ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ: ರಾಘವೇಶ್ವರ ಶ್ರೀ
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀಗಳು ಮಾತನಾಡಿದ್ದಾರೆ. ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು ಮಹಾವಿಷ್ಣುವೂ ಬೇಕು ಎಂದು ಅವರು ತಿಳಿಸಿದ್ದಾರೆ.