ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Namma Metro: ರಾಜ್ಯಕ್ಕೆ ಶಾಕ್‌; ನಮ್ಮ ಮೆಟ್ರೋ ರೆಡ್‌ ಲೈನ್‌, ಡಬಲ್‌ ಡೆಕ್ಕರ್‌ ಫ್ಲೈಓವರ್‌ಗೆ ಕೇಂದ್ರ ಬ್ರೇಕ್‌

ನಮ್ಮ ಮೆಟ್ರೋ ರೆಡ್‌ ಲೈನ್‌, ಡಬಲ್‌ ಡೆಕ್ಕರ್‌ಗೆ ಕೇಂದ್ರ ಬ್ರೇಕ್‌

28,405 ಕೋಟಿ ರೂ. ಬೃಹತ್‌ ಮೊತ್ತದ ಡಿಪಿಆರ್ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೆಡ್‌ ಲೈನ್ ಯೋಜನೆಯನ್ನು ಮರುಪರಿಶೀಲನೆ ಮಾಡಲು ಸೂಚಿಸಲಾಗಿದ್ದು, ಅನುಮೋದನೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಡಬಲ್ ಡೆಕ್ಕರ್ ವ್ಯವಸ್ಥೆ ಮಾಡಿದರೆೆ, ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಲಿರುವ ಕಾರಣ, ಅದಕ್ಕೂ ಆಯ್ದ ಜಂಕ್ಷನ್‌ಗಳಲ್ಲಿ ಮಾತ್ರ ಮಾಡಲು ಸೂಚಿಸಲಾಗಿದೆ.

Cauvery water: ಬೆಂಗಳೂರಿಗರೇ, ಕಾವೇರಿ ನೀರು ಪೋಲು ಮಾಡಿದರೆ ಬೀಳುತ್ತೆ ರೂ.5000 ದಂಡ!

ಬೆಂಗಳೂರಿಗರೇ, ಕಾವೇರಿ ನೀರು ಪೋಲು ಮಾಡಿದರೆ ಬೀಳುತ್ತೆ ರೂ.5000 ದಂಡ!

ಎಲ್ಲೆಲ್ಲಿ ಅಗತ್ಯವಿದೆಯೋ ಆ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪ್ಲ್ಯಾನ್‌ ಕೂಡ ಜಲಮಂಡಳಿ ಮಾಡಿಕೊಂಡಿದೆ. ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದರೆ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್‌ ಕೂಡ ಕಾರ್ಯಾಚರಣೆ ಮಾಡಲಿದೆ.

Lokayukta Raid: ಭ್ರಷ್ಟ ಅಧಿಕಾರಿಗಳಿಗೆ ಶಾಕ್‌, ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

ಭ್ರಷ್ಟ ಅಧಿಕಾರಿಗಳಿಗೆ ಶಾಕ್‌, ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಗಳಲ್ಲಿ ಹಲವು ಅಧಿಕಾರಿಗಳ ಮನೆ ಹಾಗೂ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆಯೇ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯ ವೇಳೆ ದಾಖಲೆಗಳಿಲ್ಲದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

MLA KH Puttaswamy Gowda: ಕಾಯಕಶರಣರ ಜಯಂತಿ ಆಚರಣೆ ಉದ್ದೇಶ ಸಮಾಜಕ್ಕೆ ಅರಿವು ಮೂಡಿಸುವುದಾಗಿದೆ : ಶಾಸಕ ಪುಟ್ಟಸ್ವಾಮಿಗೌಡ

ಕಾಯಕಶರಣರ ಜಯಂತಿ ಆಚರಣೆ ಉದ್ದೇಶ ಸಮಾಜಕ್ಕೆ ಅರಿವು ಮೂಡಿಸುವುದಾಗಿದೆ

ವಚನ ಚಳವಳಿಯ ಅನರ್ಘ್ಯ ರತ್ನಗಳಾದ ಶರಣರನ್ನು ಸ್ಮರಿಸುವ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸಲು ಕಾಯಕ ಶರಣರಂತಹ ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗು ತ್ತಿದೆ. ವಚನಕಾರರ ಕಾಯಕ ನಿಷ್ಠೆ ನೆನೆದುಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ಕೂಡ ನಡೆಯುವ ಸಂಕಲ್ಪ ಮಾಡೋಣ

