ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Accident: ಹಬ್ಬದ ಸಾಮಗ್ರಿ ಖರೀದಿಸಲು ಬಂದಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಹರಿದು ಇಬ್ಬರ ಸಾವು

ಮಹಾಲಕ್ಷ್ಮಿ ಹಬ್ಬದ ದಿನವೇ ತಾಯಿ–ಮಗನ ದಾರುಣ ಅಂತ್ಯ

ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಮೂಲದ ನಾಗಮಣಿ (35) ಹಾಗೂ ಅವರ ಪುತ್ರ ಗಗನ್ (14) ಮೃತರು. ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಪೂಜೆ ಹಾಗೂ ಆಚರಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲು ನಗರಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಂಬೇಡ್ಕರ್ ವೃತ್ತದ ಬಳಿ ತಾಯಿ–ಮಗ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅವರ ಮೇಲೆ ಹರಿದಿದೆ. ಘಟನೆಯಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ ಎನ್ನಲಾಗಿದೆ

ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ ತರಲು ಹೊರಟ ವ್ಯಕ್ತಿ ಹೆಂಡತಿಯ ಕಣ್ಣೆದುರೇ ದುರಂತ ಅಂತ್ಯ

ಟಿಪ್ಪರ್ ಲಾರಿಗಳ ಅಟ್ಟಹಾಸಕ್ಕೆ ಮತ್ತೊಂದು ಬಲಿ

ವೆಂಕಟೇಶ್ (58) ಮೃತ ದುರ್ದೈವಿ. ಪೆರೇಸಂದ್ರದಿಂದ ಚಿಕ್ಕಬಳ್ಳಾಪುರದ ಕಡೆಗೆ ಪತ್ನಿಯೊಂದಿಗೆ ಎಪೆ ಆಟೋದಲ್ಲಿ ಬರುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತ ದ ತೀವ್ರತೆಗೆ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದು, ಪತ್ನಿಯ ಕಣ್ಣೆದುರೇ ನೋವಿನಿಂದ ನರಳಾಡುತ್ತಿದ್ದರು ಎನ್ನಲಾಗಿದೆ.

Ambedkar Bhavan inauguration: ಆ.22ಕ್ಕೆ ಉದ್ಘಾಟನೆ, ಅತ್ಯಾಧುನಿಕ ಅಂಬೇಡ್ಕರ್ ಭವನ ಲೋಕಾರ್ಪಣೆ, ರಾಜ್ಯದಲ್ಲೇ ಪ್ರಥಮ ಪೇಪರ್‌ಲೆಸ್ ಸಭಾಂಗಣ ಎಂಬ ಹೆಗ್ಗಳಿಕೆ

ರಾಜ್ಯದಲ್ಲೇ ಪ್ರಥಮ ಪೇಪರ್‌ಲೆಸ್ ಸಭಾಂಗಣ ಎಂಬ ಹೆಗ್ಗಳಿಕೆ

ನಗರದ ಹೃದಯಭಾಗದಲ್ಲಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಹಾಗೂ ವಿನೂತನ ಮಾದರಿ ಯ ಡಾ. ಬಿ.ಆರ್. ಅಂಬೇಡ್ಕರ್ ಭವನ ಆ.22ರಂದು ಲೋಕಾರ್ಪಣೆಗೊಳ್ಳಲಿದ್ದು, ಸಂವಿಧಾನ ಶಿಲ್ಪಿಯ ವಿಚಾರಧಾರೆ, ಶಿಕ್ಷಣ ಹಾಗೂ ವೈಚಾರಿಕ ಚಿಂತನೆಗಳನ್ನು ಜನರಿಗೆ ತಲುಪಿಸುವ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.

Yadgir News: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಕೇಸ್‌ ದಾಖಲು

ಬಾಲಕಿಗೆ ಲೈಂಗಿಕ ಕಿರುಕುಳ; ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಕೇಸ್‌

ಯಾದಗಿರಿ ಜಿಲ್ಲೆಯ ಸಕ್ರ್ಯ ನಾಯಕ ತಾಂಡಾ ನಿವಾಸಿ ಹಾಗೂ ಭಾಗ್ಯವಂತಿ ಮಠದ ಪೂಜಾರಿ ಅಣ್ಣಪ್ಪ ರೈಟರ್ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನೀಡಿದ ದೂರಿನ ಆಧಾರದ ಮೇಲೆ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chikkaballapur News: ಆಯುಷ್ ಆಸ್ಪತ್ರೆ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ

ಆಯುಷ್ ಆಸ್ಪತ್ರೆ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ವರಮಲ್ಲೇನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಯುಷ್ ಆಸ್ಪತ್ರೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮುಂದಿನ ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡವನ್ನು ಸಾರ್ವಜನಿಕರ ಸೇವೆಗೆ ಸಿದ್ಧಪಡಿಸಬೇಕು ಎಂದು ಅಧಿಕಾರಿ ಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ; ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸತತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ

ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

Shidlaghatta News: ಜನರ ಪ್ರೀತಿ, ವಿಶ್ವಾಸವೇ ಪುಟ್ಟು ಅಂಜಿನಪ್ಪ ಅವರ ಬಲ

ಜನರ ಪ್ರೀತಿ, ವಿಶ್ವಾಸವೇ ಪುಟ್ಟು ಅಂಜಿನಪ್ಪ ಅವರ ಬಲ

ಗೌಡನಹಳ್ಳಿ ಮಂಜುನಾಥ್ ಮಾತನಾಡಿ, ಪುಟ್ಟು ಅಂಜಿನಪ್ಪ ಅವರ ನಾಯಕತ್ವದ ಗುಣ ಹಾಗೂ ಜನರೊಂದಿಗೆ ಬೆರೆಯುವ ರೀತಿ ಉತ್ತಮ ಜನಪ್ರತಿನಿಧಿಯಾಗುವ ಭರವಸೆ ಮೂಡಿಸಿದೆ. 2028ರ ವಿಧಾನ ಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದೊಂದಿಗೆ ಶಾಸಕರಾಗಿ ಆಯ್ಕೆಯಾಗುವ ವಿಶ್ವಾಸವಿದೆ

Shidlaghatta News: ಎಫ್‌ಎಸ್‌ಟಿಪಿ ಘಟಕದ ಬಾಕಿ ಕಾಮಗಾರಿ ಮೂರು ವಾರದಲ್ಲಿ ಪೂರ್ಣಗೊಳಿಸಲು ಸೂಚನೆ

ಘಟಕದ ಬಾಕಿ ಕಾಮಗಾರಿ ಮೂರು ವಾರದಲ್ಲಿ ಪೂರ್ಣಗೊಳಿಸಲು ಸೂಚನೆ

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ಭಾರತ್ ಮಿಷನ್‌ (ಗ್ರಾಮೀಣ) ಯೋಜನೆಯಡಿ ನಿರ್ಮಿಸಲಾಗಿರುವ ಎಫ್‌ಎಸ್‌ಟಿಪಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಘಟಕದ ಕಾರ್ಯನಿರ್ವಹಣೆ ಹಾಗೂ ಪ್ರಸ್ತುತ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

Gudibande News: ಗುಡಿಬಂಡೆಯಲ್ಲಿ ಪಿಯು ಕಾಲೇಜುಗಳ ಕ್ರೀಡಾಸ್ಪರ್ಧೆಗೆ ಚಾಲನೆ

ಗುಡಿಬಂಡೆಯಲ್ಲಿ ಪಿಯು ಕಾಲೇಜುಗಳ ಕ್ರೀಡಾಸ್ಪರ್ಧೆಗೆ ಚಾಲನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎ.ರವೀಂದ್ರ, ವಿದ್ಯಾರ್ಥಿ ಗಳು ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು. ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿ ಕೊಂಡು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು

Chikkaballapur News: ಪಾಲಿಹೌಸ್‌ಗಳಿಗೆ ಭೇಟಿ ನೀಡಿ ಕೃಷಿ ಯೋಜನೆಗಳ ಪ್ರಗತಿ ಪರಿಶೀಲನೆ

ಪಾಲಿಹೌಸ್‌ಗಳಿಗೆ ಭೇಟಿ ನೀಡಿ ಕೃಷಿ ಯೋಜನೆಗಳ ಪ್ರಗತಿ ಪರಿಶೀಲನೆ

ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಪಾಲಿಹೌಸ್‌ಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಬೆಳೆಗಳ ಸ್ಥಿತಿಗತಿ, ಕೃಷಿ ಚಟುವಟಿಕೆಗಳ ಪ್ರಗತಿ ಹಾಗೂ ಯೋಜನೆಗಳಿಂದ ರೈತರಿಗೆ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಪರಿಶೀಲನೆ ನಡೆಸಿದರು. ಪಾಲಿಹೌಸ್ ಕೃಷಿ ಪದ್ಧತಿ, ಬೆಳೆ ನಿರ್ವಹಣೆ ಹಾಗೂ ಉತ್ಪಾದನೆ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು.

