ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸುರಕ್ಷಿತ ಬಚ್ಪನ್’ ಅಭಿಯಾನದಡಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ಮಕ್ಕಳ ಸುರಕ್ಷತೆಗೆ ಪೋಕ್ಸೊ ಕಾಯ್ದೆ ಅರಿವು ಅಗತ್ಯ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ, ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪೋಕ್ಸೊ ಕಾಯ್ದೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರದ ಪಿ.ಪಿ.ಎಚ್.ಎಸ್. ಶಾಲೆಯಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಕೀಲರ ಸಂಘ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ‘ಸುರಕ್ಷಿತ ಬಚ್ಪನ್’ ಅಭಿಯಾನದಡಿ ಕಾರ್ಯಕ್ರಮ ನಡೆಯಿತು.

Hasirumakki Bridge: ದೀಪಾವಳಿಗೂ ಹುಸಿಯಾದ ಹಸಿರುಮಕ್ಕಿ ಸೇತುವೆ ಉದ್ಘಾಟನೆ !

ದೀಪಾವಳಿಗೂ ಹುಸಿಯಾದ ಹಸಿರುಮಕ್ಕಿ ಸೇತುವೆ ಉದ್ಘಾಟನೆ !

ಈ ನಡುವೆ ಸೇತುವೆ ಕಾಮಗಾರಿ ವಿಳಂಬಕ್ಕೆ ಹಿಂದಿನ ಅವಧಿಯ ಶಾಸಕರೇ ಕಾರಣ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿ ಬಿಜೆಪಿ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ದ ಆರೋಪ ಮಾಡಿದ್ದ ಶಾಸಕ ಬೇಳೂರರ ಹೇಳಿಕೆ ಚರ್ಚೆಯ ವಿಷಯವಾಗಿತ್ತು. ಇದರ ವಿರುದ್ದ ಸ್ಪಷ್ಟನೆಗೆ ಮುಂದಾಗಿರುವ ಹಾಲಪ್ಪ, ಸ್ವತ: ಸದನದಲ್ಲಿ ಕಾಂಗ್ರೆಸ್ ಸರಕಾರದ ಪರವಾಗಿ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅಧಿಕೃತವಾಗಿ ನೀಡಿರುವ ಲಿಖಿತ ಸ್ಪಷ್ಟನೆಯನ್ನು ಪಡೆದು ಜನರ ಮುಂದಿಟ್ಟಿದ್ದಾರೆ.

Today is First Responders Day: ಪ್ರಾಣವನ್ನೇ ಪಣಕ್ಕಿಟ್ಟು ಜೀವ ಕಾಯುವ ಧೀರರು

ಪ್ರಾಣವನ್ನೇ ಪಣಕ್ಕಿಟ್ಟು ಜೀವ ಕಾಯುವ ಧೀರರು

ಈ ಪ್ರಥಮ ಪ್ರತಿಕ್ರಿಯಾಶೀಲರ ಪಡೆ ಕೇವಲ ಒಬ್ಬಿಬ್ಬರಿಗೆ ಸೀಮಿತವಾಗಿಲ್ಲ. ಬೆಂಕಿಯ ಜ್ವಾಲೆಯ ನಡುವೆಯೂ ಕಟ್ಟಡ ಹೊಕ್ಕು ಜೀವ ರಕ್ಷಿಸುವ ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆ ತಲುಪುವ ಮುನ್ನವೇ ಆಂಬ್ಯುಲೆನ್ಸ್‌ನಲ್ಲೇ ರೋಗಿಯ ಉಸಿರು ಕಾಯುವ ವೈದ್ಯಕೀಯ ತುರ್ತು ಸಿಬ್ಬಂದಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ಹಾಗೂ ಹಿನ್ನೆಲೆಯಲ್ಲಿ ನಿಂತು 112 ಅಥವಾ 108 ನಂಬರ್ ಮೂಲಕ ಕರೆ ಸ್ವೀಕರಿಸಿ ಕ್ಷಣಾರ್ಧದಲ್ಲಿ ಸೂಕ್ತ ರಕ್ಷಣಾ ತಂಡವನ್ನು ರವಾನಿಸುವ ಕಂಟ್ರೋಲ್ ರೂಮ್ ನಿರ್ವಾಹಕರು ಈ ಪಡೆಯ ಬೆನ್ನೆಲುಬಾಗಿದ್ದಾರೆ.

