ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಅಪೋಲೊ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ: ನಲಿ-ಕಲಿ ಕನ್ನಡ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ

ಅಪೋಲೊ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಆರೋಗ್ಯ ಸೇವೆಯಲ್ಲಿ ಸಾಂತ್ವನದ ಪ್ರತಿಯೊಂದು ಮಾತು ಕೂಡ ಮಹತ್ವದ್ದಾಗಿದೆ. ಸಿಬ್ಬಂದಿ ಮೂಲ ಕನ್ನಡವನ್ನು ಕಲಿಯುವುದರಿಂದ ರೋಗಿಗಳು ಮತ್ತು ಅವರ ಕುಟುಂಬದವರೊಂದಿಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇದು ಸ್ಪಷ್ಟ ಸಂಭಾಷಣೆಗೆ ಸಹಕಾರಿಯಾಗಿದ್ದು, ಹೆಚ್ಚು ಆತ್ಮೀಯ ಆರೈಕೆ ಅನುಭವವನ್ನು ಸೃಷ್ಟಿಸುತ್ತದೆ.

ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದ್ದಕ್ಕೆ ಯೋಗೇಶ್‌ ಗೌಡ ಸಹೋದರ ಸಂತಸ; ಸುಪ್ರೀಂ ಆದೇಶದ ಬಗ್ಗೆ ಹೇಳಿದ್ದೇನು?

ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದ್ದಕ್ಕೆ ಯೋಗೇಶ್‌ ಗೌಡ ಸಹೋದರ ಸಂತಸ

Yogesh Gowda Murder Case: ಹತ್ತು ವರ್ಷಗಳ ನಿರಂತರ ಹೋರಾಟದ ನಂತರ ನ್ಯಾಯ ದೊರಕಿದೆ. ಹೈಕೋರ್ಟ್‌ನ ಆದೇಶದಿಂದ ನಮಗೆ ದುಃಖವಾಗಿತ್ತು, ಆದರೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಇಂದು ಆ ಭರವಸೆ ನಿಜವಾಗಿದೆ ಎಂದು ಅವರು ಜಿಪಂ ಸದಸ್ಯ ಯೋಗೇಶ್ ಗೌಡ ಅವರ ಸಹೋದರ ಗುರುನಾಥ್‌ ಗೌಡ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ವಿನಯ್‌ ಕುಲಕರ್ಣಿ; ಅವರ ಮುಂದಿರುವ ಆಯ್ಕೆಗಳೇನು?

ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ವಿನಯ್‌ ಕುಲಕರ್ಣಿ

Vinay Kulkarni: ಸುಮಾರು 10 ವರ್ಷಗಳ ಹಿಂದೆ ನಡೆದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅವರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ 2 ವಾರಗಳಲ್ಲಿ ಶರಣಾಗುವಂತೆ ಸೂಚಿಸಿದೆ. ಇದರಿಂದ ಅವರ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ದೋಹಾದ 'ಕರ್ನಾಟಕ ರಾಜ್ಯೋತ್ಸವ ಕಪ್ 2026 ಚಾಂಪಿಯನ್ ಪಟ್ಟ ಅಲಂಕರಿಸಿದ ಮರ್ಬು ತಂಡ

ದೋಹಾದ 'ಕರ್ನಾಟಕ ರಾಜ್ಯೋತ್ಸವ ಕಪ್ 2026' ಚಾಂಪಿಯನ್ ಆದ ಮರ್ಬು ತಂಡ

Karnataka Rajyotsava Cup 2026 Season 2: ಕರ್ನಾಟಕ ಸಂಘ ಕತಾರ್ ಹಾಗೂ ಕರ್ನಾಟಕ ರಾಯಲ್ಸ್ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಕರ್ನಾಟಕ ರಾಜ್ಯೋತ್ಸವ ಕಪ್ (KRC) 2026 – ಸೀಸನ್ 2' ಕ್ರಿಕೆಟ್ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಹನಾನ್ ಸಿಸಿ ತಂಡವನ್ನು ಮಣಿಸಿದ ಮರ್ಬು ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಹಾವೇರಿಯಲ್ಲಿ ನ.27ರಂದು ಕನಕದಾಸರ 539ನೇ ಜಯಂತಿ; ಕಾಗಿನೆಲೆ ಕ್ರಾಸ್‌ನಲ್ಲಿ 8.5 ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿ ಸಿಎಂರಿಂದ ಅನಾವರಣ

