ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chinthamani News: ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಈಜು ಕಲೆ ಅಗತ್ಯ: ಕೇಶವ ಅಕಾಡೆಮಿ ಸಂಸ್ಥಾಪಕ  ಅಧ್ಯಕ್ಷ ಕೇಶವ

ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಈಜು ಕಲೆ ಅಗತ್ಯ

ಈಜು ತರಬೇತಿಯ ಜೊತೆಗೆ,ಕೇಶವ ಅವರು ಮಕ್ಕಳಿಗೆ ಅಂಡರ್ ವಾಟರ್ ಸ್ವಿಮ್ಮಿಂಗ್, ಶವಾಸನ, ಚಕ್ರಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ನೀರಿನಲ್ಲೇ ಮಾಡುವ ಕಲೆಗಳನ್ನು ಕಲಿಸಿ ಕೊಡುತ್ತಿದ್ದಾರೆ. ಒಂದು ತಿಂಗಳ ಈ ವಿಶೇಷ ಶಿಬಿರದಲ್ಲಿ ಸುಮಾರು 60 ರಿಂದ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದು,ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದಲೂ ಮಕ್ಕಳು ಆಗಮಿಸುತ್ತಿರುವುದು ವಿಶೇಷವಾಗಿದೆ.

ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ; 293 ಇನ್ಸ್‌ಪೆಕ್ಟರ್, 74 ಡಿವೈಎಸ್‌ಪಿಗಳ ವರ್ಗಾವಣೆ

ರಾಜ್ಯದ 293 ಇನ್ಸ್‌ಪೆಕ್ಟರ್, 74 ಡಿವೈಎಸ್‌ಪಿಗಳ ವರ್ಗಾವಣೆ

ಮೇ 10ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

“ಜನರಿಗೆ ನೀರೇ ಇಲ್ಲ… ಅಭಿವೃದ್ಧಿ ಎಲ್ಲಿದೆ?” ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಲಕ್ಷಾಂತರ ವೆಚ್ಚದ ನೀರಿನ ಘಟಕಗಳು ಬಂದ್: ನಗರಸಭೆ ವಿರುದ್ಧ ಜನರ ಕಿಡಿ

ನಗರದ ಕೋಟೆ ವೃತ್ತದಲ್ಲಿರುವ ನಗರಸಭೆ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಿದ್ದ ನೀರಿನ ಘಟಕ ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ವಾಗಬೇಕಿದ್ದ ನೀರಿನ ಟ್ಯಾಂಕ್ ಹಾಗೂ ಸರಬರಾಜು ವ್ಯವಸ್ಥೆ ನಿರ್ವಹಣೆ ಕೊರತೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎನ್ನಲಾಗಿದೆ.

Gudibande News: ಗುಡಿಬಂಡೆಯಲ್ಲಿ ಮೂಕಪ್ರಾಣಿಗಳಿಗೆ ಹಣ್ಣು-ಹಂಪಲು ವಿತರಣೆ

ಗುಡಿಬಂಡೆಯಲ್ಲಿ ಮೂಕಪ್ರಾಣಿಗಳಿಗೆ ಹಣ್ಣು-ಹಂಪಲು ವಿತರಣೆ

ಬಿಸಿಲಿನ ತಾಪಕ್ಕೆ ನಲುಗಿ ಮೂಕಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಆದ್ದರಿಂದ ಸಾರ್ವ ಜನಿಕರು ಪ್ರಾಣಿಗಳ ಮೇಲೆ ದಯೆ ತೋರಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮಹಡಿಯ ಮೇಲೆ ಮಣ್ಣಿನ ಗಡಿಗೆಯಲ್ಲಿ ನೀರು ಮತ್ತು ಅಕ್ಕಿಯನ್ನು ಇಡುವ ಮೂಲಕ ಅವುಗಳ ಜೀವ ಉಳಿಸಲು ಮುಂದಾಗಬೇಕು. ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ

ಪುಂಡಾಟ ಮೆರೆದ ವಿದ್ಯಾರ್ಥಿಗಳ ಮೇಲೆ ದೂರು ದಾಖಲು : ಹುಡುಗರ ಪತ್ತೆಗೆ ಮುಂದಾದ ಪೊಲೀಸರು

ಪುಂಡಾಟ ಮೆರೆದ ವಿದ್ಯಾರ್ಥಿಗಳ ಮೇಲೆ ದೂರು ದಾಖಲು

ಬೈಕ್ ಕರ್ಕಶ ಶಬ್ಧ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಸೈಲೆಂಟ್ ಆಗಿ ಹೋಗಿ ಎಂದು ತಿಳಿ ಹೇಳಿದ್ದರಂತೆ. ಈ ವೇಳೆ ಪೊಲೀಸರ ಎಚ್ಚರಿಕೆಗೆ ಕ್ಯಾರೆ ಎನ್ನದೇ ಒಬ್ಬ ವಿದ್ಯಾರ್ಥಿ ಬೈಕ್ ಜೋರು ಸೌಂಡ್ ಮಾಡಿದ್ದಾನೆ. ಬೇರೆ ವಿದ್ಯಾರ್ಥಿಗಳು ಬೇಡ ಅಂದ್ರೂ ಅವನೊಬ್ಬ ಪೊಲೀಸ್ ಏನು? ಮಾಡ್ತಾನೆ? ಎಂದು ಮತ್ತೆ ಶಬ್ಧ ಮಾಡಿದ್ದಾನೆ. ಈ ವೇಳೆ ಕೆರಳಿದ ಎಎಸ್‌ಐ ಗಂಗರಾಜು ವಿದ್ಯಾರ್ಥಿಯ ಮೇಲೆ ಲಾಠಿ ಬೀಸಿದ್ದು, ವಿದ್ಯಾರ್ಥಿಗೆ ಗಾಯವಾಗಿ ರಕ್ತ ಬಂದಿದೆ ಎನ್ನಲಾಗಿದೆ.

Chikkaballapur News: ಮೊಬೈಲ್ ಮೋಹದಿಂದ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬೇಕಿದೆ: ವಕೀಲ ಆರ್.ಮಟಮಪ್ಪ

ಮೊಬೈಲ್ ಮೋಹದಿಂದ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬೇಕಿದೆ

ಮೊಬೈಲ್ ಹೆಚ್ಚೆಚ್ಚು ಬಳಕೆಯಿಂದಾಗಿ ಮಕ್ಕಳು ದಾರಿ ತಪ್ಪುತ್ತಿರುವ ಬಗ್ಗೆ ಅನೇಕ ವರದಿ ಗಳನ್ನು ನಾವು ನೋಡುತ್ತಿರುತ್ತೇವೆ. ಒಂದು ವೇಳೆ ಜ್ಞಾನದ ಅವಶ್ಯಕತೆಗೆ ಮಾತ್ರ ಮೊಬೈಲ್ ನೀಡಿದರು ತಂದೆ ತಾಯಿಗಳು ಮಕ್ಕಳ ಬಳಿಯೇ ಇದ್ದು ಗಮನಿಸಬೇಕು. ಇಲ್ಲದಿದ್ದರೆ ಮಕ್ಕಳ ಆರೋಗ್ಯಕ್ಕೆ ಮಾನಸಿಕವಾಗಿ ದೈಹಿಕವಾಗಿ ಜೊತೆಗೆ ಮುಂದಿನ ಭವಿಷ್ಯತ್ತಿಗೆ ತೊಂದರೆ ಯಾಗಲಿದೆ ಎಂದು ತಿಳಿಸಿದರು.