Lokayukta Raid: ನಿವೃತ್ತ ಮುಖ್ಯ ಶಿಕ್ಷಕರಿಂದ ಹಣ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸೂಪರಿಂಟೆಂಡೆಂಟ್

₹5 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಅಧಿಕಾರಿ

ಸವದತ್ತಿ ನಗರದ ನಿವೃತ್ತ ಮುಖ್ಯ ಶಿಕ್ಷಕ ವಿಶಾಲ ಬೆಟ್ಟದ ಅವರು ತಾಲೂಕಿನ ಸಿಂಗಾರಗೊಪ್ಪ ಶಾಲೆ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ತಮ್ಮ ಗಳಿಕೆ ರಜೆ ನಗದೀಕರಣ (ಲೀವ್ ಸರಂಡರ್) ಪ್ರಕ್ರಿಯೆಗಾಗಿ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಚೇರಿಯ ಸೂಪರಿಂಟೆಂಡೆಂಟ್ ವಿಠ್ಠಲ ರಾವೂಳ ಅವರು ₹5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ನವೆಂಬರ್‌ 15ರಂದು ಮೆಟ್ರೋ ಪಿಂಕ್‌ ಲೈನ್‌ ಉದ್ಘಾಟನೆ; ದೇಶದ 2ನೇ ಅತೀ ದೊಡ್ಡ ಮೆಟ್ರೋ ಜಾಲವಾಗಲು ಬೆಂಗಳೂರು ಸಜ್ಜು

ನವೆಂಬರ್‌ 15ರಂದು ಮೆಟ್ರೋ ಪಿಂಕ್‌ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ

Bengaluru Metro's Pink Line: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಹೊರಬಿದ್ದಿದೆ. ಬಹು ನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್‌ 15ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಅವರು ನಮ್ಮ ಮೆಟ್ರೋದ ಪಿಂಕ್ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

Ayudh Pooja: ಪೌರಕಾರ್ಮಿಕರಿಂದ ಶ್ರದ್ಧಾಭಕ್ತಿಯ ಆಯುಧ ಪೂಜೆ

ಪೌರಕಾರ್ಮಿಕರಿಂದ ಶ್ರದ್ಧಾಭಕ್ತಿಯ ಆಯುಧ ಪೂಜೆ

ನಗರಸಭೆಯ 50ಕ್ಕೂ ಹೆಚ್ಚು ವಾಹನಗಳನ್ನು ಸ್ವಚ್ಛಗೊಳಿಸಿ, ಹೂಗಳಿಂದ ಅಲಂಕರಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ನಗರಸಭೆ ಆಯುಕ್ತ ಮನ್ಸೂರ್ ಅಲಿ ಖಾನ್ ಹಾಗೂ ಉಮಾಶಂಕರ್ ಅವರ ಉಪಸ್ಥಿತಿಯಲ್ಲಿ ನಡೆದ ಪೂಜೆಯಲ್ಲಿ ಪೌರಕಾರ್ಮಿಕರು, ವಾಹನ ಚಾಲಕರು ಮತ್ತು ನಗರಸಭೆ ಸಿಬ್ಬಂದಿ ಹೊಸ ಉಡುಪು ಧರಿಸಿ ಪಾಲ್ಗೊಂಡರು.

