ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chikkaballapur News: ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಪಿಡಿಒ ಲೋಕೇಶ್ ಬಣ್ಣನೆ

ಬೇಸಿಗೆ ಶಿಬಿರಗಳು ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ

ಮಕ್ಕಳು ವರ್ಷವೆಲ್ಲ ಶಾಲೆಯಲ್ಲಿ ಓದು, ಪಾಠ ಪ್ರವಚನ, ಪರೀಕ್ಷೆಯೆಂದು ಹೆಚ್ಚು ತಲ್ಲೀನ ರಾಗಿರುತ್ತಾರೆ. ಪರೀಕ್ಷೆಯ ನಂತರ ಬರುವ ಬೇಸಿಗೆ ರಜೆಯಲ್ಲಿ ಈ ರೀತಿಯ ಬೇಸಿಗೆ ಶಿಬಿರ ಆಯೋಜಿಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ, ಚೈತನ್ಯ ಮೂಡಲು ಹಾಗೂ ಲವಲವಿಕೆ ಯಿಂದ ಇರುತ್ತಾರೆ. ಆದ್ದರಿಂದ ಲೇ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಹಕಾರಿ ಎಂದರು

SP Lavanya BN: ಬೆಸ್ಕಾಂ ಜಾಗೃತ ದಳದ ಎಸ್‌ಪಿ ಲಾವಣ್ಯ ಅನಾರೋಗ್ಯದಿಂದ ನಿಧನ

ಬೆಸ್ಕಾಂ ಜಾಗೃತ ದಳದ ಎಸ್‌ಪಿ ಲಾವಣ್ಯ ಅನಾರೋಗ್ಯದಿಂದ ನಿಧನ

ಮೃತ ಎಸ್ಪಿ ಲಾವಣ್ಯ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಚಿಂತಾಮಣೀ ತಾಲೂಕಿನ ದೊಡ್ಡಗಂಜೂರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಯುವ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Chikkaballapur News: ಕಾರ್ಮಿಕರು ತಮ್ಮ ಶ್ರಮದ ಹಣವನ್ನು ದುಂದುವೆಚ್ಚಗಳಿಗೆ ಬಳಸಿದರೆ ಭವಿಷ್ಯ ಮಂಕಾಗಲಿದೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ ಆತಂಕ

ಕಾರ್ಮಿಕರು ದುಂದುವೆಚ್ಚಗಳಿಗೆ ತಮ್ಮ ಶ್ರಮದ ಹಣ ಬಳಸಿದರೆ ಭವಿಷ್ಯ ಮಂಕು

ಸಮಯದ ಅರಿವಿಲ್ಲದೆ ದುಡಿಯುವ ಕಾರ್ಮಿಕರು ಜಾಣರಾಗಬೇಕು. ಜಾಗರೂಕರಾಗಿ ಬದುಕು ಕಟ್ಟಿ ಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್ ಹಾಗೂ ಇತರ ವಿಲಾಸಿ ವಸ್ತುಗಳ ಖರೀದಿಯಂತಹ ದುಂದು ವೆಚ್ಚಗಳಿಗೆ ಬಹುತೇಕ ಸಂಬಳವನ್ನು ಬಳಕೆ ಮಾಡದೆ, ಅಗತ್ಯಕ್ಕೆ ತಕ್ಕಂತೆ ಬಳಸಿ ಉಳಿಸುವ ಮೂಲಕ ಮಕ್ಕಳ ಭವಿಷ್ಯದತ್ತ ಗಮನ ಹರಿಸಬೇಕಿದೆ

Karaga Mahotsav: ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಅದ್ಧೂರಿ ಕರಗ ಮಹೋತ್ಸವ

ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಅದ್ಧೂರಿ ಕರಗ ಮಹೋತ್ಸವ

ತಾಲೂಕಿನ ಜಂಗಮಕೋಟೆಯಲ್ಲಿ ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಮಹೋತ್ಸವವು ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿತು. ಶ್ರೀ ಪೂಜಮ್ಮ ದೇವಿ ಟ್ರಸ್ಟ್ ವತಿಯಿಂದ ಆಯೋಜಿಸ ಲಾದ ಮಹೋತ್ಸವದಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಾದ್ಯಗೋಷ್ಠಿ ಹಾಗೂ ಪೂಜಾ ಕಾರ್ಯಕ್ರಮ ಗಳು ಜರುಗಿದವು.

