ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರಸ್ತಾಪ ಕೈ ಬಿಟ್ಟು ಅಧಿಸೂಚನೆ ರದ್ಧುಪಡಿಸಿ
ಜಂಗಮ ಕೋಟೆ ಹೋಬಳಿಯಲ್ಲಿಯ ಭೂಮಿ ನೂರಕ್ಕೆ ನೂರರಷ್ಟು ಕೃಷಿ ಯೋಗ್ಯ ಭೂಮಿ ಯಾಗಿದ್ದು ಇಲ್ಲಿನ ರೈತರು ಚಿನ್ನದಂತಹ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರ್ವಥಾ ಸರಿಯಲ್ಲ