ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿವಾರಣೆಗೆ ʼಕೋಬ್ರಾ ಬೀಟ್ʼ, ಏನಿದು?
Bengaluru Traffic Cobra Beat System: ‘ಕೋಬ್ರಾ ಬೀಟ್’ ಸಿಬ್ಬಂದಿ ಗರಿಷ್ಠ ಮಟ್ಟದಲ್ಲಿ ಎರಡು ನಿಯೋಜಿತ ಮಾರ್ಗಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಾರೆ. ಪುನರಾವರ್ತಿತ ಸಂಚಾರ ದಟ್ಟಣೆಯ ಪಾಯಿಂಟ್ಗಳು, ಪಾರ್ಕಿಂಗ್ ಉಲ್ಲಂಘನೆಗಳು ಮತ್ತು ಅಡಚಣೆಗಳನ್ನು ಗುರುತಿಸುತ್ತಾರೆ. ಜತೆಗೆ ತಕ್ಷಣವೇ ಸ್ಪಂದಿಸಿ ಸಮಸ್ಯೆ ಪರಿಹರಿಸಲಿದ್ದಾರೆ. ಆಗಾಗ ಸಂಚಾರ ದಟ್ಟಣೆ ಮತ್ತು ನಿಧಾನಗತಿಯ ಸಂಚಾರ ವರದಿಯಾಗುವ ಕಮರ್ಷಿಯಲ್ ಸ್ಟ್ರೀಟ್ನಂತಹ ಪ್ರದೇಶಗಳಲ್ಲಿ ಈ ‘ಕೋಬ್ರಾ’ ಸಿಬ್ಬಂದಿ ಗಸ್ತು ಕಾರ್ಯಾಚಣೆ ನಡೆಸಲಿದ್ದಾರೆ.