KSIC: ದೂರವಾದ ಮೈಸೂರು ರೇಷ್ಮೆ ಸೀರೆ ಉದ್ಯಮ ಆತಂಕ
ಮೈಸೂರು ರೇಷ್ಮೆ ಹೆಸರಿನಲ್ಲಿ ಮೈಸೂರಿನಲ್ಲಿ ಕುತಂತ್ರಿಗಳ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ. ಅದರ ಪರಿಣಾವೇ ಮೈಸೂರಿನ ಕೆಲ ಖಾಸಗಿ ಸೀರೆ ಮಳಿಗೆಗಳ ಮೇಲೆ ಕೆಎಸ್ ಐಸಿ ಪದ ಬಳಕೆಯ ದುರುಪಯೋಗ ಆಗಿದೆ. ಮೈಸೂರು ರೇಷ್ಮೆ ಸೀರೆ ಮಾದರಿ ಹೋಲುವ ಚೀನಾ ರೇಷ್ಮೆ ಸೀರೆಗಳನ್ನೇ ಮೈಸೂರು ರೇಷ್ಮೆ ಸೇರೆ ಎಂದು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ, ಆದರೆ ಇದನ್ನು ಪ್ರಶ್ನಿಸಬೇಕಾದ ಮಂದಿ ಜಾಣ ಕುರುಡರಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.