ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Shakti Utsav: ಜಯನಗರದಲ್ಲಿ ಅ.11ರಿಂದ 'ಶಕ್ತಿ ಉತ್ಸವ': ರಾಜಕುಮಾರಿ ಕಾಮಾಕ್ಷಿ ದೇವಿ ಭಾಗಿ, ಉಚಿತ ಪ್ರವೇಶದೊಂದಿಗೆ ಡಿಜಿಟಲ್ ದಸರಾ ವೈಭವ!

ಅ.11ರಿಂದ 21ರವರೆಗೆ  ಪರಮ್‌ನ ಡಿಜಿಟಲ್ ದಸರಾ ಅನುಭವ

ದಸರಾ(Dasara) ಮಹೋತ್ಸವದ ಅಂಗವಾಗಿ ಭಾರತದ ಐತಿಹಾಸಿಕ ವೀರ-ಶೌರ್ಯದ ಕಥೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಉಣಬಡಿಸುವ ವಿನೂತನ ‘ಶಕ್ತಿ ಉತ್ಸವ’ (Shakti Utsav)  ನಗರದ ಜಯನಗರದಲ್ಲಿ ಅ.11ರಂದು ಆಯೋಜನೆಗೊಂಡಿದೆ. ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಪುತ್ರಿ ಮಹಾರಾಜಕುಮಾರಿ ಶ್ರೀಮತಿ ಕಾಮಾಕ್ಷಿ ದೇವಿ ಹಾಗೂ ಅವರ ಸೊಸೆ ಶ್ರೀಮತಿ ದರ್ಶಿಕಾ ಕುಮಾರಿ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ; ಕೆಲವು ಜಿಲ್ಲೆಗಳಲ್ಲಿ ಒಣಹವೆ

ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ; ಕೆಲವು ಜಿಲ್ಲೆಗಳಲ್ಲಿ ಒಣಹವೆ

ಶನಿವಾರ ರಾಜ್ಯಾದ್ಯಂತ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲ ಕಡೆ ಮಳೆಯಾಗಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಒಣಹವೆ ಕಾಯ್ದುಕೊಳ್ಳಲಿದೆ.

Dr Shalini Rajneesh Column: ಆಧುನಿಕ ಯುಗದ ದಸರಾ ಕಣ್ಮನ ಸೆಳೆಯುವ ವಿಶೇಷಗಳು

ಆಧುನಿಕ ಯುಗದ ದಸರಾ ಕಣ್ಮನ ಸೆಳೆಯುವ ವಿಶೇಷಗಳು

ದಸರೆಯ ವಿಶೇಷ ಕಾರ್ಯಕ್ರಮಗಳು ಜಂಬೂಸವಾರಿ ಮತ್ತು ಆಧುನಿಕ ಶೈಲಿಯ ಸ್ತಬ್ಧಚಿತ್ರಗಳು: ವಿಜಯದಶಮಿಯ ದಿನದಂದು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತ್ತದೆ.

ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ; 12 ಸಾವಿರ ಕಿ.ಮೀ. ದೂರದಿಂದ ರೋಬೋಟ್ ನಿಯಂತ್ರಿಸಿದ ವೈದ್ಯರು!

ಬಾರ್ಸಿಲೋನಾದಿಂದ ರಾಜ್ಯದ ಮಹಿಳೆಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ

ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು 12 ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಕೋಲಾರ ಜಿಲ್ಲೆಯ 26 ವರ್ಷದ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಮುಖ ವೈದ್ಯರಾದ ಡಾ. ಸುಧೀರ್ ಶ್ರೀವಾಸ್ತವ ಅವರು ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

Alva's Nudisiri-Virasat 2027: ಜ.6ರಿಂದ 10ರವರೆಗೆ ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ 2027: ಡಾ.ಎಂ. ಮೋಹನ ಆಳ್ವ

ಜನವರಿ 6ರಿಂದ 10ರವರೆಗೆ ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ

Alva's Nudisiri 2027: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗಳು ಈ ಬಾರಿ ಒಟ್ಟಿಗೆ ಜ.6ರಿಂದ 10ರ ತನಕ ನಡೆಯಲಿದೆ.

