ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಮೋದಿ ಮಿತಿಮೀರಿ ಸಾಲ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ,

ಮೋದಿ ಮಿತಿಮೀರಿ ಸಾಲ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ,

ನಾವು ಅಧಿಕಾರಕ್ಕೆ ಬಂದಾಗ ಸಾಲ 5.54 ಲಕ್ಷ ಕೋಟಿ ರು. ಸಾಲ ಇತ್ತು. ಈಗ ಸಾಲ 8.14 ಲಕ್ಷ ಕೋಟಿ ರು. ಆಗುತ್ತದೆ. ಫಿಸ್ಕಲ್ ರೆಸ್ಪಾನ್ಸಿಬಲ್ ಆಕ್ಟ್ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ. 3ರ ಒಳಗೆ ಇರಬೇಕು. ಸಾಲವು ಶೇ.25ರ ಒಳಗೆ ಇರಬೇಕು. ಕರ್ನಾಟಕದ ಜಿಡಿಪಿ ಮುಂದಿನ ವರ್ಷ 33 ಲಕ್ಷ ಕೋಟಿ ರು. ಆಗುತ್ತದೆ.

Karnataka High court: ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್‌ ಜಡ್ಜ್!‌

ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್‌ ಜಡ್ಜ್!‌

ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಕಾರಣ ಅಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಉದ್ಭವಿಸಬಹುದು ಎಂದು ಅವರು ತಿಳಿಸಿದ್ದಾರೆ. ತನ್ನ ಅಹವಾಲಿಗೆ ತಾನೇ ತೀರ್ಪು ನೀಡಬಾರದೆಂಬ ತತ್ವದ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

Havyaka Language Academy: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ

ರಾಜ್ಯದ ಸಾಂಸ್ಕೃತಿಕ ಅಂಗವಾದ ಹವ್ಯಕ ಭಾಷೆ ಬೆಳವಣಿಗೆಗೆ ‘ಹವ್ಯಕ ಭಾಷಾ ಅಕಾಡೆಮಿ’ ಸ್ಥಾಪನೆ ಘೋಷಣೆ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹೊರ ಹೊಮ್ಮಿರುವುದು ವಿಶೇಷ. ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆ, ಕನ್ನಡದ ಸಾಮಾಜಿಕ ಉಪಭಾಷೆ ಯಾಗಿದೆ.

Murder Case: ಮಗನನ್ನು ಕೊಚ್ಚಿ ಕೊಂದು ಚೀಲದಲ್ಲಿ ತುಂಬಿದ ಕ್ರೂರಿ ತಂದೆ, 15 ದಿನ ಬಳಿಕ ಪತ್ತೆ!

ಮಗನನ್ನು ಕೊಚ್ಚಿ ಕೊಂದು ಚೀಲದಲ್ಲಿ ತುಂಬಿದ ತಂದೆ, 15 ದಿನ ಬಳಿಕ ಪತ್ತೆ!

ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸುಮಾರು 15 ದಿನಗಳ ಹಿಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದಿದ್ದ.

Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಮಹಾವೀರ ವೃತ್ತ ಅಂಬೇಡ್ಕರ ಬಸವೇಶ್ವರ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ ಮಗ್ಗಲಿನ ಸದಾಶಿವನಗರದಖಾಲಿ ಇರುವ ಜಾಗದಲ್ಲಿ ಬೃಹತ್ ಹಿಂದು ಶೋಭಾ ಯಾತ್ರೆ ಜರುಗಿತು.

