ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಗ್ಯಾರಂಟಿ ಯೋಜನೆ ಕುರಿತು ಸಚಿವರಿಂದಲೇ ಅಸಮಾಧಾನ; ಜಾರಿ ಮಾಡಿ ಈಗ ಒದ್ದಾಡ್ತಿದ್ದೇವೆ ಎಂದು ಹೇಳಿದ್ಯಾರು?

ಗ್ಯಾರಂಟಿ ಯೋಜನೆ ಕುರಿತು ಸಚಿವರಿಂದಲೇ ಅಸಮಾಧಾನ

ಗ್ಯಾರಂಟಿಗಳ ಘೋಷಣೆ ಮಾಡಿ ಬಳಿಕ ಯೋಜನೆ ಜಾರಿಗೆ ತಂದು ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡ ಕಾಂಗ್ರೆಸ್‌ ಸರ್ಕಾರದ ಯೋಜನೆ ಕುರಿತು ಸ್ವತಃ ಸಚಿವರೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಬೇಕೋ, ಬೇಡವೋ ರಾಜ್ಯದಲ್ಲಿ ನಾವು ಗ್ಯಾರಂಟಿ ಕೊಟ್ಟಿದ್ದೇವೆ.

Sowjanya Case: ಸೌಜನ್ಯ ಪ್ರಕರಣ: ಹೊಸ ವಿಶೇಷ ತನಿಖಾ ತಂಡದಿಂದ ಖಡಕ್ ಪೊಲೀಸ್ ಅಧಿಕಾರಿ ನಿರ್ಗಮನ?: ಅಧಿಕಾರಿಗಳ ಬದಲಾವಣೆಗೆ ʼಗ್ಯಾಂಗ್‌ʼ ಹೊಸ ದಾಳ

ಅಧಿಕಾರಿಗಳ ಬದಲಾವಣೆಗೆ ʼಗ್ಯಾಂಗ್‌ʼ ಹೊಸ ದಾಳ

ಕರಾವಳಿಯನ್ನು ಈ ಹಿಂದೆ ತಲ್ಲಣಗೊಳಿಸಿದ್ದ ಬುರುಡೆ ಪ್ರಕರಣದ ಸಂದರ್ಭದಲ್ಲೂ ಇದೇ ತಂಡ ತಮಗೆ ಬೇಕಾದ ಅಧಿಕಾರಿಗಳನ್ನು ತಂದು ತನಿಖೆಯನ್ನು ಹಳ್ಳಹಿಡಿಸಲು ಹೂಡಿದ್ದ ಅದೇ ತಂತ್ರಗಾರಿಕೆ ಯ ದಾಳವನ್ನು, ಇಂದು ಸೌಜನ್ಯ ಪ್ರಕರಣದ ಮರು ತನಿಖೆಯಲ್ಲೂ ಹೂಡಲು ಹೊರಟಿರುವುದು ಅಪರಾಧ ತನಿಖಾ ಇತಿಹಾಸದ ನಿಖರ ಪುನರಾವರ್ತನೆಯಂತೆ ಗೋಚರಿಸುತ್ತಿದೆ.

