ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

World Day Against Child Labor: ಜೂ.12ರಂದು ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ

ಜೂ.12ರಂದು ಜಾಥಾ ಕಾರ್ಯಕ್ರಮ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರ ಸಂಘ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾ ಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ ವನ್ನು ಕೂಡ ಏರ್ಪಡಿಸಲಾಗಿದೆ.

Bidar News: ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ; ಬೀದರ್‌ನಲ್ಲಿ ಕೃಷಿ ಅಧಿಕಾರಿಗಳಿಂದ 9.35 ಲಕ್ಷ ಮೌಲ್ಯದ 1,539 ಚೀಲ ಜಪ್ತಿ

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ; ಬೀದರ್‌ನಲ್ಲಿ 1,539 ಚೀಲ ಜಪ್ತಿ

ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಯಾರಾದರೂ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿದ್ದರೆ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಶಿಮ್ಲಾ ಬಿಡಿ! ಬೆಂಗಳೂರೇ ಇದೀಗ ಗಿರಿಧಾಮ: ಸಿಲಿಕಾನ್ ಸಿಟಿಯ ತಂಪಾದ ವಾತಾವರಣಕ್ಕೆ ನಿವಾಸಿಗಳಿ ಫಿದಾ

ಶಿಮ್ಲಾವನ್ನು ಮೀರಿಸಿದ ಬೆಂಗಳೂರು: ಕೂಲ್ ವಾತಾವರಣಕ್ಕೆ ನೆಟ್ಟಿಗರು ಫಿದಾ

Viral News: ಸಿಲಿಕಾನ್ ಸಿಟಿ ಬೆಂಗಳೂರಿನ ತಂಪಾದ ವಾತಾವರಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಪ್ರಸಿದ್ಧ ಆಹ್ಲಾದಕರ ಹವಾಮಾನವನ್ನು ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಶಿಮ್ಲಾ ಜತೆ ಹೋಲಿಕೆ ಮಾಡಲಾಗುತ್ತಿದೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಶಿಮ್ಲಾದ ಗಿರಿಧಾಮವನ್ನೇ ಹೋಲುವಂತಿದೆ ಎಂದು ಪೋಸ್ಟ್ ಒಂದರಲ್ಲಿ ಬರೆಯಲಾಗಿದೆ.

ಅತ್ಯಾಧುನಿಕ ರೋಬೋಟಿಕ್ ಸೊಂಟ ಮತ್ತು ಮೊಣಕಾಲು ಕೀಲು ಮರುಜೋಡಣೆ ತಂತ್ರಜ್ಞಾನ ಪರಿಚಯಿಸಿದ ತಜ್ಞ ವೈದ್ಯ ಡಾ. ರಾಜಶೇಖರ್

ಹುಟ್ಟೂರಿನ ಜನರಿಗೆ ಪರಿಣತ ವೈದ್ಯಕೀಯ ಸೇವೆ ಒದಗಿಸಿದ ಮಾದರಿ ನಡೆ

ದಾವಣಗೆರೆ ಮೂಲದವರಾದ ಡಾ. ರಾಜಶೇಖರ್ ಅವರು ಎಂಬಿಬಿಎಸ್, ಮೂಳೆಚಿಕಿತ್ಸೆಯಲ್ಲಿ ಎಂ.ಎಸ್ಸಿ., ಎಂ.ಸಿಎಚ್. ಪದವಿಗಳನ್ನು ಹೊಂದಿದ್ದು, ಜಂಟಿ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಯಲ್ಲಿ ಪ್ರತಿಷ್ಠಿತ ರಾಣಾವತ್ ಫೆಲೋಶಿಪ್ ಪಡೆದಿದ್ದಾರೆ. ಪ್ರಸ್ತುತ ಅಪೋಲೋ ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ರೋಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸಾ ವಿಭಾಗದ ಪ್ರಮುಖ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೇವರಾಜ ಅರಸು ಬರುವುದಕ್ಕೂ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಪ್ರಶ್ನೆ

ದೇವರಾಜ ಅರಸುಗಿಂತ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ರಮೇಶ್‌ ಕುಮಾರ್

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಡಿ.ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಮತ್ತು ʼಡಿ.ದೇವರಾಜ ಅರಸು ಸಮಸಮಾಜದ ಕನಸುಗಾರ' ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಮಾತನಾಡಿದ್ದಾರೆ.

