ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಹುಲಿಕಲ್ ಘಾಟ್‌ ದುರಂತ; ಮೃತ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಹುಲಿಕಲ್ ಘಾಟ್‌ ದುರಂತ; ಮೃತ 3 ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

Hulikal Ghat road landslide: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಿಸಿದ್ದಾರೆ.

ಕರ್ನಾಟಕದಲ್ಲಿ ಮೊಟ್ಟಮೊದಲ ಸಾಧನೆ: ಎಂಡೋ ಸ್ಕೋಪಿಕ್ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಮೂಲಕ 66 ವರ್ಷದ ಮಹಿಳೆಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಚಿಕಿತ್ಸೆ

ಎಂಡೋಸ್ಕೋಪಿಕ್ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಮೂಲಕ ಕ್ಯಾನ್ಸರ್ ಚಿಕಿತ್ಸೆ

66 ವರ್ಷದ ಶ್ರೀಮತಿ ಸೀತಮ್ಮ ಕೆ. ಅವರು ಕಳೆದ ಎರಡು ತಿಂಗಳುಗಳಿಂದ ತೀವ್ರವಾದ ಹೊಟ್ಟೆ ನೋವಿ ನಿಂದ ನರಳುತ್ತಿದ್ದರು. ಕಾರಣವಿಲ್ಲದೆಯೇ ತೂಕ ಇಳಿಕೆ ಮತ್ತು ಇತ್ತೀಚೆಗೆ ಪತ್ತೆಯಾದ ಮಧುಮೇಹ ಅವರ ಅರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಜಟಿಲವಾಗಿಸಿದ್ದವು. ಪ್ರಾರಂಭದಲ್ಲಿ ಬೇರೆಡೆ ನಡೆಸಿದ ಪರೀಕ್ಷೆಗಳು ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ (ದೀರ್ಘಕಾಲದ ಮೇದೋಜೀರಕ ಗ್ರಂಥಿಯ ಸೋಂಕು ಮತ್ತು ಊತ) ಎಂದು ಸೂಚಿಸಿತ್ತು.

2nd PUC Results 2026: ಪರೀಕ್ಷಾ ಮಂಡಳಿಯ ಮಹಾ ಎಡವಟ್ಟು; ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗೆ 100ಕ್ಕೆ 111 ಅಂಕ!

ಪರೀಕ್ಷಾ ಮಂಡಳಿಯ ಎಡವಟ್ಟು; ಹಿಂದಿಯಲ್ಲಿ ವಿದ್ಯಾರ್ಥಿಗೆ 100ಕ್ಕೆ 111 ಅಂಕ!

ದ್ವಿತೀಯ ಪಿಯುಸಿ ಫಲಿತಾಂಶ ನೀಡುವಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಡವಟ್ಟಿನಿಂದ ಹಲವು ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿದ್ದಾರೆ. ಈ ಪೈಕಿ ಒಬ್ಬ ವಿದ್ಯಾರ್ಥಿಗೆ ಹಿಂದಿ ವಿಷಯದಲ್ಲಿ 100 ಅಂಕಗಳಿಗೆ 111 ಅಂಕ ನೀಡಲಾಗಿದೆ.

Girl missing case: ಮರಳಿ ಬರಲೇ ಇಲ್ಲ ಶ್ರೀನಂದಾ, ಮಾಣಿಕ್ಯಧಾರದ ಪ್ರಪಾತದಲ್ಲಿ ಬಾಲಕಿ ಶವ ಪತ್ತೆ

ಮರಳಿ ಬರಲೇ ಇಲ್ಲ ಶ್ರೀನಂದಾ, ಮಾಣಿಕ್ಯಧಾರದ ಪ್ರಪಾತದಲ್ಲಿ ಬಾಲಕಿ ಶವ ಪತ್ತೆ

ಶ್ರೀನಂದಾ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆಯೇ, ಆತ್ಮಹತ್ಯೆ ಮಾಡಿಕೊಂಡಿರಬಹುದೇ, ಅಥವಾ ಯಾರಾದರೂ ನೂಕಿರಬಹುದೇ, ಆಕೆ ಪ್ರತ್ಯೇಕವಾಗಿದ್ದನ್ನು ಅಥವಾ ಬಿದ್ದುದನ್ನು ಯಾರಾದರೂ ನೋಡಿದ್ದಾರಾ ಎಂಬಿತ್ಯಾದಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Physical Abuse: ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಪಾಪಿ ಶಿಕ್ಷಕ!

ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಪಾಪಿ ಶಿಕ್ಷಕ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ರಾಜಣ್ಣ ಮೇಲೆ ಈ ಆರೋಪ ಬಂದಿದೆ. ಶಿಕ್ಷಕ ಹಾಗು ಗರ್ಭಪಾತ ಮಾಡಿದ ವೈದ್ಯೆ ಶಂಕರ್ ಲಕ್ಷ್ಮಿ ವಿರುದ್ಧ ದೂರು ನೀಡಲಾಗಿದೆ. ಚಳ್ಳಕೆರೆಯ ಲಕ್ಷ್ಮಿ ಶ್ರೀನಿವಾಸ್ ನರ್ಸಿಂಗ್ ಆಸ್ಪತ್ರೆಯ ವೈದ್ಯೆ ಆಗಿದ್ದು, ಮಕ್ಕಳ ರಕ್ಷಣಾಧಿಕಾರಿ ರೇಖಾ ಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ.

"ಚಲನಚಿತ್ರಗಳು ಎರಡು ಟೇಬಲ್‌ಗಳ ಮೇಲೆ ರೂಪುಗೊಳ್ಳುತ್ತವೆ, ರೈಟಿಂಗ್ ಟೇಬಲ್ ಮತ್ತು ಎಡಿಟಿಂಗ್ ಟೇಬಲ್"": ಶ್ರೀ ಕ್ರೇಜಿ ಮೈಂಡ್ಸ್

ಚಲನಚಿತ್ರಗಳು ಎರಡು ಟೇಬಲ್‌ಗಳ ಮೇಲೆ ರೂಪುಗೊಳ್ಳುತ್ತವೆ

ಉತ್ತಮ ಬರಹ ಮತ್ತು ಸಂಪಾದನೆಯ ಮಹತ್ವವನ್ನು ಒತ್ತಿ ಹೇಳುತ್ತಾ ಹೀಗೆ ವಿವರಿಸಿದರು "ಒಂದು ಅತ್ಯುತಮ್ಮ ಚಲನಚಿತ್ರವು ಎರಡು ಟೇಬಲ್‌ಗಳ ಮೇಲೆ ರೂಪುಗೊಳ್ಳುತ್ತದೆ, ಒಂದು ಅಸಾಧಾರಣ ಕಥೆಗಾಗಿ ಬರವಣಿಗೆಯ ಟೇಬಲ್ ಮತ್ತು ಚಲನಚಿತ್ರಕ್ಕೆ ಜೀವ ತುಂಬಲು ಎಡಿಟಿಂಗ್ ಟೇಬಲ್." ಬೆಳ್ಳಿತೆರೆಯ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ (AI) ಪಾತ್ರದ ಬಗ್ಗೆ ತಮ್ಮ ಹೇಳಿಕೆಯನ್ನು ವಿಸ್ತರಿ ಸುತ್ತಾ ಅವರು, "AI ಎಂದಿಗೂ ಮಾನವ ಭಾವನೆಗಳ ಸಂಕೀರ್ಣತೆಗಳನ್ನು ಅನುಕರಿಸಲು ಸಾಧ್ಯವಿಲ್ಲ ಮತ್ತು ಸಿನಿಮಾ ಉದ್ಯಮದ ಅವಿಭಾಜ್ಯ ಅಂಗವಾಗಲು ಅದು ಇನ್ನೂ ಒಂದು ದಶಕ ಮುಂಚಿತ ವಾಗಿದೆ"

Physical Abuse: ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯ ಮೇಲೆ ಬಲಾತ್ಕಾರ, ಕ್ರಿಮಿನಲ್‌ ಕೇಸ್‌ ರದ್ದುಪಡಿಸಲು ಹೈಕೋರ್ಟ್ ನಕಾರ

ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯ ಮೇಲೆ ಬಲಾತ್ಕಾರ, ಕ್ರಿಮಿನಲ್‌ ಕೇಸ್‌

ಬಲವಂತದ ಸಂಭೋಗ, ಜೀವ ಬೆದರಿಕೆ ಮತ್ತು ಮನೆಗೆ ಅತಿಕ್ರಮ ಪ್ರವೇಶ ಆರೋಪ ಮೇಲೆ ಪತ್ನಿ ನಗರದ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಂಭೋಗ ನಡೆದಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳುತ್ತದೆ. ಇದರಿಂದ ಪತಿಯನ್ನು ಸುಳ್ಳು ಕೇಸಿನಲ್ಲಿ ಪತ್ನಿ ಸಿಲುಕಿಸಿರುವುದು ತಿಳಿಯುತ್ತದೆ ಎಂದು ಪತಿ ಪರ ವಕೀಲರು ವಾದಿಸಿದ್ದರು.

