ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತ; ತಪ್ಪಿದ ಭಾರಿ ದುರಂತ

ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತ

Air India Flight: ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು, ಅದೃಷ್ಟವಶಾತ್‌ ಭಾರಿ ದುರಂತವೊಂದು ತಪ್ಪಿದೆ. ಲಂಡನ್-ಬೆಂಗಳೂರು ಮಾರ್ಗದಲ್ಲಿ ಹಾರಾಟ ನಡೆಸುವ ಬೋಯಿಂಗ್ 787-8 ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದು, ಟ್ರಿಪ್‌ ಕಡಿತಗೊಳಿಸಲಾಗಿದೆ.

Sagara Accident: ಸಾಗರ ಸಮೀಪ ಭೀಕರ ಅಪಘಾತ; ಕ್ಯಾಂಟರ್-ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಸಾಗರ ಸಮೀಪ ಕ್ಯಾಂಟರ್-ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಆನಂದಪುರದಿಂದ ಸಾಗರಕ್ಕೆ ತೆರಳುತ್ತಿದ್ದ ಕಾರು ಹಾಗೂ ಸಾಗರದಿಂದ ಆನಂದಪುರದ ಕಡೆಗೆ ಬರುತ್ತಿದ್ದ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ: ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ 31 ಲಕ್ಷ ರುಪಾಯಿ ದೋಚಿದ ಡಕಾಯಿತರು

ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ; 31 ಲಕ್ಷ ರುಪಾಯಿ ದೋಚಿದ ಖದೀಮರು

Robbery in Bengaluru: ಬೆಂಗಳೂರು ನಗರದ ಬನ್ನೇರುಘಟ್ಟದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ನಡೆದ ದರೋಡೆ ಭೀತಿ ಮೂಡಿಸಿದೆ. ಖಾಸಗಿ ಕಂಪನಿಯ ಉದ್ಯೋಗಿಯ ಮೇಲೆ ದಾಳಿ ನಡೆಸಿ 31 ಲಕ್ಷ ರುಪಾಯಿಯನ್ನು ದರೋಡೆಕೋರರು ದೋಚಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ

illegal Bangladeshis: ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಾಡಲಾದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿದು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ನಾವು ರಾಜ್ಯಪಾಲರ ವಿರುದ್ಧ ಇಲ್ಲ, ಕೇಂದ್ರ ಸರ್ಕಾರದ ವಿರುದ್ಧ ಎಂದ ಸಿಎಂ

ನಾವು ರಾಜ್ಯಪಾಲರ ವಿರುದ್ಧ ಇಲ್ಲ, ಕೇಂದ್ರ ಸರ್ಕಾರದ ವಿರುದ್ಧ ಎಂದ ಸಿಎಂ

Karnataka assembly session 2026: ಸಂವಿಧಾನಬದ್ಧವಾಗಿ ಸರ್ಕಾರ, ಆಡಳಿತ ನಡೆಯಲೇಬೇಕು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು. ರಾಜ್ಯಪಾಲರು ಮೂಲತಃ ಉತ್ತಮ ವ್ಯಕ್ತಿಯೇ. ನಾವು ರಾಜ್ಯಪಾಲರ ವಿರುದ್ಧವಿಲ್ಲ. ಆದರೆ ಕೇಂದ್ರ ಸರ್ಕಾರದ ನಮ್ಮ ವಿರೋಧವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಲತಾಯಿ ಧೋರಣೆಯ ಬಜೆಟ್‌ ತಕ್ಷಣ ಸರಿಪಡಿಸಿ: ಕೇಂದ್ರಕ್ಕೆ ಆರ್.ವಿ. ದೇಶಪಾಂಡೆ ಆಗ್ರಹ

ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಅನ್ಯಾಯ ಎಂದ ಆರ್.ವಿ. ದೇಶಪಾಂಡೆ

R.V. Deshpande: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1ರಂದು ಮಂಡಿಸಿದ ಬಜೆಟ್‌ಗೆ ಕಾಂಗ್ರೆಸ್‌ ನಾಯಕ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼʼಕೇಂದ್ರ ಸರ್ಕಾರ ವಾಸ್ತವದಲ್ಲಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಿಗೆ ಕಡಿಮೆ ಪ್ರತಿಫಲ ನೀಡುವ ಭೇದಭಾವದ ನೀತಿಯನ್ನು ಅನುಸರಿಸುತ್ತಿರುವುದು ಈ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆʼʼ ಎಂದಿದ್ದಾರೆ.

