ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ST Internal Reservation: ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿಗೊಳಿಸಿ: ಸದನದಲ್ಲಿ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಆಗ್ರಹ

ಎಸ್‌ಟಿ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಶಾಂತಾರಾಮ್‌ ಸಿದ್ದಿ ಆಗ್ರಹ

Karnataka Assembly Session 2026: ಸದನದ ಶೂನ್ಯವೇಳೆಯಲ್ಲಿ ಮಾತನಾಡಿರುವ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಅವರು, ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿ ಮಾಡಲು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮರ್ಯಾದೆ ಹತ್ಯೆ ತಡೆಗೆ ಸರ್ಕಾರದಿಂದ ಮಹತ್ವದ ಹೆಜ್ಜೆ; ವಿಧಾನಸಭೆಯಲ್ಲಿ ಇವ ನಮ್ಮವ ಇವ ನಮ್ಮವ ವಿಧೇಯಕ -2026 ಮಂಡನೆ

ಮರ್ಯಾದೆ ಹತ್ಯೆ ತಡೆಗೆ ಸರ್ಕಾರದಿಂದ ಮಹತ್ವದ ವಿಧೇಯಕ ಮಂಡನೆ

Iva Nammava Iva Nammava Bill 2026: ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇವ ನಮ್ಮವ ಇವ ನಮ್ಮವ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡನೆ ಮಾಡಿದ್ದಾರೆ. ಈ ವಿಧೇಯಕವು ಅಂತರ್ಜಾತಿ ವಿವಾಹಿತರ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ಅವರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಹಲವು ಅಂಶಗಳನ್ನು ಒಳಗೊಂಡಿದೆ.

Prajwal revanna Case: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ; ಮಾಜಿ ಸಂಸದನಿಗೆ ಆಪ್ತರಿಂದಲೇ ಖೆಡ್ಡಾ!

ಪ್ರಜ್ವಲ್‌ ರೇವಣ್ಣ ವಿಡಿಯೊ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ

2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣದಲ್ಲಿ ತನಿಖೆ ಆರಂಭವಾಗಿತ್ತು. ಅಶ್ಲೀಲ ವಿಡಿಯೊಗಳನ್ನು ಹಂಚಲು ಆರೋಪಿಗಳು ಹಾಸನದಲ್ಲೇ ಸುಮಾರು 70 ಪೆನ್‌ಡ್ರೈವ್‌ಗಳನ್ನು ಖರೀದಿಸಿದ್ದ ವಿಚಾರ ತನಿಖೆಯ ವೇಳೆ ಬಹಿರಂಗವಾಗಿದೆ.

ರಂಜಾನ್‌ ವೇಳೆ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಯದಂತೆ ಕ್ರಮ ಕೈಗೊಳ್ಳಿ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹ

ರಂಜಾನ್‌ ವೇಳೆ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಯದಂತೆ ಕ್ರಮಕ್ಕೆ ಆಗ್ರಹ

ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯದಂತೆ ತಡೆಯಲು ಕಾನೂನುಬದ್ದ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕಲಬುರಗಿ ಪ್ರಬುದ್ಧ ಅಕಾಡೆಮಿಯ 2 ಕೋಟಿ ವೆಚ್ಚದ ಪಾರ್ಕಿಂಗ್ ಶೆಡ್ ಧರೆಗೆ; ಕಳಪೆ ಕಾಮಗಾರಿ ಆರೋಪ

ಪ್ರಬುದ್ಧ ಅಕಾಡೆಮಿಯ 2 ಕೋಟಿ ವೆಚ್ಚದ ಪಾರ್ಕಿಂಗ್ ಶೆಡ್ ಧರೆಗೆ

ಕಲಬುರಗಿಯಲ್ಲಿ ಜನವರಿಯಲ್ಲಷ್ಟೇ ಉದ್ಘಾಟನೆಗೊಂಡಿದ್ದ ಈ ಅಕಾಡೆಮಿಯ ಕಟ್ಟಡದ ಛಾವಣಿ ಒಂದು ತಿಂಗಳ ಹಿಂದೆಯಷ್ಟೇ ಉದುರಿ ಬಿದ್ದಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಪಾರ್ಕಿಂಗ್ ಶೆಡ್ ಕುಸಿದಿದೆ. ಇದರಿಂದ ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಮೂಡಿವೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ: ಗಡಿಪಾರು ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಶಾಕ್

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡಿಪಾರು ಆದೇಶ ವಿರೋಧದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಏಕಸದಸ್ಯ ಪೀಠದ ಆದೇಶವನ್ನು ಸಮರ್ಥಿಸಿಕೊಂಡ ನ್ಯಾಯಾಲಯ, ತಿಮರೋಡಿಗೆ ಆರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ನಿಷೇಧವನ್ನು ಮುಂದುವರಿಸಿದೆ.

