ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

High Court: ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ: ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಹಾಸನದ ರಾಜೀವ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ರಾಜೀವ್ ಎಜುಕೇಷನಲ್ ಟ್ರಸ್ಟ್) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಚ್.ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಅಲ್ಲದೆ, ಉಪನ್ಯಾಸಕ ಎಂ.ವಿ. ರಮೇಶ್ ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಮೇಲ್ಮನವಿ ಪ್ರಾಧಿಕಾರ ಮತ್ತು ಏಕಸದಸ್ಯ ಪೀಠ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿ ಆದೇಶಿಸಿದೆ. ‌

MLA Bhimanna Nayak: ಅತಿಕ್ರಮಣ ಜಾಗದ ಆಸ್ತಿ ತೆರಿಗೆ ವಿವಾದ-ಕೇಂದ್ರದ ಸುತ್ತೋಲೆ ಬಹಿರಂಗಪಡಿಸುವಂತೆ ಬಿಜೆಪಿ ಆಗ್ರಹ

ಬಿಜೆಪಿ ಸಂಸದರ ನೇತೃತ್ವದಲ್ಲಿ ಜನಪರ ಹೋರಾಟ ಮುಂದುವರಿಯಲಿದೆ

​ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆದೇಶವನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಸರ್ಕಾರಕ್ಕೆ ಉಂಟಾಗಿರುವ ಆಕ್ರೋಶಕ್ಕೆ ಉತ್ತರಿಸಲಾಗದೆ ಶಾಸಕರು ರಾಜಕೀಯ ಲೇಪಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಾಸಕರು ಕೇವಲ ಆರೋಪಗಳ ಭಾಷಣ ಮಾಡುವುದನ್ನು ಬಿಟ್ಟು, ಈ ಜನವಿರೋಧಿ ಆದೇಶವನ್ನು ಎಷ್ಟು ದಿನಗಳ ಒಳಗೆ ವಾಪಸ್ ಪಡೆಯುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು

Vande Bharat Train: ಕಲಬುರಗಿಗೆ ಬೆಂಗಳೂರು-ಮುಂಬೈ ಸಂಚಾರ ಸುಗಮ: ರಾಜ್ಯದಲ್ಲಿ ಕಲಬುರಗಿ, ರಾಯಚೂರಲ್ಲಿ ನಿಲುಗಡೆ

ಕಲಬುರಗಿಗೆ ಬೆಂಗಳೂರು-ಮುಂಬೈ ಸಂಚಾರ ಸುಗಮ

ಪ್ರತಿಯಾಗಿ 27651 ಸಂಖ್ಯೆ ರೈಲು ಮುಂಬೈನಿಂದ ರಾತ್ರಿ 10.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವವರಿಗೆ ಈ ಸೇವೆ ಹೊಸ ಆಯ್ಕೆಯಾಗಲಿದೆ. ರೈಲಿನ ಮಾರ್ಗದಲ್ಲಿ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ ಹಾಗೂ ಕಲ್ಯಾಣ ವಾಣಿಜ್ಯ ನಿಲುಗಡೆಗಳಾಗಿವೆ.

Bangalore Jatre Website: ಜಾತ್ರೆಯ ಅಧಿಕೃತ ವೆಬ್‌ಸೈಟ್ ಬಿಡುಗಡೆಗೊಳಿಸಿದ ಸಚಿವ ಕೃಷ ಬೈರೇಗೌಡ: ಡಿ.4ರಿಂದ 10ದಿನ ಬೆಂಗಳೂರು ಜಾತ್ರೆ

ಡಿ.4ರಿಂದ 10ದಿನ ಬೆಂಗಳೂರು ಜಾತ್ರೆ

300ಕ್ಕೂ ಹೆಚ್ಚು ಕಾರ್ಯಕ್ರಮ ಶಾಲೆ, ಕಾಲೇಜು, ಐಟಿ ಕಂಪನಿಗಳು, ಸಾರ್ವಜನಿಕ ವಲಯ ಹಾಗೂ ಆರ್ಟ್ ಗ್ಯಾಲರಿಗಳು ಸೇರಿ ನಗರದೆಡೆ ಸಣ್ಣ ಹಾಗೂ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕಾರ್ಯಕ್ರಮಗಳು ಜರುಗಲಿದ್ದು, ನಗರದ ಮಧ್ಯ ಭಾಗದ ಎರಡು ಕಡೆಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