Chinthamani News: ಶಿಷ್ಯನಾದವನು ಭಕ್ತಿಯಿಂದ ಶರಣಾಗತನಾದರೆ ಗುರು ಶಿಷ್ಯರ ಭಾರ ಹೊರುತ್ತಾನೆ : ಧರ್ಮಾಧಿಕಾರಿ ಎಂ.ಆರ್.ಜಯರಾಮ್

ಶಿಷ್ಯನಾದವನು ಭಕ್ತಿಯಿಂದ ಶರಣಾಗತನಾದರೆ ಗುರು ಶಿಷ್ಯರ ಭಾರ ಹೊರುತ್ತಾನೆ

ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ತತ್ವಬೋಧನೆಗಳಿಗೆ ಭಾವಾನುವಾದ, ತಾತ್ಪರ್ಯಗಳನ್ನು ರಚಿಸಿ ಅಪಾರ ಕೊಡುಗೆಯನ್ನು ನೀಡಿದ್ದ ದಿವಂಗತ ಶ್ರೀಕೈಪು ಲಕ್ಷ್ಮೀ ನರಸಿಂಹಶಾಸ್ತ್ರಿಗಳಿಗೆ ಮರಣೋತ್ತರವಾಗಿ 1 ಲಕ್ಷ ನಗದು ಬಹುಮಾನವನ್ನು ಅವರ ಧರ್ಮ ಪತ್ನಿ ನಾಗಮಣಿ ಲಕ್ಷ್ಮೀನರಸಿಂಹಶಾಸ್ತ್ರಿಗಳಿಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಪ್ರದಾನ ಮಾಡಿ ಮಾತನಾಡಿದರು.

D Sudhakar Death: ಆತ್ಮೀಯ ಸ್ನೇಹಿತನಿಗೆ ಕಣ್ಣೀರ ವಿದಾಯ; ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿಕೆಶಿ

ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿಕೆಶಿ

D Sudhakar Death: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸಚಿವ ಡಿ.ಸುಧಾಕರ್ ನಿಧನದ ಹಿನ್ನೆಲೆ ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಚಿತ್ರದುರ್ಗ ಜಿಲ್ಲೆಗೆ ರಜೆ ಘೋಷಣೆ

ಸಚಿವ ಡಿ.ಸುಧಾಕರ್ ನಿಧನದ ಹಿನ್ನೆಲೆ ನಾಳೆ ಚಿತ್ರದುರ್ಗ ಜಿಲ್ಲೆಗೆ ರಜೆ ಘೋಷಣೆ

Minister D Sudhakar Death: ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಿಎಂ ಸಿದ್ದರಾಮಯ್ಯ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಮಾಡುತ್ತಿದ್ದು, ಚಿತ್ರದುರ್ಗದಲ್ಲಿ ಸೋಮವಾರ ರಜೆ ಘೋಷಣೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.

ಕೊಳ್ಳಂಗಿಯ ಜಂಪ ಮಹೋತ್ಸವ

ಕೊಳ್ಳಂಗಿಯ ಜಂಪ ಮಹೋತ್ಸವ

ಧರ್ಮದೇವತೆಯ ಸಾಕ್ಷಿಯಾಗಿ ನಡೆಯುತ್ತಿದ್ದ ಈ ತೀರ್ಪುಗಳಿಗೆ ಎಲ್ಲರೂ ತಲೆಬಾಗು ತ್ತಿದ್ದರು. ಈ ಸಹಬಾಳ್ವೆ ಮತ್ತು ಬುದ್ಧಿವಂತಿಕೆಯ ಫಲವಾಗಿಯೇ ಕೊಳ್ಳಂಗಿಗೆ ಕಟ್ಟೆಮನೆ ಎಂಬ ಗೌರವ ಯುತ ಹೆಸರು ಬಂದಿದೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಇಡೀ ಪ್ರಾಂತ್ಯದ ಜನರಿಗೆ ಭರವಸೆಯ ತಾಣವಾಗಿತ್ತು.