Chikkaballapur News: ಕೃಷಿ ಉತ್ಪಾದಕತೆ ಹೆಚ್ಚಿಸಲು ಧನ-ಧಾನ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನ ಅಗತ್ಯ

ಕೃಷಿ ಉತ್ಪಾದಕತೆ ಹೆಚ್ಚಿಸಲು ಧನ-ಧಾನ್ಯ ಯೋಜನೆ ಅನುಷ್ಠಾನ ಅಗತ್ಯ

ಚಿಕ್ಕಬಳ್ಳಾಪುರದಲ್ಲಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿರುವ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೃಷಿ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ನೀರಾವರಿ ಸೌಲಭ್ಯ, ನೀರಿನ ಸಂಗ್ರಹಣೆ, ಬೆಳೆ ವೈವಿಧ್ಯೀಕರಣ ಹಾಗೂ ರೈತರಿಗೆ ಕೃಷಿ ಸಾಲದ ಲಭ್ಯತೆ ಯನ್ನು ಸುಧಾರಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ

Chinthamani News: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಯು.ನಿಸಾರ್ ಅಹಮದ್

ಕೈವಾರ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕಾಲೇಜು ವೀಕ್ಷಣೆ

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ನೋಡಿ ಕೊಳ್ಳುವುದರ ಜೊತೆಗೆ, ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ಸೂಕ್ತ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅಧಿಕಾರಿಗಳು ಹಾಗೂ ಪ್ರಾಂಶುಪಾಲರಿಗೆ ಸೂಚಿಸಿದರು

Cabinet Meeting: ಕಾರಾಗೃಹ ಇಲಾಖೆಯ ಆಧುನೀಕರಣಕ್ಕೆ ಮತ್ತಷ್ಟು ವೇಗ; ಅತ್ಯಾಧುನಿಕ ಉಪಕರಣಗಳ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ

ಕಾರಾಗೃಹ ಇಲಾಖೆಗೆ ಅತ್ಯಾಧುನಿಕ ಉಪಕರಣಗಳ ಖರೀದಿ; ಸಂಪುಟ ಒಪ್ಪಿಗೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆದಿದೆ. ಈ ವೇಳೆ ಕಾರಾಗೃಹ ಇಲಾಖೆಯಲ್ಲಿ AI ಕ್ಯಾಮೆರಾ, ಪೋರ್ಟಬಲ್‌ ಜಾಮರ್‌ ಸೇರಿದಂತೆ ಅತ್ಯಾಧುನಿಕ ಉಪಕರಣಗಳ ಅಳವಡಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಎಲೆಯಲ್ಲಿ ಅನ್ನವನ್ನು ಬಿಟ್ಟರೆ ವ್ಯರ್ಥ, ಹೆಚ್ಚಾಗಿ ತಿಂದರೆ ಅನರ್ಥ: ರಾಘವೇಶ್ವರ ಭಾರತೀ ಶ್ರೀ

ಅನ್ನವನ್ನು ದೇವಸ್ವರೂಪವೆಂದು ಭಾವಿಸಿ ಗೌರವಿಸಬೇಕು: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಜೀವನದಲ್ಲಿ ಆರೋಗ್ಯ, ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಬೇಕಾದರೆ ಆಹಾರದ ಬಗ್ಗೆ ಜವಾಬ್ದಾರಿ ಇರಬೇಕು, ಜಠರಾಗ್ನಿಯನ್ನು ಕಾಪಾಡಬೇಕು ಮತ್ತು ಅನ್ನವನ್ನು ದೇವಸ್ವರೂಪವೆಂದು ಭಾವಿಸಿ ಗೌರವಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.

Bengaluru Power Cut: ಗಮನಿಸಿ; ಆಗಸ್ಟ್‌ 23ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಆಗಸ್ಟ್‌ 23ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Bengaluru Power Cut: ಆರ್.ಎಂ.ವಿ. ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ 6 ಉಪ ವಿಭಾಗದ ಹಲವೆಡೆ ಆ.23ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

A-Khata: ಅನಧಿಕೃತ ಬಡಾವಣೆಗಳ ನಿವೇಶನ, ಮನೆಗಳಿಗೆ 'ಎ-ಖಾತಾ' ಭಾಗ್ಯ; ಮಹತ್ವದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ಅನಧಿಕೃತ ನಿವೇಶನ, ಮನೆಗಳಿಗೆ 'ಎ-ಖಾತಾ; ಮಸೂದೆಗೆ ವಿಧಾನಸಭೆ ಅಂಗೀಕಾರ

