ಏ.26ಕ್ಕೆ ಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ, ಪ್ರಶಸ್ತಿ ಪ್ರದಾನ ಸಮಾರಂಭ
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಏಪ್ರಿಲ್ 26ರಂದು ಭಾನುವಾರ ಬೆಳಗ್ಗೆ 9.30 ಗಂಟೆಗೆ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭʼ ಹಮ್ಮಿಕೊಳ್ಳಲಾಗಿದೆ. 30 ವರ್ಷಗಳ ಇತಿಹಾಸವನ್ನು ಹೊಂದಿರುವ ಸೌರಭ, ಅಪೂರ್ವ ಸದಭಿರುಚಿಯ 'ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದ ಉತ್ತರ ಕನ್ನಡದ ಅಗ್ರಗಣ್ಯ ಸಂಸ್ಥೆಗಳಲ್ಲೊಂದಾಗಿದೆ.