ಚಿಂತಾಮಣಿಯಲ್ಲಿ ಭಾರಿ ಗಾಳಿ-ಮಳೆಗೆ ಧರೆಗುರುಳಿದ ಶತಮಾನದ ಆಲದ ಮರ
ಚಿಂತಾಮಣಿಯ ವಾರ್ಡ್ ನಂಬರ್ 25ರ ಎನ್. ಎನ್.ಟಿ. ರಸ್ತೆಯ ಊರು ಮುಂದೆ ವ್ಯಾಪ್ತಿಯಲ್ಲಿ ತಡರಾತ್ರಿ ಸುಮಾರು 12 ರಿಂದ 1 ಗಂಟೆಯ ಸುಮಾರಿಗೆ ಭಾರಿ ಗಾಳಿ ಮಳೆಗೆ ಸುಮಾರು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ್ದ ರಸ್ತೆ ಬದಿಯಲ್ಲಿದ್ದ ಬೃಹತ್ ಅಲದ ಮರದ ಕೊಂಬೆಗಳು ಮುರಿದು ಬಿದ್ದ ಪರಿಣಾಮ, ವಿದ್ಯುತ್ ತಂತಿಗಳ ಮೇಲೆ ಭಾರಿ ಒತ್ತಡ ಬಿದ್ದು ಸಿಮೆಂಟ್ ಕಂಬಗಳು ಮುರಿದು ರಸ್ತೆಗೆ ಅಡ್ಡಲಾಗಿ ವಾಲಿಕೊಂಡಿವೆ.