Minister K H Muniyappa: BIEC ನಲ್ಲಿ ಜೂ.11ರಿಂದ ಮೆಗಾ ಫುಡ್ ಎಕ್ಸ್‌ಪೋ 2026’ : ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ

BIEC ನಲ್ಲಿ ಜೂ.11ರಿಂದ ಮೆಗಾ ಫುಡ್ ಎಕ್ಸ್‌ಪೋ 2026’

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ(Food and Civil Supplies Minister K.H. Muniyappa) ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ದೇಶ, ವಿದೇಶಗಳ ತಯಾರಕರು, ಪೂರೈಕೆ ದಾರರು, ವಿತರಕರು, ನವೋದ್ಯಮಗಳು ಹಾಗೂ ಕೈಗಾರಿಕಾ ವೃತ್ತಿಪರರಿಗೆ ತಮ್ಮ ಇತ್ತೀಚಿನ ಉತ್ಪನ್ನಗಳು, ತಂತ್ರಜ್ಞಾನ ಮತ್ತು ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಲು ಸಮಗ್ರ ವೇದಿಕೆಯನ್ನು ಇದು ಒದಗಿಸ ಲಿವೆ.

N A Harris: ವಸತಿ ಸಂಕಿರಣಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆಗಳಿಗೆ ಕ್ರಮ: ಎನ್.ಎ. ಹ್ಯಾರಿಸ್

ವಸತಿ ಸಂಕಿರಣಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆಗಳಿಗೆ ಕ್ರಮ

ಬೆಂಗಳೂರು ವಿವಿಧ ಹಿನ್ನೆಲೆಯ ಜನ ವಾಸಿಸುವ ಚೈತನ್ಯಮಯ ಮಹಾನಗರವಾಗಿದೆ. ಜೀವನ ಶೈಲಿ ಹಾಗೂ ನಗರ ಜೀವನದ ಮಾದರಿಗಳು ಬದಲಾಗಿರುವ ಹಿನ್ನೆಲೆಯಲ್ಲಿ ಹಳೆಯ ಕಾನೂನುಗಳು ಮತ್ತು ಪದ್ಧತಿಗಳು ಹಲವು ಬಾರಿ ಅಡಚಣೆಯಾಗುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊಸ ಕಾನೂನು ಚೌಕಟ್ಟುಗಳು, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ಜಾಗೃತಿಯ ಮೂಲಕ ವ್ಯವಸ್ಥೆಯನ್ನು ಆಧುನೀಕರಿಸಲು ಕ್ರಮ ಕೈಗೊಳ್ಳುತ್ತಿದೆ

Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ

ಉಜ್ವಲ ಯೋಜನೆಯಡಿ 14.2 ಕೆ.ಜಿ 12 ಸಿಲೆಂಡರ್ ಗಳನ್ನು ನೀಡಲಾಗುತ್ತಿತ್ತು. ಕಳೆದ ವರ್ಷ ಇದನ್ನು 9ಕ್ಕೆ ಇಳಿಸಿ, ಇದೀಗ 4ಕ್ಕೆ ತಗ್ಗಿಸಿರುವುದು ಖಂಡನೀಯ. ಮೋದಿ ಸರ್ಕಾರ ಮತ್ತೊಂದು ದುಬಾರಿ ಬದುಕಿನ ಕೊಡುಗೆ ನೀಡಿದ್ದು, ಮೂರು ತಿಂಗಳಲ್ಲಿ ಅಡುಗೆ ಬೆಲೆ ದರವನ್ನು 90 ರೂಪಾಯಿ ಹೆಚ್ಚಿಸಿದೆ. ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ 400 ರೂ ಇದ್ದ ಸಿಲೆಂಡರ್ ಬೆಲೆ ಇದೀಗ ಒಂದು ಸಾವಿರ ರೂ ಸನಿಹಕ್ಕೆ ಬಂದಿದೆ.

ನೋಂದಣಿ ರದ್ದಾಗಿರುವ ಶಾಲೆಯಿಂದ ವಿದ್ಯಾರ್ಥಿಗಳಿಗೆ ಟಿ.ಸಿ ಕೊಡದಿರುವ ಬಗ್ಗೆ ಮಾಜಿ ಪ್ರಾಂಶುಪಾಲರಿಂದ ದೂರು: ಶಾಲಾ ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ

ನೋಂದಣಿ ರದ್ದಾಗಿರುವ ಶಾಲೆಯಿಂದ ಟಿ.ಸಿ ಕೊಡದಿರುವ ಬಗ್ಗೆ ದೂರು

ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಬೇಡಿಕೆಯಂತೆ ಆಡಳಿತ ಮಂಡಳಿಯವರು ವರ್ಗಾವಣೆ ಪತ್ರ ನೀಡದೇ ಬೆದರಿಕೆ ಹಾಕುತ್ತಿದ್ದಾರೆ. ಈ ದೌರ್ಜನ್ಯ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಮೇಲೆ ಕೇವಲ ಮೂವರು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದ್ದಾರೆ. ಪ್ರತಿನಿತ್ಯ ಹಲವಾರು ವಿದ್ಯಾರ್ಥಿಗಳು, ಪೋಷಕರು ಟಿಸಿಗಾಗಿ ಅಲೆಯುತ್ತಿದ್ದಾರೆ. ಆದರೆ ಟಿಸಿ ನೀಡದೇ ಗೂಂಡಾ ವರ್ತನೆ ತೋರಿ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದಾರೆ.

12 ವರ್ಷಗಳ ದಾಖಲೆಯ ಆಡಳಿತ; ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದ ಎಚ್.ಡಿ. ಕುಮಾರಸ್ವಾಮಿ

ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದ ಎಚ್.ಡಿ. ಕುಮಾರಸ್ವಾಮಿ

HD Kumaraswamy: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವು ಬೃಹತ್ ಪ್ರಮಾಣದ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ, ಪಾರದರ್ಶಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬಾಲಕ ಸಿಗರೇಟ್ ಸೇದಿದ ವಿಡಿಯೊ ತೋರಿಸಿ ಬ್ಲ್ಯಾಕ್‌ಮೇಲ್; 120 ಗ್ರಾಂ ಚಿನ್ನ ವಸೂಲಿ ಮಾಡಿದ ಖದೀಮರು!

ಬಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ವಸೂಲಿ!

Koppal Blackmail Case: ತಾನು ಸಿಗರೇಟ್‌ ಸೇದುವ ವಿಚಾರ ಮನೆಯಲ್ಲಿ ತಿಳಿದರೆ ತಂದೆ ಹೊಡೆಯುತ್ತಾರೆ ಎಂಬ ಭಯದಿಂದ ಕಂಗಾಲಾದ ಬಾಲಕ, ಆರೋಪಿಗಳ ಬ್ಲ್ಯಾಕ್‌ಮೇಲ್‌ಗೆ ಹೆದರಿ, ಚಿನ್ನಾಭರಣಗಳನ್ನು ಕೊಟ್ಟಿದ್ದಾನೆ. ಮನೆಯಲ್ಲಿ ಚಿನ್ನದ ಒಡವೆಗಳು ನಾಪತ್ತೆ ಆಗಿರೋದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಚಿವ ಸ್ಥಾನ ಇಲ್ಲದಿದ್ದರೂ ಜನಸ್ಪಂದನೆ ಅಚಲ: ಲಕ್ಷ್ಮಿ ಹೆಬ್ಬಾಳ್ಕರ್ ಜನತಾ ದರ್ಶನದಲ್ಲಿ ಜನಸಾಗರ

ಲಕ್ಷ್ಮಿ ಹೆಬ್ಬಾಳ್ಕರ್ ಜನತಾ ದರ್ಶನದಲ್ಲಿ ಜನಸಾಗರ

Laxmi Hebbalkar: ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಪ್ರೀತಿಯೇ ನನ್ನ ಶಕ್ತಿ. ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ. ಆದರೆ ಜನರೊಂದಿಗೆ ಇರುವ ಸಂಬಂಧ ಶಾಶ್ವತ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದ್ದು, ಹುದ್ದೆ ಇರಲಿ ಅಥವಾ ಇರದಿರಲಿ, ಸಾರ್ವಜನಿಕ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

Bengaluru Power Cut: ಜೂನ್‌11ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಜೂನ್‌11ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Bengaluru Power Cut: 66 ಕೆ.ವಿ. ಬಾಣಸವಾಡಿ-ಎಚ್.ಬಿ.ಆರ್ ಲೈನ್ ಮತ್ತು 66 ಕೆ.ವಿ. ಬಾಣಸವಾಡಿಯ ಉಪಕೇಂದ್ರದ 66 ಕೆ.ವಿ. ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜೂನ್‌ 11ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ನನ್ನ ಮತ್ತು ಮೋದಿಯವರ ನಡುವಿನ ಬಾಂಧವ್ಯ ರಾಜ್ಯಸಭೆ ಸ್ಥಾನವನ್ನು ಮೀರಿದ್ದು: ಎಚ್.ಡಿ.ದೇವೇಗೌಡ