2nd PUC result: ದ್ವಿತೀಯ ಪಿಯುಸಿ ಫಲಿತಾಂಶ: ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗೆ ಶೇ.80 ಅಂಕ!

‌ದ್ವಿತೀಯ ಪಿಯುಸಿ: ಕೊಲೆ ಮಾಡಿ ಜೀವಾವಧಿ ಶಿಕ್ಷೆಗೀಡಾದ ಕೈದಿಗೆ ಶೇ.80 ಅಂಕ!

ಬೆಂಗಳೂರು ಮೂಲದ ಎಸ್‌.ಅಶೋಕ್‌ ಕುಮಾರ್‌ ಎಂಬಾತ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಕಳೆದ 7 ವರ್ಷಗಳಿಂದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ಜೈಲಿನ ಪ್ರತ್ಯೇಕ ಸೆಲ್​ನಲ್ಲಿಯೇ ಅಭ್ಯಾಸ ಮಾಡುತ್ತಿದ್ದ ಅಶೋಕ್, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು,​ 600ಕ್ಕೆ 481 ಅಂಕ ಪಡೆದುಕೊಂಡಿದ್ದಾರೆ.

SR Ramaswamy: ನಾಡೋಜ, ಹಿರಿಯ ಸಾಹಿತಿ, ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ  ಎಸ್‌ ಆರ್‌ ರಾಮಸ್ವಾಮಿ ಇನ್ನಿಲ್ಲ

ನಾಡೋಜ, ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ ಆರ್‌ ರಾಮಸ್ವಾಮಿ ಇನ್ನಿಲ್ಲ

ಕನ್ನಡ ಸಾರಸ್ವತ ಲೋಕಕ್ಕೆ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಎಸ್‌.ಆರ್‌.ರಾಮಸ್ವಾಮಿ ಅವರು ಕನ್ನಡದ ಸಾಹಿತಿ, ಪತ್ರಕರ್ತ, ಕಲಾ ವಿಮರ್ಶಕ, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ನಾಡಿಗೆ ಅವಿರತ ಸೇವೆ ಸಲ್ಲಿಸಿದರು. ಸಾಹಿತ್ಯ, ಸಾಂಸ್ಕೃತಿಕ, ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಐವತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.

Zombie Drug: ಜೋಂಬಿ ಡ್ರಗ್ ಅಂತ ವೈರಲ್‌ ಆದ ವಿಡಿಯೋ ಅಸಲಿಯತ್ತೇನು?‌ ಪೊಲೀಸರು ಹೇಳಿದ್ದಿಷ್ಟು

ಜೋಂಬಿ ಡ್ರಗ್ ಅಂತ ವೈರಲ್‌ ಆದ ವಿಡಿಯೋ ಅಸಲಿಯತ್ತು ಹೊರಗೆಡಹಿದ ಪೊಲೀಸರು

ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂದು ‌ಒಂದು ವಿಡಿಯೊವನ್ನು ವೈರಲ್​ ಮಾಡಲಾಗಿತ್ತು. ಸದ್ಯ ತನಿಖೆಯಿಂದ ಅದರ ಅಸಲಿಯತ್ತು ಬಯಲಿಗೆ ಬಂದಿದೆ. ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Renewable Energy: ನವೀಕರಿಸಬಹುದಾದ ಇಂಧನದಿಂದ ಗ್ರಾಮೀಣ ಬದುಕು ಹಸನ

ನವೀಕರಿಸಬಹುದಾದ ಇಂಧನದಿಂದ ಗ್ರಾಮೀಣ ಬದುಕು ಹಸನ

ಇಂತಹ ಯೋಜನೆಗಳಲ್ಲಿ ಹೆಚ್ಚಾಗಿ ಕಂಡುಬರುವ ವ್ಯವಸ್ಥೆಯೆಂದರೆ ’ಭೂಮಿ ಗುತ್ತಿಗೆ ಮಾದರಿ’. ಈ ಒಪ್ಪಂದದಡಿ, ರೈತರು ತಮ್ಮ ಜಮೀನಿನ ಒಂದು ಸಣ್ಣ ಭಾಗದಲ್ಲಿ ಟ್ರಾನ್ಸ್‌ಮಿಷನ್ ಟವರ್‌'ಗಳಂತಹ ಮೂಲಸೌಕರ್ಯ ಅಳವಡಿಸಲು ಅನುಮತಿ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಪರಿಹಾರ ಅಥವಾ ಗುತ್ತಿಗೆ ಹಣ ದೊರೆಯುತ್ತದೆ.