Karnataka Municipalities (Amendment) Bill-2026: ಬಿ-ಖಾತಾದಿಂದಾಗಿ ಸಂಕಷ್ಟದಲ್ಲಿದ್ದ ಲಕ್ಷಾಂತರ ಕುಟುಂಬಗಳ ಅನುಕೂಲಕಕ್ಕಾಗಿ ರಾಜ್ಯ ಸರ್ಕಾರದ ಹೊಸ ಕಾಯ್ದೆಗೆ ಅಂಗೀಕಾರ ಸಿಕ್ಕಿದೆ. ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ, ಪಕ್ಕಾ ‘ಎ-ಖಾತಾ’ ನೀಡುವ ಮಹತ್ವದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

S N Subbareddy: ಶೀಘ್ರದಲ್ಲೇ ಎಲ್ಲಾ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ: ಶಾಸಕ ಸುಬ್ಬಾರೆಡ್ಡಿ

ಶೀಘ್ರದಲ್ಲೇ ಎಲ್ಲಾ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ

ಈಗಾಗಲೇ ನಿವೇಶನ ರಹಿತರ ಪಟ್ಟಿಯನ್ನೂ ಸಿದ್ಧಪಡಿಸಲಾಗಿದ್ದು, ಆದಷ್ಟು ಶೀಘ್ರವಾಗಿ ನಿವೇಶನ ಗಳ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಗುಡಿಬಂಡೆ ಮುಖ್ಯ ರಸ್ತೆಯಲ್ಲಿ ನಿವೇಶನ ಕಳೆದು ಕೊಂಡವರಿಗೆ ನಿವೇಶನ ನೀಡಲು ಜಮೀನು ಗುರುತಿಸಲಾಗಿದ್ದು, ನಿವೇಶನ ನೀಡಲು ಸಿದ್ಧತೆ ನಡೆಯುತ್ತಿದೆ. ಮುಂದಿನ ಮೂರು ತಿಂಗಳ ಒಳಗೆ ಎಲ್ಲರಿಗೂ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

Varamahalakshmi Festival: ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಗೊರವನಹಳ್ಳಿ ಮಹಾಲಕ್ಷ್ಮಿಯ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

Goravanahalli Mahalakshmi Temple: ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೂತನ ತೇರು ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಸುಮಾರು 24 ಲಕ್ಷ ರೂ. ವೆಚ್ಚದಲ್ಲಿ ನೂತನ ತೇರು ನಿರ್ಮಿಸಲಾಗಿದೆ. ತೇರಿನಲ್ಲಿ ಸುಮಾರು 23 ಕೆ.ಜಿ. ತೂಕದ ಬೆಳ್ಳಿಯ ಮಹಾಲಕ್ಷ್ಮಿ ತಾಯಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೈಭವದ ಮೆರವಣಿಗೆ ನಡೆಸಲಾಯಿತು.

Tumkur News: ತುಮಕೂರಿನಿಂದ ಮಂತ್ರಾಲಯಕ್ಕೆ ಸಾರಿಗೆ ಬಸ್ ಹೆಚ್ಚಿಸಲು ಆಗ್ರಹ

ತುಮಕೂರಿನಿಂದ ಮಂತ್ರಾಲಯಕ್ಕೆ ಸಾರಿಗೆ ಬಸ್ ಹೆಚ್ಚಿಸಲು ಆಗ್ರಹ

Tumkur News: ತುಮಕೂರು ಜಿಲ್ಲೆಯಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಂತ್ರಾಲಯಕ್ಕೆ ಪ್ರತಿದಿನ ತೆರಳುವ ಭಕ್ತರ ಸಂಖ್ಯೆ ಅಪಾರವಾಗಿದೆ. ಆದರೆ, ಇದಕ್ಕೆ ತಕ್ಕಂತೆ ಸಾರಿಗೆ ಸೌಲಭ್ಯಗಳಿಲ್ಲದೆ ಭಕ್ತರು ಪರದಾಡುವಂತಾಗಿದ್ದು, ತುಮಕೂರು-ಮಂತ್ರಾಲಯ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಆಗ್ರಹ ತೀವ್ರಗೊಂಡಿದೆ.

