ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕಾಗಿದ್ದು, ಇಂದು (ಅಕ್ಟೋಬರ್ 9, 2026) ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ.

Dr Shalini Rajaneesh Column: ನವರಾತ್ರಿಗೆ ರಂಗೇರಿಸುವ ದುರ್ಗೆಯ ಪೂಜೆ, ಜಂಬೂಸವಾರಿ !

ನವರಾತ್ರಿಗೆ ರಂಗೇರಿಸುವ ದುರ್ಗೆಯ ಪೂಜೆ, ಜಂಬೂಸವಾರಿ !

ಚಾಮುಂಡೇಶ್ವರಿ ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. ಚಾಮುಂಡಿ ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ- ಶಿಷ್ಟರಕ್ಷಕಿಯಾಗಿ ಮಹಿಷ ನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ ‘ಚಾಮುಂಡಿ’ ಯಾಗಿದ್ದಾಳೆಂಬುದು ತಿಳಿಯುತ್ತದೆ.

ಅ.13ರಿಂದ 17ರವರೆಗೆ ದಸರಾ ಕವಿಗೋಷ್ಠಿ, ಐದು ಬಗೆಯ ಕಾವ್ಯ ಸಂಭ್ರಮ, 200ಕ್ಕೂ ಅಧಿಕ ಕವಿಗಳ ಸಮಾಗಮ: ಕವಿತೆಯ ಪಂಚಪರ್ವಕ್ಕೆ ಮೈಸೂರು ಸಜ್ಜು

ಕವಿತೆಯ ಪಂಚಪರ್ವಕ್ಕೆ ಮೈಸೂರು ಸಜ್ಜು

ದಸರೆಯ ವೈಭವಕ್ಕೆ ಕಾವ್ಯದ ಕಂಪು ಬೆರೆಸುವ ಕ್ಷಣ ಮತ್ತೆ ಬಂದಿದೆ. ನಾಡಹಬ್ಬದ ಸಾಂಸ್ಕೃತಿಕ ಸಂಭ್ರಮದ ಭಾಗವಾಗಿ ಈ ಬಾರಿಯ ದಸರಾ ಕವಿಗೋಷ್ಠಿ ಅ.13ರಿಂದ 17ರವರೆಗೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಐದು ದಿನಗಳ ಕಾಲ ನಡೆ ಯಲಿರುವ ಈ ಕಾವ್ಯೋತ್ಸವದಲ್ಲಿ ಚುಟುಕುಹಾಸ್ಯ, ಯುವ, ಚಿಗುರು, ಜನಪದ ಹಾಗೂ ಪ್ರಧಾನ ಕವಿಗೋಷ್ಠಿ ಸೇರಿದಂತೆ ಐದು ವಿಭಿನ್ನ ಸ್ವರೂಪದ ಗೋಷ್ಠಿಗಳು ನಡೆಯಲಿವೆ.

ವರ್ಕರ್ ಮೇಲೆ ಗದಾಪ್ರಹಾರ: ಭ್ರಷ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತದ ಸಹಕಾರ?

ನಕಲಿ ಫಲಾನುಭವಿಗಳಿಗೆ ಮಾತೃ ವಂದನಾ ಬಾಬ್ತು: ಅಧಿಕಾರಿಗಳ ರಕ್ಷಣೆ ?

ಕೇಂದ್ರ ಸರಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ ನಕಲಿ ಫಲಾನುಭವಿ ಗಳನ್ನು ಸೃಷ್ಟಿಸಿ ಲಕ್ಷಾಂತರ ರು. ಲೂಟಿ ಮಾಡಿರುವ ಪ್ರಕರಣದಲ್ಲಿ ಎಲ್ಲವನ್ನೂ ಅಂಗನವಾಡಿ ಕಾರ್ಯಕರ್ತೆ ತಲೆಗೆ ಕಟ್ಟಿ ವಜಾ ಮಾಡಿರುವ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿ ಆಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಪರಿ, ಅಧಿಕಾರಿಗಳ ಅಸಲಿಯತ್ತನ್ನೇ ಪ್ರಶ್ನಿಸು ವಂತಾಗಿದೆ.

