ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Karnataka Per Capita Income: ತಲಾದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ

ತಲಾದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ

ನಂಜುಂಡಪ್ಪ ಅವರ ವರದಿಯ ಆಶಯಗಳು ಮತ್ತು ಪರಿಣಾಮಗಳನ್ನು ಅಧಿವೇಶನದಲ್ಲಿ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು, ನಂಜುಂಡಪ್ಪ ಅವರ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ, ಸಮೀಕ್ಷೆ ನಡೆಸುವ ಸರ್ಕಾರದ ಕಾಳಜಿ ಮತ್ತು ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು.

ಗ್ಯಾರಂಟಿಗಳಿಗೆ ಇದುವರೆಗೆ ದಲಿತರ 39 ಸಾವಿರ ಕೋಟಿ ರೂ. ಬಳಕೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಗ್ಯಾರಂಟಿಗಳಿಗೆ ದಲಿತರ 39 ಸಾವಿರ ಕೋಟಿ ರೂ. ಬಳಕೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಈ ವರ್ಷದಲ್ಲಿ ಪರಿಶಿಷ್ಟ ಜಾತಿಗಳ ಶ್ರೇಯೋಭಿವೃದ್ಧಿಗೆ 42 ಸಾವಿರ ಕೋಟಿ ಎಸ್‍ಇಪಿ, ಟಿಎಸ್‍ಪಿ ಮೊತ್ತವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಇದುವರೆಗೆ ಈ 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನಿದೆ ಎಂದ ಡಿ.ಕೆ. ಶಿವಕುಮಾರ್

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನಿದೆ: ಡಿಕೆಶಿ

DK Shivakumar: ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ನಡೆದಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಎಲ್ಲ ಸೇರಿ ಊಟ ಮಾಡೋದ್ರಲ್ಲಿ ತಪ್ಪು ಹುಡುಕಬೇಡಿ ಎಂದು ಹೇಳಿದ್ದಾರೆ.

Milk Incentive: ರಾಜ್ಯ ರೈತರಿಗೆ ಗುಡ್‌ನ್ಯೂಸ್‌; ಹಾಲಿನ ಪ್ರೋತ್ಸಾಹಧನ 7 ರೂ.ಗೆ ಹೆಚ್ಚಳ

ರಾಜ್ಯ ರೈತರಿಗೆ ಗುಡ್‌ನ್ಯೂಸ್‌; ಹಾಲಿನ ಪ್ರೋತ್ಸಾಹಧನ 7 ರೂ.ಗೆ ಹೆಚ್ಚಳ

ಹಾಲಿನ ಪ್ರೋತ್ಸಾಹ ಹೆಚ್ಚಿಸುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರೈತರಿಗೆ ಪ್ರೋತ್ಸಾಹಧನ ಸಂಪೂರ್ಣವಾಗಿ ತಲುಪುತ್ತಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಬೆಲೆ ಏರಿಕೆಯ ಹೊರತಾಗಿಯೂ ಸರ್ಕಾರದಿಂದ ನೆರವು ಮುಂದುವರಿಯುತ್ತಲೇ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

ಐಸಿಎಸಿಇಎಎ  –2025 ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ

ಐಸಿಎಸಿಇಎಎ –2025 ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ

ಮೂರು ದಿನಗಳ ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ಜಗತ್ತಿನ ನಾನಾ ದೇಶಗಳಿಂದ ಬಂದಿರುವ ವಿಜ್ಞಾನಿ ಗಳು, ಸಂಶೋಧಕರು ಮತ್ತು ಕೈಗಾರಿಕಾ ತಜ್ಞರು ಭಾಗವಹಿಸಿದ್ದು, ವಾಯುಯಾನ ರಚನಾ ವಿನ್ಯಾಸ ದಿಂದ ಹಿಡಿದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಗಳವರೆಗೆ ಇರುವ ವಿಮಾನೋ ದ್ಯಮ ತಂತ್ರಜ್ಞಾನಗಳ ಭವಿಷ್ಯದ ದಿಕ್ಕುಗಳನ್ನು ಚರ್ಚಿಸಲಿದ್ದಾರೆ.