MLA Yashwant R Patil: ವಿದ್ಯಾ ಸರಸ್ವತಿ, ಧ್ವನಿ ಇಲ್ಲದವರಿಗೆ ಧ್ವನಿಯಾದ ಡಾ.ಬಿ.ಆರ್ ಅಂಬೇಡ್ಕರವರ ಮೂರ್ತಿ ಗುದ್ದಲಿ ಪೂಜೆ ಮಾಡಿರುವುದು ಸಂತಸ ತಂದಿದೆ

ಡಾ.ಬಿ.ಆರ್ ಅಂಬೇಡ್ಕರವರ ಮೂರ್ತಿ ಗುದ್ದಲಿ ಪೂಜೆ ಮಾಡಿರುವುದು ಸಂತಸ ತಂದಿದೆ

ಶಿಕ್ಷಣ ವಿನಯ, ವಿನಮ್ರತೆ, ಮಾನವೀಯ ಮೌಲ್ಯ ಗಳನ್ನು ಕಲಿಸುತ್ತದೆ. ದಶವಂತ ಸಮುದಾಯ ಅತ್ಯೆಂತ ಕಡಿಮೆಯುಳ್ಳ ಜನಾಂಗ ಆದರೆ ಇವರ ಬದುಕು, ಆದರ್ಶ ಅತ್ಯಂತ ಎತ್ತರಕ್ಕೆ ಬೆಳೆಸಿಕೊಂಡಿ ದ್ದಾರೆ. ಮಾನವ ಸಂಪನ್ಮೂಲ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆಗಳು ಮಾಡಿವೆ.

MLA S.N.Subbareddy: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಂದ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ

ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ

1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆ ರೈತರು ಪ್ರಯೋಜನ ಪಡೆಯಿರಿ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆಯು ತುರ್ತು ಸಂದರ್ಭದಲ್ಲಿ ರೈತರ ಜಾನುವಾರುಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ.

MLA SN Subbareddy: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು

ಈ ಭಾಗ ಗಡಿಭಾಗವಾಗಿರುವ ಕಾರಣ ಇಲ್ಲಿನ ಜನರಿಗೆ ಆಸ್ಪತ್ರೆಯ ಅವಶ್ಯಕತೆಯಿತ್ತು. ಹಾಗಾಗಿ ಸರ್ಕಾರ ಇಲ್ಲಿಗೆ ನೂತನ ಕಟ್ಟಡಕ್ಕೆ ಮಂಜೂರಾತಿ ನೀಡಿದ ಕಾರಣ ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡವೊಂದು ನಿರ್ಮಾಣವಾದರೇ ಸಾಲದು ಇಲ್ಲಿ ಕೆಲಸ ಮಾಡುವಂತಹ ವೈದ್ಯರು, ನರ್ಸ್ ಹಾಗೂ ಎಲ್ಲ ಸಿಬ್ಬಂದಿಯಿದ್ದು ಈ ಭಾಗದ ಜನರಿಗೆ ಅನುಕೂಲವಾಗಬೇಕು

Sadhu Kokila: ನಟ ಸಾಧು ಕೋಕಿಲ, ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್: ಲೈಂಗಿಕ ದೌರ್ಜನ್ಯ ಕೇಸ್‌ ರದ್ದುಗೊಳಿಸಿದ ಹೈಕೋರ್ಟ್

ಸಾಧು ಕೋಕಿಲ, ಮಂಡ್ಯ ರಮೇಶ್‌ಗೆ ಹೈಕೋರ್ಟ್ ರಿಲೀಫ್: ಕಿರುಕುಳ ಕೇಸ್‌ ರದ್ದು

ಮೈಸೂರಿನ ಬ್ಯೂಟಿ ಪಾರ್ಲರ್‌ನ ಮಹಿಳೆಯೊಬ್ಬರಿಂದ ಈ ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ್ದ ಮೈಸೂರಿನ ಸರಸ್ವತಿ ಪುರಂ ಪೊಲೀಸರು, ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಸಾಜ್ ಮಾಡಿಸಿಕೊಳ್ಳುವಾಗ ಲೈಂಗಿಕ ದೌರ್ಜನ್ಯ ಮಾಡಿದ್ದರೆಂದು ಆರೋಪ ಮಾಡಲಾಗಿತ್ತು. ಈ ಪ್ರಕರಣ ರದ್ದು ಕೋರಿ ಇಬ್ಬರೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Byrathi Basavaraj: ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜುಗೆ ಸಿಐಡಿ ಲುಕೌಟ್‌ ನೋಟಿಸ್‌