ಎಸ್​​ಎಸ್​​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1, 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಟೈಮ್‌ ಟೇಬಲ್‌

ಎಸ್​​ಎಸ್​​ಎಲ್​ಸಿ, ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

KSEAB: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್​​ಎಸ್​​​ಎಲ್​​ಸಿಯ ಪರೀಕ್ಷೆ 1 ಹಾಗೂ 2ರ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2 ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಲ್ಲ ಮುಖ್ಯ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ.

Navaratri Shopping 2026: ಎಲ್ಲೆಡೆ ನವರಾತ್ರಿ ಶಾಪಿಂಗ್‌ ಮೇನಿಯಾ

ಎಲ್ಲೆಡೆ ನವರಾತ್ರಿ ಶಾಪಿಂಗ್‌ ಮೇನಿಯಾ

ನವರಾತ್ರಿಯ ಶಾಪಿಂಗ್‌ ರಾಜ್ಯದೆಲ್ಲೆಡೆ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳು ಕೂಡ ಸಜ್ಜಾಗಿವೆ. ಸೀರೆ ಅಂಗಡಿಗಳು, ಬೊಂಬೆ ಮಾರುವ ಶಾಪ್‌ಗಳು, ಅಲಂಕಾರಿಕ ಸಾಮಗ್ರಿಗಳನ್ನು ಮಾರುವ ಅಂಗಡಿಗಳು, ಪೂಜಾ ಸಾಮಗ್ರಿಗಳ ದುಖಾನ್‌ಗಳು ಸೇರಿದಂತೆ ಎಲ್ಲ ಬಗೆಯ ಮಾರುಕಟ್ಟೆಗಳು ರೆಡಿಯಾಗಿವೆ. ಗ್ರಾಹಕರನ್ನು ಸ್ವಾಗತಿಸುತ್ತಿವೆ.

ಮುದ್ದೇನಹಳ್ಳಿಯಲ್ಲಿ ಅ.10, 11ರಂದು ಏಷ್ಯನ್ ಮಕ್ಕಳ ವೈದ್ಯಕೀಯ ನೈತಿಕತೆ ಸಮ್ಮೇಳನ

ಅ.10, 11ರಂದು ಏಷ್ಯನ್ ಮಕ್ಕಳ ವೈದ್ಯಕೀಯ ನೈತಿಕತೆ ಸಮ್ಮೇಳನ

ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ 4ನೇ ಏಷ್ಯನ್ ಪೀಡಿಯಾಟ್ರಿಕ್ ಎಥಿಕ್ಸ್ ಕಾನ್ಫರೆನ್ಸ್ ಅ.10 ಮತ್ತು 11ರಂದು ನಡೆಯಲಿದೆ. ಭಾರತದಲ್ಲಿ ಮೊದಲ ಬಾರಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ 36ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತಜ್ಞರು ಭಾಗವಹಿಸಲಿದ್ದಾರೆ.

State-level junior athletics meet: ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ಸ್ ಕೂಟಕ್ಕೆ ಚಾಲನೆ: ವಿಜೇತರಿಗೆ ಪದಕ ಪ್ರದಾನ ಮಾಡಿದ ಮಂಚನಬಲೆ ಶ್ರೀನಿವಾಸ್

ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ಸ್ ಕೂಟಕ್ಕೆ ಚಾಲನೆ

ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಹಾಗೂ ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತುಮಕೂರು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅ.5ರಿಂದ 7ರವರೆಗೆ ನಡೆದ ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.

ಬೆಂಗಳೂರಿನ ವಿಂಡ್ ಟನಲ್ ರಸ್ತೆ ಬದಿ ಕಸದ ರಾಶಿ: ವಿಡಿಯೊ ವೈರಲ್‌ ಆಗತ್ತಿದ್ದಂತೆ ವಿಲೇವಾರಿಯ ಭರವಸೆ

ಬೆಂಗಳೂರಿನ ವಿಂಡ್ ಟನಲ್ ರಸ್ತೆ ಬದಿ ಕಸದ ರಾಶಿ: ವಿಡಿಯೊ ವೈರಲ್‌

Viral News: ಬೆಂಗಳೂರು ಎಷ್ಟೇ ಅಭಿವೃದ್ಧಿಗೊಂಡರೂ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಈಗಲೂ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸೌಲಭ್ಯ, ನೀರಿನ‌ ಕೊರತೆ, ಅಸಮರ್ಪಕ ತಾಜ್ಯಗಳ ವಿಲೇವಾರಿ ಹೀಗೆ ಹಲವು ಸಮಸ್ಯೆ ಕಂಡು ಬರುತ್ತಿದೆ. ಇದೀಗ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಕೇಳಿಬಂದಿದೆ.