2030ರ ವೇಳೆಗೆ ಭಾರತದ 50 ಲಕ್ಷ ಯುವಜನರಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ಕೌಶಲ್ಯ ತರಬೇತಿ ನೀಡಲು ಮುಂದಾದ IBM

2030ರ ವೇಳೆಗೆ ಭಾರತದ 50 ಲಕ್ಷ ಯುವಜನರಿಗೆ IBM ನಿಂದ ತರಬೇತಿ

IBM ಸಂಸ್ಥೆಯು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಎಐ ಪಠ್ಯಕ್ರಮವನ್ನು ಸಹಯೋಗದ ಮೂಲಕ ಅಭಿವೃದ್ಧಿಪಡಿಸುತ್ತಿದ್ದು, ಈ ಮೂಲಕ ಶಾಲಾ ಮಟ್ಟದಲ್ಲಿಯೂ ಸಿದ್ಧತೆಯನ್ನು ಬಲಪಡಿಸುತ್ತಿದೆ. ಇದರೊಂದಿಗೆ AI Project Cookbook, Teacher Handbook ಮತ್ತು ವಿವರಣಾ ಮಾಡ್ಯೂಲ್‌ ಗಳಂತಹ ಬೋಧನಾ ಸಾಮಗ್ರಿಗಳನ್ನೂ ಸಹ ಅಭಿವೃದ್ಧಿಪಡಿಸುತ್ತಿದೆ.

ಎಸ್ ಎ ಪಿ ಲ್ಯಾಬ್ಸ್ ಇಂಡಿಯಾದಿಂದ ಬೆಂಗಳೂರು ಕ್ಯಾಂಪಸ್‌ನಲ್ಲಿ ಹೊಸ ಅತ್ಯಾಧುನಿಕ ಕ್ರೀಡಾ ಸೌಲಭ್ಯಕ್ಕೆ ಚಾಲನೆ

ಬೆಂಗಳೂರು ಕ್ಯಾಂಪಸ್‌ನಲ್ಲಿ ಹೊಸ ಅತ್ಯಾಧುನಿಕ ಕ್ರೀಡಾ ಸೌಲಭ್ಯಕ್ಕೆ ಚಾಲನೆ

ಒಳಾಂಗಣ ಸಂಕೀರ್ಣದಲ್ಲಿ ಎರಡು ವಿಶೇಷ ಬ್ಯಾಡ್ಮಿಂಟನ್ ಕೋರ್ಟ್‌ಗಳು ಮತ್ತು ಬ್ಯಾಡ್ಮಿಂಟನ್ ಹಾಗೂ ಪಿಕಲ್‌ಬಾಲ್ ಎರಡಕ್ಕೂ ಅನುಕೂಲವಾಗುವ ಬಹುಉದ್ದೇಶ ಕೋರ್ಟ್ ಇದೆ. ಜೊತೆಗೆ ಸ್ಕ್ವಾಷ್ ಕೋರ್ಟ್, ಗಾಲ್ಫ್ ಸಿಮ್ಯುಲೇಟರ್ ಮತ್ತು ಟೇಬಲ್ ಟೆನ್ನಿಸ್, ಫೂಸ್‌ಬಾಲ್, ಚೆಸ್ ಹಾಗೂ ಬಿಲಿಯರ್ಡ್ಸ್ ಸೇರಿದಂತೆ ಹಲವು ಒಳಾಂಗಣ ಆಟಗಳ ವ್ಯವಸ್ಥೆಯೂ ಇದೆ.