ಮಾರಾಟಗಾರರಿಗೆ ಅಮೆಜಾನ್ ಉಡುಗೊರೆ: ಅಮೆಜಾನ್ ನಿಂದ 12.5 ಕೋಟಿ ಉತ್ಪನ್ನಗಳಿಗೆ ಶೂನ್ಯ ರೆಫರಲ್ ಶುಲ್ಕದಿಂದ ಶೇ.70ರಷ್ಟು ಉಳಿತಾಯ

ಮಾರಾಟಗಾರರಿಗೆ ಅಮೆಜಾನ್ ಉಡುಗೊರೆ

ಅಮೆಜಾನ್ ₹300ಕ್ಕಿಂತ ಕಡಿಮೆ ಬೆಲೆ ಹೊಂದಿದ 20%ಕ್ಕೂ ಹೆಚ್ಚು ಉತ್ಪನ್ನ ಗಳಿಗೆ ಈಸಿ ಶಿಪ್ ಶುಲ್ಕ ಕಡಿತಗೊಳಿಸಿದೆ. ಈಸಿ ಶಿಪ್ ಮಾರಾಟಗಾರರಿಗೆ ಅವರದೇ ಸ್ಥಳದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ, ಅಮೆಜಾನ್ ಪಿಕಪ್ ಮತ್ತು ಡೆಲಿವರಿ ನಿರ್ವಹಿಸುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡಿ ಮಾರಾಟ ಪ್ರಾರಂಭಿಸಲು ಅಥವಾ ವಿಸ್ತರಿಸಲು ಆದ್ಯತೆಯ ಆಯ್ಕೆಯಾಗಿಸುತ್ತದೆ

Bagalakote news: ಜೀವ ನೀಡಿದ ರೋಡ್‌ ಹಂಪ್‌! ರಸ್ತೆ ಉಬ್ಬಿನ ಮೇಲೆ ವಾಹನ ಚಲಿಸಿದಾಗ ಎದ್ದು ಕುಳಿತ ಮೃತ ವ್ಯಕ್ತಿ!

ರಸ್ತೆ ಉಬ್ಬಿನ ಮೇಲೆ ಶವವಾಹನ ಚಲಿಸಿದಾಗ ಎದ್ದು ಕುಳಿತ ಮೃತ ವ್ಯಕ್ತಿ!

ಕುಟುಂಬಸ್ಥರು ಅಂತ್ಯಸಂಸ್ಕಾರದ ಸಿದ್ಧತೆಯೊಂದಿಗೆ ಮೃತದೇಹವನ್ನು ವಾಹನದ ಮೂಲಕ ಸ್ವಗ್ರಾಮಕ್ಕೆ ತೆಗೆದುಕೊಂಡು ಬರುತ್ತಿದ್ದರು. ವಾಹನವು ಲೋಕಾಪುರ ಸಮೀಪ ಬರುತ್ತಿದ್ದಂತೆ ರಸ್ತೆ ಉಬ್ಬು (ರೋಡ್ ಹಂಪ್ಸ್) ಹತ್ತಿ ಇಳಿಯಿತು. ವಾಹನ ಜೋರಾಗಿ ಅಲುಗಾಡಿದ ರಭಸಕ್ಕೆ, ಮೃತಪಟ್ಟಿದ್ದರು ಎನ್ನಲಾಗಿದ್ದ ಮುಬಾರಕ್ ಅವರು ಏಕಾಏಕಿ ಉಸಿರಾಡಲು ಆರಂಭಿಸಿದ್ದಾರೆ.

Bagalakote news: ಮಸೀದಿ ಗೋಡೆಯಲ್ಲಿ ʼಜೈ ಶ್ರೀರಾಮ್‌ʼ ಎಂದು ಮಗನಿಂದ ಬರೆಸಿದ ವ್ಯಕ್ತಿ, ಬಾಗಲಕೋಟೆ ಮತ್ತೆ ಪ್ರಕ್ಷುಬ್ಧ

ಮಸೀದಿ ಮೇಲೆ ಮಗನಿಂದ ʼಜೈ ಶ್ರೀರಾಮ್‌ʼ ಬರೆಸಿದ ವ್ಯಕ್ತಿ, ಬಾಗಲಕೋಟೆ ಬಿಗು

ಬಾಗಲಕೋಟೆಯ ಸೆಕ್ಟರ್ 44ರ ಮಸೀದಿ ಕಾಂಪೌಂಡ್‌ ಮೇಲೆ ಬರಹ ಬರೆದು ಬಳಿಕ ಆಟೋದಲ್ಲಿ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಸಂಬಂಧ ನವನಗರ ಠಾಣೆ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Gnanesh passes away: ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ನರಹಳ್ಳಿ ಜ್ಞಾನೇಶ್ ನಿಧನ

ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ನರಹಳ್ಳಿ ಜ್ಞಾನೇಶ್ ನಿಧನ

ಕಳೆದ ಎರಡು ದಶಕಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ಜ್ಞಾನೇಶ್ ಅವರು, ಹಿರಿಯ ಸಂಕಲನಕಾರ ಸುರೇಶ್ ಅರಸ್ ಅವರ ಗರಡಿಯಲ್ಲಿ ಪಳಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಹಲವಾರು ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಸಿನಿಮಾಗಳಿಗೆ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದರು.

LPG Cylinder Price: ಗ್ರಾಹಕರಿಗೆ ಬಿಗ್ ಶಾಕ್ : ಇಂದಿನಿಂದಲೇ ಮನೆಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ

ಶಾಕ್ : ಮನೆಬಳಕೆ ಎಲ್‌ಪಿಜಿ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ

ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಮೇಲೆ 60 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಮೇಲೆ 115 ರೂ. ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗೃಹಿಣಿಯರು ಹಾಗೂ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಏಪ್ರಿಲ್ 2025ರ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ.

Karnataka Budget 2026: ಶಾಶ್ವತ ನೀರಾವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಘೋಷಣೆ ಬಗ್ಗೆ ಚಕಾರ ಎತ್ತದಿರುವುದು 17ನೇ ಬಜೆಟ್ ವಿಶೇಷ

ಜಿಲ್ಲೆಯ ಬಹುದಿನಗಳ ಬೇಡಿಕೆಗಳಿಗೆ ಕಿವುಡಾದ ಬಜೆಟ್

ಬಯಲು ಸೀಮೆ ಜಿಲ್ಲೆಯಷ್ಟೇ ಅಲ್ಲದೆ, ಬರಡು ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವ ಜನಪರ ಸರಕಾರವೂ ನಿರ್ದಿಷ್ಟ ಯೋಜನೆ ಯನ್ನು ಘೋಷಿಸಿ ಕಾರ್ಯಗತ  ಮಾಡದಿರುವುದು 17 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರ ಸರಕಾರವೂ ಸೇರಿ ಈ ವರೆಗೆ ಅಧಿಕಾರ ನಡೆಸಿರುವ ಎಲ್ಲಾ ಸರಕಾರಗಳು ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣಿಸುವಂತಾಗಿರುವ ಕೊರತೆಯೆಂದರೆ ತಪ್ಪಾಗಲಾರದು

Karnataka Budget 2026: ಸಿದ್ಧರಾಮಯ್ಯ ಅವರ ದಾಖಲೆಯ 17ನೇ ಬಜೆಟ್ ಬಗ್ಗೆ ಜಿಲ್ಲೆಯ ಜನಾಂತರಂಗದ ನೋಟ

17ನೇ ಬಜೆಟ್ ಬಗ್ಗೆ ಜಿಲ್ಲೆಯ ಜನಾಂತರಂಗದ ನೋಟ

ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿ ನಾನು ಎಂದು ಹೇಳಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ ಸರ್ವರ ಏಳಿಗೆಯನ್ನು ಬಯಸಿ ಮಂಡಿಸಿರುವ 17ನೇ ಅಯವ್ಯಯದ ಬಗ್ಗೆ ಜಿಲ್ಲೆಯ ಜನಾಂತ ರಂಗದ ನೋಟ ಹೀಗಿದೆ.