ವಿಪ್ರೋ ಬೆಂಗಳೂರು ಮ್ಯಾರಥಾನ್‌; ವಾಹನ ಸವಾರರೇ ಗಮನಿಸಿ, ಬೆಳಗ್ಗಿನಿಂದಲೇ ಹಲವು ರಸ್ತೆಗಳು ಬಂದ್

ವಿಪ್ರೋ ಬೆಂಗಳೂರು ಮ್ಯಾರಥಾನ್‌; ಬೆಳಗ್ಗಿನಿಂದಲೇ ಹಲವು ರಸ್ತೆಗಳು ಬಂದ್

13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ ಹಾಗೂ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ಕಂಠೀರವ ಕ್ರೀಡಾಂಗಣದಿಂದ ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಈ ಮ್ಯಾರಥಾನ್ ನಡೆಯಲಿದೆ. ಡಿಸಿಎಂ ಡಾ ಜಿ.ಪರಮೇಶ್ವರ್, ಸಂಸದ ತೇಜಸ್ವಿ ಸೂರ್ಯ, ಮಂದಿರಾ ಬೇಡಿ, ರಂಜಿತಾ ಘೋಷ್, ಇರಿನಾ ಘೋಷ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಅ.10ಕ್ಕೆ ನದಿಗಳ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಅ.10ಕ್ಕೆ ನದಿಗಳ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳು ಕೇವಲ ನೀರಿನ ಮೂಲಗಳಲ್ಲ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಗ್ರಾಮೀಣ ಭಾಗದ ಹಲವು ಆರ್ಥಿಕ ಚಟುವಟಿಕೆಗಳು ನದಿಗಳೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ನದಿಗಳ ಹರಿವು ಮತ್ತು ಪರಿಸರ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳು ಸ್ಥಳೀಯ ಜನಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಪರಿಸರ ಹೋರಾಟಗಾರರ ವಾದವಾಗಿದೆ.

ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕನ್ನಡದ ʼಶಿವಮಣಿʼ ಡ್ರಮ್ಮರ್ ದೇವ ನಿಧನ

ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕನ್ನಡದ ʼಶಿವಮಣಿʼ ಡ್ರಮ್ಮರ್ ದೇವ ನಿಧನ

ಕನ್ನಡದ ಶಿವಮಣಿ ಎಂದೇ ಪ್ರಖ್ಯಾತರಾಗಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ವಾದ್ಯಗಾರ ಡ್ರಮ್ಮರ್ ದೇವ ಅವರು ತೀವ್ರ ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ ಜೂನ್‌ ತಿಂಗಳಿನಲ್ಲಿ ಡ್ರಮ್ಮರ್ ದೇವ ಸ್ಟ್ರೋಕ್‌ಗೆ ಒಳಗಾಗಿದ್ದರು. ಆನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ಹಾಸನಾಂಬೆ ದರ್ಶನೋತ್ಸವದ ದಿನಾಂಕ ಪ್ರಕಟ; ಭಕ್ತರಿಗೆ ಸಿಗಲಿದೆ 12 ದಿನಗಳ ದರ್ಶನ ಭಾಗ್ಯ

ಹಾಸನಾಂಬೆ ದರ್ಶನೋತ್ಸವದ ದಿನಾಂಕ ಪ್ರಕಟ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ವಿಶ್ವವಿಖ್ಯಾತ ಶ್ರೀ ಹಾಸನಾಂಬೆ ದೇವಿಯ 2026ರ ದರ್ಶನೋತ್ಸವದ ದಿನಾಂಕಗಳು ಅಧಿಕೃತವಾಗಿ ಪ್ರಕಟಗೊಂಡಿದ್ದು, ಜಿಲ್ಲಾಡಳಿತದಿಂದ ಭರದ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿಯ ಮಹೋತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಒಟ್ಟು 14 ದಿನಗಳ ಕಾಲ ಜರುಗಲಿದೆ.

ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ

ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ

ಆಧುನಿಕ ವಿಜ್ಞಾನವೂ ಕೂಡ ದೇಸಿ ಗೋವು ಹಾಗೂ ಮಿಶ್ರತಳಿಯ ಹಾಲು, ತುಪ್ಪಗಳನ್ನು ವಿಶ್ಲೇಷಿಸಿದ್ದು, ದೇಶಿ ಗೋವಿನ ಎ2 ಹಾಲು ಮತ್ತು ತುಪ್ಪುಗಳು ಶ್ರೇಷ್ಠ ಎಂಬುದಾಗಿ ದೃಢೀಕರಿಸಿವೆ. ಗೋವಿನ ಉತ್ಪನ್ನಗಳು ಜೀರ್ಣಕ್ರಿಯೆಗೆ ಪೂರಕವಾದರೆ, ಮಿಶ್ರತಳಿಯ ಉತ್ಪನ್ನಗಳು ಜೀರ್ಣಕ್ರಿಯೆಗೆ ಸಹಕಾರಿಯಲ್ಲ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದ್ದಾರೆ.