Karnataka High Court: ಸ್ನಾತಕೋತ್ತರ ಪದವೀಧರೆ ಎಂದು ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್

ಸ್ನಾತಕೋತ್ತರ ಪದವೀಧರೆ ಎಂದು ಜೀವನಾಂಶ ನಿರಾಕರಿಸಲಾಗದು

ವಾದ-ಪ್ರತಿವಾದ ಆಲಿಸಿದ ಪೀಠವು ವಿಚ್ಚೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತ ವಾಗಿದ್ದು, ಪತಿಯ ಆರ್ಥಿಕ ಸಾಮರ್ಥ್ಯ ಪತ್ನಿ ಸಾಬೀತುಪಡಿಸಲು ವಿಫಲವಾದ ಕಾರಣಕ್ಕೆ ಮಾತ್ರ. ಇದರಿಂದ ಸಿಆರ್‌ಪಿಸಿ ಸೆಕ್ಷನ್ 125 ರಡಿ ಜೀವನಾಂಶ ಪಡೆಯುವ ಹಕ್ಕು ಕಳೆದುಹೋಗುವುದಿಲ್ಲ. ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 29 ಸಾವಿರ ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್, ಪತ್ನಿ ಮತ್ತು ಮಗನಿಗೆ ತಲಾ ತಿಂಗಳಿಗೆ 5, ಸಾವಿರ ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿದೆ.

ಎಂಎಲ್‌ಸಿ ನಮೋಶಿಗೆ ಮಾತೃ ವಿಯೋಗ

ಎಂಎಲ್‌ಸಿ ನಮೋಶಿಗೆ ಮಾತೃ ವಿಯೋಗ

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರ ತಾಯಿ ಭೂದೇವಿ ಗಂಗಾಧರ್ ನಮೋಶಿ (94) ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಶನಿವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಅ.4ರಂದು (ಇಂದು) ಸಂಜೆ 4 ಗಂಟೆಗೆ ಕಲಬುರಗಿ ನಗರದ ಶಹಾಬಾದ್ ರಸ್ತೆಯಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ

ನೀರಾವರಿ ಇಲಾಖೆಯ 2 ಸಾವಿರ ಕೋಟಿ ಬಿಡುಗಡೆ

ನೀರಾವರಿ ಇಲಾಖೆಯ 2 ಸಾವಿರ ಕೋಟಿ ಬಿಡುಗಡೆ

ನೀರಾವರಿ ಇಲಾಖೆಯ ಬಾಕಿ ಬಿಲ್‌ಗಳ ಪಾವತಿಗಾಗಿ ಸರಕಾರ ಈಗಾಗಲೇ 1400 ಕೋಟಿ ಮೀಸಲಿಟ್ಟಿತ್ತು. ಇದೀಗ ಹೆಚ್ಚುವರಿಯಾಗಿ 2400 ಕೋಟಿ ಬಿಡುಗಡೆ ಮಾಡಿರುವುದರಿಂದ ಪಾವತಿ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದೆ. ಆದರೆ, 1400 ಕೋಟಿ ಮೊತ್ತದ ಬಿಲ್‌ಗಳನ್ನು ಹಿರಿತನದ ಆಧಾರದ ಮೇಲೆ ಪಾವತಿಸಲು ಸರಕಾರ ಮುಂದಾಗಿರುವುದರಿಂದ ದೊಡ್ಡ ಗುತ್ತಿಗೆದಾರರಿಗೆ ಮೊದಲು ಹಣ ಸಿಗುವ ಸಾಧ್ಯತೆ ಇದ್ದು, ಸಣ್ಣ ಗುತ್ತಿಗೆದಾರರು ಇನ್ನಷ್ಟು ಕಾಯಬೇಕಾಗಬಹುದು ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ.