Karnataka Budget 2026: ಸರ್ವರ ಹಿತ ಕಾಯ್ದೆ ಬಜೆಟ್, ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೂ ಒತ್ತು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಸರ್ವರ ಹಿತ ಕಾಯ್ದೆ ಬಜೆಟ್, ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೂ ಒತ್ತು

ರಾಜ್ಯದ ಆರ್ಥಿಕ ಸುಸ್ಥಿತಿಯ ಮಿತಿ ಮೀರದೆ ಎಲ್ಲ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆಗಳನ್ನು ಬಜೆಟ್ ನಲ್ಲಿ ನೀಡಿದ್ದಾರೆ. ಜಿಡಿಪಿ ಶೇ 8.1ರಷ್ಟು ನೈಜ ಬೆಳವಣಿಗೆ ಆಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮತೋಲಿತ ಬೆಳವಣಿಗೆ ಇದಾಗಿದೆ. ಇಂತಹ ಆರ್ಥಿಕ ಕ್ರಮ ದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ಆರ್ಥಿಕ ನಿಪುಣ ಎಂಬುದನ್ನು ಸಾಬೀತು ಪಡಿಸಿದ್ದಾರೆ

Karnataka Budget 2026: 2026-27ನೇ ಸಾಲಿನ ರಾಜ್ಯ ಬಜೆಟ್ ಜಿಲ್ಲೆಗೆ ದಕ್ಕಿದ್ದೇನು ? ಜನತೆಯ ನಿರೀಕ್ಷೆ ಏನಾಗಿತ್ತು : ಒಂದು ಪಕ್ಷಿ ನೋಟ..!!

ರಾಜ್ಯ ಬಜೆಟ್ ಜಿಲ್ಲೆಗೆ ದಕ್ಕಿದ್ದೇನು ? ಒಂದು ಪಕ್ಷಿ ನೋಟ..!!

ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಬೇಕಾಗಿತ್ತು. ಇದರಿಂದ ರೇಷ್ಮೇ ವಸ್ತ್ರ ಮತ್ತು ಸೀರೆ ಹಾಗೂ ರೇಷ್ಮೇ ಕರಕುಶಲ ಗಾರರಿಗೆ ಅನುಕೂಲ ವಾಗುತ್ತದೆ. 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ‍್ಯಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆ ಯಿಂದ ಮತ್ತು ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ದಿಂದಬೆರಳೆಣಿಕೆ ಮಂದಿಗಷ್ಟೇ ಉದ್ಯೋಗ ದೊರೆಯಬಹುದು

ಬೆಂಗಳೂರಿನಲ್ಲಿ ಏರ್‌ಬಸ್ ಟೆಕ್ನಾಲಜಿ ಸೆಂಟರ್‌ಗೆ ಡಿ.ಕೆ. ಶಿವಕುಮಾರ್ ಚಾಲನೆ

ಬೆಂಗಳೂರಿನಲ್ಲಿ ಏರ್‌ಬಸ್ ಟೆಕ್ನಾಲಜಿ ಸೆಂಟರ್‌ಗೆ ಚಾಲನೆ ನೀಡಿದ ಡಿಕೆಶಿ

DK Shivakumar: ಬೆಂಗಳೂರು ಪ್ರತಿಭಾವಂತ ಮಾನವ ಸಂಪನ್ಮೂಲ ಮಾತ್ರವಲ್ಲ, ಉತ್ತಮ ಸಂಸ್ಕೃತಿ, ಹವಾಮಾನ ಇರುವ ನಗರ. ಇದು ಅನ್ವೇಷಣೆ, ತಂತ್ರಜ್ಞಾನ, ಸಂಶೋಧನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಈ ಭೂಮಿಯ ಶಕ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Karnataka Budget 2026: ಆರ್ಥಿಕ ಶಿಸ್ತಿನ ಪಾವಿತ್ರ್ಯ ಹೊಂದಿಲ್ಲ ಈ ಬಜೆಟ್: ಛಲವಾದಿ ನಾರಾಯಣಸ್ವಾಮಿ