K M Suresh: ಕೆ.ಎಂ.ಸುರೇಶ್ ಗೆಲುವು: ಬಿಜೆಪಿ–ಜೆಡಿಎಸ್ ವಿಜಯೋತ್ಸವ

ಕೆ.ಎಂ.ಸುರೇಶ್ ಗೆಲುವು: ಬಿಜೆಪಿ–ಜೆಡಿಎಸ್ ವಿಜಯೋತ್ಸವ

ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿರುವುದು ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಿದೆ. ಮೈತ್ರಿಕೂಟದ ಮೇಲೆ ವಿಶ್ವಾಸವಿಟ್ಟು ಕೆ.ಎಂ. ಸುರೇಶ್ ಅವರಿಗೆ ಬೆಂಬಲ ನೀಡಿದ ಪದವೀಧರ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: 10 ದಿನಗಳಲ್ಲಿ ಪರಿಹಾರಕ್ಕೆ ಸೂಚನೆ

48 ಹಾಸ್ಟೆಲ್‌ಗಳಲ್ಲಿ ನೀರಿನ ಅಭಾವ; 44ಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಜಿಲ್ಲೆಯ 154 ಹಾಸ್ಟೆಲ್‌ಗಳಲ್ಲಿ ಪರಿಶೀಲನೆ ನಡೆಸಿದಾಗ 48 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಅಭಾವ ಇರುವುದು ಕಂಡುಬಂದಿದೆ. ಈ ಪೈಕಿ 44 ಹಾಸ್ಟೆಲ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ತಾಲೂಕುವಾರು ಅಂಕಿಅಂಶಗಳ ಪ್ರಕಾರ ಚಿಂತಾಮಣಿ ತಾಲೂಕಿನಲ್ಲಿ 23 ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 11 ಹಾಸ್ಟೆಲ್‌ಗಳು ನೀರಿನ ಸಮಸ್ಯೆಯಿಂದ ಹೆಚ್ಚು ಬಾಧಿತವಾಗಿವೆ.

31 ಲಕ್ಷ ಬೋಗಸ್‌ ಮತದಾರರ ಗುರುತಿನ ಚೀಟಿ ಮುದ್ರಣ, ಸರ್ಕಾರದಿಂದ 20 ಕೋಟಿ ರೂಪಾಯಿ ಬೃಹತ್ ಹಗರಣ:  ಆರ್. ಅಶೋಕ ಗಂಭೀರ ಆರೋಪ

ರಾಜ್ಯ ಸರ್ಕಾರದಿಂದ ಬೃಹತ್ ಹಗರಣ ನಡೆದಿದೆ ಎಂದ ಆರ್‌. ಅಶೋಕ

MLC Election Results 2026: ರಾಜ್ಯದ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಜಯ ದಾಖಲಿಸಿದೆ. ಕಾಂಗ್ರೆಸ್‌ಗೆ ಭಾ ರಿ ಮುಖಭಂಗವಾಗಿದ್ದು, ಇದೀಗ ಬಿಜೆಪಿ ನಾಯಕ ಆರ್‌. ಅಶೋಕ 20 ಕೋಟಿ ರೂ. ಹಗರಣ ನಡೆದಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ನಿಮ್ಹಾನ್ಸ್, ಎನ್.ಸಿ.ಬಿ.ಎಸ್. ಮತ್ತು ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್‌ನಿಂದ 'ಮನೋತ್ಸವ'ದ 3ನೇ ಆವೃತ್ತಿ ಘೋಷಣೆ

'ಮನೋತ್ಸವ'ದ 3ನೇ ಆವೃತ್ತಿ ಘೋಷಣೆ

ಈ ಉತ್ಸವದ ಪ್ರಮುಖ ವಕ್ತಾರರಲ್ಲಿ ನಟ ಅನಿಲ್ ಕಪೂರ್, ನರವಿಜ್ಞಾನಿ ಡಾ. ಸೋಫಿ ಸ್ಕಾಟ್, ಹಾಸ್ಯನಟರಾದ ಪ್ರಶಸ್ತಿ ಸಿಂಗ್ ಮತ್ತು ಸೋನು ವೇಣುಗೋಪಾಲ್, ಡಾ. ಶ್ಯಾಮ್ ಭಟ್, ಡಾ. ದೇವಿ ಪ್ರಸಾದ್ ಶೆಟ್ಟಿ, ಪರೋಮಿತಾ ವೋಹ್ರಾ, ಡಾ. ಪ್ರಭಾ ಚಂದ್ರ ಮತ್ತು ರೋಹಿಣಿ ನಿಕೇಲನಿ ಸೇರಿದ್ದಾರೆ.

ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎಗೆ ಭರ್ಜರಿ ಜಯ: ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪಷ್ಟ ಸಂದೇಶ ಎಂದ ಆರ್. ಅಶೋಕ್

ವಿಧಾನ ಪರಿಷತ್‌ ಕ್ಷೇತ್ರಗಳಲ್ಲಿ ಎನ್‌ಡಿಎಗೆ ಜಯ; ಅಶೋಕ್‌ ರಿಯಾಕ್ಷನ್‌

MLC Election Results: ಕರ್ನಾಟಕ ವಿಧಾನ ಪರಿಷತ್‍ಗೆ ನಡೆದ ನಾಲ್ಕೂ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಸಾಧಿಸಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ಗೆಲುವಿನ ಸ್ಪಷ್ಟ ಸಂದೇಶ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು: ಪೋಸ್ಟ್ ಮೂಲಕ ಡಿಕೆ ಶಿವಕುಮಾರ್‌ಗೆ ಬಿಜೆಪಿ ಟಾಂಗ್

ಕಾಂಗ್ರೆಸ್‌ಗೆ ಸೋಲು: ಡಿಕೆ ಶಿವಕುಮಾರ್‌ಗೆ ಬಿಜೆಪಿ ಟಾಂಗ್

BJP Targets DKS: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ ಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಟೀಕಿಸಿದೆ. “ಡಿಕೆ, ಕೆಲಸ ಮುಗಿದಿದೆ ಬ್ರದರ್” ಎಂದು ಬಿಜೆಪಿ ಕರ್ನಾಟಕ ಘಟಕವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಅಕ್ಟೋಬರ್ 23ರಂದು ನಡೆದ ಚುನಾವಣೆಯಲ್ಲಿ ನಾಲ್ಕು ವಿಧಾನ ಪರಿಷತ್‌ (ಎಂಎಲ್‌ಸಿ) ಸ್ಥಾನಗಳಿಗೆ ಮತದಾನ ನಡೆದಿತ್ತು.

ಬ್ಯಾಲೆಟ್‌ ಬಂದರೂ ಲಕ್‌ ಬದಲಾಗಿಲ್ಲ; ದೇಶಾದ್ಯಂತ 28 ಎಂಎಲ್‌ಸಿ ಕ್ಷೇತ್ರಗಳಲ್ಲಿ ಸೋತ ಕಾಂಗ್ರೆಸ್‌ಗೆ ಪ್ರಲ್ಹಾದ ಜೋಶಿ ವ್ಯಂಗ್ಯ

ಬ್ಯಾಲೆಟ್‌ ಬಂದರೂ ಲಕ್‌ ಬದಲಾಗಿಲ್ಲ: ಪ್ರಲ್ಹಾದ ಜೋಶಿ

Pralhad Joshi: ಕಾಂಗ್ರೆಸ್‌ನ ವೋಟ್ ಚೋರಿ, SIR ಆರೋಪದ ನಡುವೆಯೂ ದೇಶದೆಲ್ಲೆಡೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 28 ಸ್ಥಾನಗಳಲ್ಲಿಯೂ ಕಾಂಗ್ರೆಸ್‌ ಸೋತಿದ್ದು, ಬಿಜೆಪಿ ಜಯಭೇರಿ ಭಾರಿಸಿದೆ. ಈ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ದಿಟ್ಟಂ ಬದಲಾವಣೆಗೆ ವಿರೋಧ

ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ದಿಟ್ಟಂ ಬದಲಾವಣೆಗೆ ವಿರೋಧ

ಪ್ರತ್ಯೇಕ ಸಂಕಲ್ಪಕ್ಕಾಗಿ ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಮಾಡುತ್ತಿದ್ದಾಗ ಉಂಟಾಗುತ್ತಿದ್ದ ನೂಕು ನುಗ್ಗಲು, ತೊಂದರೆ ತಪ್ಪಿಸಲು ದೂರುಗಳು ಇದ್ದ ಕಾರಣ ಅದನ್ನಾಧರಿಸಿ ಸಾಮೂಹಿಕ ಸಂಕಲ್ಪದ ನಿರ್ಧಾರ ವನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಕೈಗೊಂಡಿದೆ. ಅದರಂತೆ ಪ್ರಸ್ತುತ ಆಶ್ಲೇಷ ಬಲಿ ಪೂಜೆ ನಡೆಯುವ ಸ್ಥಳದ ಸಾಮೂಹಿಕ ಸಂಕಲ್ಪ ಮಾಡಲಾಗುತ್ತಿದೆ.

ವಿಧಾನ ಪರಿಷತ್ ಚುನಾವಣೆ ಫಲಿತಾಂಶ 130 ಕ್ಷೇತ್ರದ ಮತದಾರರು ಕೊಟ್ಟಿರುವ ತೀರ್ಪು: ಕಾಂಗ್ರೆಸ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಾಂಗ್‌

ಬಿಜೆಪಿಗೆ ಉತ್ತಮ ದಿನ ಶುರು: ಬಿ.ವೈ. ವಿಜಯೇಂದ್ರ

B.Y. Vijayendra: ಬಿಜೆಪಿಗೆ ಒಳ್ಳೆಯ ದಿನಗಳು ಶುರುವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಸಂತಸ ಹಂಚಿಕೊಂಡರು.

ಪರಿಷತ್ ಚುನಾವಣೆ ಫಲಿತಾಂಶ, ಜನರ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತೇವೆ: ಸಿಎಂ ಡಿ ಕೆ ಶಿವಕುಮಾರ್

ಜನರ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

ಪರಿಷತ್ ಚುನಾವಣೆ ಸೋಲಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, "ಪರಿಷತ್ ಚುನಾವಣೆಯಲ್ಲಿ ಮತದಾರರು ಕೊಟ್ಟಿರುವ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸರಿಪಡಿಸಿಕೊಳ್ಳುತ್ತೇವೆ" ಎಂದು ತಿಳಿಸಿದರು. "ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಕೊಟ್ಟಿರುವ ತೀರ್ಮಾನವನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ.ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶವನ್ನು ಕೂಲಂಕುಷವಾಗಿ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

ಪುರಾತನ ಕಾಲದ ನಾಣ್ಯಗಳ ಕುಡಿಕೆ ಪತ್ತೆ

ಪುರಾತನ ಕಾಲದ ನಾಣ್ಯಗಳ ಕುಡಿಕೆ ಪತ್ತೆ

ಮಕ್ಕಳು ಆಟವಾಡುವಾಗ ನಡೆದ ಅಕಸ್ಮಿಕ ಘಟನೆಯೊಂದು ಐತಿಹಾಸಿಕ ನಿಧಿಯ ಶೋಧಕ್ಕೆ ಕಾರಣ ವಾಗಿದೆ. ಗೋಪನಹಳ್ಳಿ ಗ್ರಾಮದ ನಿವಾಸಿ ರಂಗಮ್ಮ ಎಂಬುವರ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿದೆ. ರಂಗಮ್ಮ ಅವರ ಮನೆಯಲ್ಲಿದ್ದ ಮಕ್ಕಳು ಆಮೆ ಆಟ ವಾಡುತ್ತಾ ಮನೆಯ ಅಂಗಳದಲ್ಲಿ ನೆಲವನ್ನು ಅಗೆಯುತ್ತಿದ್ದರು. ಈ ವೇಳೆ ಮಣ್ಣಿನ ಅಡಿಯಲ್ಲಿ ಸಣ್ಣ ಕುಡಿಕೆಯೊಂದು ಸಿಕ್ಕಿದೆ. ಕುಡಿಕೆಯನ್ನು ತೆಗೆದು ಪರಿಶೀಲಿಸಿದಾಗ ಅದರೊಳಗೆ ಪುರಾತನ ಕಾಲದ ನಾಣ್ಯಗಳು ಇರುವುದು ಕಂಡುಬಂದಿದೆ.