D K Shivakumar: ಪಿಂಚಣಿ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದಿರಿ; ಪಹಣಿ, ಪೋಡಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ: ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ಸೂಚನೆ

ಪಿಂಚಣಿ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದಿರಿ

ಪ್ರಜಾಸೇವಾ ಇಲಾಖೆ(Praja Seva Department) ಪಿರಿಯಾಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'(Government services at your doorstep—let there be cooperation) ಕಾರ್ಯಕ್ರಮದಲ್ಲಿ ಈಚೂರಿನ ಶಾಂತಮ್ಮ, ಪಿರಿಯಾಪಟ್ಟಣದ ವಿಜಯ ಕುಮಾರಿ, ಚಿಕ್ಕ ತಾಯಮ್ಮ, ಹೀಗೆ ಹಲವಾರು ಹಿರಿಯ ನಾಗರಿಕರ ಅಹವಾಲುಗಳನ್ನು ಆಲಿಸಿದ ಸಿಎಂ, "ಮುಂದಿನ ಬಾರಿ ಬಂದಾಗ ಪಿಂಚಣಿ ಸಮಸ್ಯೆ ಹೊತ್ತು ಯಾರೂ ಬರಬಾರದು. ಈ ಸಮಸ್ಯೆ ಬಗೆಹರಿಸುವುದು ಅಧಿಕಾರಗಳ ಕೆಲಸ" ಎಂದರು.

ಗಣೇಶ್ ನಚಿಕೇತು ಅವರನ್ನು ಯಾವುದೇ ಹುದ್ದೆಗೆ ನೇಮಿಸಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಗಣೇಶ್ ನಚಿಕೇತು ಅವರನ್ನು ಯಾವುದೇ ಹುದ್ದೆಗೆ ನೇಮಿಸಿಲ್ಲ: ಸರ್ಕಾರ ಸ್ಪಷ್ಟನೆ

ಗಣೇಶ್ ನಚಿಕೇತು ಅವರನ್ನು ರಾಜ್ಯ ಮುಖ್ಯಸ್ಥರು - ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಕರ್ನಾಟಕ ಸರ್ಕಾರದ ಗಮನಕ್ಕೆ ಬಂದಿದೆ. ಆದರೆ, ಗಣೇಶ್ ನಚಿಕೇತು ಅವರನ್ನು ಸರ್ಕಾರವು ಅಂತಹ ಯಾವುದೇ ಹುದ್ದೆಗೆ ನೇಮಿಸಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

Mother-son drown in lake: ಕೆರೆಯಲ್ಲಿ ಮುಳುಗಿ ತಾಯಿ–ಮಗ ಸಾವು: ತಂದೆ–ಮಗಳ ಕಣ್ಣೆದುರೇ ನೀರು ಪಾಲಾದ ದುರಂತ

ಕೆರೆಯಲ್ಲಿ ಮುಳುಗಿ ತಾಯಿ–ಮಗ ಸಾವು

ನೆಲಮಂಗಲ ತಾಲ್ಲೂಕಿನ ರೇಖಾ (34) ಹಾಗೂ ಅವರ ಪುತ್ರ ಹೇಮಂತ್ (19) ಮೃತ ದುರ್ದೈವಿಗಳು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದ ಈ ಕುಟುಂಬ ಗಾಂಧಿ ಜಯಂತಿ ಪ್ರಯುಕ್ತ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಕೆರೆಯಲ್ಲಿ ಈಜಲು ನೀರಿಗೆ ಇಳಿದಾಗ ಆಳಕ್ಕೆ ತೆರಳಿದ ತಾಯಿ–ಮಗ ನೀರಿನಲ್ಲಿ ಮುಳುಗಿದ್ದಾರೆ.

Police constable caught in Lokayukta trap: ಜಾಮೀನು ಷರತ್ತು ಸಡಿಲಿಸಲು ₹3 ಸಾವಿರ ಬೇಡಿಕೆ: ಲಂಚ ಸ್ವೀಕರಿಸಿದ ಆರೋಪ: ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರಿಸಿದ ಆರೋಪ: ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ

ಸುಲೇಪೇಟ್‌ ಠಾಣೆಯ ರೈಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನೀಲ ಲೋಕಾಯುಕ್ತರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪೇದೆ. ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಚಂದ್ರಕಾಂತ ರಂಗನೂರ ಅವರು ಜಾತಿ ನಿಂದನೆ ಪ್ರಕರಣವೊಂದರಲ್ಲಿ ಜಾಮೀನು ಪಡೆದಿದ್ದರು. ನ್ಯಾಯಾಲಯದ ಷರತ್ತಿನಂತೆ ಪ್ರತಿ ತಿಂಗಳು ಠಾಣೆಯ ತನಿಖಾಧಿಕಾರಿ ಎದುರು ಹಾಜರಾಗಬೇಕಿತ್ತು.