ಆರ್ಥಿಕ ಶಿಸ್ತಿನ ಪಾವಿತ್ರ್ಯ ಹೊಂದಿಲ್ಲ ಈ ಬಜೆಟ್: ಛಲವಾದಿ

Chalavadi Narayanaswamy: ವಿತ್ತೀಯ ಶಿಸ್ತಿನ ನಿಯಮವನ್ನು ಪಾಲಿಸುತ್ತಿದ್ದೇವೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ ಸಂಖ್ಯೆ ಬದಲಿಸುವ ಜಾದೂಗಾರನಂತೆ ಈ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ಆರ್ಥಿಕ ಶಿಸ್ತಿನ ಪಾವಿತ್ರ್ಯ ಹೊಂದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಶ್ವಾನವನ್ನು ವಾಕಿಂಗ್ ಕರೆದುಕೊಂಡ ಬಂದ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡ ಅಪಾರ್ಟ್‌ಮೆಂಟ್‍ನ ಹಿರಿಯ ನಿವಾಸಿಗಳು; ಬೆಂಗಳೂರಿನಲ್ಲೊಂದು ಅಚ್ಚರಿಯ ಘಟನೆ

ಶ್ವಾನವನ್ನು ವಾಕಿಂಗ್ ಕರೆದುಕೊಂಡ ಬಂದ ವಿಚಾರಕ್ಕೆ ಹೊಡೆದಾಟ

Senior Apartment Residents Clash: ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಸಾಕು ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗುವ ವಿಚಾರದಲ್ಲಿ ನಡೆದ ವಾಗ್ವಾದ ಹಿರಿಯ ನಾಗರಿಕರ ನಡುವೆ ಜಗಳಕ್ಕೆ ಕಾರಣವಾಗಿದೆ. ಬೆಂಗಳೂರಿನ ವರ್ತೂರು ಪ್ರದೇಶದ ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

ಬಜೆಟ್‌ನಿಂದ ಯಾವ ಕ್ಷೇತ್ರಕ್ಕೂ ಪ್ರಯೋಜನವಾಗಿಲ್ಲ: ಡಾ.ಸಿ.ಎನ್. ಅಶ್ವತ್ಥ ನಾರಾಯಣ್

ಬಜೆಟ್‌ನಿಂದ ಯಾವ ಕ್ಷೇತ್ರಕ್ಕೂ ಪ್ರಯೋಜನವಾಗಿಲ್ಲ: ಅಶ್ವತ್ಥ ನಾರಾಯಣ್ ಟೀಕೆ

Karnataka Budget 2026: ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆಗಳಾಗಲೀ, ರೈತರ ಪರವಾಗಲೀ, ದೀನ ದಲಿತರ ಪರವಾಗಿ ಆಗಲೀ ಇಲ್ಲ. ಒಟ್ಟಿನಲ್ಲಿ ಯಾವುದೇ ಕ್ಷೇತ್ರಕ್ಕೂ ಅನುಕೂಲವಾಗಿಲ್ಲ. ಇದು ನಿರಾಸೆ ಮೂಡಿಸಿದೆ ಎಂದು ಶಾಸಕ ಮತ್ತು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.

ರಾಜ್ಯ ಬಜೆಟ್: ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆಯ ಸಮರ್ಥ ಬಳಕೆ

ಅಭಿವೃದ್ಧಿ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆ

Karnataka Budget 2026: ಕರ್ನಾಟಕ ಬಜೆಟ್ 2026-27 ತಾಂತ್ರಿಕ ಪ್ರಗತಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಮರ್ಥ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು (ಎಐ) ರಾಜ್ಯದ ದೃಷ್ಟಿಕೋನದ ಕೇಂದ್ರದಲ್ಲಿ ಇರಿಸಿದೆ. ಈ ಕುರಿತ ವಿವರ ಇಲ್ಲಿದೆ.