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜುಗೆ ಸಿಐಡಿ ಲುಕೌಟ್‌ ನೋಟಿಸ್‌

ಬೈರತಿ ಬಸವರಾಜು ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೈರತಿ ಬಸವರಾಜು ಅವರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದ್ದು, ಸಿಐಡಿ ಪೊಲೀಸ್‌ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧೆಡೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆ ಬೈರತಿ ಬಸವರಾಜು ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದ್ದಾರೆ.

Chikkamagaluru news: ಕಡೂರು ಶಾಸಕರ ಪಿಎಯಿಂದ ಕಿರುಕುಳ, ಸರಕಾರಿ ನೌಕರ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆ

ಶಾಸಕರ ಪಿಎಯಿಂದ ಕಿರುಕುಳ, ಸರಕಾರಿ ನೌಕರ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆ

ಕಡೂರು ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಇಕ್ಬಾಲ್ ನಾಪತ್ತೆಯಾಗಿದ್ದಾರೆ. ಶಾಸಕ ಕೆ.ಎಸ್.ಆನಂದ್ ಅವರ ಆಪ್ತ ಸಹಾಯಕ ಮಂಜುನಾಥ್, ತಹಶೀಲ್ದಾರ್ ಪೂರ್ಣಿಮಾ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ.

Road Rage: ರಾಜಧಾನಿಯಲ್ಲಿ ರೋಡ್‌ ರೇಜ್‌, ಬಾನೆಟ್‌ ಮೇಲೆ ಗೂಡ್ಸ್‌ ಚಾಲಕನ ಎಳೆದೊಯ್ದ ಕಾರು ಚಾಲಕ!!

ರೋಡ್‌ ರೇಜ್‌, ಬಾನೆಟ್‌ ಮೇಲೆ ಗೂಡ್ಸ್‌ ಚಾಲಕನ ಎಳೆದೊಯ್ದ ಕಾರು ಚಾಲಕ!

ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ ಶುರುವಾಗಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ವಾಗ್ವಾದ ನಡೆಸುತ್ತಾ ಗೂಡ್ಸ್ ಚಾಲಕ ಕಾರಿನ ಬ್ಯಾನೆಟ್ ಮೇಲೆ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಗೂಡ್ಸ್‌ ಚಾಲಕ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಗೊತ್ತಾಗಿದೆ. ಸಿಟ್ಟಿನಿಂದ ಕಾರು ಚಾಲಕ ಹಾಗೆಯೇ ಕಾರು ಚಲಾಯಿಸಿ, ಗೂಡ್ಸ್ ಚಾಲಕನನ್ನು ಎಳೆದೊಯ್ದಿದ್ದಾನೆ.

Bharat Bandh: ಇಂದು ಭಾರತ ಬಂದ್‌, ಕರ್ನಾಟಕದಲ್ಲಿ ಏನೇನು ಎಫೆಕ್ಟ್?‌ ಏನಿದೆ, ಏನಿಲ್ಲ?

ಇಂದು ಭಾರತ ಬಂದ್‌, ಕರ್ನಾಟಕದಲ್ಲಿ ಏನೇನು ಎಫೆಕ್ಟ್?‌ ಏನಿದೆ, ಏನಿಲ್ಲ?

ಹಲವು ರಾಜ್ಯಗಳಲ್ಲಿ ಪ್ರತಿಭಟನಾಕಾರರು ರಸ್ತೆಗಿಳಿದು ಹೋರಾಟದ ಮಾಡುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಲಿದೆ. ಭಾರತ್ ಬಂದ್ ಎಫೆಕ್ಟ್​ ಕರ್ನಾಟಕಕ್ಕೂ ತಟ್ಟಬಹುದು. ಹಲವೆಡೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದೆ. ಸಂಚಾರದಲ್ಲೂ ಅಸ್ತವ್ಯಸ್ತ ಉಂಟಾಗುವ ಸಾಧ್ಯತೆ ಇದೆ. ಆದರೆ ಕರ್ನಾಟಕದಲ್ಲಿ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.