Dharwad Rain: ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಧಾರವಾಡದ ಕಲಘಟಗಿ; ವಿಡಿಯೊ ವೈರಲ್‌

ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಕಲಘಟಗಿ; ವಿಡಿಯೊ ವೈರಲ್‌

ರಾಜ್ಯದಲ್ಲಿ ಬೆಂಗಳೂರು, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆ ಸುರಿದಿದೆ. ಇನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ಭಾರಿ ಆಲಿಕಲ್ಲು ಮಳೆಯಿಂದ ರಸ್ತೆಗಳು ಹಿಮಾವೃತ ಕಾಶ್ಮೀರದಂತೆ ಬದಲಾಗಿರುವುದು ಕಂಡುಬಂದಿತ್ತು.

Gold Price Today On 18th March: ಯುಗಾದಿ ಮುನ್ನಾ ದಿನವೇ ಗ್ರಾಹಕರಿಗೆ ಸಿಕ್ತು ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಮತ್ತೆ ಇಳಿಕೆ

Gold Rate Today: ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಚಿನ್ನದ ದರ ಬುಧವಾರವೂ ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 30 ರುಪಾಯಿ ಇಳಿಕೆಯಾಗಿ 14,460 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 33 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಕುಸಿದಿದೆ.

Murder Case: ತಮ್ಮನಿಗೆ ನಿಶ್ಚಯವಾದ ಹುಡುಗಿ ಮೇಲೆ ದುರಾಸೆ, ಕಲ್ಲೆತ್ತಿ ಹಾಕಿ ಕೊಂದ ಅಣ್ಣ!

ತಮ್ಮನಿಗೆ ನಿಶ್ಚಯವಾದ ಹುಡುಗಿ ಮೇಲೆ ದುರಾಸೆ, ಕಲ್ಲೆತ್ತಿ ಹಾಕಿ ಕೊಂದ ಅಣ್ಣ!

ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನೇ ಮದುವೆಯಾಗಬೇಕು ಎಂದು ಅಶೋಕ್ ಬಯಸಿದ್ದಾನೆ ಎನ್ನಲಾಗಿದೆ. ಇದೇ ವಿಚಾರದಿಂದ ಸಹೋದರರ ನಡುವೆ ಮನಸ್ತಾಪ ಉಂಟಾಗಿದ್ದು, ಕೋಪದ ಹೊತ್ತಿನಲ್ಲಿ ಅಶೋಕ್ ತನ್ನ ತಮ್ಮನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

SSLC Exam: ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್‌ ಬೆಡ್‌ ಮೇಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!

ಕಾಲು ಮುರಿದರೂ ಸ್ಟ್ರೆಚರ್‌ ಬೆಡ್‌ ಮೇಲೇ ಎ‌ಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಳು!

ಇತ್ತೀಚಿಗಷ್ಟೇ ಅಪಘಾತದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಕುಸುಮ ಕಾಲು ಕಳೆದುಕೊಂಡಿದ್ದಳು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಾಯಿ ಜೊತೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್‌ ಬೆಡ್‌ ಮೇಲೆಯೇ ಪರೀಕ್ಷೆ ಬರೆದಿದ್ದಾಳೆ.