‘ಗವರ್ನ್‌ಮೆಂಟ್ ಫಸ್ಟ್’ ಯೋಜನೆಯಡಿ ಸ್ಟಾರ್ಟ್‌ಅಪ್‌ಗಳಿಂದ ಅರ್ಜಿ ಆಹ್ವಾನ; 25 ಲಕ್ಷ ರೂಪಾಯಿಯ ಕಾರ್ಯಾದೇಶ ಪಡೆಯುವ ಅವಕಾಶ

ಕರ್ನಾಟಕ ಮೂಲದ ಸ್ಟಾರ್ಟ್‌ಅಪ್‌ಗಳಿಂದ ಅರ್ಜಿ ಆಹ್ವಾನಿಸಿದ ರಾಜ್ಯ ಸರ್ಕಾರ

Government First Initiative: ರಾಜ್ಯ ಸರ್ಕಾರವು ತನ್ನ ಗವರ್ನ್‌ಮೆಂಟ್ ಫಸ್ಟ್ ಯೋಜನೆಯಡಿ ಮೊದಲ ಆಹ್ವಾನವನ್ನು ಆರಂಭಿಸಿದೆ. ಸರ್ಕಾರಿ ಇಲಾಖೆಗಳು ಗುರುತಿಸಿರುವ ಸವಾಲುಗಳ ಅನುಷ್ಠಾನಕ್ಕೆ ಸಿದ್ಧವಾಗಿರುವ ಪರಿಹಾರಗಳನ್ನು ಹೊಂದಿರುವ ಕರ್ನಾಟಕ ಮೂಲದ ಸ್ಟಾರ್ಟ್‌ಅಪ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Collaboration between IIT Dharwad and IIT Madras: ಶಿಕ್ಷಣ, ಸಂಶೋಧನೆ, ಉದ್ಯಮಶೀಲತೆ ಕ್ಷೇತ್ರದಲ್ಲಿ ಧಾರವಾಡ-ಮದ್ರಾಸ್ ಐಐಟಿಗಳ ಸಹಯೋಗ

ಧಾರವಾಡ ಐಐಟಿಯು ಶೈಕ್ಷಣಿಕವಾಗಿ ಅನನ್ಯ ಸೇವೆಯಲ್ಲಿ ತೊಡಗಿದೆ

ಶಿಕ್ಷಣ, ಸಂಶೋಧನೆ ಮತ್ತು ಉದ್ಯಮಶೀಲತಾ ಕ್ಷೇತ್ರಗಳ ಸಹಯೋಗಕ್ಕೆ ಐಐಟಿ ಮದ್ರಾಸ್(IIT Madras) ಮತ್ತು ಕೇಂದ್ರ ಶಿಕ್ಷಣ ಸಚಿವರ ತವರು ಕ್ಷೇತ್ರ ಧಾರವಾಡದ ಐಐಟಿ(IIT Dharwad) ನಡುವೆ ಒಪ್ಪಂದ ಏರ್ಪಟ್ಟಿದ್ದು, ಉಭಯ ಸಂಸ್ಥೆಗಳು ಗುರುವಾರ ಸಚಿವ ಪ್ರಲ್ಹಾದ ಜೋಶಿ(Pralhad Joshi) ಸಮ್ಮುಖ ದಲ್ಲೇ ಒಪ್ಪಂದಕ್ಕೆ ಸಹಿ ಹಾಕಿವೆ.

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್ ಹಾಸ್ಯಾಸ್ಪದ: ಡಿಕೆಶಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್: ಎಚ್.ಡಿ. ಕುಮಾರಸ್ವಾಮಿ

HD Kumaraswamy: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡುತ್ತಿರುವ ಹೇಳಿಕೆಗಳೇ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಜನರ ಗಮನವನ್ನು ಬೇರೆಡೆ ತಿರುಗಿಸಲು ಇಂತಹ ಸ್ಟಂಟ್ ಮಾಡುತ್ತಿದ್ದಾರೆ. ನೈಸ್ ಕಂಪನಿಗೆ ಸಂಬಂಧಿಸಿದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಉಂಟಾದ ಮುಜುಗರವನ್ನು ಮರೆಮಾಚಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗದಂತೆ ತಡೆಯಲು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