Vande Bharat Express: ಮೊದಲ ವಂದೇ ಭಾರತ್ ರೈಲು ಉತ್ಪಾದಿಸಿದ ರಾಯ್‌ ಬರೇಲಿಯ ಎಂಸಿಎಫ್; ಟ್ರಯಲ್‌ ರನ್‌ಗೆ ರವಾನೆ

ಮೊದಲ ವಂದೇ ಭಾರತ್ ರೈಲು ಉತ್ಪಾದಿಸಿದ ರಾಯ್‌ ಬರೇಲಿಯ ಎಂಸಿಎಫ್

ರಾಯ್‌ಬರೇಲಿಯ ಎಂಸಿಎಫ್ ತನ್ನ ಮೊದಲ ವಂದೇ ಭಾರತ್ ರೈಲನ್ನು ಉತ್ಪಾದಿಸಿದ್ದು, ಇದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಿಯಮಿತ ಪ್ರಯಾಣಿಕರ ಸೇವೆಗೆ ಸೇರ್ಪಡೆಗೊಳ್ಳುವ ಮೊದಲು, ರೈಲು ಸವಾರಿ ಗುಣಮಟ್ಟ, ಸುರಕ್ಷತಾ ಮಾನದಂಡ ಮತ್ತು ಕ್ರಿಯಾತ್ಮಕ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲು ಪ್ರಯೋಗಗಳಿಗೆ ರೈಲುಗಳು ಒಳಗಾಗುತ್ತವೆ.

ವಸತಿ ರಹಿತರಿಗೆ ಗುಡ್ ನ್ಯೂಸ್:ಅರ್ಹ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆಯಲ್ಲಿ ಚಾಲನೆ

ಕಾಗತಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ ದಿದ್ದಲ್ಲಿ, ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಲೇಔಟ್ ನಿರ್ಮಿಸುವ ಮೂಲಕ ವಸತಿ ರಹಿತರಿಗೆ ನ್ಯಾಯ ಒದಗಿಸುವ ಭರವಸೆ ಯನ್ನು ನೀಡಿದರು. ಗ್ರಾಮ ಪಂಚಾಯತಿಯ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸರ್ವೇ ನಡೆಸಿದ ನಂತರವೇ ಅಂತಿಮ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು

Election: 4 ಮಂದಿ ಮಹಿಳಾ ನಿರ್ದೇಶಕರು, 8 ಮಂದಿ ಪುರುಷ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪೂರ್ಣ

ತಾಲೂಕು ಶಿಕ್ಷಕರ ಸಂಘದ ಚುನಾವಣೆ : ಮಧ್ಯರಾತ್ರಿವರೆಗೂ ನಡೆದ ಮತ ಎಣಿಕೆ

ಚುನಾವಣಾಧಿಕಾರಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ಪೆರೇಸಂದ್ರ ಪ್ರೌಢಶಾಲೆಯ ನರಸಿಂಹರೆಡ್ಡಿ ಘೋಷಣೆ ಮಾಡಿದಂತೆ ಮಹಿಳಾ ವಿಭಾಗಕ್ಕೆ 7 ಮಂದಿ ಸ್ಪರ್ಧೆ ಮಾಡಿದ್ದು ಅಪ್ಸರ-260, ಚಂದ್ರಕಲಾ-193, ಜಯಭಾರತಿ-255, ಲಾವಣ್ಯ-203, ವಹೀದಾಭಾನು-313, ಪ್ರೇಮಾವತಿ-205, ವಿಜಯ ಲಕ್ಷ್ಮೀ-179 ಮತಗಳನ್ನು ಪಡೆದಿದ್ದರು. ಈ ಪೈಕಿ ಅತಿ ಹೆಚ್ಚು ಮತಗಳನ್ನು ಪಡೆದ ವಹಿದಾ ಭಾನು-313, ಅಪ್ಸರ-260, ಜಯಭಾರತಿ-255, ಪ್ರೇಮಾವತಿ-205, ನಾಲ್ಕು ಮಂದಿ ಆಯ್ಕೆಯಾದರು.