ಹಾವೇರಿಯಲ್ಲಿ ನ.27ರಂದು ಕನಕದಾಸರ ಕಂಚಿನ ಮೂರ್ತಿ ಸಿಎಂರಿಂದ ಅನಾವರಣ

Haveri News: ಹಾವೇರಿಯಲ್ಲಿ ನ.27ರಂದು ಆಯೋಜಿಸಿರುವ ಸಂತ ಕನಕದಾಸರ 539ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದು, ಕಾಗಿನೆಲೆ ಕ್ರಾಸ್‌ನಲ್ಲಿ 8.5 ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಗೌರವಧನ 1,500 ರೂ. ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ: ಸಂಸದ ಡಾ.ಸಿ.ಎನ್‌. ಮಂಜುನಾಥ್

ಆಶಾ ಕಾರ್ಯಕರ್ತೆಯರಿಗೆ ಗೌರವಧನ 1,500 ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ

Asha Workers Protest: ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತು ಬೆಳಗ್ಗೆಯಷ್ಟೇ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರ ಜತೆ ಮಾತನಾಡಿ, ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಲು ಸಲಹೆ ನೀಡಿದ್ದೇನೆ. ಗೌರವಧನ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಪ್ರಸ್ತಾವ ಸಿದ್ದಪಡಿಸಲಾಗಿದೆ ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಮಧುಗಿರಿ ಬಿಇಒ ಡಿ.ಎ. ನರಸಿಂಹಮೂರ್ತಿ

ಮಧುಗಿರಿಯ ಎಂಜಿಎಂ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

Madhugiri News: ಮಧುಗಿರಿ ಪಟ್ಟಣದ ಎಂಜಿಎಂ ಶಾಲೆಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ನರಸಿಂಹಮೂರ್ತಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದ್ದು ಗ್ರಾಮೀಣ ಮಕ್ಕಳು ಅಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Anjali Ambiger murder case: ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಅಪರಾಧಿ ಗಿರೀಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಹುಬ್ಬಳ್ಳಿ ಕೋರ್ಟ್‌

ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ

2024ರ ಮೇ 15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ನಿವಾಸದಲ್ಲಿ 20 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿ ಬರ್ಬರವಾಗಿ ಹತ್ಯೆಯಾಗಿದ್ದಳು. ಮನೆಯಲ್ಲಿದ್ದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಅಪರಾಧಿ ಗಿರೀಶ್ ಅಲಿಯಾಸ್ ವಿಶ್ವನಾಥ್ ಎಸ್.ಸಾವಂತ್‌ಗೆ ಇದೀಗ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

Jonty Rhodes: ಬೀದರ್‌ಗೆ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭೇಟಿ; ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

ಬೀದರ್‌ಗೆ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭೇಟಿ

Bidar News: ಬೀದರ್‌ನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಮೂರು ದಿನಗಳ ಕಾಲ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟಕ್ಕೆ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಒಸಾಕದ ಅತ್ಯಾಧುನಿಕ ತಂತ್ರಜ್ಞಾನ ಘಟಕಕ್ಕೆ ಸಿಎಂ ಡಿಕೆ ಭೇಟಿ: ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಜಪಾನ್‌ ತಂತ್ರಜ್ಞಾನ

ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಜಪಾನ್‌ ತಂತ್ರಜ್ಞಾನ

ಮೈಶಿಮಾ ದ್ವೀಪದಲ್ಲಿರುವ ಈ ಘಟಕ 2001ರಿಂದ ಕಾರ್ಯನಿ ರ್ವಹಿಸುತ್ತಿದೆ. ಇಂಥ ಎರಡು ದಹನಕಾರಿ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸಿ, 32 ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ. ಘಟಕವು ತನ್ನ ಸ್ವಂತ ಬಲದಿಂದಲೇ ವಿದ್ಯುತ್ ಅಗತ್ಯವನ್ನು ಪೂರೈಸಿಕೊಂಡು, ಉಳಿದ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ. ಈ ಘಟಕವು ಸುಧಾರಿತ ದಹನ ನಿಯಂತ್ರಣ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಬಳಸುತ್ತದೆ.

Gold Price Today on 25 November 2026: ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆ; ಇಂದು ಕಡಿಮೆಯಾಗಿದ್ದು ಬರೋಬ್ಬರಿ 2,950 ರೂಪಾಯಿ

ಚಿನ್ನದ ಬೆಲೆಯಲ್ಲಿ 2,950 ರೂಪಾಯಿ ಇಳಿಕೆ

Gold Rate Today: ಸತತ 2 ದಿನ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 295 ರೂಪಾಯಿ ಕಡಿಮೆಯಾಗಿ 11,420 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 322 ರೂಪಾಯಿ ಅಗ್ಗವಾಗಿ 12,458 ರೂಪಾಯಿಗೆ ತಲುಪಿದೆ.