Pravasi Prapancha: ನಾಡು ಕಂಡ ಮಾಸ್‌ ಲೀಡರ್‌ ಬಿಎಸ್‌ವೈ ಅಭಿಮಾನೋತ್ಸವ

ಮಾಸ್‌ ಲೀಡರ್‌ ಬಿಎಸ್‌ವೈ ಅಭಿಮಾನೋತ್ಸವ

BSY Abhimanotsava: ರಾಜಕಾರಣಕ್ಕೆ ಬರುವ ಹಾದಿ ಕಷ್ಟವಲ್ಲ. ಆದರೆ ಬಂದ ಬಳಿಕ ಆ ಹಾದಿಯಲ್ಲಿ ಅಭಿವೃದ್ಧಿ ಮಾಡುತ್ತಾ, ಜನರ ಪ್ರೀತಿ ಹಾಗೂ ನಂಬಿಕೆ ಗಳಿಸಿ ಎಷ್ಟು ದೂರ ಕ್ರಮಿಸಲು ಸಾಧ್ಯವೆನ್ನುವುದೇ ಸವಾಲು. ಈ ಸವಾಲನ್ನು ಮೆಟ್ಟಿನಿಂತು, ರಾಜ್ಯವೇ ಮೆಚ್ಚುವಂತೆ ಜನಪರ ಧ್ವನಿಯಾಗಿ ಕರ್ನಾಟಕದ ʼಮಾಸ್ ಲೀಡರ್ʼ ಎಂಬ ಹೆಸರು ಪಡೆದ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ (ಬಿ.ಎಸ್. ಯಡಿಯೂರಪ್ಪ) ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಪ್ರವಾಸೋದ್ಯಮಕ್ಕೂ ದಾರಿದೀಪದಂತಿದ್ದ ಅವರ ದೂರದೃಷ್ಟಿ ಈಗಲೂ ಪ್ರಸ್ತುತ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಪೋಷಕರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದು ಕೊಂದ ಚಿರತೆ!

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಾಲಕನನ್ನು ಎಳೆದೊಯ್ದು ಕೊಂದ ಚಿರತೆ!

leopard attack in male mahadeshwara hills: ಮಲೆ ಮಹದೇಶ್ವರನ 77 ಮಲೆಗಳಲ್ಲಿ ಒಂದಾದ ನಾಗಮಲೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಕೊಂದಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿದೆ.

ಪುಟ್ಟ ಕೈಗಳಲ್ಲಿ ಅರಳಿದ ಅನಿಮೇಷನ್ ಲೋಕ; ಪರಮ್ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ

ಜಯನಗರದಲ್ಲಿ ಪರಮ್ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ

ಬೆಂಗಳೂರಿನ ಜಯನಗರದಲ್ಲಿ ಪರಮ್ ಫೌಂಡೇಶನ್ ಆಯೋಜಿಸಿದ್ದ ‘ಸ್ಟಾಪ್ ಮೋಷನ್ ಅನಿಮೇಷನ್’ ಬೇಸಿಗೆ ಶಿಬಿರವು ಅದ್ಧೂರಿಯಾಗಿ ಮುಕ್ತಾಯವಾಗಿದೆ. ಏಪ್ರಿಲ್ 20ರಂದು ಆರಂಭವಾದ ಈ ಶಿಬಿರವು ಒಟ್ಟು ಮೂರು ವಾರಗಳ ಕಾಲ ಯಶಸ್ವಿಯಾಗಿ ನಡೆದಿದೆ. ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.

Art of Living Dhyan Mandir: ಬೆಂಗಳೂರಿನಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

PM Modi in Bengaluru: ಬೆಂಗಳೂರಿನ ಕನಕಪುರ ರಸ್ತೆಯಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70 ನೇ ಜನ್ಮದಿನದ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಭಾಗವಹಿಸಿದ್ದಾರೆ.

