ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Karnataka Weather: ರಾಜ್ಯಾದ್ಯಂತ ಮುಂದಿನ 5 ದಿನ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

ರಾಜ್ಯಾದ್ಯಂತ ಮುಂದಿನ 5 ದಿನ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬಲವಾದ ಗಾಳಿಯೊಂದಿಗೆ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 23°C ಇರುವ ಸಾಧ್ಯತೆ ಇದೆ.

ʼಚಿನ್ನ ನಿನ್ನ ಮಗ ಪಾಸ್‌ ಆಗಿದ್ದಾನೆʼ; ದಿವಂಗತ ಪತ್ನಿ ನೆನಪಲ್ಲಿ ವಿಜಯ್‌ ರಾಘವೇಂದ್ರ ಪೋಸ್ಟ್

ದಿವಂಗತ ಪತ್ನಿ ನೆನಪಲ್ಲಿ ವಿಜಯ್‌ ರಾಘವೇಂದ್ರ ಪೋಸ್ಟ್

Vijay Raghavendra: 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ನಟ ವಿಜಯ್‌ ರಾಘವೇಂದ್ರ ಅವರ ಪುತ್ರ ಶೌರ್ಯ ವಿಜಯ್ ಪಾಸ್‌ ಆಗಿದ್ದು, ಈ ಸಂಭ್ರಮದಲ್ಲಿ ದಿವಂಗತ ಪತ್ನಿ ಸ್ಪಂದನಾ ಅವರನ್ನು ನೆನೆಯುತ್ತಾ ನಟ ವಿಜಯ್‌ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Akshaya Tritiya 2025: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ವಿಶೇಷ ಆಭರಣಗಳ ಮಾರಾಟಕ್ಕೆ ನಟಿ ಅನುಷಾ ರೈ ಚಾಲನೆ

ವಿಶೇಷ ಆಭರಣಗಳ ಮಾರಾಟಕ್ಕೆ ನಟಿ ಅನುಷಾ ರೈ ಚಾಲನೆ

Akshaya Tritiya 2025: ಬೆಂಗಳೂರಿನ ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಭರಣಗಳ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ ಅನುಷಾ ರೈ ಬುಧವಾರ ಚಾಲನೆ ನೀಡಿದರು.

Chalavadi Narayanaswamy: ಕಾಂಗ್ರೆಸ್ಸಿನವರು ಭಾರತ ದೇಶಕ್ಕಿಂತ ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್‌ನ ವಿರುದ್ಧ ಜನಾಕ್ರೋಶ ಪ್ರಾರಂಭವಾಗಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಸಿದ್ದರಾಮಯ್ಯನವರು ಪಾಕಿಸ್ತಾನದಲ್ಲೆಲ್ಲೋ ಜಾಗ ಹುಡುಕುತ್ತಿರಬೇಕು. ಮುಡಾ ಸೈಟ್ ಸಾಕಾಗದೆ ಅವರು ಪಾಕಿಸ್ತಾನದಲ್ಲಿ ಸೈಟ್ ಹುಡುಕಿ ಹೋಗಬಹುದು. ಸಿದ್ದರಾಮಯ್ಯನವರ ನಾಲಿಗೆ ಹೊಲಸಾಗಿದೆ. ಏನು ಬೇಕಾದರೂ ಮಾತನಾಡುತ್ತಾರೆ ಎಂದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ ಡಾ. ಶರಣಪ್ರಕಾಶ್ ಪಾಟೀಲ್

ಕಲಬುರಗಿ: ಬಸವಣ್ಣನವರ ಪ್ರತಿಮೆಗೆ ಮಾಡಿದ ಡಾ. ಶರಣಪ್ರಕಾಶ್ ಪಾಟೀಲ್

ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಬಸವ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿನ ಶ್ರೀ ಬಸವಣ್ಣನವರ ಪ್ರತಿಮೆಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

Davanagere News: ದಾವಣಗೆರೆಯ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

ದಾವಣಗೆರೆಯ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

Davanagere News: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು ಕಮಲಾಪುರದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್.ಶೇಜೇಶ್ವರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Director Murali Mohan: ಉಪೇಂದ್ರ ಆಪ್ತ ಮುರಳಿ ಮೋಹನ್‌ಗೆ ಕಿಡ್ನಿ ಸಮಸ್ಯೆ; ಚಿಕಿತ್ಸೆಗೆ ನೆರವು ನೀಡಲು ಮನವಿ

ಉಪೇಂದ್ರ ಆಪ್ತ ಮುರಳಿ ಮೋಹನ್‌ಗೆ ಕಿಡ್ನಿ ಸಮಸ್ಯೆ; ನೆರವಿಗಾಗಿ ಮೊರೆ

Director Murali Mohan: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮುರಳಿ ಮೋಹನ್‌, ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಗೆ ಆಪ್ತ ಸ್ನೇಹಿತ. ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇದೀಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಇವರು, ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಲು ಮನವಿ ಮಾಡಿದ್ದಾರೆ.