ಪೇಪರ್ ಲೆಸ್ ನೋಂದಣಿ ವ್ಯವಸ್ಥೆಯಿಂದ ಆಸ್ತಿ ಭದ್ರತೆ ಅಪಾಯದಲ್ಲಿ: ಆತಂಕ ವ್ಯಕ್ತಪಡಿಸಿದ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟ

ಪೇಪರ್ ಲೆಸ್ ನೋಂದಣಿ ವ್ಯವಸ್ಥೆಯಿಂದ ಆಸ್ತಿ ಭದ್ರತೆ ಅಪಾಯದಲ್ಲಿ

ಆಸ್ತಿ ಬಗ್ಗೆ ವಾರಸುದಾರರಿಗೆ ಮಾಹಿತಿಯೇ ಇರುವುದಿಲ್ಲ. ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆಸ್ತಿ ಖರೀದಿ ಬಗ್ಗೆ ಕುಟುಂಬ ಸದಸ್ಯರಿಗೆ ಸ್ಪಷ್ಟ ಮಾಹಿತಿ ಸಿಗದಿರುವುದರಿಂದ ಮುಂದಿನ ದಿನಗಳಲ್ಲಿ ಆಸ್ತಿಗಳು ಕೈತಪ್ಪುವ ಕಳವಳ ಹೆಚ್ಚಾಗಿದೆ. ಇ-ಸಹಿ ದುರುಪಯೋಗವಾಗಲಿದ್ದು, ಮೋಸಕ್ಕೆ ಅವಕಾಶ ವಾಗಲಿದೆ.

ಚಿತ್ರದುರ್ಗದಲ್ಲಿ ಅಭಿಮಾನೋತ್ಸವ; ಮೇ 8ರಂದು ಮಿನಿ ದಸರಾ ಮಾದರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಪುರಪ್ರವೇಶ

ಅಭಿಮಾನೋತ್ಸವ; ಮೇ 8ಕ್ಕೆ ಮಿನಿ ದಸರಾ ಮಾದರಿಯಲ್ಲಿ ಬಿಎಸ್‌ವೈ ಪುರಪ್ರವೇಶ

BY Vijayendra: ಬಿಎಸ್‍ವೈ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟಬೇಡಿ. ಚುನಾವಣೆ ಆರು ತಿಂಗಳು ಇರುವಾಗ ಈ ಕಾರ್ಯಕ್ರಮ ಆಯೋಜಿಸಿದರೆ ಬಿಜೆಪಿಗೆ ಲಾಭವಾಗಲಿದೆ, ವಿಜಯೇಂದ್ರ ಅವರಿಗೆ ಲಾಭವಾಗಲಿದೆ ಎಂದು ಹೇಳಬಹುದಿತ್ತು. ಆದರೆ ಅಂತಹ ಯಾವುದೇ ಲಾಭ ಪಡೆಯುವ ಉದ್ದೇಶ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.

ಪತ್ನಿಗೆ ಅಕ್ರಮ ಸಂಬಂಧ; ಮಲೇಷ್ಯಾದಿಂದ ದಾಂಡೇಲಿಗೆ ಬಂದಿದ್ದ ಗಂಡ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಗಂಡ ಆತ್ಮಹತ್ಯೆ

ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ತಾಯಿಯೇ ಕಾರಣ ಎಂದು ಆರೋಪಿಸಿ ಗಂಡ ಆತ್ಮಹತ್ಯೆ ಎನ್ನಲಾಗಿದೆ. ಸದ್ಯ, ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ರಾಘವೇಂದ್ರ ಪತ್ನಿ ಮೇಘಾ ಮತ್ತು ಆಕೆಯ ತಾಯಿಯನ್ನು ದಾಂಡೇಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ಮೀಸಲು; ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೋಶಿ ಕಿಡಿ

ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ ಕಾಂಗ್ರೆಸ್‌ ಸರ್ಕಾರ: ಜೋಶಿ

Pralhad Joshi: ಕಾಂಗ್ರೆಸ್ ಸರ್ಕಾರ ಯಾವತ್ತೂ ಬರೀ ಅಲ್ಪಸಂಖ್ಯಾತರ ಓಲೈಕೆಯಲ್ಲೇ ತೊಡಗಿ ಮಹಾಪರಾಧ ಎಸಗುತ್ತಿದೆ. ಸಿಎಂ ಸಿದ್ದರಾಮಯ್ಯು ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಕೇವಲ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗಾಗೇ ₹600 ಕೋಟಿ ರೂ.ಮೀಸಲಿಟ್ಟು ನಿಜ ಸ್ವರೂಪ ಪ್ರದರ್ಶಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

Pralhad Joshi: ಸಿದ್ದರಾಮಯ್ಯ ಸರ್ಕಾರ ಹಲವು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿದ್ದೇಕೆ?: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಸಿದ್ದರಾಮಯ್ಯ ಸರ್ಕಾರ ಹಲವು ಬಾರಿ ಬೆಲೆ ಹೆಚ್ಚಿಸಿದ್ದೇಕೆ?; ಜೋಶಿ

Pralhad Joshi: ಸಿಎಂ ಸಿದ್ದರಾಮಯ್ಯ ಅವರು ಆಡಳಿತಗಾರರಾಗಿ, ಗ್ಯಾಸ್ ಬೆಲೆ ಹೆಚ್ಚಳದ ಸತ್ಯ ಗೊತ್ತಿದ್ದರೂ ಕೇಂದ್ರವನ್ನು ಟೀಕಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಇವರು ಅಧಿಕಾರಕ್ಕೆ ಬಂದ ಮೇಲೆ ಹಲವು ಬಾರಿ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಎಲ್ಲದರ ಬೆಲೆಯನ್ನೂ ದುಪ್ಪಟ್ಟು ಹೆಚ್ಚಿಸಿದ್ದೇಕೆ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಐಟಿ ನೋಟಿಸ್‌; ತೆರಿಗೆ ಮೇಲ್ಮನವಿಯಲ್ಲಿ ಜಯ

ತೆರಿಗೆ ಮೇಲ್ಮನವಿಯಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಜಯ

ಶ್ರೀರಾಮಚಂದ್ರಾಪುರ ಮಠವು ಸುಮಾರು 13 ವರ್ಷಗಳ ಕಾಲ ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ನಿರ್ವಹಿಸಿದ್ದು, ಪ್ರತಿ ವರ್ಷ ಲೆಕ್ಕಪರಿಶೋಧನೆಯನ್ನು ನಡೆಸಿ; ಸುವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಿ - ಸುಭದ್ರವಾಗಿ ದಾಖಲೀಕರಣ ಮಾಡಿದೆ. ಇದೀಗ ಮೇಲ್ಮನವಿ ಆದೇಶದನ್ವಯ ತೆರಿಗೆ ಬಾಕಿ ಶೂನ್ಯವಾಗಿರುವುದು ಭಕ್ತಾದಿಗಳ ಗೊಂದಲಗಳನ್ನು ನಿವಾರಿಸಿದೆ ಎಂದು ಶ್ರೀರಾಮಚಂದ್ರಾಪುರ ಮಠ ತಿಳಿಸಿದೆ.

Chief Information Commissioner: ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತೆಯಾಗಿ ಜಿ. ಸತ್ಯವತಿ ನೇಮಕ

ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತೆಯಾಗಿ ಜಿ. ಸತ್ಯವತಿ ನೇಮಕ

Karnataka Information Commission: ದೀರ್ಘಕಾಲದಿಂದ ತೆರವಾಗಿದ್ದ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರ ಸ್ಥಾನಕ್ಕೆ ಅರ್ಹ ಅಧಿಕಾರಿಯ ಆಯ್ಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿಯು ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿತ್ತು. ಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈಗ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಸತ್ಯವತಿ ಅವರನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಿಸಿ, ಆದೇಶ ಹೊರಡಿಸಿದ್ದಾರೆ.