PM Modi in Bengaluru: ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆ; ಶಂಕಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ವಶಕ್ಕೆ

ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲೇ ಜಿಲೆಟಿನ್ ಕಡ್ಡಿ ಪತ್ತೆ

ಬೆಂಗಳೂರು ಹೊರವಲಯದ ಕಗ್ಗಲೀಪುರ ವ್ಯಾಪ್ತಿಯ ತಾತಗುಣಿ ಅಗರ ಕೆರೆ ಬಳಿ ರಸ್ತೆಬದಿಯ ಕಸದ ರಾಶಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದ ಅತ್ಯಂತ ಸಮೀಪದಲ್ಲೇ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಡಿ. ಸುಧಾಕರ್  ಸ್ಮರಣೆಗೆ ನೀರಾವರಿ ಯೋಜನೆಗೆ ಅವರ ಹೆಸರಿಡಲು ಆಲೋಚನೆ: ಡಿ.ಕೆ. ಶಿವಕುಮಾರ್

ನೀರಾವರಿ ಯೋಜನೆಗೆ ಸುಧಾಕರ್ ಹೆಸರಿಡಲು ಆಲೋಚನೆ: ಡಿ.ಕೆ. ಶಿವಕುಮಾರ್

ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (62) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಸುಧಾಕರ್‌ ಕುರಿತು ಮಾತನಾಡಿ, "ಸಚಿವರಾಗಿದ್ದ ಡಿ. ಸುಧಾಕರ್ ಅವರು ಭದ್ರ ಮೇಲ್ದಂಡೆ ಯೋಜನೆ ಜಾರಿಗೆ ಹೋರಾಟ ಮಾಡಿದ್ದರು. ಅವರ ಸ್ಮರಣಾರ್ಥ ನೀರಾವರಿ ಯೋಜನೆಗೆ ಸುಧಾಕರ್ ಅವರ ಹೆಸರಿಡಲು ಆಲೋಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

"ಬೆಂಗಳೂರಲ್ಲಿ ಕೇಸರಿಯ ಸೂರ್ಯ ಉದಯಿಸಿದ್ದಾನೆ‌" ; ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ

ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಮೋದಿ ಅವರಿಗೆ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸನ್ಮಾನ ಕಾರ್ಯಕ್ರಮ ನೆರವೇರಿತು. ಈ ವೇಳೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯವರಿಗೆ ಮೈಸೂರು ಶಲ್ಯ, ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, '13 ಕೆಜಿಯ ಬೃಹತ್ ಬೆಳ್ಳಿಯ ಪ್ರತಿಮೆಯನ್ನು ನೀಡಿ ಗೌರವಿಸಿದರು.

ಸಚಿವ ಡಿ. ಸುಧಾಕರ್‌ ನಿಧನ; ಸಿಎಂ, ಡಿಸಿಎಂ ಸೇರಿ ಹಲವು ಗಣ್ಯರಿಂದ ಸಂತಾಪ

ಸಚಿವ ಡಿ. ಸುಧಾಕರ್‌ ನಿಧನ; ಹಲವು ಗಣ್ಯರಿಂದ ಸಂತಾಪ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (62) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಉದ್ಯಮದಿಂದ ರಾಜಕೀಯ: ಸಚಿವ ಡಿ. ಸುಧಾಕರ್‌ ನಡೆದು ಬಂದ ದಾರಿ ಹೇಗಿತ್ತು?

ಸಚಿವ ಡಿ. ಸುಧಾಕರ್‌ ನಡೆದು ಬಂದ ದಾರಿ ಹೇಗಿತ್ತು?