ಮಾಜಿ ಸಚಿವ ವಿನಯ್‌ ಕುಲಕರ್ಣಿ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: 2 ವಾರಗಳಲ್ಲಿ ಶರಣಾಗಲು ಆದೇಶ

ವಿನಯ್‌ ಕುಲಕರ್ಣಿ ಜಾಮೀನು ರದ್ದು; ಮತ್ತೆ ಜೈಲು ಶಿಕ್ಷೆ

Vinay Kulkarni: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ 2026ರ ಏಪ್ರಿಲ್‌ನಲ್ಲಿ ವಿನಯ್‌ ಕುಲಕರ್ಣಿ ಅಪರಾಧಿ ಎಂದು ಜನಪ್ರತಿನಿಧಿ ನ್ಯಾಯಾಲಯ ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಅವರು ಜೈಲಿಗೆ ಹೋಗಿದ್ದರು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Government orders seizure of ‘Basava Mantapa’ work: ರವಿ ಹಂಜ್ ಬಸವ ಮಂಟಪ ಕೃತಿ ಮುಟ್ಟುಗೋಲಿಗೆ ಸರ್ಕಾರ ಆದೇಶ

ರವಿ ಹಂಜ್ ಬಸವ ಮಂಟಪ ಕೃತಿ ಮುಟ್ಟುಗೋಲಿಗೆ ಸರ್ಕಾರ ಆದೇಶ

ಲೇಖಕ ರವಿ ಹಂಜ್(Author Ravi Hanj) ಅವರ ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟು ಗೋಲು ಹಾಕಿಕೊಳ್ಳಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕೃತಿಯ ಪ್ರಕಟಣೆ, ಮುದ್ರಣ ಹಾಗೂ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಿದೆ.

Panchayath Election: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮೀಸಲು ಪ್ರಕಟ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮೀಸಲು ಪ್ರಕಟ

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಮೀಸಲು ಅಧಿಸೂಚನೆಯನ್ನು ರಾಜ್ಯ ಸರಕಾರ ಹೊರಡಿಸಿದ್ದು, ಜನವರಿ ವೇಳೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಬಗ್ಗೆ ಪದೇಪದೆ ರಾಜ್ಯ ಸರಕಾರ ಹೇಳುತ್ತಿದ್ದರೂ, ಮೀಸಲು ಅಧಿಸೂಚನೆ ಹೊರಡಿ ಸದೇ ಇದ್ದಿದ್ದರಿಂದ ಚುನಾವಣೆ ನಡೆಯುವ ಬಗ್ಗೆ ಹಲವು ಗೊಂದಲಗಳಿದ್ದವು.

Karnataka Weather: ಇಂದು ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗುಸಹಿತ ಮಳೆ ಸಾಧ್ಯತೆ!

ಇಂದು ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗುಸಹಿತ ಮಳೆ ಸಾಧ್ಯತೆ!

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 27°C ಮತ್ತು 20°C ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಾರಂಜಿಕೆರೆಗೆ ಪ್ರವಾಸೋದ್ಯಮದ ಹೊಸ ಸ್ಪರ್ಶ

ಕಾರಂಜಿಕೆರೆಗೆ ಪ್ರವಾಸೋದ್ಯಮದ ಹೊಸ ಸ್ಪರ್ಶ

ಮೈಸೂರು ಮೃಗಾಲಯದ ವ್ಯಾಪ್ತಿಗೆ ಒಳಪಡುವ ಕಾರಂಜಿಕೆರೆಯಲ್ಲಿ ಇಕೋ ಟವರ್, ಗಾಜಿನ ಸೇತುವೆಯ ಮಾದರಿಯ ಕೆನೋಪಿ ವಾಕ್, ಲೇಕ್ ವಾಕ್, ಜಿಪ್‌ಲೈನ್, ರೋಪ್ ಬ್ರಿಡ್ಜ್ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳು ತಲೆ ಎತ್ತಲಿವೆ. ಈಗಾಗಲೇ ಕೆಲವು ಕಾಮಗಾರಿಗಳು ವೇಗ ಪಡೆದು ಕೊಂಡಿದ್ದು, ಮುಂದಿನ ದಸರಾ ಮಹೋತ್ಸವದ ವೇಳೆಗೆ ಯೋಜನೆಯನ್ನು ಪೂರ್ಣ ಗೊಳಿಸಿ ಪ್ರವಾಸಿಗರಿಗೆ ಸಮರ್ಪಿಸುವ ಗುರಿ ಹೊಂದಲಾಗಿದೆ.