Pralhad Joshi: ಕರ್ನಾಟಕದ ಮೂವರಿಗೆ ಪದ್ಮಶ್ರೀ ಪುರಸ್ಕಾರ;  ಸನ್ಮಾನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕನ್ನಡ ನಾಡಿನ ಮೂವರು ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ

Pralhad Joshi: ಕನ್ನಡ ನಾಡಿನ ಪದ್ಮಶ್ರೀ ಪುರಸ್ಕೃತರಾದ ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕರೆಂದೇ ಖ್ಯಾತಿ ಪಡೆದ ಡಾ.ಹಾಸನ ರಘು, ಗೊಂಬೆಯಾಟ ಕಲಾವಿದೆ, ಶತಾಯುಷಿ ಕೊಪ್ಪಳ ತಾಲೂಕಿನ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಹಾಗೂ ಕ್ಯಾನ್ಸರ್ ರೋಗಿಗಳ ಪಾಲಿಗೆ ʼವೈದ್ಯೋ ನಾರಾಯಣ ಹರಿʼ ಎನ್ನುವಂತೆ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯ ಡಾ.ದೇಶಮಾನೆ ವಿಜಯಲಕ್ಷ್ಮಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ, ಅಭಿನಂದಿಸಿದರು.

CM Siddaramaiah: ಪಾಕಿಸ್ತಾನದ ಪರ ಘೋಷಣೆ ಕೂಗುವುದು ದೇಶದ್ರೋಹ: ಸಿಎಂ ಸಿದ್ದರಾಮಯ್ಯ

ಪಾಕಿಸ್ತಾನದ ಪರ ಘೋಷಣೆ ಕೂಗುವುದು ದೇಶದ್ರೋಹ: ಸಿಎಂ ಸಿದ್ದರಾಮಯ್ಯ

CM Siddaramaiah: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ವ್ಯಕ್ತಿ ಕೊಲೆ ಪ್ರಕರಣದಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Murder Case: ನೈಜೀರಿಯದ ಮಹಿಳೆ ಬೆಂಗಳೂರಿನಲ್ಲಿ ಬರ್ಬರ ಕೊಲೆ, ಡ್ರಗ್ಸ್‌ ಜಾಲದ ಶಂಕೆ

ನೈಜೀರಿಯದ ಮಹಿಳೆ ಬೆಂಗಳೂರಿನಲ್ಲಿ ಬರ್ಬರ ಕೊಲೆ, ಡ್ರಗ್ಸ್‌ ಜಾಲದ ಶಂಕೆ

ಬೆಂಗಳೂರಿನಲ್ಲಿ ನೈಜೀರಿಯದ ಅನೇಕ ಮಂದಿ ವಾಸ್ತವ್ಯವಾಗಿದ್ದು, ಡ್ರಗ್ಸ್‌ ಪ್ರಕರಣಗಳಲ್ಲಿ ಇವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿಬೀಳುತ್ತಿದ್ದಾರೆ. ಸೈಬರ್‌ ಕ್ರೈಮ್‌ ಪ್ರಕರಣಗಳಲ್ಲಿಯೂ ಇವರ ಕೈವಾಡ ಆಗಾಗ ಕಂಡುಬರುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಡ್ರಗ್ಸ್‌ ಅಪರಾಧ ಜಾಲದ ಹಿನ್ನೆಲೆಯೂ ಈ ಕೊಲೆ (Murder Case) ಪ್ರಕರಣದ ಹಿಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Mother Dairy milk price Hike: ಗ್ರಾಹಕರಿಗೆ ಶಾಕ್; ಇಂದಿನಿಂದ ಮದರ್ ಡೈರಿ ಹಾಲಿನ ಬೆಲೆ 2 ರೂ. ಹೆಚ್ಚಳ