ದ್ವೇಷ ಭಾಷಣ ಮಸೂದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ: ಬಿ.ವೈ. ವಿಜಯೇಂದ್ರ

ದ್ವೇಷ ಭಾಷಣ ಮಸೂದೆ ಪ್ರಜಾಪ್ರಭುತ್ವಗೆ ಮಾರಕ: ಬಿ.ವೈ. ವಿಜಯೇಂದ್ರ

BY Vijayendra: ರಾಜ್ಯಪಾಲರು ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕದೆ ವಾಪಸ್‌ ಕಳುಹಿಸಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರವು ಆತುರಾತುರವಾಗಿ ದ್ವೇಷ ಭಾಷಣ ಮಸೂದೆಯನ್ನು ಮಂಡನೆ ಮಾಡಿದೆ. ಈ ಕಾಯ್ದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ ಎಂದು ಟೀಕಿಸಿದ್ದಾರೆ.

ರಾಜ್ಯಪಾಲರ ಭಾಷಣ; ರಾಜ್ಯ ಸರ್ಕಾರದ ವಂದನಾ ನಿರ್ಣಯಕ್ಕೆ ಆರ್‌.ಅಶೋಕ್‌ ತೀವ್ರ ವಿರೋಧ

ರಾಜ್ಯಪಾಲರಿಂದ ಸುಳ್ಳಿನ ಭಾಷಣ ಮಾಡಿಸಲು ಯತ್ನ: ಆರ್‌.ಅಶೋಕ್‌

Karnataka Assembly Session: ರಾಜ್ಯ ಸರ್ಕಾರ ರಾಜ್ಯಪಾಲರಿಂದ ಮಾಡಿಸಿರುವ ಸುಳ್ಳಿನ ಕಂತೆಗಳ ಭಾಷಣಕ್ಕೆ ವಿರೋಧವಿದೆ. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ' ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

Pravasi Prapancha: ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆ; ವಿ.ಆರ್. ದೇಶಪಾಂಡೆ ಟ್ರಸ್ಟ್‌ನ ಸಾರ್ಥಕ ಶೈಕ್ಷಣಿಕ ಸೇವೆ

ವಿ.ಆರ್. ದೇಶಪಾಂಡೆ ಟ್ರಸ್ಟ್‌ನ ಸಾರ್ಥಕ ಶೈಕ್ಷಣಿಕ ಸೇವೆ

Shri V. R. Deshpande Memorial Trust: ಬೆಳಗಾವಿಯ ಹಳಿಯಾಳದಲ್ಲಿರುವ ವಿ.ಆರ್. ದೇಶಪಾಂಡೆ ಸ್ಮಾರಕ ಶಿಕ್ಷಣ ಸಂಸ್ಥೆ ಇಂದು ರಾಜ್ಯವಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಹೆಸರುವಾಸಿಯಾಗಿದೆ. ಶಿಕ್ಷಣ, ತರಬೇತಿ ಎಂದರೆ ವಸೂಲಿ ಮತ್ತು ದಂಧೆ ಎಂಬಂತಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಶಿಸ್ತು ಮತ್ತು ಪ್ರಾಮಾಣಿಕವಾಗಿ ಶೈಕ್ಷಣಿಕ ಕ್ರಾಂತಿಗೆ ವಿಆರ್ಡಿಎಂ ಸಂಸ್ಥೆಯು ಮುನ್ನುಡಿ ಬರೆದಿದೆ. ರಾಜ್ಯದ ಹಿರಿಯ ರಾಜಕಾರಣಿಗಳಾದ ಆರ್ ವಿ ದೇಶಪಾಂಡೆ ಅವರು ತಮ್ಮ ತಂದೆಯ ಸ್ಮರಣಾರ್ಥವಾಗಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಶಿಕ್ಷಣದ ಮೂಲಕವೇ ಹೊಸತನದ ಬೀಜ ಬಿತ್ತಲು ಮುಂದಾಗಿದ್ದಾರೆ.

ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.4ರಂದು ಕರೆಂಟ್‌ ಇರಲ್ಲ

ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.4ರಂದು ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ 66/11 ಕೆವಿಎ ಎಲ್.ಆರ್.ಬಂಡೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಫೆ.4ರಂದು ಬುಧವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Pennar River Dispute: ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ; ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ; ರಾಜ್ಯಕ್ಕೆ ಸುಪ್ರೀಂನಲ್ಲಿ ಹಿನ್ನಡೆ

ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಅಲ್ಲದೇ ಪೆನ್ನಾರ್ ನದಿಯಿಂದ ನೀರು ಹರಿಸುವ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

Assault Case: ಉಡುಪಿಯಲ್ಲಿ ಕಾಂಗ್ರೆಸ್‌ ಯುವ ಮುಖಂಡನ ಮೇಲೆ ಮಾರಕ ದಾಳಿ

ಉಡುಪಿಯಲ್ಲಿ ಕಾಂಗ್ರೆಸ್‌ ಯುವ ಮುಖಂಡನ ಮೇಲೆ ಮಾರಕ ದಾಳಿ

ಮಣಿಪಾಲದ ಹೋಟೆಲ್‌ ಒಂದರಲ್ಲಿ ಊಟಕ್ಕೆ ತೆರಳಿದ್ದ ವೇಳೆ ಹೋಟೆಲ್‌ನಲ್ಲಿ ಶರತ್ ಕುಂದರ್ ಅವರ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದ ಹಿನ್ನೆಲೆಯಲ್ಲಿ ಮಾತಿನ ವಾಗ್ವಾದ ನಡೆದಿತ್ತು. ಬಳಿಕ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ಕರೆಸಿ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಲಾಗಿದೆ.

Shakti Scheme: ಬುರ್ಖಾ ಧರಿಸಿದ ಮಹಿಳೆ, ಆಧಾರ್‌ನಲ್ಲಿ ಹೆಸರು ಲಕ್ಷ್ಮಮ್ಮ! ಶಕ್ತಿ ಯೋಜನೆ ದುರ್ಬಳಕೆ, ಸಿಕ್ಕಿಬಿದ್ದ ಮಹಿಳೆ

ಬುರ್ಖಾಧಾರಿ ಮಹಿಳೆ, ಆಧಾರ್‌ನ ಹೆಸರು ಲಕ್ಷ್ಮಮ್ಮ! ಕಂಡಕ್ಟರ್‌ ಕಕ್ಕಾಬಿಕ್ಕಿ

ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಫೋಟೋಗೂ, ಎದುರಿಗೆ ಇರುವ ಮಹಿಳೆಗೂ ಯಾವುದೇ ಸಂಬಂಧವಿಲ್ಲದಿರುವುದನ್ನು ಕಂಡಕ್ಟರ್ ತಕ್ಷಣವೇ ಗುರುತಿಸಿದ್ದಾರೆ. ಕೂಡಲೇ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ತಡವರಿಸಿದ್ದಾರೆ. ಬೇರೊಬ್ಬರ ಆಧಾರ್ ಕಾರ್ಡ್ ತೋರಿಸಿ ಸರ್ಕಾರಿ ಸೌಲಭ್ಯ ಪಡೆಯಲು ಯತ್ನಿಸಿರುವುದು ಈ ಮೂಲಕ ಸಾಬೀತಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಈ ವಂಚನೆ ಅಲ್ಲಿಯೇ ತಡೆಯಲ್ಪಟ್ಟಿದೆ.

Chamarajanagara: ಮದುವೆ ಮುಹೂರ್ತಕ್ಕೆ ಬರುತ್ತಿದ್ದ ವರನಿಗೇ ಮಹೂರ್ತ ಇಟ್ಟಳಾ ಭಾವಿ ವಧು!

