ಪಾರ್ಶ್ವವಾಯು ಜಾಗೃತಿ ಓಟ ಆಯೋಜಿಸಿದ ಅಪೋಲೋ ಹಾಸ್ಪಿಟಲ್
5,000+ ಜನರು, ಗುರಿ ಒಂದೇ: ವಿಶ್ವ ಪಾರ್ಶ್ವವಾಯು ದಿನದ ಮುನ್ನಾ ದಿನದಂದು ಪಾರ್ಶ್ವ ವಾಯು ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪಾರ್ಶ್ವವಾಯು ಜಾಗೃತಿ ಓಟ ಆಯೋಜಿಸಿದ ಅಪೋಲೋ ಹಾಸ್ಪಿಟಲ್. ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ನಂತರ ಮಾತನಾಡಿ, ಪಾರ್ಶ್ವವಾಯು ಲಕ್ಷಣಗಳನ್ನು ಬೇಗನೆ ಗುರುತಿಸಿ, ಗೋಲ್ಡನ್ ಅವರ್ ನಲ್ಲಿಯೇ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಮಾಡಿ ಜೀವ ಉಳಿಸುವ ಮಹತ್ವವನ್ನು ಸಾರಿದರು.