Hebbal Dasara: ಶತಮಾನ ಇತಿಹಾಸದ ಹೆಬ್ಬಾಳ ದಸರಾಗೆ ಅ.11 ರಂದು ಚಾಲನೆ: ಅ.21 ರವರೆಗೆ ನಡೆಯಲಿರುವ ರಾಜ್ಯದ ಎರಡನೇ ಮೈಸೂರು ದಸರಾ

ಶತಮಾನ ಇತಿಹಾಸದ ಹೆಬ್ಬಾಳ ದಸರಾಗೆ ಅ.11 ರಂದು ಚಾಲನೆ

ಹೆಬ್ಬಾಳ ದಸರಾ ಬೆಂಗಳೂರಿನಲ್ಲಿ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವ ಪ್ರಮುಖ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾಗಿದೆ. ಇದು ಮೈಸೂರು ದಸರಾದಷ್ಟೇ ಭವ್ಯವಾಗಿ ಆಚರಿಸ ಲ್ಪಡುವ ಕಾರಣ ಇದನ್ನು 'ಕರ್ನಾಟಕದ ಎರಡನೇ ಮೈಸೂರು ದಸರಾ' ಎಂದೂ ಬಣ್ಣಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ 25 ಕ್ಷೇತ್ರಗಳ ಸಾಧಕರಿಗೆ “ಕರ್ನಾಟಕ ಸಾಧಕ ರತ್ನ – 2026” ಗೌರವ

25 ಕ್ಷೇತ್ರಗಳ ಸಾಧಕರಿಗೆ “ಕರ್ನಾಟಕ ಸಾಧಕ ರತ್ನ – 2026” ಗೌರವ

ಕರ್ನಾಟಕ ಸಾಧಕ ರತ್ನ” ಪ್ರಶಸ್ತಿಯನ್ನು ಕಳೆದ 8 ವರ್ಷಗಳಿಂದ ನಿರಂತರವಾಗಿ ನೀಡಲಾಗುತ್ತಿದ್ದು, 2026ರ ಪ್ರಶಸ್ತಿಯು ಈ ಗೌರವ ಪರಂಪರೆಯ ಮುಂದುವರಿದ ಆವೃತ್ತಿಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ವಿಶಿಷ್ಟ ಸಾಧನೆ ಗೈದಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ.

ʼʼರಾಜ್ಯದ ಬಾಕಿ ಅನುದಾನ ಶೀಘ್ರದಲ್ಲೇ ಬರಲಿದೆʼʼ: ಗುಡ್‌ನ್ಯೂಸ್‌ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದ ಬಾಕಿ ಅನುದಾನ ವಿಚಾರವಾಗಿ ಸಿಹಿ ಸುದ್ದಿ ಬಂದಿದೆ: ಸಿಎಂ

CM DK Shivakumar: ನವದೆಹಲಿಯಲ್ಲಿ ಗುರುವಾರ ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್‌, ನಮ್ಮ ರಾಜ್ಯದ ಹಳೆಯ ಬಾಕಿ ವಿಚಾರವಾಗಿ ನಾನು ವಿತ್ತ ಸಚಿವರೊಂದಿಗೆ ಚರ್ಚೆ ಮಾಡಿದ್ದು, ಕೆಲವು ಸಿಹಿ ಸುದ್ದಿ ಕೊಟ್ಟಿದ್ದಾರೆ. ನಾನು ಈಗ ಆ ಬಗ್ಗೆ ಹೇಳುವುದಿಲ್ಲ. ನಂತರ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕ ನೇಮಕಾತಿ ಪರೀಕ್ಷೆ ಹಗರಣ: 50 ಲಕ್ಷ ರೂ. ಲಂಚ ಕೊಟ್ಟರೆ ಸರ್ಕಾರಿ ಹುದ್ದೆ ಪಕ್ಕಾ ಎಂದಿದ್ದ ಅಧಿಕಾರಿಗಳು, ಬಯಲಾಯ್ತು ಕರ್ಮಕಾಂಡ