Double Murder: ಬೆಂಗಳೂರಿನಲ್ಲಿ ಟೆಕ್ಕಿಯಿಂದ ಹಣಕಾಸಿಗಾಗಿ ತಂದೆ- ತಾಯಿಯ ಹತ್ಯೆ

ಬೆಂಗಳೂರಿನಲ್ಲಿ ಟೆಕ್ಕಿಯಿಂದ ಹಣಕಾಸಿಗಾಗಿ ತಂದೆ- ತಾಯಿಯ ಹತ್ಯೆ

ರೋಹನ್ ಭಟ್ (33) ಎಂಬಾತ 4 ಲಕ್ಷ ರೂ. ಹಣಕ್ಕಾಗಿ ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿದ್ದಾನೆ. ನವೀನ್ ಚಂದ್ರ ಭಟ್ (60), ಡಾ. ಶ್ಯಾಮಲಾ ಭಟ್ (55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿದ್ದಾರೆ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದಾರೆ.

Chikkaballapur News: ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ತಪ್ಪಿಸಲು ಖಾಸಗಿ ಕೊಳವೆ ಬಾವಿ ಮಾಲೀಕರ ಸಹಕಾರ ಪಡೆಯಲು ಡಿ.ಸಿ.ಸೂಚನೆ

ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ತಪ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು

ಪ್ರಸ್ತುತ ಜಿಲ್ಲೆಯ 13 ಗ್ರಾಮಗಳಲ್ಲಿ, 24 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಪ್ರಸ್ತುತ ಖಾಸಗಿ ಕೊಳವೆ ಬಾವಿ ಮಾಲೀಕರ ಸಹಕಾರ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಪ್ರದೇಶದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವ ಪರಿಸ್ಥಿತಿ ತಲೆದೋರಿಲ್ಲ. ಮುಂದಿನ ದಿನಗಳಲ್ಲಿ 42 ಗ್ರಾಮಗಳಲ್ಲಿ, 21 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗ ಬಹುದಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು

Chikkaballapur News: ಬಿಜೆಪಿ ವ್ಯಕ್ತಿನಿಷ್ಠ ಪಕ್ಷವಲ್ಲ, ಕಾರ್ಯಕರ್ತರ ನಿಷ್ಠೆಯ ಪಕ್ಷ ಮೊದಲು ಪಕ್ಷದ ಕಾರ್ಯಕರ್ತರಿಗೆ ಗೌರವ ಕೊಡಿ : ಸಂದೀಪ್‌ರೆಡ್ಡಿ ಟಾಂಗ್

ಬಿಜೆಪಿ ವ್ಯಕ್ತಿನಿಷ್ಠ ಪಕ್ಷವಲ್ಲ, ಕಾರ್ಯಕರ್ತರ ನಿಷ್ಠೆಯ ಪಕ್ಷ

ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಉದ್ದೇಶದಿಂದ ಕಷ್ಟ ಬಿದ್ದು ದುಡ್ಡು ತಂದು ಖರ್ಚು ಮಾಡಿ ಪಕ್ಷ ಕಟ್ಟಿಲ್ಲವಾ? ಪಕ್ಷಕ್ಕಾಗಿ ಅವರವರ ಯೋಗ್ಯತೆಗೆ ತಕ್ಕಂತೆ ಸಹಾಯ ಮಾಡಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟಿರಬಹುದು, ಮತ್ತೊಬ್ಬ ಕೋಟಿ ರೂಪಾಯಿ ಕೊಟ್ಟಿರಬಹುದು. ಮೊದಲು ಕಾರ್ಯಕರ್ತರಿಗೆ ಗೌರವ ಕೊಡುವುದು ಕಲಿಯಿರಿ