Udupi Uchila Dasara 2026: ಉಡುಪಿ ಉಚ್ಚಿಲ ದಸರಾ-2026: ಅ.11ರಿಂದ 21ರವರೆಗೆ ವೈಭವದ ಸಂಭ್ರಮ

ಉಡುಪಿ ಉಚ್ಚಿಲ ದಸರಾ-2026: ಅ.11ರಿಂದ 21ರವರೆಗೆ ವೈಭವದ ಸಂಭ್ರಮ

ಅ.11ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಉಚ್ಚಿಲ ದಸರಾ–2026ರ ಉದ್ಘಾಟನೆ ನಡೆಯಲಿದ್ದು, ಮುಜರಾಯಿ, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಉದ್ಘಾಟಿಸಲಿದ್ದಾರೆ. ಅ.12ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಮಹಿಳಾ ದಸರಾ ಉದ್ಘಾಟನೆ ನೆರವೇರಲಿದೆ.

Gauribidanur News: ಜಾನುವಾರುಗಳ ಆರೋಗ್ಯ, ಹಾಲಿನ ಉತ್ಪಾದನೆ ಹೆಚ್ಚಿಸಲು ಗುಣಮಟ್ಟದ ಮೇವು ಅಗತ್ಯ: ತಹಸೀಲ್ದಾರ್

ಜಾನುವಾರುಗಳ ಆರೋಗ್ಯ, ಹಾಲಿನ ಉತ್ಪಾದನೆ ಹೆಚ್ಚಿಸಲು ಗುಣಮಟ್ಟದ ಮೇವು ಅಗತ್ಯ

ನಗರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ರೈತರಿಗೆ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಹೈನುಗಾರಿಕೆ ಗ್ರಾಮೀಣ ರೈತರ ಪ್ರಮುಖ ಆದಾಯದ ಮೂಲವಾಗಿದ್ದು, ಮೇವಿನ ಕೊರತೆಯಾಗದಂತೆ ತಮ್ಮ ಜಮೀನುಗಳಲ್ಲಿ ಮೇವು ಬೆಳೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

MLA Pradeep Eshwar: ಒಕ್ಕಲಿಗರ ಬೆಂಬಲ ಮರೆತು ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ: ರಘುನಾಥ ರೆಡ್ಡಿ ಆಕ್ರೋಶ

ಒಕ್ಕಲಿಗರ ಬೆಂಬಲ ಮರೆತು ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ

ಶಾಸಕ ಪ್ರದೀಪ್ ಈಶ್ವರ್ ಅವರು ಒಕ್ಕಲಿಗ ಸಮುದಾಯದ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಮುನೇಗೌಡ ಅವರನ್ನು ತಮ್ಮೊಂದಿಗೆ ಇರಿಸಿಕೊಂಡು ಒಕ್ಕಲಿಗರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಮುದಾಯದ ಬೆಂಬಲ ಪಡೆದು ರಾಜಕೀಯವಾಗಿ ಬೆಳೆದವರು ಅದೇ ಸಮುದಾಯದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

Robotic Heart Surgery: ಬಾರ್ಸಿಲೋನಾದಿಂದ 12 ಸಾವಿರ ಕಿ.ಮೀ. ದೂರದ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ

ಕೋಲಾರದ ಬಡ ಮಹಿಳೆಗೆ ಮುದ್ದೇನಹಳ್ಳಿಯಲ್ಲಿ ಉಚಿತ ಚಿಕಿತ್ಸೆ

ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ (SMSIMSR) ಈ ಶಸ್ತ್ರಚಿಕಿತ್ಸೆ ನಡೆದಿದೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ತಜ್ಞ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೇ ದೂರದಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.