Gubbi News: ಶತಮಾನ ಕಂಡ ಪಿಎಂಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಥಳಿತ..!! : ಪೋಷಕರ ದೂರು - ಶಿಕ್ಷಕ ಸಮೀರ್ ಸಸ್ಪೆಂಡ್

ಶತಮಾನ ಕಂಡ ಪಿಎಂಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಥಳಿತ..!!

ಶುಕ್ರವಾರ ಶಾಲೆಯಲ್ಲಿ ಏಳನೇ ತರಗತಿಯ ನೂತನ್ ಹಾಗೂ ದಯಾನಂದ್ ಎಂಬ 12 ವರ್ಷದ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೀರ್ ಮಕ್ಕಳ ಮುಂದೆಯೇ ಕೋಲು ಹಿಡಿದು ಮನಬಂದಂತೆ ಥಳಿಸಿ ದ್ದಾರೆ. ಕಾಲು ಕೈ ಹಾಗೂ ಎದೆಯ ಭಾಗದಲ್ಲಿ ಬಾಸುಂಡೆ ಬಂದು ರಕ್ತ ಹೆಪ್ಪುಗಟ್ಟಿ ಮಕ್ಕಳು ನರಳಾಡಿದ್ದಾರೆ. ಮನೆಗೆ ಮರಳಿದ ಮಕ್ಕಳ ವರ್ತನೆ ಕಂಡ ಪೋಷಕರು ವಿಚಾರಿಸಿದಾಗ ಶಿಕ್ಷಕನ ಅಮಾನವೀಯ ನಡವಳಿಕೆ ತಿಳಿದುಬಂದಿದೆ.

ತುಮಕೂರಿನಲ್ಲಿ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ; 20ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ

ತುಮಕೂರಿನಲ್ಲಿ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ

ತುಮಕೂರಿನಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ಹಿಂದೂ ಮಹಾ ಗಣಪತಿಗೆ ಮಹಾಮಂಗಳಾರತಿ, ಪುಷ್ಪಾರ್ಚನೆ ಮಾಡಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳು ಗಣೇಶನಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

Mangaluru Wall Collapse: ಮಂಗಳೂರಿನಲ್ಲಿ ಕಟ್ಟಡದ ಬಾಲ್ಕನಿ ಕುಸಿದು ಒಬ್ಬ ವಿದ್ಯಾರ್ಥಿಯ ಮೆದುಳು ನಿಷ್ಟ್ರಿಯ, ನಾಲ್ವರಿಗೆ ಗಾಯ; video

ಮಂಗಳೂರಿನಲ್ಲಿ ಕಟ್ಟಡದ ಬಾಲ್ಕನಿ ಕುಸಿದು ವಿದ್ಯಾರ್ಥಿಯ ಮೆದುಳು ನಿಷ್ಟ್ರಿಯ

ಮಂಗಳೂರಿನ ಎಮ್ಮೆಕೆರೆಯ ಲಕ್ಷ್ಮೀನಾರಾಯಣ ಸಭಾಭವನದ ಬಾಲ್ಕನಿಯ ತಡೆಗೋಡೆ ಕುಸಿದು ಅವಘಡ ಸಂಭವಿಸಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಮೊದಲ ಮಹಡಿಯ ತಡೆಗೋಡೆ ಕುಸಿದಿದ್ದರಿಂದ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿಯ ಮೆದುಳು ನಿಷ್ಟ್ರಿಯಗೊಂಡಿದೆ ಎಂದು ತಿಳಿದುಬಂದಿದೆ.

Cybersecurity: ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಸೈಬರ್ ಭದ್ರತೆಗೆ ಹೊಸ ಸವಾಲು: ಡಾ.ಕೆ.ಆರ್.ವೇಣುಗೋಪಾಲ್

ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಸೈಬರ್ ಭದ್ರತೆಗೆ ಹೊಸ ಸವಾಲು

ಐಇಇಇ, ಡಬ್ಲ್ಯೂ ಐಇ ಬೆಂಗಳೂರು ಸೆಕ್ಷನ್‌ ಮತ್ತು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ʼಕ್ವಾಂಟಂʼ (ನಾವಿನ್ಯತೆ, ಬುದ್ಧಿವಂತಿಕೆ, ಪರಿಣಾಮ) ಕುರಿತು ವಿಚಾರಗೋಷ್ಠಿಯಲ್ಲಿ  ಮಾತನಾಡಿದ ಅವರು, ಸಾಂಪ್ರದಾಯಿಕ ಕಂಪ್ಯೂಟರ್‌ ಗಳು 0 ಮತ್ತು 1 ಎಂಬ ನಿರ್ದಿಷ್ಟ ಸ್ಥಿತಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದರೆ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಒಂದೇ ಸಮಯದಲ್ಲಿ ಹಲವು ಸಾಧ್ಯತೆಗಳಿರುವ ಕ್ವಾಂಟಮ್ ಸ್ಥಿತಿಗಳನ್ನು ಬಳಸಿಕೊಳ್ಳಲಾಗುತ್ತದೆ

Rathotsava: ಕೈವಾರದಲ್ಲಿ ಹುಣ್ಣಿಮೆ ಪೂಜೆ, ರಥೋತ್ಸವ

ಕೈವಾರದಲ್ಲಿ ಹುಣ್ಣಿಮೆ ಪೂಜೆ, ರಥೋತ್ಸವ

ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರಾಯಣಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರಾಯಣ ತಾತಯ್ಯನವರ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಬಳಿಕ ನಡೆದ ರಥೋತ್ಸವದ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

Chikkaballapur News: ಶಿಕ್ಷಣದಿಂದ ವಿವೇಕ, ಜ್ಞಾನ, ಕರುಣೆ, ಪ್ರೀತಿ ಬೆಳೆಯಬೇಕು: ಗೊಲ್ಲಹಳ್ಳಿ ಶಿವಪ್ರಸಾದ್

ಶಿಕ್ಷಣದಿಂದ ವಿವೇಕ, ಜ್ಞಾನ, ಕರುಣೆ, ಪ್ರೀತಿ ಬೆಳೆಯಬೇಕು

ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಸಮಾಜ ನಿಮ್ಮನ್ನು ಕೋಟಿ ಕಣ್ಣುಗಳಿಂದ ನೋಡುತ್ತಿದೆ ಎಂಬ ಎಚ್ಚರ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ, ಯಶಸ್ಸಿನ ಗುರಿ ತಲುಪುವ ಸಂಕಲ್ಪ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲೂ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಹೊರತರುವ ಕೆಲಸವನ್ನು ಬೋಧಕರು ಮಾಡಬೇಕು

Prakash Raj: ಸೆ.30ರಂದು ಎಸ್‌ಐಆರ್ ವಿರೋಧಿ ಸಮಾವೇಶ: ನಟ ಪ್ರಕಾಶ್ ರಾಜ್

ಸೆ.30ರಂದು ಎಸ್‌ಐಆರ್ ವಿರೋಧಿ ಸಮಾವೇಶ: ನಟ ಪ್ರಕಾಶ್ ರಾಜ್

ರಾಜ್ಯದ 100 ಮತಗಟ್ಟೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಪರಿಶೋಧನೆ ನಡೆಸಿ, ಲೋಪಗಳು ಕಂಡುಬಂದಿರುವುದನ್ನು ದಾಖಲೆಗಳ ಸಹಿತ ಜನರ ಮುಂದಿಡಲಾಗುವುದು. ಸೆ.30ರಂದು ಬೆಂಗಳೂರಿ ನಲ್ಲಿ ನಡೆಯುವ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದು, ಅ.15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಜನರನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ

Gandhi Sante: ಹೊನ್ನೇಸರದಲ್ಲಿ ಸ್ವದೇಶಿ, ಸ್ವಾವಲಂಬನೆ ಗುರಿಯ ʼಗಾಂಧಿ ಸಂತೆʼಗೆ ಚಾಲನೆ

ಹೊನ್ನೇಸರದಲ್ಲಿ ಸ್ವದೇಶಿ, ಸ್ವಾವಲಂಬನೆ ಗುರಿಯ ʼಗಾಂಧಿ ಸಂತೆʼಗೆ ಚಾಲನೆ

ಪರಿಶುದ್ಧ ಕೈಮಗ್ಗದ ಉತ್ಪನ್ನಗಳ ಖರೀದಿಗೆ ಖ್ಯಾತ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಗಿರುವ 'ಚರಕʼ ನೇಕಾರರ ಸಂಘ ವೇದಿಕೆ ಕಲ್ಪಿಸಿದೆ. ಸಾಗರ ತಾಲೂಕಿನ ಹೊನ್ನೇಸರದಲ್ಲಿ ಆಯೋಜಿಸಿರುವ ʼಗಾಂಧಿ ಸಂತೆʼಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಶನಿವಾರ ಚಾಲನೆ ನೀಡಿದ್ದಾರೆ.

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು: ಶ್ರದ್ಧಾ ಅಮಿತ್

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು

Tumkur News: ವ್ಯಸನ ಮುಕ್ತರಾದ ವ್ಯಕ್ತಿಗಳು ಮುಂದೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಟ್ರಸ್ಟ್ ವತಿಯಿಂದ ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ನ ಟ್ರಸ್ಟಿ, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ (ಕ್ಷೇಮವನ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ತಿಳಿಸಿದ್ದಾರೆ.

Pavithra Gowda: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆ; ಅರ್ಜಿ ವಜಾ ಮಾಡಿದ ಕೋರ್ಟ್‌

ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆ; ಅರ್ಜಿ ವಜಾ

Renukaswamy Murder case: ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಆಕೆಯ ಭವಿಷ್ಯದ ವಿಚಾರವನ್ನೂ ಪರಿಗಣಿಸಿ ಜಾಮೀನು ನೀಡಬೇಕು ಎಂದು ಪವಿತ್ರಾ ಗೌಡ ಮನವಿ ಮಾಡಿದ್ದರು. ಆದರೆ, ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ ವಾದ - ಪ್ರತಿವಾದವನ್ನು ಆಲಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪೊಲೀಸ್ ದಬ್ಬಾಳಿಕೆಗೆ ಹೈಕೋರ್ಟ್ ಚಾಟಿ; ಮೋಹನ ಗೌಡ ಪ್ರಕರಣದಲ್ಲಿ ಐತಿಹಾಸಿಕ ಆದೇಶ

ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪೊಲೀಸ್ ದಬ್ಬಾಳಿಕೆಗೆ ಹೈಕೋರ್ಟ್ ಚಾಟಿ

ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಬಂಧನ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.‌ ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ, ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಮ್ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.

ಎಸ್‌ಐಆರ್‌ ವಿರೋಧಿಸಿ ತುಮಕೂರಿನಲ್ಲಿ ಸೆ. 28ರಂದು ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

ಎಸ್‌ಐಆರ್‌ ವಿರೋಧಿಸಿ ತುಮಕೂರಿನಲ್ಲಿ ಸೆ. 28ಕ್ಕೆ ಕಾಂಗ್ರೆಸ್‌ ಪ್ರತಿಭಟನೆ

Tumkur News: ಬಿಜೆಪಿಯನ್ನು ಅಧಿಕಾರಕ್ಕೆ ತರಲು ಚುನಾವಣಾ ಆಯೋಗವು ಎಸ್.ಐ.ಆರ್. ಪ್ರಕ್ರಿಯೆ ಮೂಲಕ ಬಿಜೆಪಿಯೇತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸುತ್ತಿದೆ. ಬಬಲೇಶ್ವರ, ಬೆಳಗಾವಿ ಮತ್ತು ಧಾರವಾಡ ದಕ್ಷಿಣದಲ್ಲಿ ಇದರ ಅಕ್ರಮಗಳು ದಾಖಲೆಗಳ ಮೂಲಕ ಬಹಿರಂಗಗೊಂಡಿವೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ನನ್ನ ಪಾಲಿಗೆ ಎಂದಿಗೂ ಹೆಮ್ಮೆಯ ವಿಷಯ: ನ್ಯಾಯಾಧೀಶ ಜಯಂತ್ ಕುಮಾರ್

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ಹೆಮ್ಮೆಯ ವಿಷಯ: ನ್ಯಾ. ಜಯಂತ್ ಕುಮಾರ್

Tumkur News: ವೃಕ್ಷಗಳ ಮಾರಣಹೋಮದಿಂದ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳನ್ನು ದೈನಂದಿನ ಪಾಲನೆ ಮಾಡುವ ಮೂಲಕ ಬೆಳೆಸಬೇಕು ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಕರೆ ನೀಡಿದ್ದಾರೆ.