50 ಲಕ್ಷ ರೂ. ಲಂಚ ಕೊಟ್ಟರೆ ಸರ್ಕಾರಿ ಹುದ್ದೆ ಪಕ್ಕಾ ಎಂದಿದ್ದ ಅಧಿಕಾರಿಗಳು

Karnataka Recruitment Exam Scam: ಕರ್ನಾಟಕ ಸರ್ಕಾರಿ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಹತ್ತು ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ಗೆ ಕರೆದೊಯ್ದು, ಪರೀಕ್ಷೆಗೆ ಒಂದು ದಿನ ಮೊದಲು 80 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿ 50 ಲಕ್ಷ ರೂಪಾಯಿಗಳವರೆಗೆ ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

ಲಾಲ್‌ಬಾಗ್‌ನಲ್ಲಿ ಅತ್ಯಾಧುನಿಕ AI ಆಧಾರಿತ ಸ್ವಾಗತ ಕಮಾನ್‌ಗಳ ಲೋಕಾರ್ಪಣೆಗೊಳಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ಲಾಲ್‌ಬಾಗ್‌ನಲ್ಲಿ ಅತ್ಯಾಧುನಿಕ AI ಆಧಾರಿತ ಸ್ವಾಗತ ಕಮಾನ್‌ಗಳ ಲೋಕಾರ್ಪಣೆ

Lalbagh AI Powered Welcome Gates: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಅತ್ಯಾಧುನಿಕ ಎಐ ಆಧಾರಿತ ಸ್ವಾಗತ ಕಮಾನ್‌ಗಳನ್ನು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲೋಕಾರ್ಪಣೆಗೊಳಿಸಿದರು. ಬಳಿಕ ಅವರು ಮಾತನಾಡಿದ್ದಾರೆ.

ನಮ್ಮ ಮೆಟ್ರೋ ಪಿಂಕ್‌ ಲೈನ್‌ನ ಪರಿಶೀಲನೆ ಪೂರ್ಣ; ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ

ನಮ್ಮ ಮೆಟ್ರೋ ಪಿಂಕ್‌ ಲೈನ್‌ನ 3 ದಿನಗಳ ಪರಿಶೀಲನೆ ಪೂರ್ಣ

Namma Metro: ನಮ್ಮ ಮೆಟ್ರೋ ಪಿಂಕ್​​ ಲೈನ್‌ನ ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದೆ. ಅಕ್ಟೋಬರ್ 6ರಿಂದ 8ರವರೆಗೆ ದಕ್ಷಿಣ ವಲಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ವಿ. ವೆಂಕಟಸುಬ್ರಮಣಿಯನ್ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆಯಿತು.

ನನ್ನ ಹಾಗೂ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ ಪಿತಾಮಹ ಯಾರು ಎಂದು ಗೊತ್ತು; ಸಿಎಂ ಡಿ.ಕೆ. ಶಿವಕುಮಾರ್

ನನ್ನ ಹಾಗೂ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಯತ್ನ: ಸಿಎಂ

CM DK Shivakumar: ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಎಸ್‌ಐಆರ್ ರದ್ದುಗೊಳಿಸಿ, ಜ್ಞಾನೇಶ್ ಕುಮಾರ್ ಹುದ್ದೆ ಬಿಡಿ: ಬೆಂಗಳೂರಿನಲ್ಲಿ ಸಿಜೆಪಿ ಘೋಷಣೆ; ಪ್ರತಿಭಟನೆಗೆ ಧ್ರುವ್‌ ರಾಠಿ, ಅಭಿಜಿತ್‌ ದೀಪ್ಕೆ ಸಾಥ್‌

ಸಿಜೆಪಿ ಪ್ರತಿಭಟನೆಗೆ ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿ

ಚುನಾವಣಾ ಆಯೋಗ ನಡೆಸಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆ 'ಜನತಾ ನ್ಯಾಯಾಲಯ'ದಲ್ಲಿ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಮತ್ತು ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ ಭಾಗವಹಿಸಿದ್ದರು.

RRB Recruitment 2026: ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌; 3,548 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ

3,548 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ

Latest Railway Jobs: ಖಾಲಿ ಇರುವ ಬರೋಬ್ಬರಿ 3,548 ಹುದ್ದೆಗಳ ಭರ್ತಿಗೆ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಆರ್‌ಆರ್‌ಬಿ ಬೆಂಗಳೂರು ವಲಯದಲ್ಲಿ 346 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ನವೆಂಬರ್‌ 6.