MLA Pradeep Eshwar: ಕ್ಷೇತ್ರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ: ಶಾಸಕ ಪ್ರದೀಪ್ ಈಶ್ವರ್

ಕ್ಷೇತ್ರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ: ಶಾಸಕ ಪ್ರದೀಪ್ ಈಶ್ವರ್

ಕಳೆದ ಮೂರು ವರ್ಷಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಸಮಸ್ಯೆಗಳನ್ನು ಕ್ಯೂಆರ್ ಕೋಡ್ ಮೂಲಕ ದಾಖಲಿಸಿದ್ದು, ರಸ್ತೆ, ಕಸ ವಿಲೇವಾರಿ, ಕುಡಿಯುವ ನೀರು, ನೀರಿನ ಟ್ಯಾಪ್ ದುರಸ್ತಿ, ಪಿಂಚಣಿ, ವಿಧವಾ ವೇತನ ಹಾಗೂ ಬೀದಿ ದೀಪ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ತಿಳಿಸಿದರು.

ಪ್ರಜಾಸೇವೆ ಅಭಿಯಾನ ಸಭೆಗಳಲ್ಲಿ ಕಾನೂನು ನೆರವು ಕೇಂದ್ರ ಆರಂಭ: ಸಿಎಂ ಡಿ.ಕೆ. ಶಿವಕುಮಾರ್

ಪ್ರಜಾಸೇವೆ ಅಭಿಯಾನದಲ್ಲಿ ಕಾನೂನು ನೆರವು ಕೇಂದ್ರ ಆರಂಭ: ಸಿಎಂ

CM DK Shivakumar: ಪೋಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕಾರ್ಯಕರ್ತರಿಂದ ತೊಂದರೆಯಾದರೂ ಅರ್ಜಿ ಕೊಡಬಹುದು. ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿಯೇ ನಾವೆಲ್ಲರೂ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಎಷ್ಟು ಹೊತ್ತಾದರೂ ಅರ್ಜಿ ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Free Health Camp: 45 ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಶಿಬಿರ: 103 ಮಂದಿಯಲ್ಲಿ ಹೊಸ ರಕ್ತದೊತ್ತಡ ಪ್ರಕರಣ ಪತ್ತೆ

45 ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಶಿಬಿರ

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗ ದಲ್ಲಿ ನಡೆದ ಶಿಬಿರಗಳಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಕಣ್ಣಿನ ತಪಾಸಣೆ, ಕುಷ್ಠರೋಗ, ರಕ್ತಹೀನತೆ, ಕ್ಷಯರೋಗ ಹಾಗೂ ಎಚ್‌ಐವಿ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು.

Mysuru Dasara 2026: ಬರದ ನಡುವೆ ಶಿಸ್ತುಬದ್ಧ ದಸರಾ ಆಚರಣೆಗೆ ತೀರ್ಮಾನ: ಸಿಎಂ

ಬರದ ನಡುವೆ ಶಿಸ್ತುಬದ್ಧ ಮೈಸೂರು ದಸರಾ ಆಚರಣೆಗೆ ತೀರ್ಮಾನ: ಸಿಎಂ

ಮೈಸೂರು ದಸರಾ ಜಂಬೂ ಸವಾರಿಗೆ ಹೊಸ ರೂಪ ನೀಡಲಾಗುತ್ತಿದೆ. ಯುವ ದಸರಾಗೂ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. 11 ದಿನಗಳ ಕಾರ್ಯಕ್ರಮಕ್ಕೆ 22 ಸಚಿವರ ನೇಮಕ ಮಾಡಲಾಗಿದೆ. ಒಂದು ದಿನಕ್ಕೆ ಇಬ್ಬರು ಸಚಿವರು ಉಸ್ತುವಾರಿ ವಹಿಸುತ್ತಾರೆ. ಎಲ್ಲರ ಸಲಹೆ ಪಡೆದು ಯಶಸ್ವಿಯಾಗಿ ದಸರಾ ಮಹೋತ್ಸವ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Mysuru Dasara 2026: ದಸರಾಗೆ ಹೊಸತನದ ಸ್ಪರ್ಶ ನೀಡಲು ಏರ್ ಶೋ, ಹೊರರಾಜ್ಯಗಳ ಕಲಾ ತಂಡಗಳ ಪ್ರದರ್ಶನಕ್ಕೂ ಅವಕಾಶ: ಸಿಎಂ