ಒಂದು ದಶಕದ ಯಶಸ್ವಿ ಪಯಣ ಪೂರೈಸಿದ ಇಕೋಗ್ರಾಮ್ ಯೋಜನೆ, 19,623 ಘನ ಮೀಟರ್‌ಗಳಷ್ಟು ಭೂಕುಸಿತ ಸ್ಥಳದ ಉಳಿವು

ಒಂದು ದಶಕದ ಯಶಸ್ವಿ ಪಯಣ ಪೂರೈಸಿದ ಇಕೋಗ್ರಾಮ್ ಯೋಜನೆ

ದಿ ಅನಾನಿಮಸ್ ಇಂಡಿಯನ್ ಚಾರಿಟೇಬಲ್ ಟ್ರಸ್ಟ್ (TAICT)ನ ಉಪಕ್ರಮವಾದ ಇಕೋಗ್ರಾಮ್ ಯೋಜನೆಯು ಉತ್ತರ ಬೆಂಗಳೂರಿನ ಬೆಟ್ಟಹಲಸೂರು ಗ್ರಾಮ ಪಂಚಾಯಿತಿಯೊಂದಿಗೆ ಸುಸ್ಥಿರ ತ್ಯಾಜ್ಯ, ನೀರು ಮತ್ತು ಮಣ್ಣಿನ ನಿರ್ವಹಣೆಗೆ ಪುನರಾವರ್ತಿಸಬಹುದಾದ ಮಾದರಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ದಶಕದ ಕಾರ್ಯವನ್ನು ಪೂರ್ಣಗೊಳಿಸಿದೆ. 2

Basket Ball: ಬ್ಯಾಸ್ಕೆಟ್‌ಬಾಲ್‌ನಲ್ಲಿ ಪ್ರಥಮ ಸ್ಥಾನ: ಸಿಎಂ ಕಪ್‌ಗೆ ಪಿನಾಕಿನಿ ಕ್ಲಬ್ ತಂಡ ಆಯ್ಕೆ

ಬ್ಯಾಸ್ಕೆಟ್‌ಬಾಲ್‌ನಲ್ಲಿ ಪ್ರಥಮ: ಸಿಎಂ ಕಪ್‌ಗೆ ಪಿನಾಕಿನಿ ಕ್ಲಬ್ ತಂಡ

ವಿಭಾಗದ ಎಂಟು ಜಿಲ್ಲೆಗಳ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದೆ. ವಿಜೇತ ಆಟಗಾರರು ತಂಡದ ಉಸ್ತುವಾರಿ ಸೈಗೈಸ್ ಸತೀಶ್ ಅವರೊಂದಿಗೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರನ್ನು ಭೇಟಿ ಮಾಡಿ, ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.

Prajwal Revanna Case: ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಶಿಫ್ಟ್?

ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಶಿಫ್ಟ್?

ಪರಪ್ಪನ ಅಗ್ರಹಾರ ಜೈಲಿನ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ನಡೆಸಿದ ಪರಿಶೀಲನೆ ವೇಳೆ ಸ್ಮಾರ್ಟ್‌ಫೋನ್, ಚಾರ್ಜರ್, ಸಿಮ್ ಕಾರ್ಡ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದನನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಎರಡು ಕೋಟಿ ರೂ. ವೆಚ್ಚದಲ್ಲಿ ‘ಲಿಪಿ ಮನೆ’ ನಿರ್ಮಾಣ ಪೂರ್ಣ: ಬ್ರಾಹ್ಮಿಯಿಂದ ಆಧುನಿಕ ಕನ್ನಡ ಲಿಪಿವರೆಗೆ ಸಾವಿರಾರು ವರ್ಷಗಳ ಪಯಣದ ಅನಾವರಣಕ್ಕೆ ಸಿದ್ಧತೆ