Hasanamba Jatra Mahotsava 2026: ಅ.29ರಿಂದ ನ.11ರವರೆಗೆ ಹಾಸನಾಂಬೆ ಜಾತ್ರೆ; ಅನಗತ್ಯ ವಿಐಪಿ ಪಾಸ್ ವ್ಯವಸ್ಥೆಗೆ ಕಡಿವಾಣ

ಅ.29ರಿಂದ ನ.11ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದಲ್ಲಿ ಹಾಸನಾಂಬೆ ದರ್ಶನೋತ್ಸವದ ಅಧಿಕೃತ ಪೋಸ್ಟರ್ ಹಾಗೂ ವಿಶೇಷ ವೆಬ್‌ಸೈಟ್‌ ಅನ್ನು ಸಚಿವ ಶಿವಲಿಂಗೇಗೌಡ ಅವರು ಬಿಡುಗಡೆಗೊಳಿಸಿದ್ದಾರೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಅತ್ಯಂತ ವಿಜೃಂಭಣೆಯಿಂದ ಹಾಸನಾಂಬೆ ಜಾತ್ರೆ ನಡೆಯಲಿದೆ.

ಹಾಲಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಹಾಲಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

CM DK Shivakumar: ಹಾಲಿನ ದರ ಏರಿಕೆ ವಿಚಾರ ಕುರಿತು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್, 'ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ನನ್ನನ್ನು ಭೇಟಿಯಾಗಿ 12 ರೂ. ಹೆಚ್ಚಳ ಮಾಡಿ. ಅದರಲ್ಲಿ 2 ರೂ. ಸಂಘಗಳಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿಗಳನ್ನು ಪಡೆದು, ಪರಿಶೀಲಿಸಿದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ' ಎಂದು ಹೇಳಿದ್ದಾರೆ.

MLC Election: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ NDA ನಾಯಕರ ಸಭೆ; ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರೆದುರು ತೆರೆದಿಡಲು ಸಚಿವ ಜೋಶಿ ಸಲಹೆ

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರೆದುರು ತೆರೆದಿಡಲು ಜೋಶಿ ಸಲಹೆ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕುರಿತು ಬಿಜೆಪಿ ಮತ್ತು ಜೆಡಿಎಸ್‌ ಉಭಯ ಪಕ್ಷಗಳ ಮುಖಂಡರೂ ಪ್ರಮುಖ ವಿಷಯಗಳ ಮೇಲೆ ಸಮಾಲೋಚನೆ ನಡೆಸಿದ್ದಾರೆ.

Congress Protest: ಎಸ್‌ಐಆರ್‌ ರದ್ದುಗೊಳಿಸಿ, ಹೊಸ ಪ್ರಕ್ರಿಯೆ ನಡೆಸಿ: ಕೇಂದ್ರ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆಶಿ ಒತ್ತಾಯ

ಎಸ್‌ಐಆರ್‌ ರದ್ದುಗೊಳಿಸಿ, ಹೊಸ ಪ್ರಕ್ರಿಯೆ ನಡೆಸಿ: ಸಿಎಂ ಒತ್ತಾಯ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಜ್ಞಾನೇಶ್‌ ಕುಮಾರ್‌ ಅವರು ಚೀಫ್‌ ಎಲೆಕ್ಷನ್‌ ಕಮಿಷನರ್‌ ಅಲ್ಲ, ಚೀಫ್‌ ಸೆಲೆಕ್ಷನ್‌ ಕಮಿಷನರ್‌ ಆಗಿದ್ದೀರಿ. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.

Loading...