2026ರಲ್ಲಿ ಭಾರತದಲ್ಲಿ ಮತ್ತೊಮ್ಮೆ ಮಿಂಚಲು ಸಿದ್ಧವಾದ ನಿಸ್ಸಾನ್; ಮುಂದಿನ ವರ್ಷ ಬರಲಿದೆ ಹೊಚ್ಚ ಹೊಸ 7-ಸೀಟರ್ ಬಿ-ಎಂಪಿವಿ ಗ್ರಾವೈಟ್

2026ರಲ್ಲಿ ಭಾರತದಲ್ಲಿ ಮತ್ತೊಮ್ಮೆ ಮಿಂಚಲು ಸಿದ್ಧವಾದ ನಿಸ್ಸಾನ್

2024ರ ಜುಲೈಯಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಎರಡನೇ ಮಾಡೆಲ್ ಆಗಿ ಘೋಷಿಸಲಾದ ಗ್ರಾವೈಟ್, ಕಂಪನಿಯು ತೀವ್ರ ಗತಿಯಲ್ಲಿ ಮುಂದೆ ಸಾಗುತ್ತಿರುವುದನ್ನು ಸೂಚಿಸುತ್ತದೆ. ನಿಸ್ಸಾನ್ ಉತ್ಪನ್ನಗಳ ರೋಡ್‌ಮ್ಯಾಪ್‌ನಲ್ಲಿ 2026ರ ಆರಂಭ ದಲ್ಲಿ ಗ್ರಾವೈಟ್ ನ ಬಿಡುಗಡೆ ಆಗಲಿದೆ.

ರಾಜ್ಯದ ಈ ಗ್ರಾಮದಲ್ಲಿ ಸಂಜೆ 7 ಗಂಟೆ ಬಳಿಕ ಟಿವಿ, ಮೊಬೈಲ್ ಬಳಕೆ ಮಾಡುವಂತಿಲ್ಲ! ಏನಿದು ವಿಚಿತ್ರ?

ಈ ಗ್ರಾಮದಲ್ಲಿ ಸಂಜೆ 7 ಗಂಟೆ ಬಳಿಕ ಟಿವಿ, ಮೊಬೈಲ್ ಬಳಕೆ ಮಾಡುವಂತಿಲ್ಲ!

Digital devices banned: ಬೆಳಗಾವಿಯ ಒಂದು ಗ್ರಾಮವು ಪ್ರತಿದಿನ ಸಂಜೆ 7 ಗಂಟೆ ನಂತರ ಟಿವಿ ಮತ್ತು ಮೊಬೈಲ್ ಉಪಕರಣಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿ ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಅಧ್ಯಯನ ಮತ್ತು ಕುಟುಂಬ ಹಾಗೂ ಸಮುದಾಯದ ಸಂವಹನವನ್ನು ಉತ್ತೇಜಿಸುವುದೇ ಇದರ ಉದ್ದೇಶವಾಗಿದೆ.

CM Siddaramaiah: ನನಗೆ ಯಾವತ್ತೂ ರಾಜಕೀಯ ನಿಶ್ಶಕ್ತಿ ಇಲ್ಲ, 5 ವರ್ಷ ನಾನೇ ಸಿಎಂ: ಕಾಲೆಳೆದ ವಿಪಕ್ಷಗಳಿಗೆ ಸಿದ್ದರಾಮಯ್ಯ ಖಡಕ್‌ ಉತ್ತರ

ನಿಶ್ಶಕ್ತಿ ಇಲ್ಲ, 5 ವರ್ಷ ನಾನೇ ಸಿಎಂ: ವಿಪಕ್ಷಗಳಿಗೆ ಸಿದ್ದರಾಮಯ್ಯ ಉತ್ತರ

ವಿಪಕ್ಷ ನಾಯಕ ಆರ್.ಅಶೋಕ್, CLP ಸಭೆಯಲ್ಲಿ ನಿಮ್ಮನ್ನು ಆಯ್ಕೆ ಮಾಡಿರುವುದು 5 ವರ್ಷಕ್ಕಾ ಅಥವಾ ಎರಡೂವರೆ ವರ್ಷಕ್ಕೊ ಸರಿಯಾಗಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಒತ್ತಾಯ ಮಾಡಿದರು. ಈ ವೇಳೆ ಎರಡೂವರೆ ವರ್ಷವೆಂದು ಹೇಳಿಯೇ ಇಲ್ಲ ಎಂದು ಸಿಎಂ ಹೇಳಿದರು. ನನಗೆ ರಾಜಕೀಯ ನಿಶ್ಶಕ್ತಿ ಯಾವಾಗಲೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

