ತುಳಸಿಯ ಮುಡಿಗೆ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್
ಜಗತ್ತಿನ ನೂರಾ ಮೂವತ್ತು ದೇಶಗಳಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಸಾಧಕ ಮಕ್ಕಳ ಪಟ್ಟಿಗೆ ಯಕ್ಷಗಾನ ಯುವ ಕಲಾವಿದೆ, ಶಿರಸಿಯ ತುಳಸಿ ಹೆಗಡೆ ಹೆಸರು ಸೇರ್ಪಡೆಗೊಂಡಿದೆ .ಮಕ್ಕಳ ಅರ್ಹತೆ, ಸಾಧನೆ, ಅವರ ನಿರಂತರ ಶ್ರಮ ಪರಿಗಣಿಸಿ ತಜ್ಞರ ಸಮಿತಿ ನೂರು ಸಾಧಕ ಮಕ್ಕಳನ್ನು ಆಯ್ಕೆ ಮಾಡಿದ್ದು ಈ ಪಟ್ಟಿಯಲ್ಲಿ ಕನ್ನಡದ ಕಲೆ ಯಕ್ಷಗಾನದ ಮೂಲಕ ಹೆಸರಾದ ತುಳಸಿ ಹೆಗಡೆ ಕೂಡ ಒಬ್ಬರು