2.68 ಕೋಟಿ ರೂ. ಲೂಟಿಗೆ ಯತ್ನಿಸಿದ ರಮೇಶ್ ಜಾರಕಿಹೊಳಿ ಗನ್‌ಮ್ಯಾನ್!
ರಾಜಕಾರಣಿಯೊಬ್ಬರ ಭದ್ರತಾ ಸಿಬ್ಬಂದಿಯೇ ಸಿನಿಮಾ ಶೈಲಿಯಲ್ಲಿ ದರೋಡೆಗೆ ಸಂಚು ರೂಪಿಸಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಯತ್ನಿಸಿದ ರೋಚಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರಿಂದ ಬರೋಬ್ಬರಿ 2.39 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್ ಗನ್‌ಮ್ಯಾನ್ ಚಿದಾನಂದನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.