Dharmasthala Case: ತಿಮರೋಡಿ, ಮಟ್ಟಣ್ಣನವರ್‌ರಿಂದ ಜೀವ ಬೆದರಿಕೆ, ರಕ್ಷಣೆ ಕೊಡಿ: ಚಿನ್ನಯ್ಯ ದೂರು

ತಿಮರೋಡಿ, ಮಟ್ಟಣ್ಣನವರ್‌ರಿಂದ ಜೀವ ಬೆದರಿಕೆ, ರಕ್ಷಣೆ ಕೊಡಿ: ಚಿನ್ನಯ್ಯ ದೂರು

Dharmasthala Case: ತನಗೆ ಹಾಗೂ ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಅವರಿಗೆ ಧರ್ಮಸ್ಥಳ ವಿರೋಧಿ ಹೋರಾಟಗಾರರಾದ ತಿಮರೋಡಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ, ಜಯಂತ್, ಯುಟ್ಯೂಬರ್‌ ಸಮೀರ್ ಎಂ.ಡಿ. ಮತ್ತು ಅವರ ಸಂಗಡಿಗರಿಂದ ಜೀವ ಬೆದರಿಕೆ ಇದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ತಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡಬೇಕು ಎಂದು ದೂರಿನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Murder Attempt: ಮರ್ಯಾದೆ ಕೊಡಲಿಲ್ಲ ಎಂದು ಹೆಂಡತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಗಂಡ!

ಮರ್ಯಾದೆ ಕೊಡಲಿಲ್ಲ ಎಂದು ಹೆಂಡತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಗಂಡ!

ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್, ಕ್ಷುಲ್ಲಕ ಕಾರಣಕ್ಕೆ ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಡುತ್ತಿದ್ದ ಪತ್ನಿ, ಮಹೇಶ್​ಗೆ ಹಣ ನೀಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮಹೇಶ್, ತನಗೆ ಕಿಂಚಿತ್ತೂ ಮರ್ಯಾದೆ ಕೊಡದ ಪತ್ನಿ ಕೊಲೆಗೆ ಸ್ಕೆಚ್​ ಹಾಕಿದ್ದ. ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಮುಗಿಸಿ ಎಂದು ಪ್ಲಾನ್ ರೂಪಿಸಿದ್ದ.

Cancer cases: ದಕ್ಷಿಣ ಕನ್ನಡದಲ್ಲಿ ಒಂದೇ ವರ್ಷದಲ್ಲಿ ಕ್ಯಾನ್ಸರ್‌ ಪ್ರಕರಣ ದುಪ್ಪಟ್ಟು, ಕಳವಳ

ದಕ್ಷಿಣ ಕನ್ನಡದಲ್ಲಿ ಒಂದೇ ವರ್ಷದಲ್ಲಿ ಕ್ಯಾನ್ಸರ್‌ ಕೇಸ್ ದುಪ್ಪಟ್ಟು, ಕಳವಳ

Dakshina Kannada News: ಬಾಯಿ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ಗಳ ಪ್ರಮಾಣ ಜಿಲ್ಲೆಯಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿದೆ. ಇದರ ಜತೆಗೆ ಗರ್ಭಕಂಠದ ಕ್ಯಾನ್ಸರ್‌, ಇತರ ರೀತಿಯ ಕ್ಯಾನ್ಸರ್‌ಗಳು ಕೂಡ ಹೆಚ್ಚುತ್ತಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಹಳಷ್ಟು ಏರಿಕೆ ಕಂಡಿದೆ. ವಿಶೇಷವಾಗಿ ಮಂಗಳೂರು, ಪುತ್ತೂರು ಭಾಗದಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡಿವೆ.