ಎರಡು ಕೋಟಿ ರೂ. ವೆಚ್ಚದಲ್ಲಿ ‘ಲಿಪಿ ಮನೆ’ ನಿರ್ಮಾಣ ಪೂರ್ಣ

ಶಾಲಾ ಮಕ್ಕಳಿಂದ ಹಿಡಿದು ಲಿಪಿ ತಜ್ಞರು, ಸಂಶೋಧಕರು ಹಾಗೂ ಇತಿಹಾಸಕ್ತರ ತನಕ ಎಲ್ಲರಿಗೂ ಲಿಪಿಗಳ ಇತಿಹಾಸವನ್ನು ಸುಲಭವಾಗಿ ಅರ್ಥೈಸುವ ಉದ್ದೇಶದಿಂದ ಈ ಕೇಂದ್ರವನ್ನು ರೂಪಿಸ ಲಾಗುತ್ತಿದೆ. ದೃಶ್ಯ ಹಾಗೂ ಬರಹದ ಮೂಲಕ ಲಿಪಿಗಳ ರಚನೆ, ಬೆಳವಣಿಗೆ ಮತ್ತು ಕಾಲಘಟ್ಟಕ್ಕೆ ಅನುಗುಣವಾಗಿ ಸಂಭವಿಸಿದ ಬದಲಾವಣೆಗಳನ್ನು ಪರಿಚಯಿಸುವುದು ಇದರ ಪ್ರಮುಖ ಉದ್ದೇಶ ವಾಗಿದೆ.

ಮೈಸೂರು ದಸರಾ ಚುಟುಕು ಕವಿಗೋಷ್ಠಿಗೆ ಶಿಕ್ಷಕ ಆರ್.ವಿ.ವಿನೋದ್ ಕುಮಾರ್ ಆಯ್ಕೆ

ಮೈಸೂರು ದಸರಾ ಚುಟುಕು ಕವಿಗೋಷ್ಠಿಗೆ ಆರ್.ವಿ.ವಿನೋದ್ ಕುಮಾರ್ ಆಯ್ಕೆ

ರಾಜ್ಯದ ಕವಿಗಳಿಂದ ಆಹ್ವಾನಿಸಲಾಗಿದ್ದ ಕವಿತೆಗಳನ್ನು ಅವುಗಳ ಪ್ರಬುದ್ಧತೆಯ ಆಧಾರದಲ್ಲಿ ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ವಿನೋದ್ ಕುಮಾರ್ ಅವರ ಚುಟುಕು ಹಾಗೂ ಹಾಸ್ಯ ಕವಿತೆಗಳು ಗೋಷ್ಠಿಗೆ ಆಯ್ಕೆಯಾಗಿವೆ. ಅ.13ರಂದು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಅವರು ಭಾಗವಹಿಸಲಿದ್ದಾರೆ.

ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ: ಡಾ. ಹನುಮಂತನಾಥ ಸ್ವಾಮೀಜಿ ಶ್ಲಾಘನೆ

ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ

Tumkur News: ಸರ್ಕಾರ ಮಾಡಬೇಕಾದ ಮದ್ಯವರ್ಜನ ಶಿಬಿರಗಳು ಹಾಗೂ ಸಮಾಜ ಸುಧಾರಣೆಯ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು, ಕುಡಿತ ಬಿಟ್ಟವರನ್ನು ಗೌರವಿಸುವ ಏಕೈಕ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಡಾ. ಹನುಮಂತನಾಥ ಸ್ವಾಮೀಜಿ ಶ್ಲಾಘಿಸಿದ್ದಾರೆ.

ಜಾಗತಿಕ ವಿಜ್ಞಾನಿಗಳ ಪಟ್ಟಿ: ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು, ಇಬ್ಬರು ಸಂಶೋಧನಾರ್ಥಿಗಳಿಗೆ ಸ್ಥಾನ

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿ ಪ್ರಾಧ್ಯಾಪಕರಿಗೆ ಸ್ಥಾನ

Tumkur University: ಅಮೆರಿಕದ ಪ್ರತಿಷ್ಠಿತ ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯರ್ ಸಂಸ್ಥೆ ಜಂಟಿಯಾಗಿ ಪ್ರಕಟಿಸಿರುವ 2026ನೇ ಸಾಲಿನ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ನಾಗಭೂಷಣ, ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಸುರೇಶ್ ಹಾಗೂ ಭೌತಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಾ. ರಾಧಾಕೃಷ್ಣ ಬಿ.ಆರ್., ಜೈವಿಕತಂತ್ರಜ್ಞಾನ ವಿಭಾಗದ ಸಂಶೋಧನಾರ್ಥಿ ಡಾ.ಕೆ. ಲಿಂಗರಾಜು ಆಯ್ಕೆಯಾಗಿದ್ದಾರೆ.