Ravi Hanj: ಬಸವ ಮಂಟಪಕ್ಕೆ ಪುರಾಣಗಳೇ ಆಧಾರ: ರವಿ ಹಂಜ್

ಬಸವ ಮಂಟಪಕ್ಕೆ ಪುರಾಣಗಳೇ ಆಧಾರ: ರವಿ ಹಂಜ್

ಸರಕಾರವೇ ಇಂತಹ ತಪ್ಪು ಮಾಡಿ ನನ್ನನ್ನು ಹೇಗೆ ತಪ್ಪು ಎನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿದ್ದ ಗಣ್ಯರ ಮೇಲೆ ಒತ್ತಡ ತಂದಿದ್ದಾರೆ. ಕೆಲವು ರಾಜಕಾರಣಿಗಳು ವೋಟ್ ಬ್ಯಾಂಕ್‌ಗಾಗಿ ಪುಸ್ತಕ ಬ್ಯಾನ್ ಮಾಡಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ವೀರಶೈವ ಬೇರೆ ಲಿಂಗಾ ಯತ ಬೇರೆ ಎನ್ನುತ್ತಿದ್ದರು. ಈಗ ವೋಟ್ ಬ್ಯಾಂಕ್‌ಗಾಗಿ ಬಳಸುತ್ತಿದ್ದಾರೆ.

ಐಟಿ ನಗರದ ಸುತ್ತ 10 ಮಿನಿ ಅರಣ್ಯ ಅಭಿವೃದ್ಧಿ: ನಗರದ 10 ಕಡೆ 3,271 ಎಕರೆ ಅರಣ್ಯ ಅಭಿವ ದ್ಧಿಗೆ 222.99 ಕೋಟಿ ಮೀಸಲು

ಐಟಿ ನಗರದ ಸುತ್ತ 10 ಮಿನಿ ಅರಣ್ಯ ಅಭಿವೃದ್ಧಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ತುರಹಳ್ಳಿ ಮೀಸಲು ಅರಣ್ಯ ವುಡ್ ಲ್ಯಾಂಡ್, ತುರಹಳ್ಳಿ ಮಿನಿ ಅರಣ್ಯ ಆರ್ಬೊ ರೇಟಂ, ಕಲ್ಕೆರೆ ಫಾರೆಸ್ಟ್ ಇಕೋಸಿಸ್ಟಮ್ಸ್ ಸೆಂಟರ್, ದೊರೆಸಾನಿಪಾಳ್ಯ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪಣತ್ತೂರು ನಾಗರ ವನ ಜೈವಿಕ ವೈವಿಧ್ಯ ಉದ್ಯಾನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ‌

Bengaluru Rains: ಬೆಂಗಳೂರಿನ ಹಲವೆಡೆ ಭಾರಿ ಮಳೆ; ಸಂಚಾರ ದಟ್ಟಣೆಯಿಂದ ವಾಹನ ಸವಾರರ ಪರದಾಟ

ಬೆಂಗಳೂರಿನ ಹಲವೆಡೆ ಭಾರಿ ಮಳೆ; ಸಂಚಾರ ದಟ್ಟಣೆಯಿಂದ ವಾಹನ ಸವಾರರ ಪರದಾಟ

ನವೆಂಬರ್ 24 ರಿಂದ 26 ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

HDFC Life: 44 ವಿಮಾ ಕಂಪನಿಗಳ ಸಹಭಾಗಿತ್ವದಲ್ಲಿ 95 ದೂರುಗಳ ಇತ್ಯರ್ಥ; ₹11.63 ಕೋಟಿ ಮೌಲ್ಯದ ಕ್ಲೈಮ್ ಪಾವತಿ