Karnataka Politcs: ಸಿಎಂ ಸಿದ್ದರಾಮಯ್ಯ ಆಪ್ತರ ಜೊತೆಗೆ ಸತೀಶ್‌ ಜಾರಕಿಹೊಳಿ ಡಿನ್ನರ್‌ ಮೀಟಿಂಗ್

ಸಿಎಂ ಸಿದ್ದರಾಮಯ್ಯ ಆಪ್ತರ ಜೊತೆಗೆ ಸತೀಶ್‌ ಜಾರಕಿಹೊಳಿ ಡಿನ್ನರ್‌ ಮೀಟಿಂಗ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿ ಉದ್ಯಮಿಗಳೊಂದಿಗೆ ಡಿನ್ನರ್‌ ಪಾರ್ಟಿ ಆಯೋಜಿಸಿದ್ದ ಬಳಿಕ ಸಚಿವ ಸತೀಶ ಜಾರಕಿಹೊಳಿ (Satish Jarkiholi) ಅವರು ಕೂಡ ಮಂಗಳವಾರ ರಾತ್ರಿಯಷ್ಟೇ ದಲಿತ ಉದ್ಯಮಿಗಳಿಗೆ ರಾತ್ರಿ ಡಿನ್ನರ್‌ ಸಭೆ ನಡೆಸಿದ್ದರು. ಇದಾದ ಬಳಿಕ ಈಗ ಮತ್ತೆ ಕಾಂಗ್ರೆಸ್‌ ಶಾಸಕರಿಗೆ ಬುಧವಾರ ರಾತ್ರಿ ಡಿನ್ನರ್‌ ಪಾರ್ಟಿ ಆಯೋಜಿಸಿದ್ದರು.

Road Accident: ಡಿಸಿಎಂ ಡಿಕೆ ಶಿವಕುಮಾರ್‌ ಪಿಎಸ್‌ ಕಾರು ಡಿಕ್ಕಿ, ಬೈಕ್‌ ಸವಾರ ಸಾವು

ಡಿಸಿಎಂ ಡಿಕೆ ಶಿವಕುಮಾರ್‌ ಪಿಎಸ್‌ ಕಾರು ಡಿಕ್ಕಿ, ಬೈಕ್‌ ಸವಾರ ಸಾವು

ಮೃತ ಮಂಜುನಾಥ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟಿದ್ದರು. ರಾಜೇಂದ್ರ ಪ್ರಸಾದ್ ಕಾರು ಯಲ್ಲಮ್ಮನ ದರ್ಶನ ಪಡೆದು ವಾಪಸಾಗುವಾಗ ಅಪಘಾತ ಸಂಭವಿಸಿದೆ. ಕಾರು ಗುದ್ದಿದ ರಭಸಕ್ಕೆ ಮಂಜುನಾಥ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ರಾಜೇಂದ್ರ ಪ್ರಸಾದ್ ಹಾಗೂ ಕಾರು ಚಾಲಕನಿಗೂ ಗಾಯಗಳಾಗಿವೆ.

Karnataka Weather: ರಾಜ್ಯಾದ್ಯಂತ ಮುಂದುವರಿಯಲಿದೆ ಚಳಿ-ಬಿಸಿಲಿನ ಜುಗ‌ಲ್‌ಬಂದಿ

ರಾಜ್ಯಾದ್ಯಂತ ಮುಂದುವರಿಯಲಿದೆ ಚಳಿ-ಬಿಸಿಲು

ಕರ್ನಾಟಕ ಹವಾಮಾನ ಡಿಸೆಂಬರ್‌ 19, 2025: ರಾಜ್ಯದಲ್ಲಿ ಚಳಿಯ ತೀವ್ರತೆ ಮುಂದುವರಿದಿದ್ದು, ಮುಂದಿನ ಎರಡು ದಿನ ಕನಿಷ್ಠ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಶುಭ್ರ ಆಕಾಶ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Gauribidanur News: ಶ್ರದ್ಧಾಭಕ್ತಿಯಿಂದ ನಡೆದ ತ್ರಯಂಬಕೇಶ್ವರ ದೇವಾಲಯ ಜೀರ್ಣೋದ್ಧಾರ

