ದೀರ್ಘಾಯಸ್ಸು, ಆರೋಗ್ಯಕರ ಶರೀರವೇ ಆಧ್ಯಾತ್ಮಿಕ ಸಾಧನೆಗೆ ಮೂಲ
Sri Raghaveshwara Bharathi Swamiji: ಯಾವುದು ಮೃತ್ಯು, ಮುಪ್ಪು ಹಾಗೂ ರೋಗಗಳ ವಿರುದ್ಧ ಕೆಲಸ ಮಾಡುತ್ತದೆಯೋ, ಯಾವುದು ಮನಸ್ಸಿಗೆ ಶಕ್ತಿಯನ್ನು ತುಂಬುತ್ತದೆಯೋ ಅದನ್ನು ಆಯುರ್ವೇದದಲ್ಲಿ ರಸಾಯನ ಎಂದು ಕರೆಯಲಾಗಿದ್ದು, ತುಪ್ಪ ಉತ್ತಮ ರಸಾಯನವಾಗಿ, ನಮಗೆ ಅಗಣಿತವಾದ ಪ್ರಯೋಜನಗಳನ್ನು ನೀಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.