್‌.ಯಡಿಯೂರಪ್ಪ ಅವರ ಸಾರ್ವಜನಿಕ ಜೀವನಕ್ಕೆ ಈಗ ಸಾರ್ಥಕ 50 ವರ್ಷಗಳ ಸಂಭ್ರಮ. ಶಿಕಾರಿಪುರ ಅವರ ರಾಜಕೀಯ ಕರ್ಮಭೂಮಿಯಾದರೂ, ತುಮಕೂರು ಜಿಲ್ಲೆಯ ಕಲ್ಪತರು ನಾಡು ಚಿಕ್ಕನಾಯಕನಹಳ್ಳಿಯ ಮೇಲೆ ಅವರು ಹೊಂದಿರುವ ಮಮಕಾರ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ವೇಗ ಇತಿಹಾಸದ ಪುಟಗಳಲ್ಲಿ ಮೈಲುಗಲ್ಲಾಗಿ ಉಳಿದಿದೆ.

KEA Exam: ಒಳ ಮೀಸಲಾತಿ ಎಫೆಕ್ಟ್‌; ವಿವಿಧ ಹುದ್ದೆಗಳ ನೇಮಕಾತಿಗೆ ಮೇ 9, 10ರಂದು ನಡೆಯಬೇಕಿದ್ದ ಪರೀಕ್ಷೆ ರದ್ದು

ವಿವಿಧ ಹುದ್ದೆಗಳ ನೇಮಕಾತಿಗೆ ಮೇ 9, 10ರಂದು ನಡೆಯಬೇಕಿದ್ದ ಪರೀಕ್ಷೆ ರದ್ದು

KEA Recruitment: ಏಪ್ರಿಲ್‌ 24ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ನಿಗದಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿತ್ತು. ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಲು ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕೆಇಎ ರದ್ದುಪಡಿಸಿದೆ.

Bike Accident: ಔರಾದ್‌ನಲ್ಲಿ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು!

ಔರಾದ್‌ನಲ್ಲಿ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Bidar News: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್‌-ಔರಾದ್‌ ರಾಷ್ಟ್ರೀಯ ಹೆದ್ದಾರಿ-161 (ಎ) ರಲ್ಲಿ ಔರಾದ್‌ ಪಟ್ಟಣದ ಬಂಧಿಖಾನೆ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ.

ಗಂಡನನ್ನು ಬಿಟ್ಟು ಬರದಿದ್ದಕ್ಕೆ ಪ್ರೇಯಸಿಗೆ ಬೆಂಕಿ ಹಚ್ಚಿ ಕೊಂದ ಲವರ್‌!

ಗಂಡನನ್ನು ಬಿಟ್ಟು ಬರದಿದ್ದಕ್ಕೆ ಪ್ರೇಯಸಿಗೆ ಬೆಂಕಿ ಹಚ್ಚಿ ಕೊಂದ ಲವರ್‌!

ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳ ಎಂಬ ಮಹಿಳೆಯನ್ನು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿ ಇಡಲಾಗಿತ್ತು. ಕೊಲೆ ಮಾಡಿದ್ದ ಆರೋಪಿಯ ಮೃತದೇಹ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ಪತ್ತೆಯಾಗಿದ್ದು. ಮಹಿಳೆ ತನ್ನ ಗಂಡನನ್ನು ಬಿಟ್ಟು ಬಾರದ ಹಿನ್ನೆಲೆಯಲ್ಲಿ ಪ್ರಿಯಕರನೇ ಕೊಲೆ ಮಾಡಿದ್ದ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ಹೊಟೇಲ್ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಹೊರೆ; ಮತ್ತೆ ಹೆಚ್ಚಾಗುತ್ತ ತಿಂಡಿ ಬೆಲೆ?

ಬೆಂಗಳೂರಿನಲ್ಲಿ ಹೊಟೇಲ್ ತಿಂಡಿ ತಿನಿಸು ಬೆಲೆ ಏರಿಕೆ

ಊಟ, ತಿಂಡಿಗಾಗಿ ಹೊಟೇಲ್ ಅನ್ನೇ ನೆಚ್ಚಿಕೊಂಡಿದ್ದೀರಾ ? ಹಾಗಿದ್ದರೆ ಬೆಂಗಳೂರು ಹೊಟೇಲ್ ಗಳು ನಿಮಗೆ ಶಾಕ್ ಕೊಡುವುದು ಗ್ಯಾರಂಟಿ. ಬಹುತೇಕ ಎಲ್ಲಾ ಹೊಟೇಲ್ ಗಳಲ್ಲೂ ಚಹಾ, ಕಾಫಿ, ತಿಂಡಿ, ಊಟದ ಬೆಲೆಯನ್ನು ಹೆಚ್ಚಿಸಲಾಗಿದೆ. ಕನಿಷ್ಠ 5 ರೂ. ನಿಂದ 20 ರೂ. ವರೆಗೂ ದರ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.

Loading...