ಶ್ರದ್ಧಾಭಕ್ತಿಯಿಂದ ನಡೆದ ತ್ರಯಂಬಕೇಶ್ವರ ದೇವಾಲಯ ಜೀರ್ಣೋದ್ಧಾರ

ಮೂರನೇ ದಿನವಾದ ಗುರುವಾರ ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುಂಜಾನೆ ದೀಪಾರಾಧನೆ, ಪ್ರಾಣ ಪ್ರತಿಷ್ಠಾಪನೆ, ಮಹಾಪೂಜೆ, ಗೋಪೂಜೆ, ಸಾಮೂಹಿಕ ನಿರೀಕ್ಷಣ, ತತ್ವನ್ಯಾಸ, ಕಲನ್ಯಾಸ ಹೋಮ, ಪಂಚಬ್ರಹ್ಮ ಸದಾಶಿವ ಹೋಮ, ಶ್ರೀತ್ರ್ಯಂಬ ಕೇಶ್ವರಕೇಶ್ವರ ಮೂಲ ಮಂತ್ರ ಹೋಮ,ಮಹಾಪೂರ್ಣಾಹುತಿ ಮುಂತಾದ ದೇವತಾ ಕಾರ್ಯಗಳು ನೆರವೇರಿದವು

Chikkaballapur News: ಸರ್ಕಾರದ ನೀತಿ ವಿರುದ್ಧ ಡಿ.21ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಸಿಪಿಐಎಂ ಪ್ರತಿಭಟನೆ

ಕಾರ್ಮಿಕ ನೀತಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಕೈಜೋಡಿಸಿ

ರಾಜ್ಯ ಮಟ್ಟದ ಅಂದೋಲನದಲ್ಲಿಸುಮಾರು೧೦ ಲಕ್ಷಮಂದಿಗೆ ತಲುಪುವಂತೆ 'ನವೆಂಬರ್ ೧ರಿಂದ ಡಿಸೆಂಬರ್ ೧೫ರವರೆಗೆ ಆಯೋಜಿಸಿದ್ದ  ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂ ಜನದನಿ ರ್ಯಾಲಿ ವೇಳೆ ರಾಜ್ಯದ ಮನೆ-ಮನೆಗೆ ಭೇಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಗಿದೆ

Shri Nirmalanandanath Mahaswamiji: ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು : ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ

ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು

ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇವಲ ಕಲಿಕೆಗೆ ಮಾತ್ರ ಒತ್ತು ನೀಡುವು ದಿಲ್ಲ. ಬದಲಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಧ್ಯತೆ ನೀಡಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ವಿಜ್ಞಾತಂ ಎಂಬ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ

Bengaluru News: ಕಟ್ಟಡ ಮಾಲೀಕನ ನಿರ್ಲಕ್ಷ್ಯ; ಇಟ್ಟಿಗೆ ಬಿದ್ದು 4 ವರ್ಷದ ಮಗು ಸಾವು

ಇಟ್ಟಿಗೆ ಬಿದ್ದು 4 ವರ್ಷದ ಮಗು ಸಾವು

ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದು 4 ವರ್ಷದ ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಸಂಭವಿಸಿದೆ. ಮೃತ ಮಗುವನ್ನು ಶ್ರೀಶೈಲ್-ದಂಪತಿಯ ಪುತ್ರಿ ಮನುಶ್ರೀ ಅಲಿಯಾಸ್ ಪಾರು ಎಂದು ಗುರುತಿಸಲಾಗಿದೆ.

ಮದುವೆಯಾಗದ ರೈತ ಮಕ್ಕಳ ಖಾತೆಗೆ 10 ಲಕ್ಷ ರುಪಾಯಿ ಹಾಕಿ; ಸರ್ಕಾರಕ್ಕೆ ಪುಟ್ಟಣ್ಣ ಆಗ್ರಹ

ರೈತರ ಮಕ್ಕಳ ಖಾತೆಗೆ 10 ಲಕ್ಷ ರುಪಾಯಿ ಹಾಕಿ; ಪುಟ್ಟಣ್ಣ ಆಗ್ರಹ

Puttanana: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಮಾತನಾಡಿ, ʼʼರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ಮಕ್ಕಳ ನೆರವಿಗೆ ಬರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಮಕ್ಕಳ ಖಾತೆಗೆ 10 ಲಕ್ಷ ರೂ. ಹಾಕಬೇಕುʼʼ ಎಂದು ಆಗ್ರಹಿಸಿದರು.