Karnataka Budget 2026: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ: ಅಡಿಗಾಸ್‌ ಯಾತ್ರಾ ಸ್ವಾಗತ

ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ: ಸ್ವಾಗತಿಸಿದ ಅಡಿಗಾಸ್‌ ಯಾತ್ರಾ

Karnataka Budget 2026: ರಾಜ್ಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಸರ್ಕ್ಯೂಟ್‌ ಅಭಿವೃದ್ಧಿ, ರೋಪ್‌ ವೇ, ಹೆಲಿ ಟ್ಯಾಕ್ಸಿ, ಸೀಪ್ಲೇನ್‌ ಮೊದಲಾದ ಯೋಜನೆಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗಲಿದೆ ಎಂದು ಅಡಿಗಾಸ್‌ ಯಾತ್ರಾದ ಸ್ಥಾಪಕ ಕೆ. ನಾಗರಾಜ್‌ ಅಡಿಗ ಹೇಳಿದ್ದಾರೆ.

Karnataka Budget 2026: ಸಿದ್ದರಾಮಯ್ಯ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?; ಯೋಜನೆ, ಅನುದಾನದ ಮಾಹಿತಿ ಇಲ್ಲಿದೆ

ಸಿದ್ದರಾಮಯ್ಯ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?; ಇಲ್ಲಿದೆ ಮಾಹಿತಿ

ಸಂಪುಟದ ಸಚಿವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ನೀಡಿರುವ ಅನುದಾನ, ಕೊಡುಗೆಗಳ ಕುರಿತ ಮಾಹಿತಿ ಇಲ್ಲಿದೆ.

Dr. Sonali Sarnobat on Budget: ಕರ್ನಾಟಕ ರಾಜ್ಯ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲ: ಡಾ.ಸೋನಾಲಿ ಸರ್ನೋಬತ

ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲ

ಕೇವಲ ಭರವಸೆಗಳು ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕತೆಯ ಮೇಲೆ ಹೆಚ್ಚಿನ ಸಾಲದ ಹೊರೆ ಹಾಕುವ ಪ್ರಯತ್ನ ಈ ಬಜೆಟ್‌ನಲ್ಲಿ ಕಾಣಿಸುತ್ತದೆ. ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೈಗಾರಿಕಾ ಹೂಡಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಬೇಕಾದ ದೂರದೃಷ್ಟಿಯ ಯೋಜನೆಗಳು ಕಾಣಿಸದೇ ಇರುವುದೇ ವಿಷಾದಕರ ಸಂಗತಿ.

Karnataka Budget 2026: ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೇ ಬಜೆಟ್‌ ಮಂಡಿಸಲು ಕಾರಣವೇನು?; ಶಾಸಕ ಸುರೇಶ್‌ ಕುಮಾರ್‌ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೇ ಬಜೆಟ್‌ ಮಂಡಿಸಲು ಕಾರಣವೇನು?

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿರುವ ಸಮಯದ ಬಗ್ಗೆ ಶಾಸಕ ಸುರೇಶ್‌ ಕುಮಾರ್‌ ಮಾಡಿರುವ ಪೋಸ್ಟ್‌ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಬಜೆಟ್ ಮಂಡನೆ 10 ಗಂಟೆ ಅಥವಾ 11 ಗಂಟೆಗೆ ಮಾಡಲಾಗುತ್ತದೆ. ಆದರೆ ಈ ಬಾರಿ 10.15ಕ್ಕೆ ಬಜೆಟ್ ಮಂಡನೆಯಾಗಿದೆ ಯಾಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

DK Shivakumar: ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ; ಸದ್ಯದಲ್ಲೇ ಸಿಎಂ ಜತೆ ಸಭೆ ಏರ್ಪಾಡು ಎಂದ ಡಿ.ಕೆ. ಶಿವಕುಮಾರ್

ಸದ್ಯದಲ್ಲೇ ಸಿಎಂ ಜತೆ ಗುತ್ತಿಗೆದಾರರ ಸಭೆ ಏರ್ಪಾಡು: ಡಿಕೆಶಿ

ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ನಿರತರಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದವರನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನಾನು ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಸೇರಿ ಈ ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜತೆ ಗುತ್ತಿಗೆದಾರರ ಸಭೆ ಮಾಡಿಸುತ್ತೇವೆ ಎಂದು ತಿಳಿಸಿದ್ದಾರೆ.

Loading...