ಗ್ರಾಹಕರಿಗೆ ಶಾಕ್; ಇಂದಿನಿಂದ ಮದರ್ ಡೈರಿ ಹಾಲಿನ ಬೆಲೆ 2 ರೂ. ಹೆಚ್ಚಳ

Mother Dairy milk price Hike: ಏಪ್ರಿಲ್ 30 ರಿಂದ ಎಲ್ಲಾ ವಿಧದ ಹಾಲಿಗೆ ಬೆಲೆ ಏರಿಕೆ ಅನ್ವಯವಾಗಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಲೀಟರ್‌ಗೆ 4-5 ರೂ.ಗಳಷ್ಟು ಹೆಚ್ಚಿರುವ ಖರೀದಿ ವೆಚ್ಚದಲ್ಲಿನ ಗಮನಾರ್ಹ ಹೆಚ್ಚಳವನ್ನು ಸರಿದೂಗಿಸಲು ಈ ಬೆಲೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ಮದ‌ರ್ ಡೈರಿ ಅಧಿಕಾರಿ ತಿಳಿಸಿದ್ದಾರೆ.

Laxmi Hebbalkar: ಬಸವಣ್ಣನವರ ತತ್ವ, ಆದರ್ಶಗಳು ಎಲ್ಲರಿಗೂ ಮಾದರಿ- ಲಕ್ಷ್ಮೀ ಹೆಬ್ಬಾಳ್ಕರ್

ಬಸವಣ್ಣನವರ ತತ್ವ, ಆದರ್ಶಗಳು ಎಲ್ಲರಿಗೂ ಮಾದರಿ: ಲಕ್ಷ್ಮೀ ಹೆಬ್ಬಾಳ್ಕರ್

Laxmi Hebbalkar: ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೇ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Beer prices hike: ಮತ್ತೆ ಬಿಯರ್‌ ದರ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ; ಎಷ್ಟು ಏರಿಕೆಯಾಗಲಿದೆ?

ಮತ್ತೆ ಬಿಯರ್‌ ದರ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ

Beer prices hike: ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ.195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 205ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಬಿಯರ್ ದರ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ.

Murder Case: ಅನೈತಿಕ ಸಂಬಂಧ ಶಂಕೆ; 3 ವರ್ಷದ ಮಗು ಎದುರೇ ದಂಪತಿಯ ಬರ್ಬರ ಹತ್ಯೆ!

3 ವರ್ಷದ ಮಗು ಎದುರೇ ದಂಪತಿಯ ಬರ್ಬರ ಹತ್ಯೆ!

Murder Case: ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಪಹಾಡ ಬಳಿ ಜೋಡಿ ಕೊಲೆ ನಡೆದಿದೆ. ಪೊಲೀಸರು ಸ್ಥಳ ಪರಿಶೀಲಿಸಿ, ಕೊಲೆ ಮಾಡಿದ ಇಬ್ಬರು ಯುವಕರು ಹಾಗೂ ಆರೋಪಿಯ ಸಹೋದರಿ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುಗಳನ್ನು ಆಧರಿಸುವುದು ಭಾರತೀಯ ಸಂಸ್ಕೃತಿಯ ರೂಪವಾಗಿದೆ : ಶಾಸಕ ಪ್ರದೀಪ್ ಈಶ್ವರ್

ಗುರುಗಳನ್ನು ಆಧರಿಸುವುದು ಭಾರತೀಯ ಸಂಸ್ಕೃತಿಯ ರೂಪವಾಗಿದೆ

ನಗರದ ಕಂದವಾರ ಬಾಗಿಲು ಕೆ.ವಿ.ಕನ್ನಡ ಮಾಧ್ಯಮ ಶಾಲೆಯಲ್ಲಿ 44 ವರ್ಷಗಳ ಕಾಲ ಸಹಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ವಿದ್ಯಾರ್ಥಿಗ ಬಾಳಿಗೆ ಬೆಳಕು ತೋರಿದ ಪಿ.ವಿ.ವೀಣಾ ಅವರಿಗೆ ತಮ್ಮ ಏಕೈಕಪುತ್ರ ನಂದಕಿಶೋರ್ ನಿವೃತ್ತಿಯ ನಂತರದ ಬಾಳಿಗೆ ಶುಭಕೋರುವ ಸಲುವಾಗಿ ಅಭಿನಂದನ ಸಮಾರಂಭ ಏರ್ಪಡಿಸಿ ಏರ್ಪಡಿಸಿ ವಿದ್ಯಾರ್ಥಿಗಳು,ಶಿಕ್ಷಣ ತಜ್ಞರು, ಉದ್ಯೋಗ ನೀಡಿದ ಶಿಕ್ಷಣ ಸಂಸ್ಥೆಯ ಮಾಲಿಕರು,ತಮ್ಮ ಜತೆಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ಅಪಾರ ಬಂಧುಬಳಗವನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿ ತಾಯಿಯ ಋಣವನ್ನು ತೀರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ

Lawyer Jagadish: 93 ದಿನಗಳ ಬಳಿಕ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಲಾಯರ್​ ಜಗದೀಶ್ ಜೈಲಿನಿಂದ ರಿಲೀಸ್

93 ದಿನಗಳ ಬಳಿಕ ಲಾಯರ್​ ಜಗದೀಶ್ ಜೈಲಿನಿಂದ ರಿಲೀಸ್

Lawyer Jagadish: ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ರಸ್ತೆಯಲ್ಲಿ ಅಣ್ಣಮ್ಮ ದೇವಿ ಕೂರಿಸಲು ವಿರೋಧಿಸಿದ್ದಕ್ಕೆ ಜಗದೀಶ್ ಮತ್ತು ಸ್ಥಳೀಯರ ನಡುವೆ ಜಗಳವಾಗಿತ್ತು. ಹೀಗಾಗಿ ಜನವರಿ 25ರಂದು ಬಂಧನವಾಗಿದ್ದ ಲಾಯರ್‌ ಜಗದೀಶ್‌, ಇದೀಗ ಜೈಲಿನಿಂದ ರಿಲೀಸ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.

ಪಹಲ್ಗಾಮ ಉಗ್ರರ ಕುಕೃತ್ಯವನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ : ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರಳಿ

ಉಗ್ರರ ಕುಕೃತ್ಯವನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ರಕ್ಷಣಾ ಇಲಾಖೆಯ ವೈಫಲ್ಯ.ಪಾಕಿಸ್ಥಾನದ ಮೇಲೆ ಯುದ್ದ ಅನಿವಾರ್ಯವಲ್ಲ ಎಂದು ಹೇಳಿಕೆ ನೀಡಿರುವುದು ಗಡಿಯಲ್ಲಿರುವ ನಮ್ಮ ಯೋಧರ ಆತ್ಮಸ್ತೈರ್ಯವನ್ನು ಕುಗ್ಗಿಸುವಂತಿದೆ.ಈವಿಚಾರ ಪಾಕಿಸ್ಥಾನದ ಟಿ.ವಿ.ಮಾಧ್ಯಮಗಳಲ್ಲಿ ಕೂಡ ಬಿತ್ತರ ವಾಗಿರುವುದು ಭಾರತೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಜವಾಬ್ದಾರಿ ಯುತ ಸ್ಥಾನದಲ್ಲಿ ರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

BJP MLAs' suspension: 18 ಬಿಜೆಪಿ ಶಾಸಕರ ಅಮಾನತು ಮರು ಪರಿಶೀಲಿಸಲು ಸಿಎಂಗೆ ರಾಜ್ಯಪಾಲರ ಪತ್ರ

ಬಿಜೆಪಿ ಶಾಸಕರ ಅಮಾನತು ಮರು ಪರಿಶೀಲನೆಗೆ ರಾಜ್ಯಪಾಲರ ಸಲಹೆ

BJP MLAs' suspension: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ರಾಜ್ಯ ರಾಜ್ಯಪಾಲರನ್ನು ಭೇಟಿ ಯಾದ ಬಿಜೆಪಿ ನಿಯೋಗ ಅಮಾನತು ಹಿಂಪಡೆಯಲು ಕ್ರಮವಹಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿದ 24 ಗಂಟೆ ಕಳೆಯುವುದರೊಳಗೆ ರಾಜ್ಯಪಾಲರು ಸಿಎಂ ಹಾಗೂ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಎಐ ಬಳಸಿ ರೇಡಿಯಾಲಜಿ ವರದಿ ಮಾಡುವಿಕೆಯನ್ನು ಪರಿವರ್ತಿಸಲು SPARK ರೇಡಿಯಾಲಜಿ ಭಾರತದಲ್ಲಿ ಸ್ಪಾರ್ಕ್.ಎಐ  ಪ್ರಾರಂಭ