Girl Missing: ಮುಳ್ಳಯ್ಯನಗಿರಿಯಲ್ಲಿ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌, ಕಿಡ್ನಾಪ್‌ ಆಗಿರಬಹುದು ಎಂದ ತಾಯಿ

ದತ್ತಪೀಠದಲ್ಲಿ ಬಾಲಕಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌, ಅಪಹರಣದ ಶಂಕೆ

ಬಾಲಕಿ ಶ್ರೀನಂದಾ, ನಾಪತ್ತೆಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್‍ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು. ಆದರೆ, ಜನದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Student Self Harming: ಪಿಯುಸಿ ಫಲಿತಾಂಶ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು, ತಾಯಿಯ ಮೇಲೇ ಶಂಕೆ

ಪಿಯುಸಿ ಫಲಿತಾಂಶ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು, ತಾಯಿಯ ಮೇಲೇ ಶಂಕೆ

ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಆದರೆ, ಸಂಬಂಧಿಕರು ಮಾತ್ರ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

Landslide: ಹುಲಿಕಲ್‌ ಘಾಟಿಯಲ್ಲಿ ಗುಡ್ಡ ಕುಸಿತ, ಮೂವರು ಕಾರ್ಮಿಕರು ಸಾವು

ಹುಲಿಕಲ್‌ ಘಾಟಿಯಲ್ಲಿ ಗುಡ್ಡ ಕುಸಿತ, ಮೂವರು ಕಾರ್ಮಿಕರು ಸಾವು

ಹುಲಿಕಲ್‌ ಘಾಟಿಯಲ್ಲಿ ಕಾಮಗಾರಿ ವೇಳೆ ಧರೆ ಕುಸಿತವಾಗಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿ ಕಾಮಗಾರಿ ಮೇಲ್ವಿಚಾರಕ ನಗರ ನಿವಾಸಿ ರಾಘವೇಂದ್ರ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ತಡೆಗೋಡೆ ಕಾಮಗಾರಿ ಮಾಡುವಾಗ ದಿಢೀರ್‌ ಆಗಿ ಧರೆ ಕುಸಿತವಾಗಿದೆ.

Physical Abuse: ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಿಹಾರದ ಕೂಲಿ ಕಾರ್ಮಿಕ

ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಿಹಾರದ ಕೂಲಿ ಕಾರ್ಮಿಕ

ಆರೋಪಿ ಮೊಹಮ್ಮದ್ ಮುನ್ನ ಏಪ್ರಿಲ್ 08ರಂದು ಸಂಜೆ ಮನೆ ಬಳಿ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಪಕ್ಕದಲ್ಲಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಇದನ್ನು ಯಾರಿಗೂ ಹೇಳಬೇಡ ಎಂದು ಬಾಲಕಿ ಕೈಗೆ 150 ರೂಪಾಯಿ ಕೊಟ್ಟು ಪರಾರಿಯಾಗಿದ್ದ.

ಏರ್‌ಪೋರ್ಟ್‌ ಮಾದರಿಯಲ್ಲಿ ಮಂಡ್ಯ ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮ: ಎಚ್‌.ಡಿ.ಕುಮಾರಸ್ವಾಮಿ

ಏರ್‌ಪೋರ್ಟ್‌ ಮಾದರಿಯಲ್ಲಿ ಮಂಡ್ಯ ರೈಲು ನಿಲ್ದಾಣ ಅಭಿವೃದ್ಧಿ: ಎಚ್‌ಡಿಕೆ

HD Kumaraswamy: ನಾನು ಮೊದಲು ಹೆಚ್ಚಾಗಿ ರೈಲಿನಲ್ಲಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆ. ಕೆಲ ವರ್ಷಗಳಿಂದ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ರೈಲಿನಲ್ಲಿ ಪ್ರಯಾಣಿಸಿ ಜನರ ಸಮಸ್ಯೆ ಆಲಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

MLA SR Srinivas: ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪ್ರಭಾವ ಬೀರದು: ಶಾಸಕ ಎಸ್.ಆರ್.ಶ್ರೀನಿವಾಸ್

ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪ್ರಭಾವ ಬೀರದು

ಈ ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಸ್ಥಾನಕ್ಕೆ ಯಾವ ಚ್ಯುತಿ ಬರುವುದಿಲ್ಲ. ಪಕ್ಷದ ಹೈಕಮಾಂಡ್ ಮಾತ್ರ ಈ ಕೆಲಸ ಮಾಡಲು ಸಾಧ್ಯ. ಚುನಾವಣೆ ಎಫೆಕ್ಟ್ ಏನೂ ಇರುವುದಿಲ್ಲ. ರಾಜಕೀಯ ದಿಕ್ಸೂಚಿಯು ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಇರಾನ್ ಇಸ್ರೇಲ್ ಕದನ ವಿರಾಮ ಹೇಳಿಕೆ ಎಲ್ಲಿಯವರೆಗೆ ಎಂಬುದು ನೋಡಬೇಕಿದೆ. ಗ್ಯಾಸ್ ಅಭಾವ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ

JP Academy controversy: ಜೆಪಿ ಅಕಾಡೆಮಿ ಹೆಸರಿನ ಗಲಾಟೆ : ಬೈರವೇಶ್ವರ ಕಾಲೇಜಿಗೆ ಹಿನ್ನಡೆ : ಗೋಪಿನಾಥ್‌ಗೆ ಮುನ್ನಡೆ

ಜೆಪಿ ಅಕಾಡೆಮಿ ಹೆಸರಿನ ಗಲಾಟೆ : ಬೈರವೇಶ್ವರ ಕಾಲೇಜಿಗೆ ಹಿನ್ನಡೆ

ಕೈವಾರ ಕ್ರಾಸ್‌ನ ಶ್ರೀ ಭೈರವೇಶ್ವರ ಪಿಯು ಕಾಲೇಜಿನಲ್ಲಿ ಜೆಪಿ ಅಕಾಡೆಮಿಯನ್ನು ಸ್ಥಾಪಿಸಿದ್ದೇ ನಾನು. ಕಾರಣಾಂತರಗಳಿಂದ ಅಲ್ಲಿಂದ ಹೊರಬಂದ ಮೇಲೆ ಕಾನೂನು ಬದ್ಧವಾಗಿಯೇ ಶಿಕ್ಷಣ ಸಂಸ್ಥೆ ನಡೆಸು ತ್ತಿದ್ದೇನೆ. ಭೈರವೇಶ್ವರ ಕಾಲೇಜಿನವರು ಹೊರಗಿನವರೆಂದು ಬಿಂಬಿಸಿ, ನಕಲಿ ಕಾಲೇಜು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ನಡವಳಿಕೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು

Chikkaballapur News: ಶಿಡ್ಲಘಟ್ಟ ಜೆಡಿಎಸ್ ಶಾಸಕ ರವಿಕುಮಾರ್ ಬೆಂಬಲಿಗರಿಂದ ಸಂಸದ ಡಾ.ಕೆ.ಸುಧಾಕರ್ ಟೀಕೆಗೆ ತೀವ್ರ ಆಕ್ಷೇಪ ದಾಖಲು

ಸಂಸದ ಡಾ.ಕೆ.ಸುಧಾಕರ್ ಟೀಕೆಗೆ ತೀವ್ರ ಆಕ್ಷೇಪ ದಾಖಲು

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ಶಾಸಕರು ರೈತರ ಪರವಾಗಿ ನಿಂತು, ನೀರಾವರಿ ಜಮೀನು ಉಳಿಸಲು ಕ್ರಮ ಕೈಗೊಂಡಿದ್ದಾರೆ.ರೈತರು ಶಾಸಕರನ್ನು ಭೇಟಿ ಮಾಡಿದಾಗ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಸಂಸದ ಡಾ.ಕೆ.ಸುಧಾಕರ್ ನಮ್ಮ ಶಾಸಕರ ಬಗ್ಗೆ ಹಗುರವಾಗಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು

PU Results: ಶಾಂತಿನಿಕೇತನ್ಸ್ ಪಿ.ಯು. ಕಾಲೇಜಿಗೆ ಶೇ 95.89% ಫಲಿತಾಂಶ: ಸತತ 16 ವರ್ಷದಿಂದ ಅತ್ಯುತ್ತಮ ಫಲಿತಾಂಶ ಪಡೆದ ಹೆಗ್ಗಳಿಕೆ

ಶಾಂತಿನಿಕೇತನ್ಸ್ ಪಿ.ಯು. ಕಾಲೇಜಿಗೆ ಶೇ 95.89% ಫಲಿತಾಂಶ

ಕಾಲೇಜಿನಲ್ಲಿ ಒಟ್ಟು 341 ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 327 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಒಟ್ಟು ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 119 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಉಳಿದ 189 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಹಾಗೂ ೧೯ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ರಾಗಿರುತ್ತಾರೆ.