ಮಧುಗಿರಿಯಲ್ಲಿ ʼಮುಗಿಯದ ಪ್ರೇಮ ಕಥೆʼ ಕಿರುಚಿತ್ರ ರಿಲೀಸ್‌

ಮಧುಗಿರಿಯಲ್ಲಿ ʼಮುಗಿಯದ ಪ್ರೇಮ ಕಥೆʼ ಕಿರುಚಿತ್ರ ರಿಲೀಸ್‌

Madhugiri News: ಮಧುಗಿರಿ ತಾಲೂಕಿನ ಸ್ಥಳೀಯ ಕಲಾವಿದರು ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವಾಲಯದ ಆವರಣದಲ್ಲಿ 13 ನಿಮಿಷಗಳ ಕಾಲದ ಯೂಟ್ಯೂಬ್‌ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಕಿರುಚಿತ್ರ 'ಮುಗಿಯದ ಪ್ರೇಮ ಕಥೆ' ಬಿಡುಗಡೆಗೊಳಿಸಿದರು.

Chitradurga Bus Accident: ಚಿತ್ರದುರ್ಗದ ಬಳಿ ಭೀಕರ ಅಪಘಾತ; ಪ್ರವಾಸಿ ಬಸ್‌ ಪಲ್ಟಿಯಾಗಿ ಇಬ್ಬರ ಸಾವು, 26 ಮಂದಿಗೆ ಗಾಯ

ಚಿತ್ರದುರ್ಗದ ಬಳಿ ಪ್ರವಾಸಿ ಬಸ್‌ ಪಲ್ಟಿಯಾಗಿ ಇಬ್ಬರ ಸಾವು, 26 ಮಂದಿಗೆ ಗಾಯ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಬಸ್‌ ಅಪಘಾತ ನಡೆದಿದೆ. ಬಸ್​​ನಲ್ಲಿ ಗೋವಾಕ್ಕೆ ತೆರಳುತ್ತಿದ್ದವರು ಬೆಂಗಳೂರಿನ ಯುನಿವರ್ಸಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎಂಬುದು ಗೊತ್ತಾಗಿದೆ. ಅಪಘಾತದಲ್ಲಿ ಬಸ್‌ ಚಾಲಕ ಮತ್ತು ಕ್ಲೀನರ್‌ ಮೃತಪಟ್ಟಿದ್ದಾರೆ.

MLA Pradeep Eshwar: ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ: ಶಾಸಕ ಪ್ರದೀಪ್ ಈಶ್ವರ್

ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ

ಶಾಸಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕ್ಷೇತ್ರದ 300ಕ್ಕೂ ಹೆಚ್ಚು ಗ್ರಾಮಗಳಿಗೆ ‘ನಮ್ಮೂರಿಗೆ ನಮ್ಮ ಶಾಸಕ’ ಕಾರ್ಯಕ್ರಮದ ಮೂಲಕ ಭೇಟಿ ನೀಡಿ, ಗ್ರಾಮಸ್ಥರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ತಾಲೂಕು ಆಡಳಿತವನ್ನೇ ಗ್ರಾಮಗಳ ಅಶ್ವತ್ಥ ಕಟ್ಟೆಯ ಬಳಿಗೆ ಕೊಂಡೊಯ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ

ಶಿಗ್ಗಾವಿಯ ಆಂಜನೇಯ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ವಿಕೃತಿ; ಮುಸ್ಲಿಂ ಯುವಕ ಅರೆಸ್ಟ್‌

ಶಿಗ್ಗಾವಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಮುಸ್ಲಿಂ ಯುವಕ!

ಆರೋಪಿಯು ಮದ್ಯದ ಅಮಲಿನಲ್ಲಿ ಆಂಜನೇಯ ದೇವಸ್ಥಾನದೊಳಗೆ ತೆರಳಿ ಮಲಗಿದ್ದಲ್ಲದೆ, ದೇವರ ಮೂರ್ತಿಯ ಎದುರು ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸತ್ಯಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ಪೋಷ್ ಕಾಯ್ದೆ ಕುರಿತು ಜಾಗೃತಿ

ಸತ್ಯಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ಪೋಷ್ ಕಾಯ್ದೆ ಕುರಿತು ಜಾಗೃತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆ ಶಿಲ್ಪಾ ಅವರು ವಿಶಾಖಾ ಮಾರ್ಗಸೂಚಿಗಳು ಹಾಗೂ ಕಾರ್ಯಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಕೆಲಸದ ಸ್ಥಳದಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಯ್ದೆಯ ಮಹತ್ವವನ್ನು ವಿವರಿಸಿದರು.

Loading...