ದಸರಾದಲ್ಲಿ ಹೊರರಾಜ್ಯಗಳ ಕಲಾ ತಂಡಗಳ ಪ್ರದರ್ಶನಕ್ಕೂ ಅವಕಾಶ: ಸಿಎಂ

ತಮಿಳುನಾಡು, ಕೇರಳ ಸೇರಿದಂತೆ ನೆರೆ ರಾಜ್ಯಗಳಿಗೂ ತಮ್ಮದೇ ಆದ ಕಲೆ, ಸಂಸ್ಕೃತಿ ಹಾಗೂ ಪರಂಪರೆ ಇದೆ. ಅವುಗಳನ್ನೂ ದಸರಾ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶವಿದೆ. ನಾವು ಅವರಿಂದ ಕಲಿಯಬೇಕು. ಅವರು ನಮ್ಮಿಂದ ಕಲಿಯಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Dr Mallikarjuna Kharge: ಎಸ್‌ಐಆರ್‌ ವಿರುದ್ಧ ಕಾಂಗ್ರೆಸ್‌ ಹೋರಾಟ ತೀವ್ರ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆಗೆ ಖರ್ಗೆ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆಗೆ ಖರ್ಗೆ ಆಗ್ರಹ

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾರಂ-6 ಮತ್ತು ಫಾರಂ-7 ಮೂಲಕ ನಡೆಯುವ ಪ್ರಕ್ರಿಯೆ ಗಳನ್ನು ಚುನಾವಣಾ ಆಯೋಗ(Election Commision) ಸೂಕ್ತವಾಗಿ ಪರಿಶೀಲಿಸಬೇಕು. ಹೆಸರು ಕೈ ಬಿಡುವ ಮುನ್ನ ಸಂಬಂಧಪಟ್ಟವರಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಎಲ್ಲ ಹಂತದಲ್ಲೂ ನಿಯಮಬದ್ಧತೆ ಮತ್ತು ಪಾರದರ್ಶಕತೆ ಇರಬೇಕು ಎಂದು ಒತ್ತಾಯಿಸಿದರು.

N.H. Shivashankara Reddy: ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು: ಶಿವಶಂಕರರೆಡ್ಡಿ

ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು

ಅಸಹಕಾರ ಚಳುವಳಿ, ದಂಡಿ ಯಾತ್ರೆ ಹಾಗೂ ಕ್ವಿಟ್ ಇಂಡಿಯಾ ಚಳುವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಮತ್ತು ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಅವರ ಆದರ್ಶಗಳನ್ನು ಸ್ಮರಿಸುವುದಷ್ಟೇ ಅಲ್ಲದೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಬೆಂಗಳೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ದುರಂತ; ಲೈಟ್ ಕಂಬ ಬಿದ್ದು ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ದುರಂತ; ಲೈಟ್ ಕಂಬ ಬಿದ್ದು ಒಬ್ಬ ಸಾವು

Bengaluru News: ಬೆಂಗಳೂರು ನಗರದ ಮಾರತ್ತಹಳ್ಳಿಯ ಸಂಜಯನಗರದಲ್ಲಿ ಘಟನೆ ನಡೆದಿದೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಆರ್ಕೆಸ್ಟ್ರಾ ನೋಡುತ್ತಿದ್ದಾಗ ಹಳೆಯ ಲೈಟ್‌ ಕಂಬ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

Koratagere News: ಕೊರಟಗೆರೆ ತಾಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ

ಕೊರಟಗೆರೆ ತಾಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ

Koratagere News: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಅಂತರ್‌ಸಚಿವಾಲಯ ತಂಡ ಶನಿವಾರ ಕೊರಟಗೆರೆ ತಾಲೂಕಿಗೆ ಭೇಟಿ ನೀಡಿ, ಪರಶೀಲನೆ ನಡೆಸಿತು. ಈ ವೇಳೆ ತಾಲೂಕಿನ ಕಂಬದಹಳ್ಳಿ ಗ್ರಾಮದ ಸಮೀಪ ರೈತರು ಬೆಳೆದಂತಹ ಬೆಳೆ ವೀಕ್ಷಣೆ ಮಾಡಿದರು.