Athani News: ವಿಶಿಷ್ಠ ಸಂಪ್ರದಾಯಕ್ಕೆ ಸಾಕ್ಷಿಯಾದ ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ: 18 ವರ್ಷಗಳ ನಂತರ ಗುರು, ಶಿಷ್ಯರ ಸಮಾಗಮ

18 ವರ್ಷಗಳ ನಂತರ ಗುರು, ಶಿಷ್ಯರ ಸಮಾಗಮ

ಅಂದು ಶಾಲೆಗೆ ಬರುವಾಗ ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾಲಘಟ್ಟದಲ್ಲಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡು ತ್ತಿದ್ದೆವು. ಪಾಠ, ಪ್ರವಚನಗಳಿಗೆ ಮಾತ್ರ ಶಿಕ್ಷಕರು ಸೀಮಿತವಾಗದೆ ಮಕ್ಕಳಿಗೆ ಜೀವನದ ನಂದಾದೀಪವಾಗಿ ಬೆಳಗಬೇಕು. ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವ ಕಲೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ

ಎಪಿಎಸ್ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ: ಸೇಂಟ್ ಪಾಲ್ಸ್ ಕಾಲೇಜು ಚಾಂಪಿಯನ್, ಎನ್.ಆರ್ ಕಾಲೋನಿಯ ಎಪಿಎಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ರನ್ನರ್ಸ್-ಅಪ್

ಎಪಿಎಸ್ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ

ಅಂತಿಮ ಪಂದ್ಯ ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿ, ಅತ್ಯಂತ ರೋಚಕತೆಯಲ್ಲಿ ಮುಳುಗಿಸಿತು. ಅಂತಿಮವಾಗಿ ಸೇಂಟ್ ಪಾಲ್ಸ್ ಕಾಲೇಜು ಚಾಂಪಿಯನ್ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ ಎನ್.ಆರ್ ಕಾಲೋನಿಯ ಎಪಿಎಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ಬೀದಿ ನಾಯಿಗಳ ದಾಳಿಗೆ ಸೇಡಂ ಜನ ತತ್ತರ: ಒಂದೇ ದಿನ ನಾಲ್ವರ ಮೇಲೆ ದಾಳಿ; ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ದಾಖಲು

ಬೀದಿ ನಾಯಿಗಳ ದಾಳಿಗೆ ಸೇಡಂ ಜನ ತತ್ತರ

ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಒಂದೇ ದಿನ ನಾಲ್ವರು ಪಾದಚಾರಿಗಳ ಮೇಲೆ ನಾಯಿ ದಾಳಿ ನಡೆಸಿದ ಘಟನೆ ಪಟ್ಟಣದ ವೆಂಕಟೇಶ ನಗರದಲ್ಲಿ ನಡೆದಿದೆ. ರಸ್ತೆಯಲ್ಲಿ ತೆರಳುತ್ತಿದ್ದ ನಾಲ್ವರು ಪಾದಚಾರಿಗಳ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಕಣ್ಣು, ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸೇಡಂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Adventurous journey by four youths: ತಾಲೂಕಿನ ದೇರಳಕಟ್ಟೆಯ ನಾಲ್ವರು ಯುವಕರ ಸಾಹಸಿ ಪ್ರವಾಸಗಾಥೆ: ಆಟೋದಲ್ಲೇ ಕಾಶ್ಮೀರ ತಲುಪಿದ ಸ್ನೇಹಿತರು

ಆಟೋದಲ್ಲೇ ಕಾಶ್ಮೀರ ತಲುಪಿದ ಸ್ನೇಹಿತರು

ಸುಮಾರು ಆರೇಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅ.10ರಂದು ಚಾಲನೆ ನೀಡಿದವರು ದೇರಳಕಟ್ಟೆಯ ಸಾದಿಕ್, ಹಜೀಮ, ಹಸನ್ ಮತ್ತು ಹಫೀದ್. ಐಷಾರಾಮಿ ಕಾರುಗಳ ಬದಲಿಗೆ ಸಾಮಾನ್ಯ ಆಟೋರಿಕ್ಷಾವನ್ನೇ ಆಯ್ಕೆ ಮಾಡಿಕೊಂಡ ಈ ನಾಲ್ವರು ಸ್ನೇಹಿತರು, ತಮ್ಮ ಕನಸಿಗೆ ಅದನ್ನೇ ಸಾರಥಿಯನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ನಾಲ್ವರೂ ಆಟೋರಿಕ್ಷಾ ಚಾಲನೆ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