ರಂಜಾನ್ ದಿನ ಗೋಹತ್ಯೆ ವಿರುದ್ಧ ಮೋಹನ್ ಗೌಡ ಕಿಡಿ: ಸೂಕ್ತ ಕ್ರಮ ಕೈಗೊಳ್ಳಲು ಗೃಹಸಚಿವರಿಗೆ ಮನವಿ Video

ರಂಜಾನ್ ದಿನ ಗೋಹತ್ಯೆ ವಿರುದ್ಧ ಮೋಹನ್ ಗೌಡ ಕಿಡಿ

ರಾಜ್ಯ ಸರ್ಕಾರ ಈಗಾಗಲೇ ಗೋಹತ್ಯೆಯನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಜ್ಯ ಸಂಯೋಜಕರಾದ ಮೋಹನ್ ಗೌಡ, ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್, ಹಿಂದೂ ಮುಖಂಡರಾದ ಸಂತೋಷ್ ಕರ್ತಾಳ್, ಅಡ್ವೋಕೇಟ್ ಶ್ರೀ. ತ್ಯಾಗರಾಜ್, ಡಾ. ನಾಗೇಂದ್ರಪ್ಪ ಸೇರಿದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

LPG black market: ಮನೆಬಳಕೆ ಎಲ್‌ಪಿಜಿ ಕಾಳಸಂತೆಯಲ್ಲಿ ಬಿಕರಿ, 12 ಸಾವಿರ ಸಿಲಿಂಡರ್‌ ವಶ

ಮನೆಬಳಕೆ ಎಲ್‌ಪಿಜಿ ಕಾಳಸಂತೆಯಲ್ಲಿ ಬಿಕರಿ, 12 ಸಾವಿರ ಸಿಲಿಂಡರ್‌ ವಶ

ದೆಹಲಿಯಲ್ಲಿ 600 ಸಿಲಿಂಡರ್‌ಗಳು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿವೆ ಹಾಗೂ 10 ಜನರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 504 ದಾಳಿ ನಡೆಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಕರ್ನಾಟಕದಲ್ಲಿ ಬೀದರ್‌ನಲ್ಲಿ 105, ದಾವಣಗೆರೆ ಮತ್ತು ಯಾದಗಿರಿಯಲ್ಲಿ ತಲಾ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.

Reels craze: ರೀಲ್ಸ್‌ಗಾಗಿ ಜೀವಂತ ತಂದೆಯನ್ನೇ ಚೀಲಕ್ಕೆ ತುಂಬಿ ಪಾರ್ಸೆಲ್‌ ಮಾಡಹೊರಟ ಫ್ಯಾಮಿಲಿ!

ರೀಲ್ಸ್‌ಗಾಗಿ ತಂದೆಯನ್ನೇ ಚೀಲಕ್ಕೆ ತುಂಬಿ ಪಾರ್ಸೆಲ್‌ ಮಾಡಹೊರಟ ಫ್ಯಾಮಿಲಿ!

ಯುವಕರ ಹುಚ್ಚಾಟದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ವೈಯಾಲಿಕಾವಲ್‌ ಠಾಣೆ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಯುವಕರ ತಂಡವನ್ನು ಪತ್ತೆ ಹಚ್ಚಿದಾಗ ಫ್ರ್ಯಾಂಕ್‌ ವಿಡಿಯೋ ಕಥೆ ಬಯಲಾಗಿದೆ. ಜತೆಗೆ ಇವರೆಲ್ಲರೂ ಒಂದೇ ಕುಟುಂಬದವರು ಎಂಬುದು ಗೊತ್ತಾಗಿದೆ.

ಡಿಜಿಸಿಎ ಅನುಮೋದನೆಗಳಿಂದ ಮತ್ತು ಸ್ಯಾಫ್ರನ್ ಕ್ಯಾಬಿನ್ ಜರ್ಮನಿ ಸಹಯೋಗದಲ್ಲಿ ಭಾರತದ ಎಂ.ಆರ್.ಒ. ವ್ಯಾಪ್ತಿ ವಿಸ್ತರಣೆ

ಭಾರತದ ಎಂ.ಆರ್.ಒ. ವ್ಯಾಪ್ತಿ ವಿಸ್ತರಣೆ

ಪ್ರಾದೇಶಿಕ ವೈಮಾನಿಕತೆಯಲ್ಲಿ ಹೊಸ ಗಮನಾರ್ಹ ಹೆಜ್ಜೆ ಇರಿಸಿದ ಹೇವಿಯಸ್ ಏರೊಟೆಕ್ ತನ್ನ ಬೆಂಗಳೂರು ಸೌಲಭ್ಯಕ್ಕೆ ಡಿಜಿಸಿಎಯಿಂದ ವಿಶೇಷ ಗ್ಯಾಲಿ ನಿಭಾಯಿಸಲು, ಏವಿಯೋನಿಕ್ಸ್ ಮತ್ತು ಜೀವ ಉಳಿಸುವ ಸಾಧನಕ್ಕೆ ಅನುಮೋದನೆ ಪಡೆದಿದೆ. ಈ ಸೌಲಭ್ಯವು ಈಗ ದಕ್ಷಿಣ ಭಾರತದ ಮೊದಲ ಮತ್ತು ಏಕೈಕ ಸ್ಯಾಫ್ರನ್ ಕ್ಯಾಬಿನ್ ಜರ್ಮನಿ ಆಥರೈಸ್ಡ್ ಸರ್ವೀಸ್ ಸ್ಟೇಷನ್ ಆಗಿದೆ

ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿರವರಿಂದ ಗ್ರಾಹಕ ಸ್ನೇಹಿ ನಿಯೋ ಫ್ರೆಶ್ ಸೂಪರ್ ಮಾರ್ಕೆಟ್  ಉದ್ಘಾಟನೆ

ಗ್ರಾಹಕ ಸ್ನೇಹಿ ಬೃಹತ್ ಮಳಿಗೆ ನಿಯೋ ಫ್ರೆಶ್ 5ನೇ ಶಾಖೆ ಶುಭಾರಂಭ

ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ ವಸ್ತು ಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಸ್ಥಾಪಿತವಾದ ಸ್ಮಾರ್ಟ್ ಕ್ವಿಕ್ ಇ–ಕಾಮರ್ಸ್ ಸಂಸ್ಥೆಯ ಗ್ರಾಹಕ ಸ್ನೇಹಿ ಬೃಹತ್ ಮಳಿಗೆ ನಿಯೋ ಫ್ರೆಶ್ 5ನೇ ಶಾಖೆ ಕೆ.ಆರ್.ಪುರ, ಮೇಡಹಳ್ಳಿಯಲ್ಲಿ ಶುಭಾರಂಭಗೊಂಡಿತು.

Inspector Suspend: ಪತಿಯನ್ನು ಬಂಧಿಸಿ ಪತ್ನಿಯನ್ನು ಮಂಚಕ್ಕೆ ಕರೆದ ಕೇಸ್:‌ ಇನ್‌ಸ್ಪೆಕ್ಟರ್‌ ಸಸ್ಪೆಂಡ್‌

ಪತಿಯ ಬಂಧಿಸಿ ಪತ್ನಿಯ ಮಂಚಕ್ಕೆ ಕರೆದ ಕೇಸ್:‌ ಇನ್‌ಸ್ಪೆಕ್ಟರ್‌ ಸಸ್ಪೆಂಡ್‌

ವಿವಾದದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈಗ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನಿನ್ನೆ ಮಧ್ಯಾಹ್ನದವರೆಗೂ ಪಣಂಬೂರು ಠಾಣೆಯಲ್ಲಿ ಸಂದೇಶ್ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ, ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ, ಪತ್ರ ನೀಡಿದ್ದಾರೆ.

Congress politics: ಸಿಎಂ, ಡಿಸಿಎಂ ಬಳಿಕ ಈಗ ಕೈ ಶಾಸಕರಿಂದಲೇ ಡಿನ್ನರ್‌ ಮೀಟಿಂಗ್!‌

ಸಿಎಂ, ಡಿಸಿಎಂ ಬಳಿಕ ಈಗ ಕೈ ಶಾಸಕರಿಂದಲೇ ಡಿನ್ನರ್‌ ಮೀಟಿಂಗ್!‌

ಮೊದಲ ಬಾರಿ ಗೆದ್ದ 30ಕ್ಕೂ ಹೆಚ್ಚು ಶಾಸಕರು ನಗರದ ಖಾಸಗಿ ಹೋಟೆಲಿನಲ್ಲಿ ಡಿನ್ನರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಎರಡೂ ಬಣದ ಶಾಸಕರಿದ್ದರು. ಸಭೆಯಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒತ್ತಡ ಹೇರುವ ಚರ್ಚೆ ನಡೆದಿದೆ. ಈ ಕುರಿತು ಸಹಿ ಮಾಡಿದ ಪತ್ರವನ್ನು ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಲಾಗಿದೆ.