ಲಾಭದತ್ತ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ; ಸೆಪ್ಟೆಂಬರ್‌ನಲ್ಲಿ ಲಾಭ 1.96 ಕೋಟಿಗೆ ಏರಿಕೆ

ಲಾಭದತ್ತ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ

HD Kumaraswamy: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಉಕ್ಕು ವಲಯ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವತ್ತ ಕೇಂದ್ರ ಸರ್ಕಾರ ನಿರಂತರವಾಗಿ ಗಮನಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಇತ್ತೀಚಿನ ಕಾರ್ಯಕ್ಷಮತೆಯು ಒಂದು ಉತ್ತೇಜಕ ಬೆಳವಣಿಗೆಯಾಗಿದ್ದು, ಘಟಕವು ಸತತ ಮೂರು ತಿಂಗಳುಗಳ ಕಾಲ ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Shidlaghatta News: ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಕರ್ತವ್ಯ: ಶ್ರೀಕಾಂತ್

ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಕರ್ತವ್ಯ

ನಗರದ ಶ್ರೀ ಸರಸ್ವತಿ ಕಾರ್ಮೆಂಟ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿ ಹಾಗೂ ಶಾಸ್ತ್ರಿ ಅವರು ದೇಶಕ್ಕಾಗಿ ಸಲ್ಲಿಸಿದ ಸೇವೆ ಮತ್ತು ಮಾಡಿದ ತ್ಯಾಗವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ಆಲೂರಿನಲ್ಲೊಂದು ಆರೋಗ್ಯ ಜಗತ್ತು: ಚಿತ್ರಕೂಟ ಆಯುರ್ವೇದ

ಆಲೂರಿನಲ್ಲೊಂದು ಆರೋಗ್ಯ ಜಗತ್ತು: ಚಿತ್ರಕೂಟ ಆಯುರ್ವೇದ

Pravasi Prapancha: ಉಡುಪಿ ಜಿಲ್ಲೆಯ ಕರಾವಳಿ ಸೊಬಗನ್ನು ತನ್ನೊಳಗೆ ಹೊತ್ತಿರುವ ಕುಂದಾಪುರ, ಕೋಡಿ ಬೀಚ್, ಮರವಂತೆ ಬೀಚ್‌ ಸೇರಿದಂತೆ ಕಡಲತೀರಗಳಿಗೆ ಹೆಸರು ಮಾಡಿದೆ. ಅರಬ್ಬಿ ಸಮುದ್ರಕ್ಕೆ ಸಮೀಪದಲ್ಲಿರುವ ಈ ಪ್ರದೇಶವು ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರಿಗೆ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಹಾಲಾಡಿ, ಗಂಗೊಳ್ಳಿ, ತಲ್ಲೂರು ಮತ್ತು ಬಸ್ರೂರು ಪ್ರದೇಶಗಳು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ. ಆದರೆ, ಕುಂದಾಪುರದ ಆಲೂರಿನಲ್ಲಿರುವ ಚಿತ್ರಕೂಟ ಆಯುರ್ವೇದ ಆರೋಗ್ಯ ಕೇಂದ್ರಕ್ಕೆ ದೇಶ ವಿದೇಶಗಳಿಂದಲೂ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

Praja Seve: ಪದವೀಧರ ಕ್ಷೇತ್ರ ಚುನಾವಣೆ ಎಫೆಕ್ಟ್: ಪ್ರಜಾ ಸೇವೆಗೆ ತಾತ್ಕಾಲಿಕ ವಿರಾಮ

ಪದವೀಧರ ಕ್ಷೇತ್ರ ಚುನಾವಣೆ ಎಫೆಕ್ಟ್: ಪ್ರಜಾ ಸೇವೆಗೆ ತಾತ್ಕಾಲಿಕ ವಿರಾಮ

ವಿಶೇಷವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲುಗಳು, ಸರ್ವೆ ಇಲಾಖೆ, ಪೋಡಿ, ಪಹಣಿ ತಿದ್ದುಪಡಿ, ಜಮೀನು ಸರ್ವೆ, ರಸ್ತೆ ಒತ್ತುವರಿ ಸೇರಿದಂತೆ ಕಂದಾಯ ಮತ್ತು ಭೂ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸ್ತಾಪಿಸಿದ್ದರು. ಇದರ ಜೊತೆಗೆ ಕುಡಿಯುವ ನೀರು, ರಸ್ತೆ, ವಿದ್ಯುತ್, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆಯೂ ಅಹವಾಲುಗಳನ್ನು ಸಲ್ಲಿಸಲಾಗಿತ್ತು.

Loading...