120 ಎಕರೆ ಪ್ರದೇಶದಲ್ಲಿ ಬುಡಕಟ್ಟು ವಿವಿ: ವಾಲ್ಮೀಕಿ ಜಯಂತಿಯಲ್ಲಿ ಸಚಿವ ಟಿ.ರಘುಮೂರ್ತಿ ಘೋಷಣೆ

120 ಎಕರೆ ಪ್ರದೇಶದಲ್ಲಿ ಬುಡಕಟ್ಟು ವಿವಿ

ನಗರದ ಎಂ.ಜಿ. ರೈಲ್ವೆ ಕಾಲೋನಿ ಬಳಿ ನಡೆದ ವಾಲ್ಮೀಕಿ ಜಯಂತಿ(Valmiki Jayanti) ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಸಿಎಂ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬುಡಕಟ್ಟು ಸಮುದಾಯಗಳ ಕಲೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಜ್ಞಾನ ಅಧ್ಯಯನ ಮಾಡಲು ವಿಶ್ವವಿದ್ಯಾಲಯ ನೆರವಾಗಲಿದೆ.

Pralhad Joshi: ವಿಧಾನ ಪರಿಷತ್ ಚುನಾವಣೆ ಗೆಲುವು ಭವಿಷ್ಯದ ಶುಭ ಸೂಚನೆ: 2028ರ ಚುನಾವಣೆಗೆ ದಿಕ್ಸೂಚಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ವಿಧಾನ ಪರಿಷತ್ ಚುನಾವಣೆ ಗೆಲುವು ಭವಿಷ್ಯದ ಶುಭ ಸೂಚನೆ

ಅರ್ಧ ರಾಜ್ಯದಲ್ಲಿ ನಡೆದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ (Vidhana Parishad Election)ಯಲ್ಲಿ ಪ್ರಜ್ಞಾವಂತ, ಶಿಕ್ಷಕ ಮತ್ತು ಪದವಿಧರ ಮತದಾರರು ಕಾಂಗ್ರೆಸ್ ಅನ್ನು ಸಂಪೂರ್ಣ ತಿರಸ್ಕರಿಸಿ ದ್ದಾರೆ. ಅಂದರೆ ರಾಜ್ಯದಲ್ಲಿ ಸಂಪೂರ್ಣ ಆಡಳಿತ ವಿರೋಧಿ ಅಲೆ ಇರುವುದು ಇದರಿಂದಲೇ ಸ್ಪಷ್ಟವಾಗಿದೆ. ಮುಂಬರುವ 2028ರ ಚುನಾವಣೆ(2028 Election)ಯಲ್ಲೂ NDA ದಾಖಲೆಯ ಗೆಲುವಿಗೆ ಇದು ದಿಕ್ಸೂಚಿಯಾಗಿದೆ ಎಂದಿದ್ದಾರೆ.

ಚಳಿಗಾಲದ ಅಧಿವೇಶದ ದಿನಾಂಕ ಫಿಕ್ಸ್‌; ಡಿಸೆಂಬರ್ 7 ರಿಂದ ಬೆಳಗಾವಿಯಲ್ಲಿ ಕಲಾಪ ಶುರು

ಚಳಿಗಾಲದ ಅಧಿವೇಶದ ದಿನಾಂಕ ಫಿಕ್ಸ್‌

ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಆಗಿದ್ದು, ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 7 ರಿಂದ 10 ದಿನಗಳ ಕಾಲ ಕಲಾಪ ನಡೆಯುವ ಸಾಧ್ಯತೆಯಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಿಳಿಸಿದ್ದಾರೆ.

Loading...