ಮದುವೆ ಮುಹೂರ್ತಕ್ಕೆ ಬರುತ್ತಿದ್ದ ವರನಿಗೇ ಮಹೂರ್ತ ಇಟ್ಟಳಾ ಭಾವಿ ವಧು!

ಚಾಕು ಚುಚ್ಚಿದ ವಧುವಿನ ಮಾಜಿ ಲವರ್ ಅನ್ನು ಪೊಲೀಸರು ಬಂಧಿಸಿ ಸರಿಯಾಗಿ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮದುವೆಯಾಗಲಿದ್ದ ವಧುವೇ ಭಾವಿ ಪತಿಗೆ ಮುಹೂರ್ತ ಫಿಕ್ಸ್​ ಮಾಡಿರೋದು ಬಯಲಾಗಿದೆ. ಚಾಕು ಇರಿತ ಪ್ರಕರಣದಲ್ಲಿ ವಧು ನಯನ ಕೈವಾಡ ಬಹಿರಂಗವಾಗಿದೆ. ವಧು ನಯನ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

'Textile' festival: ಬೆಂಗಳೂರಿನಲ್ಲಿ ಫೆ.6 ರಿಂದ ಮೂರು ದಿನ ‘ಜವಳಿ’ ಹಬ್ಬ! ಎಫ್&ಎ ಶೋ ಮತ್ತು ಸಿದ್ಧ ಉಡುಪುಗಳ ಮೇಳಕ್ಕೆ ವೇದಿಕೆ ಸಿದ್ಧ!

ಬೆಂಗಳೂರಿನಲ್ಲಿ ಫೆ.6 ರಿಂದ ಮೂರು ದಿನ ‘ಜವಳಿ’ ಹಬ್ಬ

ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪಾಲುದಾರರು, ಉದ್ಯಮಿಗಳು ಇಲ್ಲಿ ನಿಯಮಿತ ವಾಗಿ ಭೇಟಿಯಾಗಿ, ಕಚ್ಚಾ ವಸ್ತುಗಳ ಬಗ್ಗೆ, ಹೊಸ ಟ್ರೇಂಡ್‌ಗಳ ಅನ್ವೇಷಣೆ, ಪಾಲುದಾರಿಕೆಗಳ ಸ್ಥಾಪನೆ ಮತ್ತು ಜಾಗತಿಕ ಫ್ಯಾಷನ್‌ ಉದ್ಯಮದಲ್ಲಿ ಮುಂದೆ ಬರುವ ಅವಕಾಶಗಳನ್ನು ಚರ್ಚಿಸಲು ಹಾಗೂ ಪಡೆಯಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.

Murder Case: ಪಾರ್ಕಿಂಗ್‌ ವಿಚಾರ ಕೊಲೆಯಲ್ಲಿ ಅಂತ್ಯ, ಆಟೋ ನಿಲ್ಲಿಸುವ ಕುರಿತ ತಗಾದೆ ಸ್ನೇಹಿತನ ಜೀವ ತೆಗೆಯಿತು

ಆಟೋ ಪಾರ್ಕಿಂಗ್ ಕುರಿತ ತಗಾದೆ ಸ್ನೇಹಿತನ ಜೀವ ತೆಗೆಯಿತು

2 ದಿನದ ಹಿಂದೆ ಮನೆ ಬಳಿ ಆಟೊ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಬೈಕ್‍ನಲ್ಲಿ ಬರುತ್ತಿದ್ದ ವೇಲು ಮತ್ತು ಗುಣನನ್ನು ವಿನೋದ್ ಅಡ್ಡಗಟ್ಟಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಚಾಕು ಇರಿದಿದ್ದ. ಗುಣ ಸಾವನ್ನಪ್ಪಿದ್ದು, ಗಾಯಗೊಂಡ ವೇಲುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Gruhalakshmi scheme: ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ

ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುವುದೋ ಎಂದು ಅಧಿಕಾರಿಗಳ ಬಳಿ ಅಲೆದು ಬೇಸತ್ತಿದ್ದೀರಾ? ಇನ್ನು ಮುಂದೆ ಯಾರ ಬಳಿಯೂ ಹೋಗಬೇಕಿಲ್ಲ. ಇದಕ್ಕಾಗಿ ಬಂದಿದೆ ಸಹಾಯವಾಣಿ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿಯನ್ನೂ ತರಲಾಗಿದೆ.