Sringeri Postal Ballot recount: ಶೃಂಗೇರಿ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲೂ ಕಾಂಗ್ರೆಸ್​​ನ ಟಿ.ಡಿ.ರಾಜೇಗೌಡಗೆ ಗೆಲುವು

ಶೃಂಗೇರಿ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲೂ ಟಿ.ಡಿ.ರಾಜೇಗೌಡಗೆ ಗೆಲುವು

ಹೈಕೋರ್ಟ್ ಆದೇಶದ ಮೇರೆಗೆ ಶನಿವಾರ ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ ಎಣಿಕೆ ಮಾಡಲಾಗಿದೆ. ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮತ್ತು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ನಡುವೆ ಮರು ಎಣಿಕೆ ಫೈಟ್ ಜೋರಾಗಿತ್ತು. ಸಾಕಷ್ಟು ಕುತೂಹಲದ ಮಧ್ಯೆ ಇದೀಗ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್​ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದಾರೆ.

Vinay kulkarni: ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹ; ವಿಧಾನಸಭೆ ಕಾರ್ಯದರ್ಶಿ ಅಧಿಕೃತ ಆದೇಶ

ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹ

Yogesh Gowda murder case: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನವನ್ನು ರದ್ದುಗೊಳಿಸಿ ವಿಧಾನಸಭೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Pravasi Prapancha: ಹಿತವಾದ ಮನಸಿಗೆ ಹದವಾದ ಕಾಫಿ; ನೆನಪಲ್ಲುಳಿಯುವ ಮಾತಾಸ್‌ ಘಮ

ನೆನಪಲ್ಲುಳಿಯುವ ಮಾತಾಸ್‌ ಕಾಫಿ ಘಮ

Mathas Coffee: ಮಾತಾಸ್‌ ಕಾಫಿ ಎಂದರೆ ಕರ್ನಾಟಕದ ಜನರಿಗೆ ಎಮೋಷನ್‌ ಆಗಿಬಿಟ್ಟಿದೆ. ಮಾತಾಸ್‌ ಅವರು ಬರಿ ಕಾಫಿ ಪುಡಿ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಇವರು ಕಾಫಿ ಸಂಸ್ಕೃತಿಯನ್ನು ಪ್ರತಿಯೊಬ್ಬರ ಜೀವನದ ಭಾಗವಾಗಿಸಲು ಶ್ರಮಿಸುತ್ತಿದ್ದಾರೆ. ನೀವು ಹೊಟೇಲ್‌ಗೆ ಹೋದಾಗ ಅಲ್ಲಿ ಬರುವ ಆ ನೊರೆ ಭರಿತ ಫಿಲ್ಟರ್ ಕಾಫಿಯ ಹಿಂದಿರೋ ಶ್ರಮವೇ ಇವರ ಬ್ರ್ಯಾಂಡ್ ಮೇಲೆ ಜನರಿಟ್ಟಿರುವ ನಂಬಿಕೆ.

Lokadhwani Awards: ʼಲೋಕಧ್ವನಿ’ ಹೆಮ್ಮೆಯ ಸಾಧಕ ಪ್ರಶಸ್ತಿ ಪುರಸ್ಕೃತ ರವೀಂದ್ರ ನಾಯ್ಕ, ಸುರೇಶ್ಚಂದ್ರ ಹೆಗಡೆಗೆ ಶಿರಸಿಯಲ್ಲಿ ಸನ್ಮಾನ

ಲೋಕಧ್ವನಿಯಿಂದ ರವೀಂದ್ರ ನಾಯ್ಕ, ಸುರೇಶ್ಚಂದ್ರ ಹೆಗಡೆಗೆ ಸನ್ಮಾನ

ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ, ಕೆಎಂಎಫ್ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರಿಗೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಲೋಕಧ್ವನಿ ಹೆಮ್ಮೆಯ ಸಾಧಕರು ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಗೌರವಿಸಿದರು. ಶಿರಸಿಯ ಸುಪ್ರಿಯಾ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿತು.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವರ್ಗಾವಣೆ: ಮಹಮ್ಮದ್ ಇಕ್ರಾಮುಲ್ಲಾ ಶರೀಫ್ ನೂತನ ಡಿಸಿ

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವರ್ಗಾವಣೆ

Kalaburagi News: ರಾಜ್ಯ ಸರ್ಕಾರವು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಫೌಜಿಯಾ ತರನ್ನುಮ್ ಬಿ. ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಮಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