SSLC: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಹೊರ ಹೊಮ್ಮುವ ವಿಶ್ವಾಸ: ಬಿಇಒ ಎನ್.ವೆಂಕಟೇಶಪ್ಪ

ಎಸ್ಎಸ್ಎಲ್ಸಿ ಪರೀಕ್ಷೆಗೆ 2353 ವಿದ್ಯಾರ್ಥಿಗಳು ನೋಂದಣಿ

ಪರೀಕ್ಷಾ ಕಾರ್ಯಗಳಿಗೆ ವಿವಿಧ ವರ್ಗದ ಅಧಿಕಾರಿಗಳನ್ನು ನಿಯೋಜಿಸಿದ್ದು, ಅಧೀಕ್ಷಕರು, 09 ಉಪ ಮುಖ್ಯ ಅಧೀಕ್ಷಕರು 01,ಪಶ್ನೆ ಪತ್ರಿಕೆ ಅಭಿರಕ್ಷಕರು, 09 ಜಾಗೃತದಳ ಅಧಿಕಾರಿಗಳು, 09 ಮೊಬೈಲ್ ಸ್ವಾಧೀನಾಧಿಕಾರಿಗಳು 09 ಹಾಗೂ 150 ಮಂದಿ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ನಿಯೋಜಿಸಲಾಗಿದೆ.

Chikkaballapur News: ಉನ್ನತ ಶಿಕ್ಷಣ ಪಡೆಯದಿದ್ದರೂ ಡಿವಿಜಿ ಅವರ ಪ್ರತಿಭೆ ಶ್ರೀಮಂತಿಕೆಯಿಂದ ಕೂಡಿತ್ತು: ಡಾ.ಕೋಡಿರಂಗಪ್ಪ ಅಭಿಮತ

ಉನ್ನತ ಶಿಕ್ಷಣ ಪಡೆಯದಿದ್ದರೂ ಡಿವಿಜಿ ಪ್ರತಿಭೆ ಶ್ರೀಮಂತಿಕೆಯಿಂದ ಕೂಡಿತ್ತು

ಡಿವಿಜಿ ಅವರು ಶ್ರೇಷ್ಟ ಕವಿ, ಚಿಂತಕ ವಿಮರ್ಶಕ, ಅನುವಾದಕರಷ್ಟೇ ಆಗಿರಲಿಲ್ಲ ಬದಲಿಗೆ ಶ್ರೇಷ್ಟ ಪತ್ರಕರ್ತರೂ ಆಗಿದ್ದ ಬಹುಮುಖ ಪ್ರತಿಭೆಯ ಮೇರು ಶಿಖರವಾಗಿದ್ದರು. ಅವರು ಬರೆದ ಮಂಕು ತಿಮ್ಮನ ಕಗ್ಗವು ಕನ್ನಡ ಸಾರಸ್ವತ ಲೋಕದಲ್ಲಿ ಸಾರ್ವಕಾಲಿಕವಾದ ಮೇರುಕೃತಿ. ಈ ಕೃತಿಯು ಬದುಕಿಗೆ ದಾರಿ ದೀಪವಾಗಿದೆ.’ ಡಿವಿಜಿ 95 ಕನ್ನಡ ಕೃತಿಗಳು 40 ಇಂಗ್ಲೀಷ್ ಕೃತಿಗಳು, 40 ಅವರಿವರ ಮೇಲೆ ಕೃತಿಗಳನ್ನು ಬರೆದಿದ್ದಾರೆ

Bagepally News: ವ್ಯವಹಾರಿಕ ಕೌಶಲ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿ: ಆರ್.ಹನುಮಂತ ರೆಡ್ಡಿ

ವ್ಯವಹಾರಿಕ ಕೌಶಲ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿ: ಆರ್.ಹನುಮಂತ ರೆಡ್ಡಿ

ವಿದ್ಯಾರ್ಥಿಗಳಲ್ಲಿ ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡ ಬೇಕು. ಸಂವಹನ ಕಲೆ, ವ್ಯವಹಾರ ಪ್ರಜ್ಞೆ, ಶ್ರಮದ ಮಹತ್ವ, ಸೃಜನಾತ್ಮಕ ಅಲೋಚನೆ, ಆತ್ಮ ವಿಶ್ವಾಸ ಹೆಚ್ಚಿಸುವ ಮೂಲಕ ಭವಿಷ್ಯದ ಪ್ರಜೆಗಳನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ

Chikkaballapur News: ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಿ: ಜಂಗಮಕೋಟೆ ಹೋಬಳಿ ರೈತ ಸಂಘಟನೆ ಅಡಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭ

ರೈತ ಸಂಘಟನೆ ಅಡಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭ

ಸರಕಾರವು ಕೈಗಾರಿಕೆ ಪ್ರಾರಂಭಿಸುವ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನಾವು ರಕ್ತ ಕೊಟ್ಟೇವು ನಮ್ಮ ಕೃಷಿ ಭೂಮಿ ಕೊಡುವುದಿಲ್ಲ, ಕೃಷಿ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರಕಾರ ಬಲವಂತದ ಭೂಮಿ ವಶಕ್ಕೆ ಮುಂದಾದರೆ ಪರಿಸ್ಥಿತಿ ಬೇರೆ ಆಗಲಿದೆ

ಹೆಣ್ಣು ಮ್ಕಕಳ ಆರೋಗ್ಯವೇ ಜಿಲ್ಲೆಯ ಸುಭದ್ರ ಭವಿಷ್ಯ; ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಇಂದೇ ಹೆಜ್ಜೆ ಇಡಿ

ಹೆಣ್ಣು ಮ್ಕಕಳ ಆರೋಗ್ಯವೇ ಜಿಲ್ಲೆಯ ಸುಭದ್ರ ಭವಿಷ್ಯ

ಹೆಚ್.ಪಿ.ವಿ ಲಸಿಕೆ ಇದು ತುಂಬಾ ಪರಿಣಾಮಕಾರಿಯಾಗಿದ ಲಸಿಕೆ 14 ವರ್ಷ ಮುಗಿದು 15 ವರ್ಷ ದ ಒಳಗಿನ ಹೆಣ್ಣು ಮಕ್ಕಳಿಗೆ  ಮುಂದಿನ ವಯೋಮಾನದಲ್ಲಿ ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಗಟ್ಟುವ ಸಲುವಾಗಿ ಹೆಚ್.ಪಿ.ವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಹೆಚ್.ಪಿ.ವಿ ಲಸಿಕೆಯನ್ನು ಪಡೆದ ಮಕ್ಕಳಿಗೆ ನಿಗದಿತ ತಂತ್ರಾಂಶದಲ್ಲಿ ನೊಂದಣಿ ಮಾಡಿ ಲಸಿಕಾ ಪ್ರಮಾಣ ಪತ್ರ ನೀಡಬೇಕು

ವಿವಿಧ ರಾಜ್ಯ ಚುನಾವಣೆಗಳ ಬಳಿಕ ಸರ್ವಪಕ್ಷ ಸಂಸದರ ನಿಯೋಗದೊಂದಿಗೆ ಪ್ರಧಾನಿ ಭೇಟಿ: ಡಿ.ಕೆ. ಶಿವಕುಮಾರ್

ಸರ್ವಪಕ್ಷ ಸಂಸದರ ನಿಯೋಗದೊಂದಿಗೆ ಪ್ರಧಾನಿ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್

DK Shivakumar: ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ನೀರಾವರಿ ಯೋಜನೆಗಳ ಸಣ್ಣ ತೊಡಕುಗಳನ್ನು ನಿವಾರಿಸುವ ಕುರಿತು ಚರ್ಚೆ ನಡೆಸಲು ಕರ್ನಾಟಕದ ಸಂಸದರ ಜೊತೆ ದೆಹಲಿಯಲ್ಲಿ ಸಭೆ ನಡೆಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸ್ಪೀಕರ್ ಸಭಾತ್ಯಾಗ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ 'ಕೈ' ಗನ್ನಡಿ: ಜೋಶಿ ಕಿಡಿ

ಸ್ಪೀಕರ್ ಸಭಾತ್ಯಾಗ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ 'ಕೈ' ಗನ್ನಡಿ

Pralhad Joshi: ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಹಾಗೂ ಕೆಲ ಸಚಿವರು ಗೈರು ಇರುವುದನ್ನು ಕಂಡು ಸ್ಪೀಕರ್ ಯು.ಟಿ. ಖಾದರ್ ಅವರು 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆದುರೇ ಸಭಾತ್ಯಾಗ ಮಾಡಿರುವುದು ಈ ಸರ್ಕಾರದ ಅಧೋಗತಿಗೆ ಹಿಡಿದ ಕೈಗನ್ನಡಿ' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

Loading...