ಅಮೆಜಾನ್ ಪ್ರೈಮ್ 2025 ರಲ್ಲಿ ಗ್ರಾಹಕರಿಗೆ ಉಳಿತಾಯದೊಂದಿಗೆ ಅತಿ ವೇಗದ ಡೆಲಿವರಿ ಸೇವೆ

ಅಮೆಜಾನ್ ಪ್ರೈಮ್'ನಲ್ಲಿ ಗ್ರಾಹಕರಿಗೆ ಉಳಿತಾಯದೊಂದಿಗೆ ವೇಗದ ಡೆಲಿವರಿ ಸೇವೆ

ಭಾರತದ ಮಾದರಿ ಅಲ್ಲದ ನಗರಗಳಿಂದ ಶೇ. 70 ಕ್ಕಿಂತ ಹೆಚ್ಚು ಹೊಸ ಪ್ರೈಮ್ ಸದಸ್ಯತ್ವದ ನೋಂದಣಿ ಗಳು ಮುಂದುವರಿದಿದ್ದು, ಪ್ರೈಮ್ ಸದಸ್ಯರು ಸಾಮಾನ್ಯ ಸದಸ್ಯರಿಗಿಂತ ಐದು ಪಟ್ಟು ಹೆಚ್ಚು ಬಾರಿ ಶಾಪಿಂಗ್ ಮಾಡುತ್ತಿದ್ದಾರೆ. ಅಮೆಜಾನ್ ತನ್ನ ಅಲ್ಟ್ರಾ-ಫಾಸ್ಟ್ ವಿತರಣಾ ಸೇವೆಯಾದ 'ಅಮೆಜಾನ್ ನೌ' ಅನ್ನು ಬೆಂಗಳೂರು, ದೆಹಲಿ-NCR ಮತ್ತು ಮುಂಬೈನ ಕೆಲವು ಭಾಗಗಳಲ್ಲಿ ನಿಮಿಷಗಳ ಅವಧಿಯ ವಿತರಣೆಯೊಂದಿಗೆ ನೀಡುತ್ತಿದೆ.

ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ 3ನೇ ತ್ರೈಮಾಸಿಕ ಫಲಿತಾಂಶ: ಶೇ. 200 ರಷ್ಟು ಅತ್ಯಧಿಕ ಮಧ್ಯಂತರ ಲಾಭಾಂಶ ಘೋಷಣೆ

ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ 3ನೇ ತ್ರೈಮಾಸಿಕ ಫಲಿತಾಂಶ

ದಾಖಲೆಯ ಮಧ್ಯಂತರ ಲಾಭಾಂಶ ಘೋಷಣೆಯು Q3FY26 ಮತ್ತು 9MFY26 ರಲ್ಲಿ ದೃಢವಾದ ಹಣಕಾಸು ಕಾರ್ಯಕ್ಷಮತೆಯನ್ನು ಅನುಸರಿಸುತ್ತದೆ, ಇದು ಪ್ರಮುಖ ಲಂಬಗಳಲ್ಲಿ ಆರೋಗ್ಯಕರ ವ್ಯವಹಾರದ ಆವೇಗವನ್ನು ಪ್ರತಿಬಿಂಬಿಸುತ್ತದೆ. Q3FY26 ಆದಾಯವು 736 ಕೋಟಿ ರೂ.ಗೆ ಏರಿದೆ, ಇದು 43.6% YoY ಹೆಚ್ಚಾಗಿದೆ, ಇದು ವೀಸಾ ಮತ್ತು ಕಾನ್ಸುಲರ್ ಸೇವೆಗಳು ಮತ್ತು ಡಿಜಿಟಲ್ ಸೇವೆಗಳ ವಿಭಾಗ ಗಳಲ್ಲಿ ಬಲವಾದ ಕಾರ್ಯಗತಗೊಳಿಸುವಿಕೆಯಿಂದ ಪ್ರೇರಿತವಾಗಿದೆ

Hampi Utsav: ಕಾಶಿ ಗಂಗಾರತಿ ಮಾದರಿಯಲ್ಲಿ ಹಂಪಿಯಲ್ಲಿ ನೆರವೇರಿದ ತುಂಗಾರತಿ

ಕಾಶಿ ಗಂಗಾರತಿ ಮಾದರಿಯಲ್ಲಿ ಹಂಪಿಯಲ್ಲಿ ನೆರವೇರಿದ ತುಂಗಾರತಿ

Hampi Utsav: ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರವಿರುವ ತುಂಗಭದ್ರಾ ನದಿಯ ಸ್ನಾನಘಟ್ಟದ ಬಳಿ ಬುಧವಾರ ಸಂಜೆ ನಡೆಯಿತು. ನದಿಯ ನೀರಿನಲ್ಲಿ ಪ್ರತಿಫಲಿಸುವ ದೀಪದ ಬೆಳಕು, ಮಂತ್ರಗಳ ಪಠಣ ಮತ್ತು ಶಂಖನಾದವು ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸಿತು.