ನನಗೆ ಜೈಲಿಂದ ಯಾವ ಕರೆಯೂ ಬಂದಿಲ್ಲ: ಡಿ.ಕೆ. ಶಿವಕುಮಾರ್‌ ಹೀಗೆ ಹೇಳಿದ್ದೇಕೆ?

ನನಗೆ ಜೈಲಿಂದ ಯಾವ ಕರೆಯೂ ಬಂದಿಲ್ಲ: ಡಿ.ಕೆ. ಶಿವಕುಮಾರ್‌

Karnataka Winter Session: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼʼನನಗೆ ಜೈಲಿನಿಂದ ಯಾವುದೇ ಕರೆ ಬಂದಿಲ್ಲ. ನಾನು ಇಂತಹ ಯಾವುದೇ ಹಾಟ್ ಲೈನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಪತ್ರಿಕೆಗಳಲ್ಲಿ ಏನು ಬಂದಿದೆಯೋ? ನೀವು ಅದನ್ನು ಇಲ್ಲಿ ಪ್ರಸ್ತಾಪಿಸಿದರೆ, ನಂತರ ನೀವು ಅದಕ್ಕೂ ಹಾಗೂ ನನ್ನ ಮಧ್ಯೆ ಬೇರೆ ರೀತಿ ಲಿಂಕ್ ಬೆಳೆಸುತ್ತೀರಿ. ಹೀಗಾಗಿ ನಾನು ಈ ವಿಚಾರವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಜೈಲು ಮಂತ್ರಿಯಾಗಿದ್ದೆ, ಜೈಲಲ್ಲಿ ಇದ್ದೆ. ಜೈಲಲ್ಲಿ ಏನೆಲ್ಲ ನಡೆಯುತ್ತದೆ ಎಂದು ತಿಳಿದುಕೊಂಡಿದ್ದೇನೆ. ಪತ್ರಿಕೆಗಳಲ್ಲಿ ಸಾವಿರ ಬಂದಿರಬಹುದು. ಆದರೆ ಇದಕ್ಕೂ ನನಗೂ ನಂಟು ಹಾಕಬೇಡಿʼʼ ಎಂದು ತಿಳಿಸಿದರು.

Karnataka Winter Session: 2026ರ ಜೂನ್ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲ ಗೇಟ್‌ಗಳ ಬದಲಾವಣೆ; ಡಿ.ಕೆ. ಶಿವಕುಮಾರ್

ಜೂನ್ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲ ಗೇಟ್‌ ಬದಲಾವಣೆ: ಡಿಕೆಶಿ

DK Shivakumar: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ, ತುಂಗಭದ್ರಾ ಅಣೆಕಟ್ಟು ಗೇಟ್‌ಗಳ ಬದಲಾವಣೆಗಳ ಬಗ್ಗೆ ಕೇಳಿದಾಗ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, 2026ರ ಜೂನ್ ತಿಂಗಳ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲ 33 ಗೇಟ್‌ಗಳ ಬದಲಾವಣೆ ಕಾರ್ಯ ಪೂರ್ಣಗೊಳ್ಳಲಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Karnataka Winter Session: ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು: ಡಿ.ಕೆ. ಶಿವಕುಮಾರ್ ಘೋಷಣೆ

D.K. Shivakumar: ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು ಆರಂಭಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಘೋಷಿಸಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ ಮಾತನಾಡಿದ ಅವರು ಈ ಮಹತ್ವದ ಘೋಷಣೆ ಹೊರಡಿಸಿದರು. ರಾಜ್ಯದಲ್ಲಿ ನಗರ ಯೋಜನೆ ರೂಪಿಸುವವರು ಕಡಿಮೆ ಇರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.

Loading...