Bagalakote Crime News: ದಾರುಣ ಘಟನೆ, ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ದಾರುಣ ಘಟನೆ, ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ರೂಪಾ ಹನುಮಂತಗೌಡರ (27) ಎಂಬ ಮಹಿಳೆ ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ಜಂತಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಮಕ್ಕಳ ಪ್ರಾಣ ಹೋದ ನಂತರ ತಾನೂ ಸಾಯಬೇಕೆಂಬ ನಿರ್ಧಾರದಿಂದ ರೂಪಾ ಅವರು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

CJ Roy Death: ಸಿಜೆ ರಾಯ್​​​ ಆತ್ಮಹತ್ಯೆ; ತೆರಿಗೆ ಭಯೋತ್ಪಾದನೆ ನಿಲ್ಲಿಸಲು ಮೋಹನ್ ದಾಸ್ ಪೈ ಮನವಿ

ಸಿಜೆ ರಾಯ್​​​ ಆತ್ಮಹತ್ಯೆ; ತೆರಿಗೆ ಭಯೋತ್ಪಾದನೆ ನಿಲ್ಲಿಸಲು ಪೈ ಮನವಿ

ತೆರಿಗೆ ಭಯೋತ್ಪಾದನೆಯಿಂದ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥರನ್ನ ಕಳೆದುಕೊಂಡಿದ್ದೇವೆ. ತೆರಿಗೆ ಅಧಿಕಾರಿಗಳಿಂದ ಹಲವಾರು ಜನರು ಭಯಭೀತರಾಗಿದ್ದಾರೆ. ನಾಗರಿಕ ಹಕ್ಕುಗಳ ಮೇಲಿನ ದಾಳಿಯಾಗುತ್ತಿದೆ. ದಯವಿಟ್ಟು ತೆರಿಗೆ ಪಾವತಿದಾರರನ್ನು ಈ ರೀತಿಯ ದಾಳಿಗಳು ಮತ್ತು ನಾಗರಿಕ ಹಕ್ಕುಗಳ ಮೇಲಿನ ದಾಳಿಯಿಂದ ರಕ್ಷಿಸುವಂತೆ ಮೋಹನದಾಸ್ ಪೈ ವಿನಂತಿಸಿದ್ದಾರೆ.

Koratagere News: ಕೊರಟಗೆರೆ ಎಸ್ ಎಸ್ ಸರ್ಕಲ್ ನಲ್ಲಿ ರಾಜನ ಪತ್ರಿಮೆಗೆ ಪುಷ್ಪಾರ್ಚನೆ: ಕುರಂಗನನ್ನು ಅನುಸರಿಸಲು ಕರೆ

ಮಾದಿಗರ ಕೆಚ್ಚೆದೆಯ ರಾಜ ಅರಸು ಕುರಂಗರಾಯನ 278ನೇ ಪಟ್ಟಾಭಿಷೇಕೋತ್ಸವ

ದನ ಕಾಯುವ ಚಾಕರಿ ಕೆಲಸ ಮಾಡುವ ನಮ್ಮ ಸಮುದಾಯಕ್ಕೆ ಒಬ್ಬ ರಾಜನಿದ್ದ ಎಂಬುದೇ ಹೆಮ್ಮೆಯ ವಿಚಾರ ಇಂದಿಗೂ ಈ ಸಮುದಾಯ ಗಟ್ಟಿಮುಟ್ಟಾಗಿ ರಾಜರಂತೆಯೇ ಬದುಕುತ್ತಿದ್ದೇವೆ ಸವರ್ಣಿಯರಂತೆ ನಾವು ಯಾರನ್ನು ದೌರ್ಜನ್ಯ ಮಾಡುತ್ತಿಲ್ಲ ಆದರೆ ನಮ್ಮ ಸಮುದಾಯ ದುಡಿದ ಶ್ರಮವನ್ನ ಮೇಲ್ಜಾತಿ ಯವರು ಪಡೆಯುತ್ತಿದ್ದಾರೆ.