Yadgir News: ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ: 11 ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

ಕಿರಾಣಿ ಅಂಗಡಿಗೆ ಬೆಂಕಿ; 11 ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

Saidapur: ಯಾದಗಿರಿ ಜಿಲ್ಲೆ ಸೈದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನೀಲಹಳ್ಳಿ ಗ್ರಾಮದಲ್ಲಿ ದೇವಸ್ಥಾನಕ್ಕೆ ಸೇರಿದೆ ಎನ್ನಲಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್ ಹಾಗೂ ಕಿರಾಣಿ ಅಂಗಡಿಗೆ 2014ರ ಮಾರ್ಚ್ 18ರಂದು ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಇದೀಗ ಶಿಕ್ಷೆ ಪ್ರಕಟವಾಗಿದೆ.

ಸುರಪುರದಲ್ಲಿ ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೈದ ಪತ್ನಿ; ಇಬ್ಬರು ಆರೋಪಿಗಳ ಬಂಧನ

ಸುರಪುರದಲ್ಲಿ ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೈದ ಪತ್ನಿ!

Surapura News: ಸುರಪುರ ತಾಲೂಕಿನ ಹಾಲಬಾವಿ ಗ್ರಾಮದ ಗವಿಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಮೃತನ ಅಣ್ಣ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಸುರಪುರ ಠಾಣೆ ಪೊಲೀಸರು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಿ; ಕೇಂದ್ರ ರೈಲ್ವೆ ಸಚಿವರಿಗೆ ಬೊಮ್ಮಾಯಿ ಮನವಿ

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಿ: ಬೊಮ್ಮಾಯಿ ಮನವಿ

Basavaraj Bommai: ಗದಗ- ಯಲವಿಗಿ ರೈಲು ಯೋಜನೆ ಡಿಪಿಆರ್‌ಗೆ ಒಪ್ಪಿಗೆ ನೀಡಿ ತ್ವರಿತಗತಿಯಲ್ಲಿ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ: ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ: ಬೊಮ್ಮಾಯಿ

Basavaraj Bommai: ರಾಜ್ಯ ಸರ್ಕಾರವು ಈಗಾಗಲೇ 638 ಕನ್ನಡ ಶಾಲೆಗಳನ್ನು ಮುಚ್ಚಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಅವರು ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಇದು ಕನ್ನಡ ವಿರೋಧಿ ಮತ್ತು ಕನ್ನಡ ಶಾಲೆಗಳ ವಿರೋಧಿಯಾಗಿದೆ. ಇದನ್ನು ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ; 23 ಡಿವೈಎಸ್‌ಪಿಗಳು, 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

23 ಡಿವೈಎಸ್‌ಪಿ, 129 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

Police transfer: ವರ್ಗಾವಣೆಗೊಂಡ ಅಧಿಕಾರಿಗಳನ್ನು ಸಂಬಂಧಪಟ್ಟ ಘಟಕಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೇ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಪೊಲೀಸ್‌ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ. ಯಾರೆಲ್ಲಾ ವರ್ಗಾವಣೆಯಾಗಿದ್ದಾರೆ ಎಂಬ ವಿವರ ಇಲ್ಲಿದೆ.

ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ತಾರೆ: ಸಹೋದರನ ಹೇಳಿಕೆಗೆ ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ಕುರಿತು ಸಹೋದರನ ಹೇಳಿಕೆ; ಡಿಕೆಶಿ ಹೇಳಿದ್ದೇನು?

D.K. Shivakumar: ಸ್ವಲ್ಪ ನಿಧಾನವಾದರೂ ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಡಿ.ಕೆ.ಸುರೇಶ್‌ ಅವರ ಹೇಳಿಕೆ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

Loading...