Mysuru Dasara vs Mahisha Dasara: ಮಹಿಷಾಸುರ ರಾಕ್ಷಸನೋ, ಬೌದ್ಧ ದೊರೆಯೋ? ದಸರಾ ಸಮೀಪಿಸುತ್ತಿದ್ದಂತೆ ಮತ್ತೆ ಆರಂಭವಾಯ್ತು ಚರ್ಚೆ: ಏನಿದು ವಿವಾದ?

ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭುಗಿಲೆದ್ದ ಮಹಿಷ ದಸರಾ ವಿವಾದ

Mahisha Dasara: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಆಚರಿಸಲಾಗುವ ಮಹಿಷ ದಸರಾಕ್ಕೆ ಈ ಬಾರಿ ಪೊಲೀಸರು ನಿಷೇದಾಜ್ಞೆ ಹೇರಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ ಮಹಿಷಾಸುರ ಒಬ್ಬ ದುಷ್ಟ ರಾಕ್ಷಸನಾಗಿದ್ದರೆ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಪ್ರಕಾರ ಆತ ಒಬ್ಬ ಪ್ರಜಾರಕ್ಷಕ ಬೌದ್ಧ ರಾಜನಾಗಿದ್ದ. ಮೈಸೂರು ದಸರಾ ಸಂದರ್ಭದಲ್ಲಿ ಪ್ರತಿ ಬಾರಿ ಚರ್ಚೆಗೆ ಕಾರಣವಾಗುವ ಮಹಿಷ ದಸರಾ ಆಚರಣೆ ಮತ್ತು ಅದರ ಸುತ್ತಲಿನ ವಿವಾದದ ಬಗ್ಗೆ ಮಾಹಿತಿ ಇಲ್ಲಿದೆ.

V Somanna: ವಿಧಾನ ಪರಿಷತ್ತಿನ ಎಲ್ಲಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ : ವಿ.ಸೋಮಣ್ಣ

ಪರಿಷತ್ತಿನ ಎಲ್ಲಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ

ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ರನ್ನು ಭೇಟಿ ಮಾಡಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುರೇಶ್ ಅವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ನಲವತ್ತು ವರ್ಷದಲ್ಲೇ ಕಂಡರಿಯದ ಭೀಕರ ಬರಗಾಲ ತಲ್ಲಣಗೊಳಿಸಿದೆ.

“ಮಹಿಳೆಯರಿಗಾಗಿ, ಮಹಿಳೆಯರಿಂದಲೇ” ಎಂಬ ಪರಿಕಲ್ಪನೆಯಡಿ ಮಹಿಳೆಯರಿಗಾಗಿ, ಮಹಿಳೆಯರಿಂದಲೇ ಕ್ಯಾನ್ಸರ್ ಆರೈಕೆ

ಮಹಿಳೆಯರಿಗಾಗಿ, ಮಹಿಳೆಯರಿಂದಲೇ ಕ್ಯಾನ್ಸರ್ ಆರೈಕೆ

ಸ್ತನ ಮತ್ತು ಸ್ತ್ರೀರೋಗ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ತಪಾಸಣೆ ಹಾಗೂ ಚಿಕಿತ್ಸೆಗಳು ಅತ್ಯಂತ ವೈಯಕ್ತಿಕವಾಗಿರುವುದರಿಂದ, ಅನೇಕ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಲು ಹಿಂಜರಿಯುತ್ತಾರೆ. ಈ ಹಿಂಜರಿಕೆಯೇ ಕೆಲವೊಮ್ಮೆ ವೈದ್ಯರನ್ನು ಸಂಪರ್ಕಿಸುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು.

ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ; ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಸಸ್ಪೆಂಡ್‌

ನಿರ್ಲಕ್ಷ್ಯ ತೋರಿದ ಅಧಿಕಾರಿ ಸಸ್ಪೆಂಡ್‌ ಮಾಡಿದ ಡಿಸಿಎಂ ಪರಮೇಶ್ವರ್‌

ದೇವನಹಳ್ಳಿ ತಹಸೀಲ್ದಾರ್ ಕಚೇರಿಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ್ದೇನೆ. ಈ ವೇಳೆ ಕೆಲವು ನ್ಯೂನತೆಗಳು ಕಂಡುಬಂದಿದೆ. ವಿಶೇಷವಾಗಿ ರೆಕಾರ್ಡ್ ರೂಮ್‌ನಲ್ಲಿ ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಹಾಗೂ ದತ್ತಾಂಶಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ್‌ ಹೇಳಿದ್ದಾರೆ.