ಪಿಯುಸಿ ಫಲಿತಾಂಶ ಜಿಲ್ಲೆಯ ಅಮೋಘ ಸಾಧನೆ : ಶೇ.90.24 ರೊಂದಿಗೆ 11 ರಿಂದ 8 ಸ್ಥಾನಕ್ಕೆ ಜಿಗಿದ ಜಿಲ್ಲೆ

ಪಿಯುಸಿ ಫಲಿತಾಂಶ ಜಿಲ್ಲೆಯ ಅಮೋಘ ಸಾಧನೆ

ಬಾಲಕಿಯರು ಶೇ 86.89ರಷ್ಟು ಫಲಿತಾಂಶ ದಾಖಲಿಸಿದರೆ ಬಾಲಕರು ಶೇ 83.97 ಫಲಿತಾಂಶ ದಾಖಲಿಸಿದ್ದಾರೆ. 2026ರ ಫಲಿತಾಂಶದಲ್ಲಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿರುವುದು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದೆ. 2024-25ನೇ ಸಾಲಿನಲ್ಲಿ ಜಿಲ್ಲೆಯು 11ನೇ ಸ್ಥಾನ ದಲ್ಲಿತ್ತು. ಆದರೆ ಈಬಾರಿ ಉತ್ತಮ ಸಾಧನೆಯೊಂದಿಗೆ 8ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

2nd PUC Results 2026: ತಾಯಿ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್‌ ಆದ ದಿಶಾ; 600ಕ್ಕೆ 600 ಅಂಕ!

ತಾಯಿ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್‌ ಆದ ದಿಶಾ!

ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅಭೂತಪೂರ್ವ ಅವರ ಸಾಧನೆ ಮಾಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಅವರು, ನೋವಿನ ನಡುವೆ ಮನೋಧೈರ್ಯ ಕಳೆದುಕೊಳ್ಳದೆ ಪರೀಕ್ಷೆಯನ್ನು ಬರೆದು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Karnataka Bypolls: ಉಪಚುನಾವಣೆ; ಬಾಗಲಕೋಟೆಯಲ್ಲಿ ಶೇ.68.66, ದಾವಣಗೆರೆ ದಕ್ಷಿಣದಲ್ಲಿ ಶೇ.68.43 ಮತದಾನ ದಾಖಲು

ಬಾಗಲಕೋಟೆಯಲ್ಲಿ ಶೇ.68.66, ದಾವಣಗೆರೆ ದಕ್ಷಿಣದಲ್ಲಿ ಶೇ.68.43 ಮತದಾನ

Voter Turnout: ಬಾಗಲಕೋಟೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ ನಿಧನ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಗುರುವಾರ ಉಪಚುನಾವಣೆ ನಡೆದಿದೆ. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.

Bangalore News: ಜನಗಣತಿಯಲ್ಲಿ ಸರ್ಕಾರಿ ನೌಕರರ ಬಳಕೆ: ಆಡಳಿತ ವ್ಯವಸ್ಥೆಯ ಮೇಲೆ ಕರಿನೆರಳು

ಜನಗಣತಿಯಲ್ಲಿ ಸರ್ಕಾರಿ ನೌಕರರ ಬಳಕೆ

ಬೇಸಿಗೆಯ ಸುಡುಬಿಸಿಲಿನಲ್ಲಿ ಸಿಬ್ಬಂದಿಗಳು ಜನಗಣತಿಯಲ್ಲಿ ತೊಡಗಿದ್ದು, ಗಣತಿ ಆರಂಭಗೊಂಡ ನಾಲ್ಕು ದಿನಗಳಲ್ಲಿಯೇ ಬಸವಳಿದಿದ್ದಾರೆ.ಈಗ ಅಂತರ್ಜಾಲದಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸ್ವಯಂಪ್ರೇರಿತರಾಗಿ ಮಾಹಿತಿಯನ್ನು ಅಪ್ಲೋಡ್‌ ಮಾಡುತ್ತಿದ್ದು, ಇದೇ 15 ರವರೆಗೆ ಅವಕಾಶ ಇದೆ. ನಂತರದ ದಿನಗಳಲ್ಲಿ ಸರ್ಕಾರಿ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಈ ಗಣತಿ ಕಾರ್ಯವನ್ನು ಮುಗಿಸಬೇಕಾಗಿದೆ.

Loading...