ಸುಮ್ಮನೆ ಕೂರುವುದಿಲ್ಲ, ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ: ದೇವೇಗೌಡ

HD Deve Gowda: ಕಳೆದೆರಡು ದಿನಗಳಿಂದ ರಾಜ್ಯಸಭೆ ಸ್ಥಾನದ ವಿಚಾರದಲ್ಲಿ ತಮ್ಮ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತೆರೆ ಎಳೆದಿದ್ದಾರೆ. ಕೆಲವರು ಸುಖಾಸುಮ್ಮನೆ ಮಾತಾಡುತ್ತಿದ್ದಾರೆ. ಈ ವಿಚಾರದಲ್ಲಿ ನನಗೆ ಅಪಮಾನವಾಗಿದೆ ಎಂಬ ಹೇಳಿಕೆಗಳಿಗೆ ಯಾವುದೇ ಮಹತ್ವವನ್ನು ನಾನು ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Rajya sabha elections: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟನೆ

ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಎಚ್.ಡಿ.ದೇವೇಗೌಡ ಸ್ಪಷ್ಟನೆ

ನನ್ನನ್ನು ಆಯ್ಕೆ ಮಾಡಬೇಕು ಎನ್ನುವುದು ಸ್ನೇಹಿತರು, ಹಿತೈಷಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಆಶಯವಾಗಿತ್ತು ಆದರೆ, ನಾನಾಗಲಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರಾಗಲಿ ಈ ಕುರಿತು ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದ್ದಾರೆ.

Nippani News: ನಿಪ್ಪಾಣಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ; ಮಾರಕಾಸ್ತ್ರ ವಶಕ್ಕೆ

ನಿಪ್ಪಾಣಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ

Nippani News: ನಿಪ್ಪಾಣಿ ನಗರದ ವಿವಿಧ ಭಾಗಗಳಲ್ಲಿರುವ ರೌಡಿಶೀಟರ್‌ಗಳ ವಿರುದ್ಧ ನಿಪ್ಪಾಣಿ ಪೊಲೀಸರು ಬುಧವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿ, 10 ರಿಂದ 15 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ರಾಜಕೀಯ ಷಡ್ಯಂತ್ರದಿಂದ ಮೀನಾಕ್ಷಿ ನಟರಾಜನ್‌ ನಾಮಪತ್ರ ತಿರಸ್ಕಾರ: ಸಿದ್ದರಾಮಯ್ಯ ಟೀಕೆ

ಮೀನಾಕ್ಷಿ ನಟರಾಜನ್‌ ವಿರುದ್ಧ ರಾಜಕೀಯ ಷಡ್ಯಂತ್ರ: ಸಿದ್ದರಾಮಯ್ಯ

Former CM Siddaramaiah: ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿರಲಿಲ್ಲ. ಆದರೂ ಕೆಲವು ಲೋಪದೋಷಗಳನ್ನು ಸೃಷ್ಟಿ ಮಾಡಿ ತಿರಸ್ಕಾರ ಮಾಡಲಾಗಿದೆ. ಇದು ಸ್ಪಷ್ಟ ಚುನಾವಣಾ ಅಕ್ರಮ ಹಾಗೂ ರಾಜಕೀಯ ಷಡ್ಯಂತ್ರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Bidar News: ಹೆಡ್‌ ಮಾಸ್ಟರ್‌ ಕಿರುಕುಳ ಆರೋಪ; ಶಾಲೆಯ 4ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌ನಲ್ಲಿ ಶಾಲೆಯ 4ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌ನ ಪ್ರತಾಪ್ ನಗರದ ಬಳಿ ಘಟನೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕಿರುಕುಳ ನೀಡಿದ್ದಾರೆ ಎಂದು 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KCET ವಿದ್ಯಾರ್ಥಿಗಳಿಗೆ ಶಾಕ್! ಕೌನ್ಸೆಲಿಂಗ್ ಮುಂದೂಡಿದ ಕೆಇಎ

KCET ವಿದ್ಯಾರ್ಥಿಗಳಿಗೆ ಶಾಕ್! ಕೌನ್ಸೆಲಿಂಗ್ ಮುಂದೂಡಿದ ಕೆಇಎ

ಯುಜಿ ಸಿಇಟಿ ಫಲಿತಾಂಶ ಈಗಾಗಲೇ ಹೊರ ಬಿದ್ದಿದ್ದು ವಿದ್ಯಾರ್ಥಿಗಳಿಗೆ ಇದೀಗ ಕೆಇಎ ಶಾಕ್‌ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ಅಂತಿಮ ಸೀಟ್ ಮ್ಯಾಟ್ರಿಕ್ಸ್ (ಸೀಟುಗಳ ಹಂಚಿಕೆ ಪಟ್ಟಿ) ಮತ್ತು ಶುಲ್ಕದ ರಚನೆ ಸಿಗುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಿದೆ.