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್‌ರನ್ನು ಗೌರವಿಸಿದ ಕರ್ನಾಟಕ ಸಂಘ ಕತಾರ್

ಗೇಬ್ರಿಯಲ್ ಶರತ್‌ರನ್ನು ಗೌರವಿಸಿದ ಕರ್ನಾಟಕ ಸಂಘ ಕತಾರ್

ಮಂಗಳೂರಿನ ಸಾಹಸಿ ಸೋಲೋ ವಿಶ್ವ ಪ್ರವಾಸಿಗ ಹಾಗೂ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್ ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಾಪ್ತಾಹಿಕ ಬುಧವಾರದ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.

ಇದು ಟ್ರ್ಯಾಪ್ ಸರ್ಕಾರ, ಹಾಯ್-ಹಲೋ ಪಿತಾಮಹ ಯಾರು ಅಂತ ಜಗತ್ತೇ ನೋಡಿದೆ: ನಿಖಿಲ್ ಕುಮಾರಸ್ವಾಮಿ ಕಿಡಿ

ಹಾಯ್-ಹಲೋ ಪಿತಾಮಹ ಯಾರು ಅಂತ ಜಗತ್ತೇ ನೋಡಿದೆ: ನಿಖಿಲ್

Sting operation: ಸ್ಟಿಂಗ್ ಆಪರೇಷನ್ ಮತ್ತು ಟ್ರ್ಯಾಪ್ ರಾಜಕಾರಣದ ಬಗ್ಗೆ ನೆಲಮಂಗಲದಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯಲ್ಲಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ನೀವು ನ್ಯಾಯಯುತವಾಗಿ ಬದುಕಿದ್ದರೆ ಕ್ಯಾಮೆರಾ ಯಾರು ಬಂದು ಹಿಡಿದು ನಿಮ್ಮನ್ನ ಸ್ಟಿಂಗ್ ಆಪರೇಷನ್ ಮಾಡ್ತಾರೆ ಸ್ವಾಮಿ? ಅಂದರೆ ನಿಮ್ಮ ಸಚಿವರಲ್ಲಿ ಪ್ರಾಮಾಣಿಕತೆ ಇಲ್ವಾ? ರಾಜ್ಯದ ಮುಖ್ಯಮಂತ್ರಿಗಳು ನೀವು, ಇಂಟೆಲಿಜೆನ್ಸ್ ನಿಮ್ಮ ಅಂಗಳದಲ್ಲಿದೆ ಎಂದು ಮುಖ್ಯಮಂತ್ರಿಗಳ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿನಯ್‌ ಕುಲಕರ್ಣಿಗೆ ತುಸು ರಿಲೀಫ್‌ ನೀಡಿದ ಸುಪ್ರೀಂ ಕೋರ್ಟ್‌; ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಅ.27ಕ್ಕೆ ಮುಂದೂಡಿಕೆ

ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌ ನೀಡಿದ ಸುಪ್ರೀಂ ಕೋರ್ಟ್‌

Yogesh Gowda Murder Case: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ಗೆ ಅಕ್ಟೋಬರ್ 27 ಕ್ಕೆ ವಿಚಾರಣೆ ಮುಂದೂಡಿದೆ.

Dharwad Accident: ಧಾರವಾಡದಲ್ಲಿ ಭೀಕರ ಅಪಘಾತ; ಕ್ಯಾಂಟರ್‌-ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರ ಸಾವು!

ಧಾರವಾಡದಲ್ಲಿ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಬಳಿ ಭೀಕರ ಅಪಘಾತ ನಡೆದಿದೆ. ಕಾರು ಮತ್ತು ಕ್ಯಾಂಟರ್‌ ನಡುವೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Loading...