ಅದ್ಧೂರಿಯಾಗಿ ನಡೆದ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ
Kurugodu News: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವವು ಮಂಗಳವಾರ ಮಧ್ಯಾಹ್ನ 1 ಗಂಟೆ 40 ನಿಮಿಷಕ್ಕೆ ಭಕ್ತಿ ಭಾವದಿಂದ ಜರುಗಿತು. ರಥೋತ್ಸವವು ಜಾತ್ರೆಯೂ ಗ್ರಹಣದ ಹಿನ್ನೆಲೆ ಸಮಯಕ್ಕೂ ಮುನ್ನವೇ ನೆರವೇರಿತು
ಶೃಂಗೇರಿ ಕ್ಷೇತ್ರದ ರೈತರ ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ಚರ್ಚಿಸಲು ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿದ್ದು, ಈ ವೇಳೆ ನಮ್ಮ ಕುಟುಂಬಕ್ಕೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಜೀವರಾಜ್ ವಿರುದ್ಧ ಆರೋಪಿಸಿದ್ದಾರೆ.
ಇವಿ ಸ್ಕೂಟರ್ ನೀಡುವ ನೆಪದಲ್ಲಿ ಗ್ರಾಹಕರಿಂದ ಆಧಾರ್, ಪಾನ್ ಕಾರ್ಡ್ ಪಡೆದ ಶೋರೂಂ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಲೋನ್ ಮಾಡಿಸಿದ್ದಾರೆ. ಕೇವಲ 35,000 ರೂ. ಬೆಲೆಬಾಳುವ ಸಾಧಾರಣ ಇವಿ ಸ್ಕೂಟರ್ಗೆ 1.50 ಲಕ್ಷ ರೂಪಾಯಿ ಲೋನ್ ಮಾಡಿಸಿ ಬ್ಯಾಂಕ್ನಿಂದ ಹಣ ಪಡೆದುಕೊಳ್ಳಲಾಗಿದೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ.
ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ಧಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Haveri News: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸಮೀಪದ ಕಜ್ಜರಿ ಪ್ಲಾಟ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗೊರಗುಂಟೆಪಾಳ್ಯ ಜಂಕ್ಷನ್ ವಾಯುವ್ಯ ಬೆಂಗಳೂರಿನ ಪ್ರಮುಖ ಸಂಚಾರ ಕೇಂದ್ರವಾಗಿದ್ದು, ತುಮಕೂರು ರಸ್ತೆ, ಹೊರ ವರ್ತುಲ ರಸ್ತೆ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಮತ್ತು ವಸತಿ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಪೀಕ್ ಅವಧಿಯಲ್ಲಿ ಇಲ್ಲಿ ಸಂಚಾರ ನಿಧಾನಗೊಳ್ಳುವುದು, ಸಿಗ್ನಲ್ಗಳಲ್ಲಿ ದೀರ್ಘ ಸಾಲುಗಳು ನಿರ್ಮಾಣವಾಗುವುದು ಸಾಮಾನ್ಯ ದೃಶ್ಯವಾಗಿದೆ.
Bescom Helpline: ವಿದ್ಯುತ್ ಪೂರೈಕೆ ಸೇರಿದಂತೆ ವಿದ್ಯುತ್ ಸಂಬಂಧಿತ ದೂರುಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ ಸಂಬಂಧಿಸಿದಂತೆ 11 ʼವಾಟ್ಸ್ ಆ್ಯಪ್ʼ ಸಹಾಯವಾಣಿ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಸ್ಕಾಂ ತಿಳಿಸಿದೆ.
ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
KA-01-ಎಂಎಫ್-2883 ನಂಬರ್ನ ಕಾರು ಓಡಿಸುತ್ತಿದ್ದ ವ್ಯಕ್ತಿಯೇ ಕೊಲೆಗಾರ. ಆತ ಅತಿ ವೇಗವಾಗಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಕಾರು ಚಾಲಕ ಸ್ಬಲ್ಪ ದೂರು ಹೋಗಿ ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಶಿಬಿರದಲ್ಲಿ 558 ವಿಕಲಚೇತನರು ಭಾಗವಹಿಸಿದ್ದು, ಸುಮಾರು 602 ಕೃತಕ ಕಾಲುಗಳು ಮತ್ತು ಕ್ಯಾಲಿಪರ್ ಗಳನ್ನು ಉಚಿತವಾಗಿ ಅಳವಡಿಸಲಾಯಿತು. ಇದರಲ್ಲಿ ಮೇಲ್ಭಾಗದ ಅಂಗಗಳು, ಕೆಳಭಾಗದ ಅಂಗಗಳು, ಬಹು ಅಂಗಗಳು ಮತ್ತು ಕ್ಯಾಲಿಪರ್ ಗಳನ್ನು ಒದಗಿಸ ಲಾಗಿದ್ದು, ಎಲ್ಲಾ ವಯೋಮಾನದ ಫಲಾನುಭವಿಗಳಿಗೆ, ವಿಶೇಷವಾಗಿ ಯುವಪೀಳಿಗೆಯ ಮಂದಿಗೆ ಗುಣಮಟ್ಟದ ಜೀವನ ಸಾಗಿಸಲು ಮತ್ತು ಸ್ವತಂತ್ರ ಜೀವನದತ್ತ ಆತ್ಮವಿಶ್ವಾಸದ ಹೆಜ್ಜೆ ಇಡಲು ಸಹಾಯ ಮಾಡಿತು
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ಕಳೆದ ಕೆಲ ದಿನಗಳಿಂದ ಪ್ರತ್ಯೇಕ ಚರ್ಚೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಈ ಪ್ರಸ್ತಾಪವೊಂದು ಈಗಾಗಲೇ ಸಲ್ಲಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂ. ಹೆಚ್ಚುವರಿ ಮಾರಾಟ ತೆರಿಗೆ ವಿಧಿಸುವುದರಿಂದ ತಕ್ಕಮಟ್ಟಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ವೇಗ ನೀಡಬಹುದೆಂದು ಚರ್ಚಿಸಲಾಗುತ್ತಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮೂವರನ್ನು ರಕ್ಷಿಸಿದ್ದಾರೆ. ಸುಟ್ಟಗಾಯಗಳಿಂದ ಮಹಿಳೆ ಮೃತಪಟ್ಟಿದ್ದಾರೆ. ಉಳಿದ ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.
ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದ್ದರು. ಇದೀಗ ಎರಡನೇ ವಿಮಾನದಲ್ಲಿ ದಾಖಲೆ ಸಂಖ್ಯೆಯ 490 ಜನರು ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಭಾವನಾತ್ಮಕ ಕ್ಷಣಗಳು ಕಂಡುಬಂದವು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳಾದ ತೇಜಸ್ವಿನಿ 20ನೇ ವಯಸ್ಸಿನಲ್ಲೇ ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದಳು. ಒಂದು ಮಗು ಆದ ಬಳಿಕ ಕುಟುಂಬ ಕಲಹ ಉಂಟಾಗಿ ಆತನನ್ನು ದೂರ ಮಾಡಿ ಮತ್ತೊಬ್ಬನ ಜೊತೆ ಓಡಿ ಹೋಗಿ ಮದ್ವೆಯಾಗಿದ್ದಳು. ಆತನಿಂದಲೂ ಒಂದು ಮಗುವಾದ ಬಳಿಕ ಆತನಿಂದಲೂ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಇದೇ ಸಂದರ್ಭದಲ್ಲಿ ಸಂದೀಪ್ ಎನ್ನುವ ಯುವಕನೊಂದಿಗೆ ಲಿವಿಂಗ್ ರಿಲೇಶನ್ ಶಿಪ್ನಲ್ಲಿದ್ದಳು.
ಮೆರವಣಿಗೆಯ ವೇಳೆ ತಮಟೆ ತಾಳಕ್ಕೆ ಕರಗದ ಪೂಜಾರಿ ಶಿವರಾಜ್ ಅವರು ಹೆಜ್ಜೆ ಹಾಕಿ ಸಾಂಪ್ರದಾ ಯಿಕ ನೃತ್ಯ ಪ್ರದರ್ಶಿಸಿದರು. ಡೊಳ್ಳು, ತಾಳ, ನಾದಸ್ವರಗಳ ಘೋಷದಲ್ಲಿ ಅವರ ಚುರುಕು ನೃತ್ಯ ಭಕ್ತರ ಮನ ಗೆದ್ದಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಸಾರ್ವಜನಿಕರು ಹೂವಿನ ಸುರಿಮಳೆಯ ಮೂಲಕ ಭಕ್ತಿಯಿಂದ ಸ್ವಾಗತಿಸಿದರು