'ಐಐಟಿ ರೂರ್ಕಿ' ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್', ಏನಿದರ ಉದ್ದೇಶ?

'ಐಐಟಿ ರೂರ್ಕಿ' ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

ಈ ಪಾಲುದಾರಿಕೆಯ ಅಡಿಯಲ್ಲಿ ಎರಡೂ ಸಂಸ್ಥೆಗಳು ಹಲವು ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಜಂಟಿಯಾಗಿ ಶೈಕ್ಷಣಿಕ ಕಾರ್ಯಕ್ರಮಗಳು, ವೃತ್ತಿಪರ ತರಬೇತಿ ಕೋರ್ಸ್‌ಗಳು ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಲಿವೆ.

ವೈರಲ್‌ ಆಡಿಯೋ ಕೇಸ್‌; ಜಮೀರ್‌ ಅಹ್ಮದ್ ಖಾನ್‌ ವಿರುದ್ಧ ಮಾನಹಾನಿ‌ ಸುದ್ದಿ ಪ್ರಸಾರ ನಿರ್ಬಂಧಿಸಿದ ನ್ಯಾಯಾಲಯ

ಜಮೀರ್‌ ವಿರುದ್ಧ ಮಾನಹಾನಿ‌ ಸುದ್ದಿ ಪ್ರಸಾರ ನಿರ್ಬಂಧಿಸಿದ ನ್ಯಾಯಾಲಯ

ದಾವಣಗೆರೆ ಉಪ ಚುನಾವಣೆ ವಿಚಾರದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಮಾನ ಹಾನಿಕರ ಸುದ್ದಿಗಳ ಪ್ರಸಾರಕ್ಕೆ ಬೆಂಗಳೂರಿನ ನ್ಯಾಯಾಲಯವು ಮಂಗಳವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ ಎಂದು ತಿಳಿದು ಬಂದಿದೆ.

ವಿಧಾನಸೌಧ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

ವಿಧಾನಸೌಧದ ಬಳಿ ಆತ್ಮಹತ್ಯೆಗೆ ಯತ್ನಿಸಿದ ರೈತ

ರೈತನೊಬ್ಬ ಮಂಗಳವಾರ ಮಧ್ಯಾಹ್ನ ವಿಧಾನಸೌಧ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಹಳಿಯೂರು ಗ್ರಾಮದ ವಿಶು ಕುಮಾರ್ ಎಂಬುವವರು ವಿಧಾನಸೌಧ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Bike Accident: ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಬಾಲಕ ದಾರುಣ ಸಾವು.!

ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಬಾಲಕ ದಾರುಣ ಸಾವು.!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಅರವಿಂದ್ (17) ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಪೇರೆಸಂದ್ರದಿಂದ ಸ್ವಗ್ರಾಮ ಸಾದಲಿಯತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Gauribidanur News: ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಮಾಜಿ ಸಚಿವ ಎನ್ ಹೆಚ್ ಶಿವಶಂಕರ ರೆಡ್ಡಿ

ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ವಿದ್ಯಾರ್ಥಿಗಳು ಕೇವಲ ಎಂಬಿಬಿಎಸ್ ಅಥವಾ ಇನ್ನಿತರ ಉನ್ನತ ಪದವಿಗಳನ್ನು ಗಳಿಸಿದರೆ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ. ಅನೇಕ ವಿದ್ಯಾರ್ಥಿಗಳು ಪದವಿಗಳಿಸಿದ ನಂತರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅವರನ್ನು ಪ್ರೀತಿಯಿಂದ ನಡೆಸಿಕೊಳ್ಳು ತ್ತಿಲ್ಲ. ಕುಟುಂಬದಲ್ಲಿ ಪ್ರೀತಿ, ಪ್ರೇಮ ಮತ್ತು ಅನ್ನೋನ್ಯತೆ ಮುಖ್ಯ, ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದು ಮಾತ್ರವಲ್ಲ, ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವುದೇ ನಿಜವಾದ ಶಿಕ್ಷಣ

Loading...