ಭಾರತದಲ್ಲಿ ಸ್ಪಾರ್ಕ್. ಎಐ ಪ್ರಾರಂಭ ಶೀಘ್ರದಲ್ಲೇ

ಸ್ಪಾರ್ಕ್. ಎಐ ಕೆಲಸದ ಹರಿವನ್ನು ಸುಗಮಗೊಳಿಸುವ ಮೂಲಕ, ಕೆಲಸದ ಹೊರೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ರೋಗಿಯ ಫಲಿತಾಂಶಗಳನ್ನು ಹೆಚ್ಚಿಸಲು ವರದಿ ಮಾಡುವಿಕೆಯನ್ನು ಸರಳಗೊಳಿಸುವ ಮೂಲಕ ಹೆಚ್ಚುತ್ತಿರುವ ರೋಗನಿರ್ಣಯದ ಬೇಡಿಕೆ ಗಳನ್ನು ಪೂರೈಸುವ ರೇಡಿಯಾ ಲಜಿಸ್ಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

Gold Price Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಇಷ್ಟಿದೆ?

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆ ಕಂಡಿದ್ದು, 8,975 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 6ರೂ. ಇಳಿಕೆಯಾಗಿದ್ದು 9,791 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,800 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,750 ರೂ. ಮತ್ತು 100 ಗ್ರಾಂಗೆ 8,97,500 ರೂ. ನೀಡಬೇಕಾಗುತ್ತದೆ.

Bike Taxi service: ಜೂ.15ರವರೆಗೆ ಬೈಕ್ ಟ್ಯಾಕ್ಸಿ ಸೇವೆ ವಿಸ್ತರಿಸಿ ಹೈಕೋರ್ಟ್‌ ಆದೇಶ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಹೈಕೋರ್ಟ್‌ ಆದೇಶ

Bike Taxi service: ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಲು ಹೈಕೋರ್ಟ್‌ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರ‍್ಯಾಪಿಡೋ, ಓಲಾ, ಉಬರ್ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಇತ್ತೀಚೆಗೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಇದೀಗ ಇನ್ನೂ ಒಂದೂವರೆ ತಿಂಗಳ ಕಾಲ ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಹೈಕೋರ್ಟ್‌ ಅನುಮತಿ ನೀಡಿದೆ.

Basava Jayanti: ಮೊದಲ ಬಾರಿಗೆ ಸಂಸತ್‌ ಆವರಣದಲ್ಲಿ ಬಸವ ಜಯಂತಿ ಆಚರಣೆ

ಸಂಸತ್‌ ಆವರಣದಲ್ಲಿ ಬಸವ ಜಯಂತಿ ಆಚರಣೆ

Basava Jayanti in Parliament: ಸಂಸತ್‌ ಭವನದ ಎದುರು ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಿಸಲಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ನೂರಾರು ಅಭಿಮಾನಿಗಳು ಭಾಗಿಯಾಗಿದ್ದಾರೆ. ಸಂಸತ್ ಭವನದ ಎದುರಿರುವ ಬಸವ ಪ್ರತಿಮೆ ಬಳಿ ಕಾರ್ಯಕ್ರಮ ನಡೆದಿದೆ.

Lakshmi Hebbalkar : ಅಧಿಕಾರಿಗೆ ಕಪಾಳಮೋಕ್ಷಕ್ಕೆ ಮುಂದಾಗಿದ್ದ ಸಿಎಂ; ಅಚಾತುರ್ಯ ನಡೆದಿದೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥನೆ

ಸಿಎಂ ನಡೆಯನ್ನು ಸಮರ್ಥಿಸಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಿಎಂ ಸಿದ್ದರಾಮಯ್ಯ ಗರಂ ಆಗಿ ವೇದಿಕೆ ಮೇಲೆಯೇ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು. ಈ ಘಟನೆ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವಲ್ಲೇ ಇದು ಅಚಾತುರ್ಯದಿಂದಾದ ಘಟನೆ ಎಂದು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಅವರು ಸಮರ್ಥಿಸಿಕೊಂಡಿದ್ದಾರೆ.

Karnataka Rains: ಹವಾಮಾನ ವರದಿ; ಇಂದು ಬೆಂಗಳೂರು, ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ!

ಇಂದು ಬೆಂಗಳೂರು, ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ!

Karnataka Rains: ಬೆಂಗಳೂರು ಮತು ಸುತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 23°C ಇರುವ ಸಾಧ್ಯತೆ ಇದೆ.