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (62) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

D. Sudhakar Passes Away: ಚಿಕಿತ್ಸೆ ಫಲಕಾರಿಯಾಗದೆ ಸಚಿವ ಡಿ. ಸುಧಾಕರ್ ನಿಧನ

ಚಿಕಿತ್ಸೆ ಫಲಕಾರಿಯಾಗದೆ ಸಚಿವ ಡಿ. ಸುಧಾಕರ್ ನಿಧನ

D. Sudhakar Passes Away: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (65) ಇಂದು ಮುಂಜಾನೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ. ಸುಧಾಕರ್ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Chinthamani News: ನಿವೃತ್ತ ನೌಕರರ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ನಿವೃತ್ತ ನೌಕರರ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸಂಘದ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಸಾಧನೆಗೈದ ಎನ್.ಕಾರುಣ್ಯ,ಎನ್ ವೇದ,ಸ್ಕಂದ ಶ್ರೀ ವಾತ್ಸವ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕ ಗಳಿಸಿದ ಜಿ ಆರ್.ನಯನ ರವರನ್ನು ಸನ್ಮಾನಿಸಿ, ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.

Chinthamani News: ಚಿಂತಾಮಣಿಯಲ್ಲಿ ಜೆಸಿಬಿಗಳ ಅಬ್ಬರ: ಐಡಿಎಸ್‌ಎಂಟಿ ಮಾರುಕಟ್ಟೆ ಕಟ್ಟಡ ನೆಲಸಮ ಕಾರ್ಯಾರಂಭ

ಐಡಿಎಸ್‌ಎಂಟಿ ಮಾರುಕಟ್ಟೆಕಟ್ಟಡ ನೆಲಸಮ ಕಾರ್ಯಾರಂಭ

ಹಲವು ದಿನಗಳಿಂದ ಈ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಲಾಗಿತ್ತು. ಇಂದು ಮಾರುಕಟ್ಟೆ ಆವರಣದಲ್ಲಿ ಜೆಸಿಬಿ ಯಂತ್ರಗಳ ಗರ್ಜನೆ ಕೇಳಿಬರುತ್ತಿದ್ದು, ಹಳೆಯ ಮಳಿಗೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹೊಸ ಮತ್ತು ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Gubbi News: ತ್ವರಿತವಾಗಿ ಜನರಿಗೆ ಜಾಗೃತಿ ಮೂಡಿಸಲು ಸುಲಭ ಸಂವಹನ ಸಾಧನ ಡಿಜಿಟಲ್‌ ಮಾಧ್ಯಮ

ಜಾಗೃತಿ ಮೂಡಿಸಲು ಡಿಜಿಟಲ್‌ ಮಾಧ್ಯಮ ಸುಲಭ ಸಂವಹನ ಸಾಧನ

ಕೈಯಲ್ಲಿ ಮೊಬೈಲ್ ಫೋನ್ ಇರುವ ಪ್ರತಿಯೊಬ್ಬರೂ ಸುದ್ದಿಯನ್ನು, ಮಾಹಿತಿಯನ್ನು, ಅನಿಸಿಕೆಯನ್ನು ಬರೆಯಬಹುದು, ಮಾತಾಡಬಹುದು ಮತ್ತು ಅವರೇ ಅದನ್ನು ಪ್ರಸಾರ ಸಹ ಮಾಡಬಹುದು. ಇದೇ ಡಿಜಿಟಲ್ ಮೀಡಿಯಾದ ಸಾಧ್ಯತೆ. ಆದರೆ, ಅವನ್ನು ವ್ಯವಸ್ಥಿತ ವಾಗಿ, ಯೋಜಿತವಾಗಿ ಮತ್ತು ವೃತ್ತಿಪರವಾಗಿ ಮಾಡಲು ಈದಿನ ಡಾಟ್ ಕಾಮ್ ರಾಜ್ಯದ ನಾಗರಿಕ ರಿಗೂ ಅವಕಾಶ ಕಲ್ಪಿಸುತ್ತದೆ, ತರಬೇತಿ ನೀಡುತ್ತದೆ ಮತ್ತು ವೇದಿಕೆ ಕಲ್ಪಿಸುತ್ತದೆ.

PM Modi’s Bengaluru visit: ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಆರ್ಟ್‌ ಆಫ್‌ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗಿ

ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

PM Narendra Modi to visit Karnataka: ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್‌ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

Loading...