Chimul Election: ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ: ಭರಣಿ ವೆಂಕಟೇಶ್

ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ

ನನ್ನ ಗೆಲುವಿನಲ್ಲಿ ಪಕ್ಷಾತೀತವಾಗಿ ಅನೇಕರು ಶ್ರಮಿಸಿದ್ದಾರೆ. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ( Former MLA KP Bachegowda) ಆರೋಗ್ಯ ಸರಿಯಿಲ್ಲದಿದ್ದರೂ ಕೂಡ ನನ್ನ ಪರವಾಗಿ ಒಂದು ದಿನ ಬಹಿರಂಗ ಪ್ರಚಾರಕ್ಕೆ ಬಂದಿದ್ದಲ್ಲದೆ ಮನೆಯಲ್ಲಿದ್ದುಕೊಂಡೇ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನುಗಿತಹಳ್ಳಿ ರವಿ 10 ದಿನಗಳ ಕಾಲ ನನ್ನ  ಜತೆಗಿದ್ದು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ.

Chikkaballapur News: ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತು ಮುಖ್ಯ: ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್

ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ ಶಿಸ್ತು ಮುಖ್ಯ

ವಿದ್ಯಾಭ್ಯಾಸದ ಅವಧಿಯಲ್ಲಿ ಓದಿನತ್ತ ತೋರಿಸುವ ಉದಾಸೀನತೆ ಭವಿಷ್ಯದಲ್ಲಿ ಭಾರೀ ತೊಂದರೆಗಳಿಗೆ ಕಾರಣವಾಗಬಹುದು. ಈ ದಿನಗಳಲ್ಲಿ ಒಂದು ನಿಮಿಷವೂ ಬಹಳ ಅಮೂಲ್ಯ.ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವು ದರಿಂದ ವಿದ್ಯಾರ್ಥಿಗಳು ಇನ್ನಷ್ಟು ಕಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು. ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಯಾವತ್ತೂ ಮರೆಯಬಾರದು

Beary Koota 2026: ಬ್ಯಾರಿ ಸಮುದಾಯ ತಮ್ಮ ಅಸ್ಮಿತೆ, ಒಗ್ಗಟ್ಟನ್ನು ಉಳಿಸಿಕೊಂಡು ಹೋಗಬೇಕು: ಸಿಎಂ ಸಲಹೆ

ಬ್ಯಾರಿ ಸಮುದಾಯ ಅಸ್ಮಿತೆ ಉಳಿಸಿಕೊಂಡು ಹೋಗಬೇಕು: ಸಿಎಂ

ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿಗಳು ದೇಶ, ವಿದೇಶ ಅನೇಕ ಭಾಗಗಳಲ್ಲಿ ಕೆಲಸ ಮಾಡುವವರಾದರೂ ಬ್ಯಾರಿ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಬ್ಯಾರಿಗಳು ಜಾತ್ಯತೀತರು. ಜಾತಿ ವ್ಯಾಮೋಹವಾಗಲಿ, ಧರ್ಮದ ವ್ಯಾಮೋಹವಾಗಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Bagepally News: ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ: ಎಂ.ಅರ್.ಜಯರಾಂ

ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ

ಜಾಗೃತಿ ಕೊರತೆಯಿಂದ ಹಿಂದೂ ಧರ್ಮದ ರಕ್ಷಣೆಗೆ ಹಿನ್ನಡೆಯಾಗಿದ್ದು, ಪ್ರತಿ ಮನೆಯಲ್ಲಿಯೂ ಹಿಂದೂಗಳು ಸಂಘಟಿತರಾಗಬೇಕು. ಪ್ರತಿ ಗ್ರಾಮ, ಹೃದಯಕ್ಕೂ ಹಿಂದೂಗಳ ಸಂದೇಶ ಸಾರುವ ಮೂಲ ಉದ್ದೇಶದಿಂದ ಹಿಂದೂ ಸಮ್ಮೇಳನದ ಕಾರ್ಯಕ್ರಮ ಆಯೋಜಿಸಿದ್ದು, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತರಾಗಬೇಕು

Loading...