Job Recruitment: ಮಂಜೂರಾತಿ ನೀಡಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಮಂಜೂರಾತಿ ನೀಡಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಿ: ಸಿಎಂ

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳೊಂದಿಗೆ ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅವರು ಶನಿವಾರ ನಡೆಸಿದರು. ಈ ವೇಳೆ ಖಾಲಿ ಹುದ್ದೆಗಳ ಭರ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

Tumkur News: ಪ್ರಿಯಕರನ ಜತೆ ಹೆಂಡತಿ ಪರಾರಿಯಾಗಿದ್ದಕ್ಕೆ ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ

ಪ್ರಿಯಕರನ ಜತೆ ಹೆಂಡತಿ ಪರಾರಿ; ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ

ಪತ್ನಿ ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಒಂದು ವಾರದ ಹಿಂದೆ ಪತ್ನಿಯು ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಓಡಿಹೋಗಿದ್ದಳು. ಇದರಿಂದ ಮನನೊಂದ ಪತಿ ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

BS Yediyurappa: ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಬಿ.ಎಲ್‌.ಸಂತೋಷ್‌ ಭೇಟಿ; 50 ವರ್ಷಗಳ ಯಶಸ್ವಿ ರಾಜಕೀಯ ಜೀವನಕ್ಕೆ ವಿಶ್‌

ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಬಿ.ಎಲ್‌.ಸಂತೋಷ್‌ ಭೇಟಿ

BSY’s 50-year political life: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿರುವ ಬಿ.ಎಲ್‌.ಸಂತೋಷ್‌ ಅವರು, ರಾಷ್ಟ್ರ ಹಾಗೂ ರಾಜ್ಯದ ರಾಜಕೀಯದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನು 50 ವರ್ಷಗಳ ಯಶಸ್ವಿ ರಾಜಕೀಯ ಪಯಣ ಪೂರೈಸಿದ ಹಿನ್ನೆಲೆಯಲ್ಲಿ ಬಿಎಸ್‌ವೈ ಅವರಿಗೆ ಶುಭಾಶಯ ಸಲ್ಲಿಸಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಮಗುವಿನ ತಾಯಿ ಬಲಿ; ಕುಟುಂಬಸ್ಥರ ವಿರುದ್ಧ ದೂರು ದಾಖಲು

ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಮಗುವಿನ ತಾಯಿ ಬಲಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದೆ. ಮೃತಳನ್ನು ವಂದನಾ ಎಂದು ಗುರುತಿಸಲಾಗಿದ್ದು, ಮೂರು ವರ್ಷಗಳ ಹಿಂದೆ ವಿಕ್ರಂ ಶೇಷ ಎಂಬಾತನ ಜೊತೆ ವಂದನಾ ವಿವಾಹವಾಗಿದ್ದರು.

ಇಂದಿನಿಂದ ನಾಲ್ಕು ದಿನ ಪೀಣ್ಯ  ಫ್ಲೈಓವರ್ ಬಂದ್‌ ; ಬದಲಿ ಮಾರ್ಗ ಏನು?

ಇಂದಿನ ನಾಲ್ಕು ದಿನ ಪೀಣ್ಯ ಫ್ಲೈಓವರ್ ಬಂದ್‌

ಇಂದಿನಿಂದ ನಾಲ್ಕು ದಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್‌ ಆಗಲಿದೆ. ಮೇ 5ರ ಬೆಳಗ್ಗೆ 5ರಿಂದ ಮೇ 8ರ ಬೆಳಗ್ಗೆ 11ರವರೆಗೆ ಪ್ಲೈಓವರ್​​ ಕ್ಲೋಸ್​​ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಹೀಗಾಗಿ ಫ್ಲೈಓವರ್​ನ 2 ಬದಿಯಲ್ಲಿ ವಾಹನ ಸಂಚಾರಗಳಿಗೆ ನಿರ್ಬಂಧ ವಿಧಿಸಲಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡುವಂತೆ ಬೆಂಗಳೂರು ಟ್ರಾಫಿಕ್​​ ಪೊಲೀಸರು ತಿಳಿಸಿದ್ದಾರೆ.

Loading...