ಎನ್‌ಡಿಆರ್‌ಎಫ್ ಯೋಧರ ಮಾನಸಿಕ ಆರೋಗ್ಯಕ್ಕಾಗಿ 'ಪ್ರಾಜೆಕ್ಟ್ ನಿರ್ಮಲ್' ಜಾರಿ; ಏನಿದು ಯೋಜನೆ?

ಎನ್‌ಡಿಆರ್‌ಎಫ್ ಯೋಧರ ಮಾನಸಿಕ ಆರೋಗ್ಯಕ್ಕಾಗಿ 'ಪ್ರಾಜೆಕ್ಟ್ ನಿರ್ಮಲ್' ಜಾರಿ

Project Nirmal: ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರ ಮಾನಸಿಕ ಆರೋಗ್ಯವನ್ನು ಕಾಪಾಡಲು ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಎನ್‌ಡಿಆರ್‌ಎಫ್ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಎಂಡಬ್ಲ್ಯೂಡಬ್ಲ್ಯೂಎ) ಹಾಗೂ ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ (ಎಬಿಇಟಿ) ಪ್ರಸಿದ್ಧ ಮಾನಸಿಕ ಆರೋಗ್ಯ ಸೇವಾ ಸಂಸ್ಥೆಯಾದ 'ಎಂಪವರ್' ಜಂಟಿಯಾಗಿ, ಯೋಧರಿಗಾಗಿ 'ಪ್ರಾಜೆಕ್ಟ್ ನಿರ್ಮಲ್' ಎಂಬ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿವೆ.

ರಾಜ್ಯಕ್ಕೆ ಮತ್ತೆ CWMA ಶಾಕ್‌: ತಮಿಳುನಾಡಿಗೆ 15 ದಿನಗಳವರೆಗೆ 3,000 ಕ್ಯೂಸೆಕ್‌ ಕಾವೇರಿ ನೀರು ಹರಿಸಲು ಸೂಚನೆ

ತಮಿಳುನಾಡಿಗೆ 3,000 ಕ್ಯೂಸೆಕ್ ಕಾವೇರಿ ನೀರು ಹರಿಸಲು ಸೂಚನೆ

Cauvery Water Dispute: ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಆ ಮೂಲಕ ಬರದಿಂದ ತತ್ತರಿಸಿರುವ ಕರ್ನಾಟಕ್ಕೆ ಮತ್ತೊಂದು ಬರೆ ಎಳೆದಂತಾಗಿದೆ. ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಈ ಹಿಂದೆ ಸಿಡಬ್ಲ್ಯುಎಂಎ ಆದೇಶ ನೀಡಿದ್ದ ಹಿನ್ನೆಲೆ, ನೀರಿನ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್​​ಗೆ ಇಳಿಸುವಂತೆ ಕರ್ನಾಟಕ ಇತ್ತೀಚೆಗಷ್ಟೇ ಮನವಿ ಮಾಡಿತ್ತು.

ವಿವೇಕಾನಂದ ರಕ್ತ ಭಂಡಾರ ಸಂಯೋಗದಲ್ಲಿ ರಕ್ತದಾನ ಶಿಬಿರ

ವಿವೇಕಾನಂದ ರಕ್ತ ಭಂಡಾರ ಸಂಯೋಗದಲ್ಲಿ ರಕ್ತದಾನ ಶಿಬಿರ

ತಾಲ್ಲೂಕಿನ ಮಾಲವಿ ಕಲ್ಯಾಣ ಕರ್ನಾಟಕ ಚಾಲಕರ ತರಬೇತಿ ಕೇಂದ್ರ ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವೇಕಾನಂದ ರಕ್ತ ಭಂಡಾರ ಸಂಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 40ಕ್ಕೂ ಹೆಚ್ಚು ಜನರು ತರಬೇತಿ ಕಾರ್ಯಾಗಾರದಲ್ಲಿ ರಕ್ತದಾನ ಮಾಡಿದರು. ತರಬೇತಿ ಕಾರ್ಯ ಗಾರದ ಪ್ರಿನ್ಸಿಪಾಲ್ ತಿಮ್ಮಾರೆಡ್ಡಿ ಹೀರಾ, ಅಧೀಕ್ಷಕ ಮಂಜುನಾಥ ಸ್ವತಃ ರಕ್ತ ನೀಡು ವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

Loading...