ಎಚ್‌ಡಿಎಫ್‌ಸಿ ಲೈಫ್‌ನಿಂದ ದೂರು ಪರಿಹಾರ ಶಿಬಿರ ಆಯೋಜನೆ

ದೇಶಾದ್ಯಂತ ನಡೆಯುತ್ತಿರುವ ಈ ಶಿಬಿರಗಳು ಐಆರ್‌ಡಿಎಐನ ‘ದೂರು ಪರಿಹಾರ ಮಾಸ’ ಉಪ ಕ್ರಮದ ಭಾಗವಾಗಿವೆ. ಗ್ರಾಹಕರು ತಮ್ಮ ವಿಮಾ ಕಂಪನಿಗಳ ಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ ದೂರುಗಳಿಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ, ಐಆರ್‌ಡಿಎಐ ಜೀವ ವಿಮಾ ಮಂಡಳಿ ಮತ್ತು ಸಾಮಾನ್ಯ ವಿಮಾ ಮಂಡಳಿಯ ಸಹಯೋಗದಲ್ಲಿ ಈ ಶಿಬಿರಗಳನ್ನು ಆಯೋಜಿಸುತ್ತಿದೆ.

Eshwar B Khandre: ಮುದ್ದೇನಹಳ್ಳಿಯಲ್ಲಿ ವಿಶ್ವ ಯುವ ಸಮಾವೇಶ; ಶಿಕ್ಷಣ, ಆರೋಗ್ಯ ಕ್ಷೇತ್ರದ ಸೇವಾ ಕಾರ್ಯಗಳಿಗೆ ಸಚಿವರ ಮೆಚ್ಚುಗೆ

ಗ್ರಾಮಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಲಿ: ಈಶ್ವರ ಖಂಡ್ರೆ

ತಾಲ್ಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಯುವ ಸಮಾವೇಶ–2026ರಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪಿಸಿ, ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುತ್ತಿರುವ ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.

ರಾಜ್ಯದ ಜನರಿಗೆ ಗುಡ್‌ನ್ಯೂಸ್‌; ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ

ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ

Puneeth Rajkumar Hrudaya Jyothi Scheme: ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಎಂಬುದು ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಒಂದು ಮಹತ್ವದ ಆರೋಗ್ಯ ಯೋಜನೆಯಾಗಿದೆ. ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಈ ಯೋಜನೆಗೆ ಅವರ ಹೆಸರನ್ನು ಇಡಲಾಗಿದೆ.

MLA B N Ravikumar: ಕನ್ನಡ ನಾಡಿನ ಹಿರಿಮೆ, ಸ್ವಾಭಿಮಾನ ಉಳಿಸಲು ಎಲ್ಲರೂ ಕೈಜೋಡಿಸಲಿ: ಶಾಸಕ ರವಿಕುಮಾರ್

ಕನ್ನಡ ನಾಡಿನ ಹಿರಿಮೆ, ಸ್ವಾಭಿಮಾನ ಉಳಿಸಲು ಎಲ್ಲರೂ ಕೈಜೋಡಿಸಲಿ

ಇಡೀ ಭಾರತದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು. ಏಳು ಕೋಟಿ ಕನ್ನಡಿಗರ ಹೃದಯ ಶ್ರೀಮಂತಿಕೆ ಈ ನಾಡಿನ ಸೌಭಾಗ್ಯವಾಗಿದೆ. ಪ್ರಕೃತಿ ವಿಕೋಪಗಳು ಹಾಗೂ ದೊಡ್ಡ ಪ್ರಮಾಣದ ದುರಂತಗಳು ಕಡಿಮೆ ಸಂಭವಿಸುವ ಈ ನೆಲದಲ್ಲಿ ಹುಟ್ಟಿರುವ ನಮ್ಮ ಜನ್ಮವನ್ನು ಸಾರ್ಥಕಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದರು.

ಮಡಿಯಾಲ ನಾರಾಯಣ ಭಟ್ ಜನ್ಮ ಶತಾಬ್ದಿ ಸ್ಮರಣಾರ್ಥ ಉನ್ನತ ಶಿಕ್ಷಣ ಕೇಂದ್ರ ಸ್ಥಾಪನೆ; ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಎಐ ಶಿಕ್ಷಣ

ಮಡಿಯಾಲದಲ್ಲಿ ಎಐ ಸಂಶೋಧನಾ ಕೇಂದ್ರಕ್ಕೆ ನ.30ರಂದು ಭೂಮಿಪೂಜೆ

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಡಿಯಾಲದಲ್ಲಿ 'ಮಡಿಯಾಲ ನಾರಾಯಣ ಭಟ್ ಉನ್ನತ ಶಿಕ್ಷಣ ಕೇಂದ್ರ' ಸ್ಥಾಪನೆಗೆ ಚಾಲನೆ ನೀಡಲಾಗುವುದು.

Loading...